ಕೈಗೆಟುಕುವ ಬೆಲೆಯಲ್ಲಿ ಟಿವಿ, ಎಸಿ, ವಿದ್ಯುತ್‌ ಉಪಕರಣ ಮಾರಾಟ ಮಾಡಲಿದೆ ರಿಲಯನ್ಸ್‌

By Vinutha Perla  |  First Published Apr 24, 2024, 2:06 PM IST

ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಪ್ರಸ್ತುತ ರಿಲಯನ್ಸ್ ರಿಟೇಲ್ ಬಿಸಿನೆಸ್‌ನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚಿಗೆ ಕಂಪೆನಿಯು ತನ್ನ ಹೊಸ ಬ್ರ್ಯಾಂಡ್ ಮೂಲಕ ಕಡಿಮೆ ದರದಲ್ಲಿ ಟಿವಿಗಳು, ಎಸಿಗಳು ಮತ್ತು ಇತರ ವಿದ್ಯುತ್ ಉಪಕರಣಗಳನ್ನು ಒದಗಿಸಲು ಯೋಜನೆ ರೂಪಿಸುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಪ್ರಸ್ತುತ ರಿಲಯನ್ಸ್ ರಿಟೇಲ್ ಬಿಸಿನೆಸ್‌ನ್ನು ಮುನ್ನಡೆಸುತ್ತಿದ್ದಾರೆ. ಇದು ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯುತ್ತಮ ಕಾರ್ಯನಿರ್ವಹಣೆಯ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಬರೋಬ್ಬರಿ 1985000 ಕೋಟಿ ಮಾರುಕಟ್ಟೆ ಲಾಭವನ್ನು ಹೊಂದಿರುವ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಆಗಸ್ಟ್ 2022ರಲ್ಲಿ ಮುಕೇಶ್ ಅಂಬಾನಿ ರಿಲಯನ್ಸ್ ರಿಟೇಲ್‌ನ ನಿಯಂತ್ರಣವನ್ನು ಇಶಾ ಅಂಬಾನಿಗೆ ಹಸ್ತಾಂತರಿಸಿದರು ಅಂದಿನಿಂದ, ಬ್ರ್ಯಾಂಡ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪ್ರಸ್ತುತ 820000 ಕೋಟಿ ರೂ. ಮೌಲ್ಯದ, ರಿಲಯನ್ಸ್ ರೀಟೇಲ್ ಮತ್ತಷ್ಟು ಬೆಳೆಯುತ್ತಲೇ ಹೋಗುತ್ತಿದೆ. 

ಇತ್ತೀಚಿಗೆ ಕಂಪೆನಿಯು ತನ್ನ ಹೊಸ ಬ್ರ್ಯಾಂಡ್ ಮೂಲಕ ಕಡಿಮೆ ದರದಲ್ಲಿ ಟಿವಿಗಳು, ಎಸಿಗಳು ಮತ್ತು ಇತರ ವಿದ್ಯುತ್ ಉಪಕರಣಗಳನ್ನು ಒದಗಿಸಲು ಯೋಜನೆ ರೂಪಿಸುತ್ತಿದೆ. ರಿಲಯನ್ಸ್ ರಿಟೇಲ್ ಇತ್ತೀಚೆಗೆ ವೈಝರ್ ಹೆಸರಿನ ಹೊಸ ಸ್ವದೇಶಿ ಬ್ರಾಂಡ್‌ನ್ನು ಪ್ರಾರಂಭಿಸಿತು. ಅದು ಏರ್ ಕೂಲರ್‌ಗಳನ್ನು ಬಿಡುಗಡೆ ಮಾಡಿದೆ.

Tap to resize

Latest Videos

ಅಬ್ಬಬ್ಬಾ..ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಮಕ್ಕಳ ಮದ್ವೆಗೆ ಖರ್ಚು ಮಾಡಿರೋದು ಇಷ್ಟೊಂದು ಕೋಟಿನಾ?

ವರದಿಯ ಪ್ರಕಾರ, ರಿಲಯನ್ಸ್ ಸ್ಥಳೀಯ ಸಂಸ್ಥೆಗಳಾದ ಡಿಕ್ಸನ್ ಟೆಕ್ನಾಲಜೀಸ್ ಮತ್ತು ಒನಿಡಾದ ಮೂಲ ಕಂಪನಿಯಾದ ಮಿರ್ಕ್ ಎಲೆಕ್ಟ್ರಾನಿಕ್ಸ್‌ನೊಂದಿಗೆ ಸ್ಥಳೀಯವಾಗಿ ಬ್ರ್ಯಾಂಡ್‌ಗಾಗಿ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಮಾತುಕತೆ ನಡೆಸುತ್ತಿದೆ.ಬ್ರಾಂಡ್ ಗಮನಾರ್ಹ ಮಾರುಕಟ್ಟೆ ಪಾಲನ್ನು ಸಾಧಿಸಿದ ನಂತರ ರಿಲಯನ್ಸ್ ತನ್ನದೇ ಆದ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಸೂಚಿಸುತ್ತದೆ.

Wyzr ಮೂಲಕ, ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಏರ್ ಕಂಡಿಷನರ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಟೆಲಿವಿಷನ್, ಸಣ್ಣ ಉಪಕರಣಗಳು ಮತ್ತು ಎಲ್ಇಡಿ ಬಲ್ಬ್‌ಗಳು ಸೇರಿದಂತೆ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಬಿಲಿಯನೇರ್ ಇಶಾ ಅಂಬಾನಿ, ಮಿಡಲ್‌ ಕ್ಲಾಸ್ ಜನರಂತೆ ಈ ಕೆಲ್ಸ ಮಾಡೋಕೆ ಇಷ್ಟ ಪಡ್ತಾರಂತೆ!

ರಿಲಯನ್ಸ್ ರಿಟೇಲ್ ಈ ಉತ್ಪನ್ನಗಳನ್ನು ಆಂತರಿಕವಾಗಿ ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಮತ್ತು ಉತ್ಪನ್ನಗಳನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು, ಪ್ರಾದೇಶಿಕ ಅಂಗಡಿಗಳು ಮತ್ತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿತರಿಸುವ ಗುರಿಯನ್ನು ಹೊಂದಿದೆ. ವೈಜರ್‌ನಿಂದ ಉತ್ಪನ್ನಗಳು LG, Samsung, ಮತ್ತು Whirlpool ನಂತಹ ಸ್ಥಾಪಿತ ಬ್ರಾಂಡ್‌ಗಳಿಗಿಂತ ಕಡಿಮೆ ಬೆಲೆಯನ್ನು ನಿರೀಕ್ಷಿಸಲಾಗಿದೆ.

click me!