ಋತುಸ್ರಾವ ತಡವಾಗುತ್ತಿದೆಯೇ? ಇದಕ್ಕೆ ಕಾರಣಗಳು ಏನು ತಿಳಿಯಿರಿ !
ಪ್ರತಿಯೊಬ್ಬ ಮಹಿಳೆಗೂ ಋತುಸ್ರಾವ ಆಗೋದು ಒಂದೇ ರೀತಿ ಆಗಿರಬಹುದು. ಆದರೆ ಅದರಿಂದ ಉಂಟಾಗುವ ಸಮಸ್ಯೆಗಳು ಮಾತ್ರ ವಿಭಿನ್ನವಾಗಿರುತ್ತೆ. ಅದರಲ್ಲಿ ಪಿರಿಯಡ್ಸ್ ತಡವಾಗಿ ಆಗೋದು ಕೂಡ ಒಂದು. ಪಿರಿಯಡ್ಸ್ ಲೇಟ್ ಆಗೋದು ದೊಡ್ಡ ವಿಷಯವಲ್ಲ, ಆದರೆ ಪ್ರತಿ ಬಾರಿ ಪಿರಿಯಡ್ಸ್ ಲೇಟ್ ಆಗಲು ಪ್ರಾರಂಭಿಸಿದಾಗ, ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದರ ಹಿಂದೆ ಅನೇಕ ಕಾರಣಗಳಿರಬಹುದು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಪ್ರತಿಯೊಬ್ಬ ಮಹಿಳೆಗೂ ಒಂದು ನಿರ್ದಿಷ್ಟ ಸಮಯದಲ್ಲಿ ಪಿರಿಯಡ್ಸ್(Periods) ಆಗುತ್ತೆ. ತಿಂಗಳಲ್ಲಿ ಪಿರಿಯಡ್ಸ್ ಡೇಟ್ ಋತುಚಕ್ರದ ಮೇಲೆ ಅವಲಂಬಿತವಾಗಿರುತ್ತೆ, ಆದರೆ ಕೆಲವೊಮ್ಮೆ ಪಿರಿಯಡ್ಸ್ ಮಿಸ್ ಆಗುತ್ತೆ ಅಥವಾ ಸಮಯಕ್ಕೆ ಸರಿಯಾಗಿ ಆಗೋದಿಲ್ಲ, ಆಗ ಮೊದಲ ಆಲೋಚನೆ ಗರ್ಭಧಾರಣೆಯ ಕಡೆಗೆ ಹೋಗುತ್ತೆ, ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭಧಾರಣೆಯ ಯಾವುದೇ ಸಾಧ್ಯತೆಗಳಿಲ್ಲದ ಮಹಿಳೆಯರು ಏನು ಮಾಡಬೇಕು? ಈಗ ಅಂತಹ ಪರಿಸ್ಥಿತಿಯಲ್ಲಿ, ಲೇಟ್ ಪಿರಿಯಡ್ಸ್ ಕಾರಣಗಳು ಪಿಸಿಒಎಸ್ ಅಥವಾ ಪಿಸಿಒಡಿ ಆಗಿರಬಹುದು.
ಪಿಸಿಒಎಸ್ ಅಥವಾ ಪಿಸಿಒಡಿ(PCOD) ಅಲ್ಲದೆ, ಇತರ ಅನೇಕ ಕಾರಣಗಳು ಲೇಟ್ ಪಿರಿಯಡ್ಸ್ಗೆ ಕಾರಣವಾಗಬಹುದು. ಈ ಕಾರಣಗಳನ್ನು ನಿರ್ಲಕ್ಷಿಸಿದರೆ, ಅವು ಒಂದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಲೇಟ್ ಪಿರಿಯಡ್ಸ್ಗೆ ಕಾರಣಗಳು ಯಾವುವು, ಅನ್ನೋದನ್ನು ತಿಳಿಯೋಣ.
ಒತ್ತಡ(Stress)
ದೇಹದಲ್ಲಿ ಒತ್ತಡದ ಮಟ್ಟ ಹೆಚ್ಚಾದಾಗ, ಹಾರ್ಮೋನುಗಳ ಮಟ್ಟವು ಆಟೋಮ್ಯಾಟಿಕ್ ಆಗಿ ಕಡಿಮೆಯಾಗುತ್ತೆ. ಒತ್ತಡದಿಂದಾಗಿ ಋತುಚಕ್ರವು ವಿಳಂಬವಾಗುತ್ತೆ.. ಹೆಚ್ಚು ಒತ್ತಡ ತೆಗೆದುಕೊಳ್ಳುವ ಮಹಿಳೆಯರು ಸಹ ಹೆಚ್ಚು ನೋವನ್ನು ಎದುರಿಸಬೇಕಾಗಬಹುದು. ಹಾಗಾಗಿ ಸ್ಟ್ರೆಸ್ ಫ್ರೀ ಆಗಿರಲು ಟ್ರೈ ಮಾಡಿ.
