ಆಂಟಿಯಾದರೂ ಯಂಗ್ ಆಗಿ ಕಾಣಿಸೋದು ಯಾರಿಗಿಷ್ಟವಿಲ್ಲ ಹೇಳಿ? ಹೀಗ್ ಮಾಡಿ

By Suvarna News  |  First Published Nov 7, 2022, 3:16 PM IST

ಬಿಳಿ ಕೂದಲಿಗೆ ಕಪ್ಪು ಬಣ್ಣ ಬಳಿದುಕೊಂಡು, ಮುಖಕ್ಕೊಂದಿಷ್ಟು ಮೇಕಪ್ ಮಾಡಿಕೊಂಡ್ರೆ ನಿಮ್ಮ ವಯಸ್ಸು ಕಡಿಮೆ ಆಗೋಕೆ ಸಾಧ್ಯವಿಲ್ಲ. ನಿಮ್ಮ ವಯಸ್ಸು ಮುಚ್ಚಿಡಬೇಕೆಂದ್ರೆ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು. ಕೆಲ ಹೆಲ್ತಿ ಲೈಫ್ಸ್ಟೈಲ್ ನಿಮ್ಮನ್ನ ಫಿಟ್ ಆಗಿಡುತ್ತೆ. 
 


ಹುಡುಗಿಯರ ವಯಸ್ಸು ಕೇಳ್ಬಾರದು ಎನ್ನುವ ಮಾತೊಂದಿದೆ. ಸಾಮಾನ್ಯವಾಗಿ ಎಲ್ಲ ಹುಡುಗಿಯರು ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವಯಸ್ಸನ್ನು ಯಾವಾಗ್ಲೂ ಕಡಿಮೆ ಹೇಳ್ತಾರೆ. ಇಷ್ಟು ವಯಸ್ಸಾದ್ರೂ ಇನ್ನೂ ಸಣ್ಣವರಂತೆ ಕಾಣ್ತಿದ್ದೀಯಾ ಅಂದ್ರೆ ಸ್ವರ್ಗಕ್ಕೆ ಮೂರೇ ಗೇಣು. ಆದ್ರೆ ವಯಸ್ಸು ಹೆಚ್ಚಾಗ್ತಿರೋದು ವಾಸ್ತವ. ಅದನ್ನು ನಾವು ಎಷ್ಟೇ ಮುಚ್ಚಿಡಲು ಪ್ರಯತ್ನಿಸಿದ್ರೂ ಅದು ಎದ್ದು ಕಾಣುತ್ತದೆ. ಅನೇಕರು ಮುಖಕ್ಕೆ ಸಾಕಷ್ಟು ಮೇಕಪ್ ಮಾಡಿಕೊಂಡ್ರೂ ಅವರ ವಯಸ್ಸನ್ನು ನಾವು ಥಟ್ ಅಂತ ಹೇಳಬಹುದು. ಅದಕ್ಕೆ ಕಾರಣ, ನಮ್ಮ ಮುಖ ಮಾತ್ರ ನಮ್ಮ ವಯಸ್ಸನ್ನು ಹೇಳೋದಿಲ್ಲ. ನಮ್ಮ ದೇಹದ ಉಳಿದ ಅಂಗಗಳು, ಅದ್ರ ಬದಲಾವಣೆ ಕೂಡ ನಮ್ಮ ವಯಸ್ಸನ್ನು ಹೇಳುತ್ತವೆ. 

ಅನೇಕ ಮಹಿಳೆ (Woman) ಯರಿಗೆ ವಯಸ್ಸಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆ ಯಂಗ್ (Young) ಆಗಿ ಕಾಣಬೇಕೆಂಬ ಕನಸಿರುತ್ತದೆ. 50ನೇ ವಯಸ್ಸಿನಲ್ಲೂ ನೀವು ಯಂಗ್ ಆಂಡ್ ಫಿಟ್ ಆಗಿ ಕಾಣ್ಬೇಕು ಅಂದ್ರೆ ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕು. ನಿಮ್ಮ ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಮಾಡುವ ಜೊತೆಗೆ ಬೆಳಿಗ್ಗೆ ಕೆಲ ನಿಯಮ ಪಾಲನೆ ಮಾಡಿದ್ರೆ ಸಾಕು.

Latest Videos

undefined

50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಆರೋಗ್ಯ (Health) ಕರ ಅಭ್ಯಾಸಗಳು :
ಹಾಸಿಗೆ (Bed) ಯಿಂದ ಎದ್ಮೇಲೆ ಮೊದಲು ಮಾಡಿ ಈ ಕೆಲಸ :
ಪ್ರತಿದಿನ ಬೆಳಿಗ್ಗೆ ಮಲಾಸನದಲ್ಲಿ ಕುಳಿತುಕೊಂಡು ಬೆಚ್ಚಗಿನ ನೀರನ್ನು ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚನೆಯ ನೀರು (Water) ಸೇವಿಸುವದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಮಲಾಸನದಲ್ಲಿ ಕುಳಿತು ನೀರು ಸೇವಿಸಿದ್ರೆ ಗ್ಯಾಸ್ ಮತ್ತು ಮಲಬದ್ಧತೆ (Constipation) ಸಮಸ್ಯೆ ದೂರವಾಗುತ್ತದೆ. ಇದ್ರಿಂದ ಹೊಟ್ಟೆ ಸ್ವಚ್ಛವಾಗುತ್ತದೆ. ಮುಖದಲ್ಲಿ ಹೊಳಪು ಬರಲು ಕಾರಣವಾಗುತ್ತದೆ. 

