ಅಂಗವಿಕಲತೆ ಅನ್ನುವುದು ಶಾಪವಲ್ಲ. ಸಾಧಿಸುವ ಛಲವಿದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬುವುದಕ್ಕೆ ನಮ್ಮೆದುರಿಗೆ ಮಾದರಿಯಾಗಿ ನಿಲ್ಲುತ್ತಾರೆ ಮಾಲಿನಿ ಭಂಡಾರಿ.
ಅಂಗವಿಕಲತೆ ಇದ್ದರೆ ಇಡೀ ಬದುಕೇ ಮುಗಿಯಿತು ಎಂದು ಕಣ್ಣೀರಿಡುವ ಜನರ ನಡುವೆ ತನ್ನದೇ ಸಮುದಾಯದ ನೆರವನ್ನು ಪಡೆದುಕೊಂಡು ಸಾಧನೆ ಮಾಡಿದ ಮಹಿಳೆಯೊಬ್ವರು ಉಡುಪಿಯಲ್ಲಿದ್ದಾರೆ. ಬಾಲ್ಯದಲ್ಲೇ ತನ್ನೆರಡೂ ಕೈಗಳನ್ನು ಕಳೆದುಕೊಂಡ ಈಕೆಯ ಬದುಕು ಇತರರಿಗೆ ಸ್ಪೂರ್ತಿ. ಇಷ್ಟಕ್ಕೂ ಯಾರೀಕೆ? ಏನುವರ ಸಾಧನೆ?
ಉಡುಪಿಯ ಅಕ್ಷಿತಾ ಹೆಗ್ಡೆ ಕನ್ನಡಿ ಕೈ ಬರಹ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ
ಇವರ ಹೆಸರು ಮಾಲಿನಿ ಭಂಡಾರಿ(Malini Bhaari). ಉಡುಪಿ(Udupi) ಜಿಲ್ಲೆಯ ಕಾರ್ಕಳ(Karkala) ತಾಲೂಕಿನ ಕೌಡೂರು(Kouduru) ನಿವಾಸಿ ಧರ್ಮಪಾಲ ಭಂಡಾರಿ ಮತ್ತು ಪುಷ್ಪಾವತಿ ದಂಪತಿ ಪುತ್ರಿ .ಈ ದಂಪತಿಗೆ ಅವಳಿ ಮಕ್ಕಳು. ಅವರಲ್ಲಿ ಒಬ್ಬಾಕೆ ಈ ಮಾಲಿನಿ. ಬಾಲ್ಯದಲ್ಲಿ ಸಹೋದರಿ ಜೊತೆ ಆಟವಾಡುತ್ತಾ , ಭತ್ತ ಬೇಯಿಸುವ ಒಲೆಗೆ ಕೈ ಹಾಕಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಅಲ್ಲಿಗೆ ಬದುಕು ಮುಗಿದೇ ಹೋಯ್ತು ಎಂದು ಮನೆಯವರು ಭಾವಿಸಿದರು. ಇಂತಹ ಪರಿಸ್ಥಿತಿಯಲ್ಲೂ ಛಲ ಬಿಡದ ಮಾಲಿನಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ವೈಕಲ್ಯದ ಬಗ್ಗೆ ಚಿಂತಿಸದೆ, ವ್ಯಕ್ತಿತ್ವ ರೂಪಿಸಿಕೊಂಡರು. ಬದುಕಿಗೊಂದು ಉದ್ಯೋಗಕ್ಕಾಗಿ ಪ್ರಯತ್ನ ಆರಂಭಿಸಿದರು.
ನಂತರ ಸರಕಾರಿ ಹುದ್ದೆಗಳಿಗೆ ಅರ್ಜಿ ಬರೆಯುತ್ತಲೇ ಇದ್ದರೂ ಕೂಡ ಯಾವುದೇ ಸರಕಾರಿ ಹುದ್ದೆ ಒದಗಿ ಬರಲಿಲ್ಲ. ಸರ್ಕಾರ ಭರವಸೆ ಕೊಟ್ಟರೂ ಉದ್ಯೋಗ ಸಿಗಲಿಲ್ಲ. ಕೊನೆಗೆ ಇವರ ಕೈ ಹಿಡಿದಿದ್ದು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ. ಉಡುಪಿಯ ಸವಿತಾ ಸಮಾಜ (Savita samaja)ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮಾಲಿನಿಯವರಿಗೆ ಉದ್ಯೋಗ ಸಿಕ್ಕಿತು. ನಂತರ 2007 ರಿಂದ 2012ವರೆಗೆ ಉಡುಪಿಯ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಅಲ್ಲಿಂದ ಕಾರ್ಕಳ ಶಾಖೆಗೆ ಶಾಖಾ ವ್ಯವಸ್ಥಾಪಕಿಯಾಗಿ ವರ್ಗಾವಣೆಗೊಂಡರು. ಅರ್ಧ ತೋಳಿನ ನಡುವೆ ಪೆನ್ ಹಿಡಿದು ಬರೆಯುತ್ತಾರೆ, ಕಂಪ್ಯೂಟರ್ , ಮೊಬೈಲ್ ನಲ್ಲಿ ಕೆಲಸ ಮಾಡ್ತಾರೆ. ಮಾತ್ರವಲ್ಲ ,ನಿತ್ಯ ಪ್ರಯಾಣ ಮಾಡಿಕೊಂಡು ಕಚೇರಿಗೆ ಬರುತ್ತಾರೆ.
ಮಾನಸಿಕ ಸಮಸ್ಯೆ, ವಕ್ರ ಕುತ್ತಿಗೆ, ಆತ್ಮಹತ್ಯೆ ಯತ್ನ, ಈಗ ಭಾರತದ ಕಿರಿಯ ಸಿಇಒ!
ಮನೆ ಹಾಗೂ ಕಚೇರಿ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ. ಅಂಗವಿಕಲತೆ ಅನ್ನುವುದು ಶಾಪವಲ್ಲ. ಸಾಧಿಸುವ ಛಲವಿದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬುವುದಕ್ಕೆ ನಮ್ಮದುರಿಗೆ ಮಾದರಿಯಾಗಿ ನಿಲ್ಲುತ್ತಾರೆ ಮಾಲಿನಿ ಭಂಡಾರಿ.