ಸೋಷಿಯಲ್ ಮೀಡಿಯಾ ಕೀಚಕರು-5
- ನಾಗರಾಜ ಎಸ್.ಬಡದಾಳ್
ಸೋಷಿಯಲ್ ಮೀಡಿಯಾಗಳಲ್ಲಿ ಹಗಲಿರುಳೆನ್ನದೇ ವಿದ್ಯಾರ್ಥಿನಿ, ಯುವತಿ, ಗೃಹಿಣಿ, ಅಸಹಾಯಕಿ, ವಿಚ್ಛೇದಿತೆ, ವಿಧವೆಯರ ಕಾಡುತ್ತಿರುವ ಬಹುತೇಕ ಸೋಷಿಯಲ್ ಮೀಡಿಯಾ ಕೀಚಕರದ್ದು ನಾರ್ಸಿಸಿಸ್ಟ್ ವ್ಯಕ್ತಿತ್ವ. ಈ ಮನಸ್ಥಿತಿಯ ವ್ಯಕ್ತಿಗಳ ವರ್ತನೆಯು ಸಂತ್ರಸ್ತೆಯರ ಮುಂದೆ ಹೇಗಿರುತ್ತದೆ, ಇತರೆ ಜನರು, ಸಮಾಜದ ಮುಂದೆ ಯಾವೆಲ್ಲಾ ರೀತಿ ಇರುತ್ತದೆ, ಹೇಗೆಲ್ಲಾ ಜನರು ನಾರ್ಸಿಸಿಸ್ಟ್‌ಗಳಿಂದ ತೊಂದರೆ ಅನುಭವಿಸುತ್ತಾರೆಂಬುದಕ್ಕೆ ಸಾಕಷ್ಟುಲೇಖನ, ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಕಣಜವೇ ತೆರೆದುಕೊಳ್ಳುತ್ತದೆ.
ಆಧುನಿಕ ಕೀಚಕರ ಪಾಲಿಗೆ ಸಂತ್ರಸ್ತೆಯೇ ದುರ್ಗೆ ಆಗಲಿ
ಒಳ್ಳೆಯತನದ ಮುಖವಾಡ ಧರಿಸಿ, ಒಳಗೊಳಗೆ ಮತ್ತೊಂದು ವ್ಯಕ್ತಿತ್ವ ಹೊಂದಿರುವವರೇ ಇಂತಹ ವಿಕ್ಷಿಪ್ತ ಮನಸ್ಥಿತಿಯವರು. ನಾರ್ಸಿಸಿಸ್ಟ್ ಪರ್ಸನಾಲಿಟಿ ಡಿಸಾರ್ಡರ್(ಎನ್‌ಪಿಡಿ)ಗಳ ಬಗ್ಗೆ ಮಾನಸಿಕ ರೋಗ ತಜ್ಞರು, ಸಾಕಷ್ಟುಅಧ್ಯಯನ, ಸೈಕಾಲಜಿ ಅಧ್ಯಯನ ಮಾಡಿದವರ ವಿವರಣೆ ಸೋಷಿಯಲ್ ಮೀಡಿಯಾಗಳಲ್ಲಿ ನಾರ್ಸಿಸಿಸ್ಟ್ ಅಂತಾ ಹುಡುಕಿದರೆ ಸಾವಿರಾರು ಲೇಖನ, ವೀಡಿಯೋ, ವಿವರಣೆ ಸಿಗುತ್ತದೆ. ನಾರ್ಸಿಸಿಸ್ಟ್‌ಗÜಳ ಬಗ್ಗೆ ವರ್ತನೆ, ಮನಸ್ಥಿತಿ, ಮನೋರೋಗದ ಬಗ್ಗೆ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ನಾನಾ ಭಾಷೆಯಲ್ಲಿ ಯುಟ್ಯೂಬ್‌ನಲ್ಲಿ ವೀಡಿಯೋ ಮಾಡಿದ್ದರೆ, ಸಾಕಷ್ಟುಅಧ್ಯಯನಕ್ಕೆ ದಾಖಲೆಗಳೂ ಸಿಗುತ್ತವೆ. ಯಾರಾದರೂ ಅದನ್ನು ಓದಿ, ನೋಡಿ ಜಾಗೃತರಾಗಬಹುದು.