ಋತುಸ್ರಾವ ತಡವಾಗುತ್ತಿದೆಯೇ? ಇದಕ್ಕೆ ಕಾರಣಗಳು ಏನು ತಿಳಿಯಿರಿ !

ಡ್ರೈ ಫ್ರೂಟ್ಸ್ (Dry Fruits) ತಿನ್ನೋದು ಮರೀಬೇಡಿ : ವ್ಯಾಯಾಮ ಅಥವಾ ಯೋಗ ಮಾಡುವ ಮೊದಲು ರಾತ್ರಿ ನೆನೆಸಿದ ಕೆಲ ಡ್ರೈ ಫ್ರೂಟ್ಸ್ ತಿನ್ನಬೇಕು. ಋತುಮಾನದ ಹಣ್ಣುಗಳನ್ನು ಕೂಡ ನೀವು ಸೇವಿಸಬಹುದು. ವಾಲ್ನಟ್ಸ್, ಬಾದಾಮಿ (Almonds), ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ, ಬೆಳಿಗ್ಗೆ ಸೇವಿಸುವುದರಿಂದ ಸಾಕಷ್ಟು ಪ್ರಯೋಜನವಿದೆ. ಜಿಮ್‌ಗೆ ಹೋಗುವ ಮೊದಲು ಕಾರ್ಬೋಹೈಡ್ರೇಟ್‌ಗಳು (Carbohydrates) ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸಬೇಕು.

ಪ್ರತಿ ದಿನ ವ್ಯಾಯಾಮ (Exercise) ಬಿಡಬೇಡಿ : ದಿನದಲ್ಲಿ 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಒಳ್ಳೆಯದು. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ವ್ಯಾಯಾಮ ಮಾಡೋದ್ರಿಂದ ರಕ್ತವು ಆಮ್ಲಜನಕ (Oxygen) ಮತ್ತು ಪೋಷಕಾಂಶಗಳನ್ನು (Nutreients) ಚರ್ಮ ಸೇರಿದಂತೆ ದೇಹದ ಎಲ್ಲ ಭಾಗಕ್ಕೆ ತಲುಪಿಸಲು ಸುಲಭವಾಗುತ್ತದೆ.  ದೇಹಕ್ಕೆ ಸರಿಯಾದ ಆಮ್ಲಜನಕ ಸಿಗುವ ಜೊತೆಗೆ ತ್ಯಾಜ್ಯ ಉತ್ಪನ್ನಗಳನ್ನು ಹೊರ ಹಾಕಲು ನೆರವಾಗುತ್ತದೆ. ಇದಲ್ಲದೆ ನಿಮ್ಮ ತೂಕ ನಿಯಂತ್ರಣಕ್ಕೆ ವ್ಯಾಯಾಮ ಅತ್ಯಗತ್ಯ.  

ಉತ್ತಮ ಆರೋಗ್ಯಕ್ಕೆ ಯೋಗ Yoga) : ವ್ಯಾಯಾಮ ಸಾಧ್ಯವಿಲ್ಲ ಎನ್ನುವವರು 30 ರಿಂದ 45 ನಿಮಿಷಗಳ ಕಾಲ ಯೋಗದ ಆಸನಗಳನ್ನು ಮಾಡಬಹುದು. ನೀವು ಆಸನಗಳು, ಪ್ರಾಣಾಯಾಮ, ಧ್ಯಾನ (Meditation) ಮತ್ತು ಪ್ರಾರ್ಥನೆ (Prayer)  ಮಾಡಿದ್ರೆ ನಿಮ್ಮ ಶ್ವಾಸಕೋಶಕ್ಕೆ (Lungs) ಶಕ್ತಿ ಸಿಗುತ್ತದೆ. ಹಾರ್ಮೋನುಗಳ ಅಸಮತೋಲನವನ್ನು ಸಾಮಾನ್ಯಗೊಳಿಸಲು ಸಹಾಯವಾಗುತ್ತದೆ. ಸ್ನಾಯುಗಳು ಸಡಿಲಗೊಳ್ಳುತ್ತವೆ. ಮನಸ್ಸು ಶಾಂತವಾಗುತ್ತದೆ. ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.

Hair Care Tips: ತಲೆಗೆ ಎಣ್ಣೆ ಹಚ್ಚುವಾಗ ಈ ತಪ್ಪು ಮಾಡಬೇಡಿ

ಆರೋಗ್ಯಕರ ಉಪಹಾರ (Healthy Breakfast): ಮೇಲಿನದೆಲ್ಲವನ್ನೂ ಮಾಡಿ ನಾವು ಪೌಷ್ಟಿಕಾಂಶವಿರುವ ಆಹಾರ ಸೇವನೆ ಮಾಡದೆ ಹೋದ್ರೆ ತೊಂದ್ರೆ ತಪ್ಪಿದ್ದಲ್ಲ. ಹಾಗಾಗಿ ಪ್ರೋಟೀನ್ ಮತ್ತು ಫೈಬರ್ (Fiber)  ಸಮೃದ್ಧವಾಗಿರುವ ಆರೋಗ್ಯಕರ ಉಪಹಾರವನ್ನು ಸೇವಿಸಬೇಕು. ಆರೋಗ್ಯಕರ ಬೆಳಗಿನ ಆಹಾರ ಬಹಳ ಮುಖ್ಯ. ಬೆಳಗಿನ ಉಪಹಾರ ದಿನವಿಡೀ ಕೆಲಸ ಮಾಡುವ ಶಕ್ತಿಯನ್ನು ನೀಡುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. 

click me!