
ಸದ್ಯ ಲೋಕಸಭೆ ಚುನಾವಣಾ ಕಾವು ಏರಿದೆ. ಈ ಬಾರಿ ಕೇಂದ್ರದ ಚುಕ್ಕಾಣಿ ಯಾರಿಗೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸಲು ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಮತದಾನ ಮಾಡಲು ಹಕ್ಕು ಪಡೆದಿರುವ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂಬುದು ಚುನಾವಣಾ ಆಯೋಗದ ಬಯಕೆಯಾಗಿದೆ. ಹಾಗಾಗಿಯೇ ಅನೇಕ ಜಾಗೃತಿ ಕಾರ್ಯಗಳನ್ನು ಮಾಡುತ್ತಿದೆ. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರಿಗೆ ವೋಟಿಂಗ್ ಕಾರ್ಡ್ ನೀಡಲಾಗ್ತಿದೆ. ಮಹಿಳೆಯರಿಗೆ ಕೂಡ ಮತ ಚಲಾಯಿಸುವಂತೆ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ.
ಈ ಚುನಾವಣೆ (Election) ಯಲ್ಲಿ ಮತದಾನ ಮಾಡಲು ಮಹಿಳೆ (Women) ಯರು ಮತಗಟ್ಟೆಗೆ ಬರುವಂತೆ ಚುನಾವಣಾ ಆಯೋಗ ಸಾಕಷ್ಟು ಸಿದ್ಧತೆ ನಡೆಸಿದೆ. ಚುನಾವಣಾ ಆಯೋಗದಿಂದ ಪಿಂಕ್ (Pink) ಬೂತ್‌ಗಳನ್ನು ನಿರ್ಮಿಸಲಾಗಿದ್ದು, ಮಹಿಳೆಯರಿಗೆ ಗುಲಾಬಿ ಹೂವುಗಳನ್ನು ನೀಡಿ ಸ್ವಾಗತಿಸಲಾಗುತ್ತದೆ. ಆದರೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇಲ್ಲದ ಕಾಲವೊಂದಿತ್ತು. ನಾವಿಂದು ಯಾವ ದೇಶದಲ್ಲಿ ಯಾವಾಗ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ಸಿಕ್ತು ಎಂಬುದನ್ನು ಹೇಳ್ತೇವೆ.
ಅತ್ಯಾಚಾರ ಸಂತ್ರಸ್ತೆ 14 ರ ಪ್ರಾಯದ ತುಂಬು ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಅವಕಾಶ
ಭಾರತ : 1919 ರಲ್ಲಿ ಸಂವಿಧಾನದಲ್ಲಿ ಕೋಮು ಮತದಾನಕ್ಕೆ ಅವಕಾಶ ನೀಡಲಾಯಿತು. ಪ್ರಾಂತೀಯ ಮಂಡಳಿಗಳಿಗೆ ಮತ್ತು ರಾಷ್ಟ್ರೀಯ ಸಂಸತ್ತಿಗೆ ಮತದಾನ ಮಾಡುವ ಹಕ್ಕು 1948 ರಲ್ಲಿ ಸಿಕ್ಕಿತು. 1938 ರಲ್ಲಿ ಸೀಮಿತ ಮಹಿಳಾ ಮತದಾನದ ಹಕ್ಕು ಪ್ರಾಪ್ತಿಯಾಯ್ತು. 1952 ರಿಂದ ಪುರುಷರಿಗೆ ಸಮಾನವಾಗಿ ಮತದಾನ ಮಾಡುವ ಮಹಿಳೆಯರಿಗೆ ಸಿಕ್ಕಿತು.
ಇಂಗ್ಲೆಂಡ್ : 1928 ರಲ್ಲಿ ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್‌ಲ್ಯಾಂಡ್‌ನ 21 ವರ್ಷ ಮೇಲ್ಪಟ್ಟ ಮಹಿಳೆಯರು ಮತದಾನದ ಹಕ್ಕನ್ನು ಪಡೆದರು.