ಸಾಮಾನ್ಯವಾಗಿ ಎಲ್ಲರಂತೆಯೇ ಸ್ನೇಹಿತ, ಕುಟುಂಬದ ಸಂಬಂಧಿ, ಹಿತೈಷಿ, ಬೆಂಬಲಿಗನಂತೆ ತೋರ್ಪಡಿಸುವ ನಾರ್ಸಿಸಿಸ್ಟ್ ವ್ಯಕ್ತಿತ್ವ ಇದ್ದವನದ್ದು ದ್ವಿಮುಖ ಇರುತ್ತದೆ. ನೋಡುವವರ ಕಣ್ಣಿನಲ್ಲಿ ಸರಳ, ಸಜ್ಜನ, ಸಂಪನ್ನನ ವರ್ತನೆ ಇರುತ್ತದೆ. ಆದರೆ, ಸಂತ್ರಸ್ತೆ ಮುಂದೆ ನಾರ್ಸಿಸಿಸ್ಟ್‌ಗಳ ವರ್ತನೆ ಭಯಾನಕ. ದೈಹಿಕ, ಮಾನಸಿಕವಾಗಿ ತೊಂದರೆ ನೀಡುವುದಲ್ಲದೇ, ಆರ್ಥಿಕವಾಗಿಯೂ ಸಾಕಷ್ಟುಸುಲಿಗೆ ಮಾಡುತ್ತಾರೆ. ಸಂತ್ರಸ್ತೆಗೆ ಯಾವೆಲ್ಲಾ ರೀತಿಯಲ್ಲಿ ಹೆದರಿಸಿ ತೊಂದರೆ ಕೊಡಬಹುದೋ ಅದೆಲ್ಲವನ್ನೂ ಮಾಡುತ್ತಲೇ ಇರುತ್ತಾರೆ.
ಮೈಂಡ್ ಗೇಮ್ ಆಡುವ ನಾರ್ಸಿಸಿಸ್ಟ್:
ಕುಟುಂಬಕ್ಕೆ ಸಹಾಯದ ನೆಪದಲ್ಲಿ, ಆರ್ಥಿಕ ನೆರವಿನ ಹಸ್ತ ಚಾಚಿದಂತೆ ವರ್ತಿಸುವ ಇಂತಹ ವ್ಯಕ್ತಿಗಳು ಅಪಾಯಕಾರಿಯೇ ಸರಿ. ಹೆಣ್ಣು ಮಕ್ಕಳಿಗೆ ಹೆತ್ತವರು, ಸಹೋದರ-ಸಹೋದರಿಯರು, ಪತಿ, ಮಕ್ಕಳು, ಕುಟುಂಬ, ಸಂಬಂಧಿಗಳ ಮಧ್ಯೆ ತಂದಿಟ್ಟು, ಸಂತ್ರಸ್ತೆಯ ಬೇಕು ಬೇಡ ನೋಡಿಕೊಳ್ಳುವವನು ನಾನೇ, ತಾನಷ್ಟೇ ನಿನ್ನ ಹಿತ ಕಾಯುವವನು ಎಂಬಂತೆ ಬಲಿಯಾಗಲಿರುವ ಹೆಣ್ಣು ಮಕ್ಕಳನ್ನು ನಂಬಿಸಿ, ತನ್ನ ಬಲೆಗೆ ಕೆಡವಿಕೊಳ್ಳುವ ನಾರ್ಸಿಸಿಸ್ಟ್ ಮನಸ್ಥಿತಿಯ ವ್ಯಕ್ತಿತ್ವ ಇದ್ದವರನ್ನು ಯಾರೂ ಸುಲಭವಾಗಿ ಗ್ರಹಿಸಲು ಸಾಧ್ಯವಿಲ್ಲ. ಇವನು ನಾರ್ಸಿಸಿಸ್ಟ್ ಅಂತಾ ಗುರುತಿಸಲೂ ಆಗದಂತಹ ಸಜ್ಜನ ವ್ಯಕ್ತಿತ್ವ ಜಗತ್ತಿಗೆ ಪರಿಚಯಿಸಿರುತ್ತಾರೆ. ಹೆಣ್ಣಿನ ಬಾಳಿನಲ್ಲಿ ಮೈಂಡ್ ಗೇಮ್ ಆಡುವ ನಾರ್ಸಿಸಿಸ್ಟ್‌ಗಳು ತನ್ನ ನಿಯಂತ್ರಣಕ್ಕೆ ಹೆಣ್ಣು ಬಂದ ನಂತರ ಆಕೆಗೆ ಸರ್ವ ರೀತಿಯಲ್ಲೂ ತೊಂದರೆ ನೀಡಲಾರಂಭಿಸುತ್ತಾರೆ.
