
ಪಾಕಿಸ್ತಾನದಿಂದ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಯಾರಿಗೆ ತಾನೆ ಗೊತ್ತಿಲ್ಲ. ಭಾರತದ ಯುವಕನ ಜತೆ ಪಬ್‌ಜಿ ಆಡಿ ಲವವ್ ಆಯಿತೆಂದು ತನ್ನ 4 ಮಕ್ಕಳ ಸಮೇತ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಮೇಲೆ ಒಂದೆಡೆ ಅನುಮಾನಗಳ ಹುತ್ತವೇ ಹರಡಿದೆ. ಪಾಕಿಸ್ತಾನದ ನಿವಾಸಿ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದೂ ಆಗಿದೆ. ಈ ವೇಳೆ, ಆಕೆ ಬಳಿ ಇದ್ದ ಐದು ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್‌ಗಳು, ಬಳಕೆಯಾಗದ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು (Identity card) ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸೀಮಾ ಹೈದರ್ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎರಡು ವಿಡಿಯೋ ಕ್ಯಾಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಈ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇವುಗಳ ನಡುವೆಯೇ ಇದೀಗ ಸೀಮಾಗೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಹೊರಬಂದಿದೆ.
ಸೀಮಾ ಹೈದರ್ ಮತ್ತು ಆಕೆಯ ಪ್ರಿಯಕರ ಸಚಿನ್ ಮೀನಾ (Sachin Meena) ಅವರಿಗೆ ಗುಜರಾತ್ ಉದ್ಯಮಿಯೊಬ್ಬರು ಉದ್ಯೋಗದ ಆಫರ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸೀಮಾ ಮತ್ತು ಸಚಿನ್ (Sachin) ಇಬ್ಬರೂ ತಮ್ಮ ಬಳಿ ಯಾವಾಗ ಬೇಕಾದರೂ ಬಂದು ಕೆಲಸ ಮಾಡಬಹುದು, ಪ್ರತಿಯಾಗಿ ತಲಾ ಐವತ್ತು ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಉದ್ಯಮಿ ಪರವಾಗಿ ಹೇಳಲಾಗಿದೆ ಎನ್ನಲಾಗುತ್ತಿದೆ. ಅಂದರೆ ವರ್ಷಕ್ಕೆ ಆರು ಲಕ್ಷ ರೂಪಾಯಿ ಸಂಬಳ ಇದಾಗಿದೆ! ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ಕೆಲಸಕ್ಕೆ ಹೋಗಲಾಗದೆ ಸೀಮಾ ಹೈದರ್ ಮತ್ತು ಸಚಿನ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿತ್ತು. ಈ ಸುದ್ದಿ ವೈರಲ್ ಆದ ತಕ್ಷಣ ಸಿನಿಮಾ ನಿರ್ದೇಶಕರೊಬ್ಬರು ಸೀಮಾ ಅವರಿಗೆ ಸಿನಿಮಾದಲ್ಲಿ ಕೆಲಸ ಮಾಡಲು ಆಫರ್ ಕೂಡ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಸೀಮಾಗೆ ಗುಜರಾತ್ ನ ಉದ್ಯಮಿಯೊಬ್ಬರಿಂದ ಮತ್ತೊಂದು ಆಫರ್ ಬಂದಿದೆಯಂತೆ!
