
ಹುಡುಗೀರು ಮೇಕಪ್ ಮಾಡ್ಕೊಳ್ಳೋ ವಿಚಾರ ಆಗಾಗ ಟ್ರೋಲ್ ಆಗುತ್ತಲೇ ಇರುತ್ತದೆ. ಬ್ಯೂಟಿಪಾರ್ಲರ್ ಒಳಗೆ ಹೋದ ಅಜ್ಜಿ, ಹುಡುಗಿಯಾಗಿ ಹೊರಬರುವುದು, ಹುಡುಗಿಯೊಬ್ಬಳು ಅತ್ತರೆ ಮೇಕಪ್ ಎಲ್ಲಾ ಅಳಿಸಿ ಹೋಗಿ ಪರಿಚಯವೇ ಇಲ್ಲದಂತೆ ಆಗಿಬಿಡುವುದು, ಹುಡುಗಿ ಮೇಕಪ್ ಹಾಕದೆ ಬಂದರೆ ಜನರಿಗೆ ಪರಿಚಯವೇ ಸಿಗದಂತಾಗುವುದು ಹೀಗೆ ಹಲವು ವಿಡಿಯೋಗಳು ವೈರಲ್ ಆಗುತ್ತವೆ. ಹುಡುಗಿಯರು ಮೇಕಪ್ ಮಾಡ್ಕೊಳ್ಳೋ ವಿಚಾರ ಈ ಕಾರಣಕ್ಕಾಗಿಯೇ ಆಗಾಗ ಟ್ರೋಲ್ ಆಗುತ್ತಿರುತ್ತದೆ. ಹಾಗೆಯೇ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಗು, ಮೇಕಪ್ ಮಾಡ್ಕೊಂಡು ಬಂದ ತಾಯಿಯ ಗುರುತು ಪತ್ತೆಹಚ್ಚಲಾಗದೆ ರಚ್ಚೆ ಹಿಡಿದು ಅಳುವುದನ್ನು ನೋಡಬಹುದು.
ತಾಯಿ ಸುಂದರವಾಗಿ ಮೇಕಪ್ ಮಾಡ್ಕೊಂಡು ಬರುತ್ತಾರೆ. ಆದರೆ ಮಗುವಿಗೆ (Baby) ತಾಯಿಯ ಪರಿಚಯ ಸಿಗುವುದೇ ಇಲ್ಲ. ಮಗು ಇದು ನನ್ನ ತಾಯಿಯಲ್ಲ (Mother) ಎಂದು ರಚ್ಚೆ ಹಿಡಿದು ಅಳುತ್ತದೆ. ಮಗು ತನ್ನ ತಾಯಿ ಮೇಕಪ್ ಮಾಡಿಕೊಂಡಿರುವುದನ್ನು ಗುರುತಿಸಲು ಸಾಧ್ಯವಾಗಲಿಲ್ಲ ಮತ್ತು ಅವನ ತಾಯಿ ತನ್ನ ಬಳಿಗೆ ಬರಲು ಪ್ರಯತ್ನಿಸಿದಾಗ ತೀವ್ರವಾಗಿ ಅಳುತ್ತಾನೆ (Crying). ಈ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಅನೇಕ ಜನರು ಇದನ್ನು ರಿಶೇರ್ ಮಾಡಿದ್ದಾರೆ.
ಅಬ್ಬಬ್ಬಾ..ಧೈರ್ಯವೇ,10 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ಮೇಕಪ್ ಮಾಡ್ಕೊಂಡ್ಳು!
ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ವೀಡಿಯೊದಲ್ಲಿ, ಮಗುವೊಂದು ಬೆಡ್ ಮೇಲೆ ಕುಳಿತು ಅಳುತ್ತಿರುವುದನ್ನು ಕಾಣಬಹುದು. ನೀಲಿ ಲೆಹೆಂಗಾವನ್ನು ಧರಿಸಿರುವ ಮಹಿಳೆ (Woman) ಸುಂದರವಾದ ಮೇಕಪ್ ಮತ್ತು ಸುಂದರವಾದ ಕೇಶವಿನ್ಯಾಸದೊಂದಿಗೆ ಅವನ ಬಳಿ ಬಂದು ಪ್ರೀತಿಯಿಂದ ಕರೆಯುತ್ತಾಳೆ. ಆದರೆ ಮೇಕಪ್ ಮಾಡಿರುವ ತಾಯಿಯನ್ನು ಮಗುವಿಗೆ ಗುರುತಿಸಲು ಸಾಧ್ಯವಾಗುವುದಿಲ್ಲ. ನಾನು ನಿನ್ನ ಅಮ್ಮ, ಎಂದು ತಾಯಿ ಹೇಳಿದರೂ ಮಗು ಅಲ್ಲ ಅಲ್ಲ ನೀನು ನನ್ನ ತಾಯಿಯಲ್ಲ ಎಂದೇ ಹೇಳುತ್ತದೆ. ಎತ್ತಿಕೊಳ್ಳಲು ಹೋದರೆ ದೂರ ತಳ್ಳುತ್ತದೆ. ಲೆಹೆಂಗಾದಲ್ಲಿರುವ ಮಹಿಳೆ ನಿಜವಾಗಿಯೂ ಅವನ ತಾಯಿ ಎಂದು ಇನ್ನೊಬ್ಬ ಮಹಿಳೆ ಹುಡುಗನಿಗೆ ಹೇಳುವುದನ್ನು ಕೇಳಬಹುದು. ಆದರೂ ಮಗು ಅಮ್ಮನ ಗುರುತು ಹಿಡಿಯುವುದಿಲ್ಲ.
ವೀಡಿಯೊದ ಕೊನೆಯಲ್ಲಿ, ಮಹಿಳೆಯು ಮಗುವನ್ನು ತನ್ನ ತೊಡೆಯ ಮೇಲೆ ಕೂರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅವನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಮಗು ಯಾರೋ ಅಪರಿಚಿತರು (Unknown) ತನ್ನನ್ನು ಹಿಡಿದಿಟ್ಟುಕೊಂಡಂತೆ ಜೋರಾಗಿ ಅಳುತ್ತಾನೆ. ಈ ವೀಡಿಯೊವನ್ನು ಕೆಲವು ವಾರಗಳ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ, ವಿಡಿಯೋ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಗಳಿಸಿದೆ. ವೀಡಿಯೊ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ನೀತಾ ಅಂಬಾನಿ ಮೇಕಪ್ ಆರ್ಟಿಸ್ಟ್ ಕಂಪೆನಿ ಸಿಇಒಗಳಿಗಿಂತ ಹೆಚ್ಚು ಸಂಭಾವನೆ ಪಡೀತಾರಂತೆ!
ಒಬ್ಬ ಬಳಕೆದಾರರು, 'ಮೇಕಪ್ ತುಂಬಾ ಅಪಾಯಕಾರಿ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಮೇಕ್ಅಪ್ ಮ್ಯಾಜಿಕ್' ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯ ಬಳಕೆದಾರರು'ಈ ತಾಯಿ ಯಾವಾಗಲೂ ತನ್ನ ಮಗುವನ್ನು ಮತ್ತು ತನ್ನ ಮನೆಯ ಆರೈಕೆಯಲ್ಲಿ ನಿರತಳಾಗಿದ್ದಿರಬಹುದು. ಹೀಗಾಗಿ ಅವಳು ಈ ರೀತಿ ತನ್ನನ್ನು ತಾನು ಅಲಂಕರಿಸಲು ಸಮಯ ಹೊಂದಿಲ್ಲ. ಈ ಹುಡುಗ ತನ್ನ ತಾಯಿಯನ್ನು ಈ ರೀತಿ ನೋಡುತ್ತಿರುವುದು ಇದೇ ಮೊದಲು ಹೀಗಾಗಿ ಅವಳನ್ನು ಗುರುತಿಸಲಿಲ್ಲ' ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.