ತೂಕ ನಷ್ಟ(Weight loss)
ಅತಿಯಾದ ಅಥವಾ ಹಠಾತ್ ತೂಕ ನಷ್ಟದಿಂದಾಗಿ, ಋತುಚಕ್ರವು ವಿಳಂಬವಾಗಬಹುದು. ಈ ಕಾರಣದಿಂದಾಗಿ, ಅಗತ್ಯ ಹಾರ್ಮೋನುಗಳ ಉತ್ಪಾದನೆಯು ನಿಲ್ಲುತ್ತೆ ಮತ್ತು ಋತುಚಕ್ರವು ಅನಿಯಮಿತವಾಗಲು ಪ್ರಾರಂಭಿಸುತ್ತೆ.ಹಾಗಾಗಿ ವೆಯಿಟ್ ಲಾಸ್ ಆಗುತ್ತಿದ್ದರೆ ಮೊದಲು ಡಾಕ್ಟರ್ ಹತ್ತಿರ ಸಲಹೆ ಪಡೆಯಿರಿ.
ತೂಕ ಹೆಚ್ಚಳ(Weight gain)
ತೂಕ ನಷ್ಟವು ಋತುಚಕ್ರವನ್ನು ಅನಿಯಮಿತವಾಗಿಸುವಂತೆಯೇ, ತೂಕ ಹೆಚ್ಚಳವು ಋತುಚಕ್ರವನ್ನು ಅನಿಯಮಿತವಾಗಿಸಬಹುದು. ತೂಕ ಹೆಚ್ಚಳದಿಂದಾಗಿ, ಈಸ್ಟ್ರೋಜೆನ್ ದೇಹದ ಮೇಲೆ ಸಾಕಷ್ಟು ಪರಿಣಾಮ ಬೀರಲು ಪ್ರಾರಂಭಿಸುತ್ತೆ. ಈ ಕಾರಣದಿಂದಾಗಿ ಪಿರಿಯಡ್ಸ್ ಸಹ ಸ್ಕಿಪ್ ಆಗಲು ಪ್ರಾರಂಭಿಸುತ್ತೆ.
ಪ್ರಿ ಮೆನೋಪಾಸ್ (Pre menopause)
ಮೆನೋಪಾಸ್ ಹೆಚ್ಚಾಗಿ 50-52 ವರ್ಷ ವಯಸ್ಸಿನವರಲ್ಲಿ ಕಂಡುಬರುತ್ತೆ, ಆದರೆ ಅನೇಕ ಮಹಿಳೆಯರು ಋತುಬಂಧಕ್ಕೆ 10 ರಿಂದ 15 ವರ್ಷಗಳ ಮೊದಲು ರೋಗಲಕ್ಷಣಗಳನ್ನು ಅನುಭವಿಸಬಹುದು. ಇದನ್ನು ಪ್ರಿ ಮೆನೋಪಾಸ್ ಎಂದು ಕರೆಯಲಾಗುತ್ತೆ. ಇದು ಈಸ್ಟ್ರೊಜೆನ್ ಮಟ್ಟಗಳಲ್ಲಿ ಏರಿಳಿತಗಳನ್ನು ಉಂಟುಮಾಡುತ್ತೆ, ಅಲ್ಲದೇ ಋತುಚಕ್ರ ಲೇಟ್ ಆಗಲು ಕಾರಣವಾಗುತ್ತೆ.
ಜನನ ನಿಯಂತ್ರಣ ಮಾತ್ರೆಗಳು(Birth control pills)
ಅನೇಕ ಮಹಿಳೆಯರು ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಕಾರಣದಿಂದಾಗಿ ಋತುಚಕ್ರಗಳು ವಿಳಂಬವಾಗುತ್ತವೆ ಅಥವಾ ತಪ್ಪಿಹೋಗುತ್ತವೆ. ಈ ಪರಿಸ್ಥಿತಿಯಲ್ಲಿ, ಭಯಪಡುವುದಕ್ಕಿಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಡಾಕ್ಟರ್ಗಳ ಸಲಹೆ ನಂತರವೇ ಬರ್ತ್ ಕಂಟ್ರೋಲ್ ಟ್ಯಾಬ್ಲೇಟ್ಸ್ ತೆಗೆದುಕೊಳ್ಳಿ.
ರಕ್ತಹೀನತೆ ಮತ್ತು ಕಬ್ಬಿಣದ ಕೊರತೆ(iron deficiency)
ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಯಿಂದಾಗಿ, ಋತುಚಕ್ರವು ವಿಳಂಬವಾಗಬಹುದು. ಮಹಿಳೆಗೆ ಕಬ್ಬಿಣದ ಕೊರತೆಯಿದ್ದರೆ, ಈ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹಾಗಾಗಿ ಯಾವುದಾದರೂ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದರೆ ಮೊದಲು ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯೋದು ಮುಖ್ಯ.
ಲೇಟ್ ಪಿರಿಯಡ್ಸ್ ಗೆ ಇವು ಕಾರಣಗಳಾಗಿವೆ, ಇದನ್ನು ನಿರ್ಲಕ್ಷಿಸಿದರೆ ಅಪಾಯ ಖಚಿತ. ಹಾಗಾಗಿಯಾವುದೇ ಡಿಸಿಷನ್ ಗೆ ಬಾರೋ ಮೊದಲು ವೈದ್ಯರನ್ನು ಸಂಪರ್ಕಿಸೋದು ಉತ್ತಮ ಆಯ್ಕೆ. ಅದಕ್ಕೂ ಮುನ್ನ ನೀವು ನಿಮ್ಮ ಆರೋಗ್ಯದ(Health) ಬಗ್ಗೆ ಹೆಚ್ಚಿನ ಗಮನ ಹರಿಸೋದು ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ, ದೇಹವನ್ನು ಆವರಿಸುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ.