ಹೆಣ್ಣೆಂದರೆ ಅಬಲೆಯೆನ್ನುವ ಕಾಲ ಹೋಯಿತು. ಆಕೆ ಏನನ್ನಾದರೂ ಸಾಧಿಸಬಲ್ಲಳು ಅನ್ನೋ ಕಾಲದಲ್ಲಿ ನಾವಿದ್ದೇವೆ. ಶೈಕ್ಷಣಿಕ, ಆರ್ಥಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಹೀಗಿರುವಾಗ ದೇವರ ಸ್ವಂತ ನಾಡು ಕೇರಳದಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ.
ಮಹಿಳೆ ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲಳು. ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದು, ಯಶಸ್ಸನ್ನು ತರಬಲ್ಲಳು. ಹೆಣ್ಣೆಂದರೆ ಅಬಲೆಯೆನ್ನುವ ಕಾಲ ಹೋಯಿತು. ಆಕೆ ಏನನ್ನಾದರೂ ಸಾಧಿಸಬಲ್ಲಳು ಅನ್ನೋ ಕಾಲದಲ್ಲಿ ನಾವಿದ್ದೇವೆ. ಶೈಕ್ಷಣಿಕ, ಆರ್ಥಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಹೀಗಿರುವಾಗ ದೇವರ ಸ್ವಂತ ನಾಡು ಕೇರಳದಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಕೇರಳದಲ್ಲಿ 14 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಈಗ ಮಹಿಳೆಯರೇ ಜಿಲ್ಲಾಧಿಕಾರಿಗಳಾಗಿದ್ದಾರೆ.
ಅಧಿಕಾರ ಅಂದ್ರೆ ಅದು ಪುರುಷರ ಕೈಯಲ್ಲೇ ಇರಬೇಕು ಅನ್ನೋ ಕಾಲವೊಂದಿತ್ತು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬರೀ ಪುರುಷರಷ್ಟೇ (Men) ಇರುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಮಹಿಳೆಯರು (Women) ಸಹ ಸರ್ಕಾರ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಜಿಲ್ಲೆಯ, ರಾಜ್ಯದ, ದೇಶದ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದಾರೆ. ಅದಕ್ಕೆ ಸ್ಪಷ್ಟ ನಿದರ್ಶನ ಕೇರಳ ರಾಜ್ಯ. (Kerala state) ಇಲ್ಲಿ ಸದ್ಯ ರಾಜ್ಯಲ್ಲಿರುವ 14 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಮಹಿಳೆಯರೇ ಜಿಲ್ಲಾಧಿಕಾರಿ (Collectors)ಗಳಾಗಿದ್ದಾರೆ. ರಾಜಧಾನಿ ಜಿಲ್ಲೆ ತಿರುವನಂತಪುರಂ ಮತ್ತು ನೆರೆಯ ಜಿಲ್ಲೆಗಳಾದ ಕೊಲ್ಲಂ ಮತ್ತು ಪತ್ತನಂತಿಟ್ಟ ಸೇರಿದಂತೆ ಹಲವು ಜಿಲ್ಲೆಗಳ ಆಡಳಿತ ನಿಯಂತ್ರಣವು ಮಹಿಳಾ ಜಿಲ್ಲಾಧಿಕಾರಿಗಳ ಕೈಯಲ್ಲಿ ಭದ್ರವಾಗಿದೆ.
ಮಹಿಳೆಯರಿಗೆ ಗ್ಯಾರೆಂಟಿ ಉಚಿತ ಪ್ರಯಾಣ, ಫ್ರೀ ಬಸ್ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಹೌದು, ಕೇರಳ ರಾಜ್ಯದ (Kerala state) ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮಹಿಳೆಯರೂ ಆಗಿದ್ದಾರೆ. ಇಲ್ಲಿರುವ 4 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಮಹಿಳೆಯರೇ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ವಯನಾಡ್ ಜಿಲ್ಲೆಗಳಲ್ಲಿ ಮಹಿಳಾ ಜಿಲ್ಲಾಧಿಕಾರಿಗಳಿದ್ದಾರೆ (Women District Collectors). ನವಜೋತ್ ಖೋಸಾ, ಅಫ್ಸಾನಾ ಪರ್ವೀನ್, ದಿವ್ಯಾ ಅಯ್ಯರ್, ಪಿ.ಕೆ.ಜಯಶ್ರೀ, ಶೀಬಾ ಜಾರ್ಜ್, ಹರಿತಾ, ಮೃಣ್ಮಯೀ ಜೋಶಿ, ಗೀತಾ ಮೊದಲಾದ ಮಹಿಳೆಯರು ಈ ಜಿಲ್ಲೆಗಳಲ್ಲಿ ಆಡಳಿತದ ನೇತೃತ್ವದ ಪ್ರಮುಖ ಅಧಿಕಾರಿಗಳಲ್ಲಿ ಸೇರಿದ್ದಾರೆ. ಉನ್ನತ ಮಟ್ಟದ ಆಡಳಿತಾತ್ಮಕ ಹುದ್ದೆಗಳಲ್ಲಿ ಮಹಿಳೆಯರ ಉಪಸ್ಥಿತಿಯು ಸಮಾಜದಲ್ಲಿ ಮಹಿಳಾ ಸ್ನೇಹಿ ದೃಷ್ಟಿಕೋನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಕೇರಳದ 14 ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳು ಈಗ ಮಹಿಳೆಯರಿಂದ ನಿರ್ವಹಿಸಲ್ಪಡುತ್ತವೆ. ದೇಶದ ಹಲವೆಡೆ ಎಲ್ಲಾ ಮಹಿಳೆಯರು ರಾಜಕೀಯ, ನಾಗರಿಕ ಸೇವೆಗಳು, ರಕ್ಷಣೆ ಮತ್ತು ಇತರ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿರುವ ದೇಶದಲ್ಲಿ ಇದು ಅಪರೂಪದ ಸಾಧನೆಯಾಗಿದೆ. ಇದರೊಂದಿಗೆ ರಾಜ್ಯದ ಮೂರನೇ ಎರಡರಷ್ಟು ಆಡಳಿತವನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ. ರಾಜ್ಯ ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಮೀಸಲಾತಿ 33 ಪ್ರತಿಶತದಷ್ಟಿದ್ದರೆ, ಈಗ ಕೇರಳದಲ್ಲಿ ಆಡಳಿತಾತ್ಮಕ ಸೇವೆಗಳಲ್ಲಿ ಮಹಿಳಾ ಅಧಿಕಾರಿಗಳು 71.4 ಪ್ರತಿಶತವನ್ನು ಹೊಂದಿದ್ದಾರೆ.
UPSC CSE 2022: ಟಾಪರ್ ಇಶಿತಾ ಕಿಶೋರ್ ಮಾರ್ಕ್ಸ್‌ಕಾರ್ಡ್ ವೈರಲ್