ಕೆನಡಾ : ಕೆನಡಾದಲ್ಲಿ ಮಹಿಳೆಯರಿಗೆ 1917 ರಲ್ಲಿ ಮತದಾನದ ಹಕ್ಕನ್ನು ನೀಡಲಾಯಿತು.
ಅಮೆರಿಕಾ : ಅಮೆರಿಕಾದಲ್ಲಿ 1920ರಲ್ಲಿ ಮಹಿಳೆಯರು ಮತದಾನ ಮಾಡುವ ಅಧಿಕಾರ ಪಡೆದುಕೊಂಡರು.
ಚೀನಾ : ನೆರೆ ರಾಷ್ಟ್ರ ಚೀನಾದಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು 1949ರಲ್ಲಿ ಸಿಕ್ಕಿದೆ.
ನ್ಯೂಜಿಲ್ಯಾಂಡ್ : ನ್ಯೂಜಿಲೆಂಡ್ 1893 ರಲ್ಲಿ ತನ್ನ ದೇಶದ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದೆ
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ, ಮಹಿಳೆಯರಿಗೆ 1894 ರಲ್ಲಿ ಮತದಾನದ ಹಕ್ಕನ್ನು ನೀಡಲಾಯಿತು. ಅದೇ ವರ್ಷ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಸಹ ನೀಡಲಾಯ್ತು.
ಸ್ವೀಡನ್ : ಮಹಿಳೆಯರಿಗೆ ಮೊದಲು ಮತದಾನ ಮಾಡಲು ಅವಕಾಶ ನೀಡಿದ ದೇಶದ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲ. ಕೆಲ ದಾಖಲೆ ಸ್ವೀಡನ್ ಎನ್ನುತ್ತಿದೆ. ಇಲ್ಲಿ 1838 ರಿಂದ ಇಂದಿನವರೆಗೆ ಮಹಿಳೆಯರಿಗೆ ನಿರಂತರವಾಗಿ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇನ್ನೊಂದು ಕಡೆ ನ್ಯೂಜಿಲ್ಯಾಂಡ್ ಮಹಿಳೆಯರಿಗೆ ಮೊದಲು ಮತದಾನ ಮಾಡುವ ಅವಕಾಶ ನೀಡಿದೆ ಎಂಬ ದಾಖಲೆ ಇದೆ.
ಸಣ್ಣ ತಪ್ಪುಗಳೇ ಹಾರ್ಮೋನ್ ಅಸಮತೋಲನವೆಂಬ ದೊಡ್ಡ ಸಮಸ್ಯೆಗೆ ಕಾರಣ
ಜಪಾನ್ : ಡಿಸೆಂಬರ್ 17, 1945 ರಂದು, 75 ವರ್ಷಗಳ ಹಿಂದೆ, ಜಪಾನ್‌ನಲ್ಲಿ ಸಾಮಾನ್ಯ ಚುನಾವಣಾ ಕಾನೂನನ್ನು ಪರಿಷ್ಕರಿಸಲಾಯಿತು, ಇತಿಹಾಸದಲ್ಲಿ ಮೊದಲ ಬಾರಿಗೆ ಜಪಾನ್‌ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ಅದೇ ಸಮಯದಲ್ಲಿ, ಮತದಾನದ ವಯಸ್ಸನ್ನು 25 ರಿಂದ 20 ಕ್ಕೆ ಇಳಿಸಲಾಯಿತು.
ದುಬೈ : 2006ರಿಂದ ಇಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ರೂ ಅದು ಪೂರ್ಣವಾಗಿ ಜಾರಿಗೆ ಬಂದಿದ್ದು 2015ರ ನಂತ್ರ. ಆ ಸಮಯದಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ಮತ ಚಲಾಯಿಸಿದರು. ಅದ್ರಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.