ಸಹಾಯ ಮಾಡುವ ನೆಪದಲ್ಲಿ ಸಂತ್ರಸ್ತೆ ಮನಸ್ಸಿನಲ್ಲಿ ಜಾಗ ಪಡೆಯುವ ನಾರ್ಸಿಸಿಸ್ಟ್‌ಗಳು ತನ್ನ ಮೇಲೆ ವಿಶ್ವಾಸವಿಟ್ಟಹೆಣ್ಣಿನ ಬಾಳಿಗೆ ಬೆಂಕಿ ಇಟ್ಟಿರುತ್ತಾನೆ. ನಂಬಿಕೆ ಕರೆ ಮಾಡಿ ಕೊಂಡು ಅದನ್ನು ರೆಕಾರ್ಡ್ ಮಾಡಿಕೊಳ್ಳುವ, ಆಕೆ ಕಾಲ್ ಮಾಡಿದಾಗ ಬೇರೆಯವರ ಬಳಿ ತನ್ನ ಮಾತು ಹೇಗೆ ಕೇಳುತ್ತಾಳೆಂದು ಕಾನ್ಫರೆನ್ಸ್ ಹಾಕಿ ಕೇಳಿಸುವ, ಸ್ನೇಹಿತರ ಜೊತೆ ಗಿದ್ದಾಗ ಆಕೆ ಮಾತನಾಡುವುದನ್ನು ಲೌಡ್ ಸ್ಪೀಕರ್ ಇಟ್ಟು ಕೇಳಿಸುವ, ವೀಡಿಯೋ ಕಾಲ್, ವಾಯ್‌್ಸ ಕಾಲ್ ಮಾಡುವ ಇಂತಹವರ ಬಗ್ಗೆ ಇನ್ನೂದರೂ ಹೆಣ್ಮು ಮಕ್ಕಳು ಜಾಗ್ರತೆ ವಹಿಸಬೇಕಿದೆ. ಅತಿಯಾದರೆ ಅಮೃತವೂ ವಿಷ ಎಂಬ ಅರಿವು ಸದಾ ಇರಬೇಕಷ್ಟೇ.
Davanagere: ಸೋಷಿಯಲ್ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ
ಬಲೆಯೊಳಗೆ ಕೆಡವಲು ಯತ್ನ
ಆರಂಭದಲ್ಲಿ ಗಿಫ್‌್ಟಕೊಟ್ಟೆ, ಹಣದ ನೆರವು ನೀಡುವುದು, ಭವಿಷ್ಯದಲ್ಲಿ ನಿಮ್ಮ ನೆರಳಾಗಿರುತ್ತೇನೆಂದೆಲ್ಲಾ ಆಸೆ ಹುಟ್ಟಿಸಿ, ಏಕಾಂತತನ ಅನುಭವಿಸುತ್ತಿದ್ದ ಗೃಹಿಣಿಯರ ಬಾಳಿನಲ್ಲಿ ಪ್ರವೇಶ ಮಾಡುವ ಇಂತಹ ನಾರ್ಸಿಸಿಸ್ಟ್‌ಗಳ ಆಟ ಆ ನಂತರವಷ್ಟೇ ಶುರುವಾಗುತ್ತದೆ. ಒಂದು ವೇಳೆ ಸಂತ್ರಸ್ತೆ ಸಿಡಿದಿದ್ದರೆ, ತಕ್ಷಣ ಕ್ಷಮೆ ಕೇಳುವಂತೆ ವರ್ತಿಸಿ, ಆಕೆಯ ನಂಬಿಸುವ ನಾರ್ಸಿಸಿಸ್ಟ್ ಮನಸ್ಥಿತಿಯ ಸೋಷಿಯಲ್ ಮೀಡಿಯಾ ಕೀಚಕರು ಅಂತಹ ಸಂತ್ರಸ್ತೆಗೆ ಅರಿವಿಗೆ ಬಾರದಂತೆ ತಮ್ಮ ಬಲೆಯೊಳಗೆ ಕೆಡವಿರುತ್ತಾರೆ. ಅದೆಷ್ಟರ ಮಟ್ಟಿಗೆ ನಾರ್ಸಿಸಿಸ್ಟ್‌ಗಳು ಸಂತ್ರಸ್ತೆಯ ನಂಬಿಸುತ್ತಾರೆಂದರೆ ಆಕೆಗೆ ತನ್ನ ಸ್ವಂತದವರ ಮೇಲಿಲ್ಲದ ನಂಬಿಕೆ ನಾರ್ಸಿಸಿಸ್ಟ್ ಮನಸ್ಥಿತಿಯವನ ಮೇಲೆ ಮೂಡುವಂತೆ ಮಾಡುತ್ತಾರೆಂದರೆ, ಸಂತ್ರಸ್ತೆಗೆ ಭವಿಷ್ಯದ ಅರಿವು ಇಲ್ಲದಂತಾಗಿರುತ್ತದೆಂಬುದೂ ಅಷ್ಟೇ ಸತ್ಯ ಸಂಗತಿ.