Kitchen Hacks: ಸೊಪ್ಪಿನ ಅಡುಗೆ ಮಾಡೋ ಮೊದಲು ಈ ಕೆಲಸ ಮಾಡಿ

By Suvarna News  |  First Published Aug 15, 2022, 5:44 PM IST

ರುಚಿ ರುಚಿಯಾದ ಅಡುಗೆ ಮಾಡುವ ಜೊತೆಗೆ ಕ್ಲೀನಿಂಗ್ ಬಗ್ಗೆಯೂ ಹೆಚ್ಚು ಮಹತ್ವ ನೀಡ್ಬೇಕಾಗುತ್ತದೆ. ತರಕಾರಿಗಳನ್ನು ಬಳಸುವ ಮುನ್ನ ಅದನ್ನು ಸರಿಯಾಗಿ ಕ್ಲೀನ್ ಮಾಡುವುದು ಬಹಳ ಮುಖ್ಯ. ಅದ್ರಲ್ಲೂ ಹಸಿರು ಸೊಪ್ಪನ್ನು ಕ್ಲೀನ್ ಮಾಡುವಾಗ ಈ ವಿಧಾನ ಬಳಸಿ. 
 


ಹಸಿರು ಸೊಪ್ಪು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಸಿರು ಸೊಪ್ಪು ಸೇವನೆ ಮಾಡುವುದ್ರಿಂದ ದೇಹವು ಅನೇಕ ಪ್ರಮುಖ ಪೋಷಕಾಂಶಗಳನ್ನು ಪಡೆಯುತ್ತದೆ.  ಹಸಿರು ಸೊಪ್ಪು ದೇಹದ ಇತರ ಅಂಗಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಸಿರು ಸೊಪ್ಪಿನಲ್ಲಿರುವ  ಫೈಬರ್ ಮತ್ತು ಪ್ರೊಟೀನ್ ದೇಹ ಮತ್ತು ಮಾನಸಿಕ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ. ಕ್ಯಾನ್ಸರ್, ಸ್ಥೂಲಕಾಯತೆ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು ಹಸಿರು ಸೊಪ್ಪು ನೆರವಾಗುತ್ತದೆ. ಇದೇ ಕಾರಣಕ್ಕೆ ಜನರು ಸೊಪ್ಪು ಸೇವನೆ ಮಾಡಲು ಮುಂದಾಗ್ತಾರೆ. ಆದ್ರೆ ಸೊಪ್ಪನ್ನು ಕ್ಲೀನ್ ಮಾಡುವುದು ಕಿರಿಕಿರಿ ವಿಷ್ಯ. ಇದೇ ಕಾರಣಕ್ಕೆ ಜನರು ಸರಿಯಾಗಿ ಕ್ಲೀನ್ ಮಾಡದೆ ಸೊಪ್ಪನ್ನು ಬಳಕೆ ಮಾಡ್ತಾರೆ. ಆದ್ರೆ ಸೊಪ್ಪಿನ ಪದಾರ್ಥ ಸೇವನೆ ಮಾಡುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸೊಪ್ಪಿನ ಸ್ವಚ್ಛತೆ ವಿಷ್ಯದಲ್ಲಿ  ಕಾಳಜಿ ವಹಿಸದಿದ್ದರೆ  ದೇಹಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ.  ಅನೇಕ ಕೀಟಗಳು, ಜೇಡಗಳು ಅಥವಾ ಪತಂಗಗಳು ತರಕಾರಿಗಳಲ್ಲಿ ಸಂಗ್ರಹಗೊಳ್ಳುತ್ತವೆ. ಅದನ್ನು ಕ್ಲೀನ್ ಮಾಡುವುದು ಬಹಳ ಮುಖ್ಯ. ಇಲ್ಲದಿದ್ದರೆ ನಾವು ಅನೇಕ ರೋಗಗಳಿಗೆ ಬಲಿಯಾಗಬೇಕಾಗುತ್ತದೆ. ಸೊಪ್ಪನ್ನು ಹೇಗೆ ಕ್ಲೀನ್ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಸೊಪ್ಪ (Green Leafy) ನ್ನು ಸ್ವಚ್ಛಗೊಳಿಸು (Clean) ವುದು ಏಕೆ ಮುಖ್ಯ? : ಸೊಪ್ಪಿನಲ್ಲಿ ಹಸಿರು ಹುಳುಗಳು, ಜೇಡ ಇದರಲ್ಲಿರುತ್ತವೆ. ಇದ್ರ ಜೊತೆಗೆ ತರಕಾರಿ ಬೆಳೆಸುವ ವೇಳೆ ಕೀಟನಾಶಕಗಳನ್ನು ಬಳಸಲಾಗುತ್ತದೆ. ಸೊಪ್ಪುಗಳನ್ನು ಸ್ವಚ್ಛಗೊಳಿಸದೆ ಹೋದ್ರೆ ಕೀಟನಾಶಕಗಳು ನಮ್ಮ ಆಹಾರ (food ) ದಲ್ಲಿ ಸೇರಿಕೊಳ್ಳುತ್ತವೆ. ಇದು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ  ಹಾನಿಕಾರಕ ಕೀಟನಾಶಕ (Insecticide) ಗಳು ನಮ್ಮ ದೇಹ ಸೇರದಂತೆ ನೋಡಿಕೊಳ್ಳಬೇಕು.      

