
ಪತಿ –ಪತ್ನಿ ಇಬ್ಬರೂ ದುಡಿದ್ರೆ ಸಂಸಾರದ ಭಾರವನ್ನು ಸ್ವಲ್ಪ ಕಡಿಮೆ ಮಾಡಬಹುದು. ಈಗಿನ ದುಬಾರಿ ಜೀವನದಲ್ಲಿ ಒಬ್ಬರ ದುಡಿಮೆ ಕಷ್ಟವಾಗುತ್ತದೆ. ಹಾಗಂತ ಎಲ್ಲ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಿ ಅಥವಾ ಮನೆಯಲ್ಲಿಯೇ ಆದಾಯ ಬರುವಂತಹ ಯಾವುದೇ ಉದ್ಯೋಗ ಮಾಡಲು ಸಾಧ್ಯವಾಗೋದಿಲ್ಲ. ಅನೇಕ ಭಾರತೀಯ ಮನೆಗಳಲ್ಲಿ ಪತಿಯ ಆದಾಯದಿಂದ ಇಡೀ ಕುಟುಂಬ ಜೀವನ ಸಾಗಿಸುತ್ತಿದೆ. ಪತ್ನಿ, ಮಕ್ಕಳು ಮತ್ತು ಪಾಲಕರನ್ನು ತನ್ನ ಆದಾಯದಿಂದ ನೋಡಿಕೊಳ್ಳುವ ಪುರುಷರಿದ್ದಾರೆ.
ಜೀವನ (life) ಪರ್ಯಂತ ಒಂದೇ ಕೆಲಸ ಮಾಡಲು ಸಾಧ್ಯವಿಲ್ಲ. ಕೆಲವು ಬಾರಿ ನಾವು ನಿರೀಕ್ಷೆ (Expectation) ಮಾಡದ ಘಟನೆ ನಡೆದಿರುತ್ತದೆ. ನಿಯಮಿತವಾಗಿ ಆದಾಯ ಬರ್ತಿದೆ, ಸುಖವಾಗಿ ಸಂಸಾರ ನಡೆಯುತ್ತಿದೆ ಎನ್ನುವಾಗ್ಲೇ ಪುರುಷರ ಕೆಲಸ ಹೋಗಿರುತ್ತದೆ. ಈ ಸಂದರ್ಭದಲ್ಲಿ ಮನೆಮಂದಿಯೆಲ್ಲ ಕಂಗಾಲ್ ಆಗ್ತಾರೆ. ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಕೆಲಸ ಕಳೆದುಕೊಂಡ ಟೆನ್ಷನ್ ನಲ್ಲಿರುವ ಪತಿ, ವಿಚಿತ್ರವಾಗಿ ವರ್ತಿಸುವ ಸಾಧ್ಯತೆಯಿರುತ್ತದೆ. ಪತಿ ಸಣ್ಣ ಸಣ್ಣ ವಿಷ್ಯಕ್ಕೂ ರೇಗಾಡಿದಾಗ, ತಿಂಗಳ ಆರಂಭದಲ್ಲಿ ಸಂಬಳ ಕೈಗೆ ನೀಡದೆ ಹೋದಾಗ ಪತ್ನಿಗೆ ಕೈಕಾಲು ಆಡೋದಿಲ್ಲ. ಪತಿ – ಪತ್ನಿ ಮಧ್ಯೆ ಇದು ಜಗಳಕ್ಕೆ ಕಾರಣವಾಗುತ್ತದೆ. ಪತಿ ಕೆಲಸಕಳೆದುಕೊಂಡ ಸಮಯದಲ್ಲಿ ಪತ್ನಿಯಾದವಳು ಅದನ್ನು ಶಾಂತವಾಗಿ ನಿಭಾಯಿಸಬೇಕು. ಆಗ ಪತಿ ಕೆಳಮಟ್ಟಕ್ಕೆ ಇಳಿಯುವುದಿಲ್ಲ, ಮನಸ್ಸಿನಲ್ಲಿ ತಪ್ಪಾದ ಆಲೋಚನೆ ಬರೋದಿಲ್ಲ.
ಪಬ್ಲಿಕ್ ಪ್ಲೇಸ್‌ನಲ್ಲಿ ಮಗುವಿಗೆ ಎದೆ ಹಾಲುಣಿಸೋದು ನಾಚಿಕೆಯ ವಿಷ್ಯವಲ್ಲ
ಪತಿಗೆ ಆತ್ಮವಿಶ್ವಾಸ (Confidence) ತುಂಬಿ : ಯಾವುದೇ ಕಾರಣಕ್ಕೆ ಪತಿ ಕೆಲಸ ಕಳೆದುಕೊಂಡಿರಲಿ, ಪತ್ನಿಯಾದವಳು ಆತನ ಜವಾಬ್ದಾರಿಯನ್ನು ನಿಭಾಯಿಸಬೇಕು. ನಿಮಗೆ ಕೆಲಸವಿಲ್ಲ ಎಂದು ಪದೇ ಪದೇ ಹೇಳ್ತಾ ಅವರಿಗೆ ಮತ್ತಷ್ಟು ನೋವುಂಟು ಮಾಡಬಾರದು. ಪತಿಯ ಬದಲು ನೀವು ಕೆಲಸಕ್ಕೆ ಹೋಗಬಹುದು. ಇಲ್ಲ ಮನೆಯಲ್ಲಿಯೇ ನೀವು ಬ್ಯುಸಿನೆಸ್ ಶುರು ಮಾಡಬಹುದು. ಅನೇಕ ಮಹಿಳೆಯರು ಪತಿ ಕೆಲಸ ಕಳೆದುಕೊಂಡ ಮೇಲೆ ಬ್ಯುಸಿನೆಸ್ ( Business) ಶುರು ಮಾಡಿ ಸಕ್ಸಸ್ ಕಂಡಿದ್ದಾರೆ. ನಿಮ್ಮ ಬ್ಯುಸಿನೆಸ್ ನಲ್ಲಿ ನಿಮ್ಮ ಪತಿ ಸೇರುವಂತೆ ಆಹ್ವಾನ ನೀಡಬಹುದು.
