40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

Published : Aug 16, 2022, 04:19 PM IST
40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

ಸಾರಾಂಶ

ತಿಂಗಳಲ್ಲಿ ಮೂರ್ನಾಲ್ಕು ದಿನ ಮಹಿಳೆ ಹಿಂಸೆ ಅನುಭವಿಸ್ಬೇಕು. ಮುಟ್ಟು ಶುರುವಾದಾಗಿನಿಂದ ನಿಲ್ಲುವವರೆಗೆ ಮಾತ್ರವಲ್ಲ ನಿಂತ ಮೇಲೂ ಅನೇಕ ಸಮಸ್ಯೆಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ. ಮುಟ್ಟು ನಿಲ್ಲುವ ವಯಸ್ಸು ಕೂಡ ಆಕೆ ಮುಂದಿನ ಆರೋಗ್ಯದ ಜೊತೆ ಸಂಬಂಧ ಹೊಂದಿರುತ್ತದೆ.  

ಅನಿಯಮಿತ ಮುಟ್ಟು ಅಥವಾ ಮುಟ್ಟಿನ ಸಮಯದಲ್ಲಿ ಆಗುವ ಸಮಸ್ಯೆ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಒಂದು ಅಧ್ಯಯನದ ಪ್ರಕಾರ  40 ವರ್ಷಕ್ಕಿಂತ ಮೊದಲು ಋತುಬಂಧ ಸಂಭವಿಸಿದಲ್ಲಿ  ಹೃದಯ ವೈಫಲ್ಯ ಮತ್ತು ಹೃತ್ಕರ್ಣದ ಕಂಪನ (A-fib) ಅಪಾಯ  ಹೆಚ್ಚಾಗುತ್ತದೆಯಂತೆ. ಹೃತ್ಕರ್ಣದ ಕಂಪನದಲ್ಲಿ  ಹೃದಯ ಬಡಿತವು ಹೆಚ್ಚಾಗುತ್ತದೆ. ಹೃದಯ ಬಡಿತ ಅನಿಯಮಿತವಾಗಿರುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಸುಮಾರು 1.4 ಮಿಲಿಯನ್ ಮಹಿಳೆ (Woman) ಯರ ಮೇಲೆ ನಡೆಸಿದ ಈ ಅಧ್ಯಯನ (Study) ದ ಸಂಶೋಧನೆ (Research) ಗಳನ್ನು ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಸಿಯೋಲ್‌ನ ಕೊರಿಯಾ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕ ಮತ್ತು ಈ ಅಧ್ಯಯನದ ಲೇಖಕರಾದ ಗಾ ಯುನ್ ನಾಮೋ ಪ್ರಕಾರ, ಬೇಗ ಋತುಬಂಧ ಹೊಂದಿರುವ ಮಹಿಳೆಯರು ಅದೇ ವಯಸ್ಸಿನ ಸಾಮಾನ್ಯ ಮಹಿಳೆಯರಿಗೆ ಹೋಲಿಸಿದರೆ ಹೃದಯ ವೈಫಲ್ಯವನ್ನು ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಹೃತ್ಕರ್ಣದ ಅಪಾಯವನ್ನು ಅವರು ಹೊಂದಿರುತ್ತಾರೆ ಎಂದಿದ್ದಾರೆ.  

ಮಹಿಳೆಯರಿಗೆ ಹೃದಯ ರಕ್ತನಾಳದ ಕಾಯಿಲೆ ಅಪಾಯ: ಹೃದಯ ರಕ್ತನಾಳದ ಕಾಯಿಲೆಯು ಸಾಮಾನ್ಯವಾಗಿ ಪುರುಷರಿಗಿಂತ 10 ವರ್ಷದ ನಂತರ ಮಹಿಳೆಯರಲ್ಲಿ ಕಂಡುಬರುತ್ತದೆ. ಮುಟ್ಟು ನಿಲ್ಲುವ ಮೊದಲು ಮಹಿಳೆಯರಲ್ಲಿ  ಈಸ್ಟ್ರೊಜೆನ್, ಹೃದಯ ರಕ್ತನಾಳದ ವ್ಯವಸ್ಥೆಗೆ ರಕ್ಷಣೆ  ನೀಡುತ್ತದೆ ಎಂದು ನಂಬಲಾಗಿದೆ. ಆದರೆ ಮುಟ್ಟು ನಿಂತ ನಂತ್ರ ಈಸ್ಟ್ರೊಜೆನ್ ಮಟ್ಟ  ಕಡಿಮೆಯಾಗುತ್ತದೆ. ಹೀಗಾಗಿ ಮಹಿಳೆಯರಿಗೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.  