Tap to resize

Latest Videos

ಸೊಪ್ಪನ್ನು ಹೇಗೆ ಸ್ವಚ್ಛಗೊಳಿಸುವುದು ?

ಸೊಪ್ಪನ್ನು ಕೈಗಳಿಂದ ಸ್ವಚ್ಛಗೊಳಿಸುವುದು ಮುಖ್ಯ : ಮೊದಲನೆಯದಾಗಿ, ನೀವು ನಿಮ್ಮ ಕೈಗಳಿಂದ ಸೊಪ್ಪನ್ನು ಸ್ವಚ್ಛಗೊಳಿಸುತ್ತೀರಿ ಎಂದಾದ್ರೆ ಅದರಲ್ಲಿರುವ ಮಣ್ಣು ಮತ್ತು ಕೀಟಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಪ್ರಯತ್ನಿಸಬೇಕು.  ಈ ರೀತಿ  ಕೈಗಳಿಂದ ಸೊಪ್ಪುಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆದ್ರೆ ಸೊಪ್ಪನ್ನು ಕ್ಲೀನ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಒಂದೊಂದೇ ಸೊಪ್ಪನ್ನು ನೋಡಿ, ನೋಡಿ ಸ್ವಚ್ಛಗೊಳಿಸಬೇಕು.  ಆಗ ಸೊಪ್ಪಿನಲ್ಲಿರುವ ಕೀಟಗಳನ್ನು ಸರಿಯಾಗಿ ತೆಗೆಯಬಹುದು.

ಈ ಮಹಿಳೆಯರನ್ನು ಹೆಚ್ಚು ಕಾಡುತ್ತೆ ಗರ್ಭಾಶಯದ ಕ್ಯಾನ್ಸರ್

ಬಿಸಿ ನೀರು : ಬಿಸಿನೀರನ್ನು ಅನೇಕ ರೋಗಗಳಿಗೆ ಔಷಧವೆಂದು ಪರಿಗಣಿಸಲಾಗುತ್ತದೆ. ಹಸಿರು ಎಲೆಗಳು ಕೀಟಗಳು ಮತ್ತು ಕೀಟನಾಶಕಗಳಿಂದ ಮುಕ್ತವಾಗಬೇಕಾದರೆ ಮೊದಲು ನೀರನ್ನು ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಬೇಕು. ನಂತ್ರ ಆ ಬಾಣೆಲೆಗ ಸೊಪ್ಪನ್ನು ಹಾಕಬೇಕು. ಸೊಪ್ಪನ್ನು ನೀರಿನಲ್ಲಿ ಅದ್ದಿ ಅದ್ದಿ ಸ್ವಚ್ಛಗೊಳಿಬೇಕು. ಮೂರ್ನಾಲ್ಕು ಬಾರಿ ನೀರನ್ನು ಬದಲಿಸಿ ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದ್ರೆ ಸೊಪ್ಪಿನಲ್ಲಿರುವ ಕೀಟ ಸಾಯುವುದಲ್ಲದೆ ಕೀಟನಾಶಕ ಸಂಪೂರ್ಣವಾಗಿ ಹೋಗುತ್ತದೆ.

ಎರಡೂ ಕೈಯಿಲ್ಲದ ಈ ಮಹಿಳೆಯ ಬದುಕೇ ಒಂದು ಸ್ಪೂರ್ತಿ!

ಅಡಿಗೆ ಸೋಡಾ ಬಳಕೆ : ಅಡಿಗೆ ಸೋಡಾವನ್ನು ಬರೀ ಅಡಿಗೆಗೆ ಮಾತ್ರವಲ್ಲ ಇನ್ನೂ ಅನೇಕ ರೀತಿಯಲ್ಲಿ ಬಳಕೆ ಮಾಡಬಹುದು. ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಬಳಕೆ ಮಾಡಲಾಗುತ್ತದೆ. ದಿನನಿತ್ಯ ನಾವು ಬಳಸುವ ಟೂತ್ ಪೇಸ್ಟ್ ನಲ್ಲಿ ಕೂಡ ಅಡುಗೆ ಸೋಡಾ ಬಳಸುತ್ತಾರೆ. ಹಲ್ಲುಗಳು ಬಿಳಿಯಾಗ್ಲಿ ಎನ್ನುವ ಕಾರಣಕ್ಕೆ ಮತ್ತು  ಬಾಯಿಯಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಬಳಕೆ ಮಾಡಬಾಗುತ್ತದೆ. ತರಕಾರಿಗಳನ್ನು ಸ್ವಚ್ಛಗೊಳಿಸಲು ಹಾಗೂ ಸೊಪ್ಪನ್ನು ಸ್ವಚ್ಛಗೊಳಿಸಲು ನೀವು ಅಡುಗೆ ಸೋಡಾ ಬಳಸಬಹುದು. ಇದಕ್ಕಾಗಿ  ನೀವು ಅಡಿಗೆ ಸೋಡಾವನ್ನು ನೀರಿನ ಪಾತ್ರೆಯಲ್ಲಿ ಹಾಕಿ ನಂತರ ಅದರಲ್ಲಿ ಸೊಪ್ಪನ್ನು ಸ್ವಲ್ಪ ಹೊತ್ತು ನೆನೆಹಾಕಿ. ನಂತ್ರ ಸೊಪ್ಪನ್ನು ಬಳಸಿ. 
 

click me!