ಅಬ್ಬಬ್ಬಾ ಈ ದಾದಿ ದಿನಕ್ಕೆ ಲಕ್ಷ ಸಂಪಾದಿಸ್ತಾರಂತೆ! ಮಾಡೋದೇನಪ್ಪಾ ಅಂಥದ್ದು?
ಮನೆ ಖರ್ಚಿನಲ್ಲಿ ಇರಲಿ ಹಿಡಿತ : ಪತಿಗೆ ತಿಂಗಳ ಸಂಬಳ ಬರ್ತಿದ್ದ ಸ್ಥಿತಿ ಬೇರೆ, ಕೆಲಸ ಕಳೆದುಕೊಂಡಾಗಿನ ಸ್ಥಿತಿ ಬೇರೆ. ಪತ್ನಿಯಾದವಳು ಈ ಸಂದರ್ಭದಲ್ಲಿ ಖರ್ಚನ್ನು ಕಡಿಮೆ ಮಾಡಬೇಕು. ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿದ್ರೆ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಆಹಾರ, ತರಕಾರಿ, ಬೇಳೆಕಾಳು ಸೇರಿದಂತೆ ಪ್ರತಿಯೊಂದು ವಸ್ತುವನ್ನು ಅಗತ್ಯವಿದ್ದಷ್ಟೆ ಬಳಸಬೇಕು. ಅಗತ್ಯಕ್ಕಿಂತ ಹೆಚ್ಚುವರಿ ಯಾವುದೇ ವಸ್ತುವನ್ನು ಕೂಡ ಖರೀದಿ ಮಾಡಬೇಡಿ. ನೌಕರಿ ಸಿಕ್ಕ ಮೇಲೆ ಮತ್ತೆ ಇವನ್ನೆಲ್ಲ ಖರೀದಿ ಮಾಡಬಹುದು. ನೌಕರಿ ಇಲ್ಲದ ಸೂಕ್ಷ್ಮ ಸಂದರ್ಭದಲ್ಲಿ ಪತ್ನಿಯಾದವಳು ಮಾಡುವ ಕೆಲಸ ತುಂಬಾ ಮಹತ್ವದ್ದಾಗಿರುತ್ತದೆ.
ಮನೆಯ ವಾತಾವರಣ ಪಾಸಿಟಿವ್ ಆಗಿರಲಿ : ಮನೆಯಲ್ಲಿ ಒಬ್ಬರ ಮೂಡ್ ಸರಿಯಾಗಿಲ್ಲ ಎಂದಾಗ ಇಡೀ ಮನೆ ವಾತಾವರಣ ಬದಲಾಗಿರುತ್ತದೆ. ಕೆಲಸ ಕಳೆದುಕೊಂಡ ಸ್ಥಿತಿಯಲ್ಲಿ ಪುರುಷರಿಗೆ ಟೆನ್ಷನ್ ಮತ್ತಷ್ಟು ಹೆಚ್ಚಿರುತ್ತದೆ. ಮನೆಯ ವಾತಾವರಣವನ್ನು ತಿಳಿಯಾಗಿಸಲು ಪತ್ನಿ ಪ್ರಯತ್ನಿಸಬೇಕು. ಮನೆಯ ಎಲ್ಲರ ಸದಸ್ಯರು ಸೇರಿ ಊಟ ಮಾಡುವುದು, ಟಿವಿ ನೋಡುವುದು, ಜೋಕ್ ಮಾಡುವುದು, ಪಾರ್ಕ್ ಗೆ ವಾಕ್ ಹೋಗುವುದು ಹೀಗೆ ಸಂತೋಷ ನೀಡುವ ಕೆಲಸ ಮಾಡ್ಬೇಕು. ಇದ್ರಿಂದ ಪತಿ ಕೂಡ ಒಂಟಿತನ ಅನುಭವಿಸುವುದಿಲ್ಲ. ಕೈನಲ್ಲಿ ಕೆಲಸವಿಲ್ಲ ಎಂಬ ಚಿಂತೆಯಿಂದ ಸ್ವಲ್ಪ ಸಮಯ ಹೊರಬರಲು ಸಾಧ್ಯವಾಗುತ್ತದೆ. ಮನೆಯ ವಾತಾವರಣ ಪಾಸಿಟಿವ್ ಇದ್ರೆ ಆತ ಕೂಡ ಧೈರ್ಯದಿಂದ ಇನ್ನೊಂದು ಕೆಲಸ ಹುಡುಕಲು ಸಹಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.