ಸೀಮಾ ಹೈದರ್ ಬಳಿ ಪಾಕ್‌ನ 5 ಅಧಿಕೃತ ಪಾಸ್‌ಪೋರ್ಟ್, ಗುರುತಿನ ಚೀಟಿ ವಶಕ್ಕೆ
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬೂಪುರ್ ಗ್ರಾಮದಲ್ಲಿ ಅಪರಿಚಿತ ಪತ್ರದೊಂದಿಗೆ ಪೋಸ್ಟ್‌ಮ್ಯಾನ್ (Postman) ತಡರಾತ್ರಿ ಸಚಿನ್-ಸೀಮಾ ಅವರ ಮನೆಗೆ ತಲುಪಿದ್ದರು. ಈ ಪತ್ರವನ್ನು ನೋಡಿ ಸುತ್ತಮುತ್ತಲಿನವರಲ್ಲಿ ಕೋಲಾಹಲ ಉಂಟಾಯಿತು. ಪತ್ರವನ್ನು ಸ್ವೀಕರಿಸಿದ ತಕ್ಷಣ, ಸೀಮಾ ಹೈದರ್ ಅದನ್ನು ತೆರೆಯಲು ಬಯಸಿದ್ದರು. ಆದರೆ ಆಕೆಯ ಭದ್ರತೆಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ, ಸೀಮಾ ಅವರನ್ನು ಹಾಗೆ ಮಾಡದಂತೆ ತಡೆದರು. ಏಕೆಂದರೆ ಈ ಪತ್ರದ ಮೂಲಕ ಸೀಮಾಗೆ (Seema) ಯಾರಾದರೂ ಬೆದರಿಕೆ ಹಾಕಲು ಪ್ರಯತ್ನಿಸಿದ್ದಾರೆ ಎಂದು ಅವರು ಭಾವಿಸಿದರು. ಈ ಸಂಪೂರ್ಣ ಘಟನೆಯ ಬಗ್ಗೆ ಭದ್ರತಾ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಆದೇಶದ ನಂತರ ಪತ್ರವನ್ನು ತೆರೆದಾಗ, ಈ ಪತ್ರವನ್ನು ಗುಜರಾತ್‌ನ ಉದ್ಯಮಿಯೊಬ್ಬರು ಬರೆದಿರುವುದು ಕಂಡುಬಂದಿದೆ. ಈ ಪತ್ರದ ಮೂಲಕ ಸೀಮಾ ಮತ್ತು ಸಚಿನ್ ಇಬ್ಬರಿಗೂ ತಲಾ ಐವತ್ತು ಸಾವಿರ ರೂಪಾಯಿ ಸಂಬಳದಲ್ಲಿ ಕೆಲಸ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಸಚಿನ್ ಮತ್ತು ಸೀಮಾ ಯಾವಾಗ ಬೇಕಾದರೂ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಇಬ್ಬರಿಗೂ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿಯೂ ತಿಳಿಸಲಾಗಿದೆ.
ಅದೇ ರೀತಿ, ಚಿತ್ರ ನಿರ್ಮಾಪಕ ಅಮಿತ್ ಜಾನಿ (Amith Jony) ಅವರು ಸಚಿನ್ ಮತ್ತು ಸೀಮಾ ಇಬ್ಬರಿಗೂ ಚಿತ್ರದಲ್ಲಿ ನಟರಾಗಿ ನಟಿಸಲು ಆಫರ್ ನೀಡಿದ್ದಾರೆ. ಈ ವೇಳೆ ಅಮಿತ್ ಜಾನಿ ಕೂಡ ಸೀಮಾ-ಸಚಿನ್ ಮನೆಗೆ ತೆರಳಿ ಮುಂಗಡ ಚೆಕ್ ನೀಡಲು ಸಿದ್ಧರಾಗಿರುವುದಾಗಿದ್ದಾರಂತೆ. ಸದ್ಯ ಸೀಮಾ ವಿರುದ್ಧ ತನಿಖೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಬಗ್ಗೆ ಸೀಮಾ ಸದ್ಯ ಯೋಚಿಸುವಂತೆ ಇಲ್ಲ. ಸದ್ಯ ಸೀಮಾ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಪ್ರಸ್ತುತ, ಉತ್ತರ ಪ್ರದೇಶದ ಎಟಿಎಸ್ ಸೀಮಾ ಹೈದರ್ ಪ್ರಕರಣದ ತನಿಖೆಯಲ್ಲಿ ತೊಡಗಿದೆ. ಈ ಪತ್ರದ ನಿಜಾಂಶ ಹಾಗೂ ಸಿನಿಮಾ ಆಫರ್ ಹಿಂದಿರುವ ಸತ್ಯ ಇನ್ನಷ್ಟೇ ಗೊತ್ತಾಗಬೇಕಿದೆ.
PUBG ಲವರ್ ಸೀಮಾ ಹೈದರ್ ಸೋದರ, ಅಂಕಲ್ ಪಾಕ್ ಸೇನೆಯಲ್ಲಿ ಕೆಲಸ: ಪಾಕ್ ಮಹಿಳೆ ಬಗ್ಗೆ ಮತ್ತಷ್ಟು ಅನುಮಾನ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.