ಬಾಯ್‌ ಫ್ರೆಂಡಿನ ಮನದಲ್ಲಿ ಸೆಕ್ಸ್‌ ಬಯಕೆಯೊಂದೇ ಇದ್ಯಾ? ತಿಳ್ಕೊಳೋದು ಹೇಗೆ?

ಅಧ್ಯಯನ ಏನು ಹೇಳುತ್ತದೆ?: ಒಂದು ಪ್ರತಿಶತದಷ್ಟು ಮಹಿಳೆಯರು 40 ವರ್ಷಕ್ಕಿಂತ ಮೊದಲೇ ಮುಟ್ಟು ನಿಲ್ಲುವ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅಧ್ಯಯನದಲ್ಲಿ  ಸಂಶೋಧಕರು ಅಕಾಲಿಕ ಋತುಬಂಧ, ಋತುಬಂಧದ ವಯಸ್ಸು ಮತ್ತು ಹೃದಯ ವೈಫಲ್ಯ ಮತ್ತು ಹೃತ್ಕರ್ಣದ ಕಂಪನದ ನಡುವಿನ ಸಂಬಂಧವನ್ನು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನವು 30 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ 1,401,175 ಋತುಬಂಧ ಮಹಿಳೆಯರನ್ನು ಒಳಗೊಂಡಿತ್ತು. ಋತುಬಂಧಕ್ಕೊಳಗಾದ ಮಹಿಳೆಯರನ್ನು 40 ವರ್ಷಕ್ಕಿಂತ ಕೆಳಗಿನವರು, 40 ರಿಂದ 44 ವರ್ಷದವರು, 45 ರಿಂದ 49 ವರ್ಷದವರು ಮತ್ತು 50 ವರ್ಷದವರು  ಅಥವಾ ಅದಕ್ಕಿಂತ ಹೆಚ್ಚಿನವರು ಎಂದು ವಿಂಗಡಿಸಲಾಗಿತ್ತು.  

ಈ ಮಹಿಳೆಯರನ್ನು ಹೆಚ್ಚು ಕಾಡುತ್ತೆ ಗರ್ಭಾಶಯದ ಕ್ಯಾನ್ಸರ್

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ, 28,111 ಮಂದಿ  40 ವರ್ಷಕ್ಕಿಂತ ಮೊದಲೇ ಋತುಬಂಧಕ್ಕೊಳಗಾಗಿದ್ದರು. ಸಂಶೋಧಕರು ಅಕಾಲಿಕ ಋತುಬಂಧ ಮತ್ತು ಹೃದಯ ವೈಫಲ್ಯ ಮತ್ತು ಹೃತ್ಕರ್ಣದ ಕಂಪನ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದಾರೆ. ಇದು ವಯಸ್ಸು, ಧೂಮಪಾನ, ಮದ್ಯಪಾನ, ದೈಹಿಕ ಪರಿಶ್ರಮ, ಬಾಡಿ ಮಾಸ್ ಇಂಡೆಕ್ಸ್ (BMI), ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ, ದೀರ್ಘಕಾಲದ ಮೂತ್ರಪಿಂಡ ಮತ್ತು ಹೃದ್ರೋಗದಂತಹ ಅಂಶಗಳನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ. ಅಕಾಲಿಕ ಋತುಬಂಧಕ್ಕೆ ಒಳಗಾದ ಮಹಿಳೆಯರಿಗೆ ಹೃದಯ ವೈಫಲ್ಯದ ಅಪಾಯವು ಶೇಕಡಾ 33 ರಷ್ಟು ಮತ್ತು ಹೃತ್ಕರ್ಣದ ಕಂಪನದ ಅಪಾಯವು ಶೇಕಡಾ 9 ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ.   

ಹೃದಯಾಘಾತದ (Heart Attack) ಅಪಾಯವು 50 ವರ್ಷ ವಯಸ್ಸಿನ ಮಹಿಳೆಯರಿಗೆ ಹೋಲಿಸಿದರೆ, ಕ್ರಮವಾಗಿ 45 ರಿಂದ 49, 40 ರಿಂದ 44 ವರ್ಷಗಳು ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮುಟ್ಟು ನಿಲ್ಲುತ್ತಿರುವ ಮಹಿಳೆಯರಲ್ಲಿ ಶೇಕಡಾ 11 , ಶೇಕಡಾ 23 ಮತ್ತು ಶೇಕಡಾ 39 ರಷ್ಟು ಹೆಚ್ಚಾಗಿದೆ. ಹೃತ್ಕರ್ಣದ ಕಂಪನದ ಅಪಾಯವು ಶೇಕಡಾ 4 , ಶೇಕಡಾ 10  ಮತ್ತು ಶೇಖಡಾ 11 ರಷ್ಟು ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!