
ಒಬ್ಬೊಬ್ಬರು ಜೀವನವೂ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಖುಷಿಯಿಂದ ಜೀವನ ಸಾಗಿಸುತ್ತಾರೆ. ಇನ್ನು ಕೆಲವರ ಜೀವನದಲ್ಲಿ ಕಷ್ಟಗಳೇ ಮುಗಿಯುವುದಿಲ್ಲ. ಕೆಲವೊಬ್ಬರು ಇಂಥಾ ಸಮಸ್ಯೆಗಳಿಂದ ಕಂಗೆಟ್ಟು ಹೋದರೆ, ಇನ್ನು ಕೆಲವರು ಸಮಸ್ಯೆಯನ್ನು ಎದುರಿಸಿ ಮುಂದೆ ಸಾಗುತ್ತಾರೆ. ಹಾಗೆಯೇ ಇಲ್ಲೊಬ್ಬ ಯುವತಿ ಕಷ್ಟಗಳ ನಡುವೆಯೇ ತನ್ನ ಜೀವನದಲ್ಲಿ ಖುಷಿಯಾಗಿರಲು ದಾರಿ ಕಂಡುಕೊಂಡಿದ್ದಾಳೆ. ಕೋಲ್ಕತ್ತಾದಲ್ಲಿ ಇಂಜಿನಿಯರ್ ಆಗಿದ್ದ ದೀಪ್ತಾ ಘೋಷ್ ಉಬರ್ ಡ್ರೈವರ್ ಆಗಿ ಜೀವನ ಕಟ್ಟಿಕೊಂಡಿದ್ದಾರೆ.
ಕೋಲ್ಕತ್ತಾದಲ್ಲಿ ಉಬರ್ ಕ್ಯಾಬ್ ಓಡಿಸುವ ಇಂಜಿನಿಯರ್ ದೀಪ್ತಾ ಘೋಷ್, ಕಷ್ಟದ ಸಂದರ್ಭಗಳಲ್ಲಿ ತಲೆಬಾಗದೆ ಹಲವು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ದೀಪ್ತಾ ಆರು ವರ್ಷಗಳ ಕಾಲ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ, ಒಂದು ದುರಂತವು ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಆದರೂ ಅವರು ಎದೆಗುಂದಲ್ಲಿಲ್ಲ. ಸಂಪೂರ್ಣವಾಗಿ ಪುರುಷರೇ ತುಂಬಿರುವ ಡ್ರೈವಿಂಗ್ ಉದ್ಯಮವನ್ನು ಸೇರಲು ಮುಂದಾದರು. ಕ್ಯಾಬ್‌ನಲ್ಲಿ ಪ್ರಯಾಣಿಸಿದ ಪರಮ್ ಕಲ್ಯಾಣ್ ಸಿಂಗ್ ಎಂಬ ವ್ಯಕ್ತಿ ದೀಪ್ತಾ ಘೋಷ್ ವಾರ ಜೀವನಕಥೆಯನ್ನು ತಿಳಿದುಕೊಂಡರು.
ಮಹಿಳೆಯರೇ ರಾಜ್ಯಭಾರ ಮಾಡೋ ಈ ಹಳ್ಳಿಯಲ್ಲಿ ಪುರುಷರಿಗೆ ಪ್ರವೇಶವೇ ಇರಲ್ಲ…
ಪರಮ್ ಕಲ್ಯಾಣ್ ಸಿಂಗ್, ದೀಪ್ತಾ ಘೋಷ್ ಕುರಿತಾದ ವಿಚಾರವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 'ಕ್ಯಾಬ್ ಡ್ರೈವರ್ ಜೊತೆ ಮಾತನಾಡುತ್ತಾ ಬರುತ್ತಿದ್ದ. ಈ ಸಂದರ್ಭದಲ್ಲಿ ಆಕೆಯ ಶೈಕ್ಷಣಿಕ ಅರ್ಹತೆ ಏನು ಎಂದು ಕೇಳಿದಾಗ ಆಕೆ ಇಂಜಿನಿಯರಿಂಗ್ ಪದವೀಧರೆ ಎಂದು ತಿಳಿದು ಆಶ್ಚರ್ಯವಾಯಿತು' ಎಂದು ಹೇಳಿಕೊಂಡಿದ್ದಾರೆ. 'ನನ್ನ ತಂದೆ 2020ರಲ್ಲಿ ನಿಧನರಾದರು. ಆ ನಂತರ ತಾಯಿ ಮತ್ತು ಸಹೋದರಿ ಆರ್ಥಿಕ ಸಂಕಷ್ಟದಲ್ಲಿದ್ದರು. ನನ್ನ ಉದ್ಯೋಗಕ್ಕಾಗಿ ನಾನು ಕೋಲ್ಕತ್ತಾದಿಂದ ಹೊರಗೆ ಹೋಗಬೇಕಾಗಿತ್ತು. ಆದರೆ ಕುಟುಂಬವು ನನ್ನ ಆದ್ಯತೆಯಾಗಿದ್ದರಿಂದ, ನಾನು 2021ರಲ್ಲಿ ಆಲ್ಟೊ ಖರೀದಿಸಿದೆ ಮತ್ತು ಉಬರ್ ಕ್ಯಾಬ್ ಡ್ರೈವರ್ ಆದೆ. ಆ ನಂತರ ವಾಣಿಜ್ಯ ಪರವಾನಗಿಯನ್ನು ಪಡೆದುಕೊಂಡೆ. ಮತ್ತು ಕೋಲ್ಕತ್ತಾದ ರಸ್ತೆಗಳಲ್ಲಿ ಕ್ಯಾಬ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ' ಎಂದು ಯುವತಿ ಹೇಳಿದ್ದಾಗಿ ಪರಮ್ ಕಲ್ಯಾಣ್ ಸಿಂಗ್ ತಿಳಿಸಿದ್ದಾರೆ.
ದೀಪ್ತಾ ವಾರದಲ್ಲಿ ಆರು ದಿನ ಏಳು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಮತ್ತು ತಿಂಗಳಿಗೆ ಸುಮಾರು ರೂ 40000 ಗಳಿಸುತ್ತಾಳೆ. ಈ ಮೊತ್ತವು ಅವಳ ಕುಟುಂಬ ಖುಷಿಯಿಂದ ಜೀವನ ನಡೆಸಲು ಸಾಕಾಗುತ್ತಿದೆ. ದೀಪ್ತಾ ಘೋಷ್ ಪೋಸ್ಟ್‌ನ ಕಾಮೆಂಟ್‌ನಲ್ಲಿ 'ನನ್ನ ತಾಯಿ ಪಕ್ಕದಲ್ಲಿ ಇದ್ದುದರಿಂದ ಯಶಸ್ವಿಯಾಗಲು ಸಾಧ್ಯವಾಯಿತು' ಎಂದು ಬರೆದಿದ್ದಾರೆ. ಪೋಸ್ಟ್‌ನಲ್ಲಿ ಅವರು ತಮ್ಮ ತಂದೆ, ಸಹೋದರಿ ಮತ್ತು ತಾಯಿಗೆ ಧನ್ಯವಾದ ಹೇಳಿದ್ದಾರೆ.
5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಒಂದು ಕಾಲದಲ್ಲಿ ಆಗರ್ಭ ಶ್ರೀಮಂತೆ..ಈಗ ಮನೆಕೆಲಸದಾಕೆ!
ದುಬೈನಲ್ಲೊಬ್ಬ ಮಹಿಳೆಗೆ ಕಾರೇ ಮನೆಯಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳಿಂದ ಈಕೆ ಕಾರನ್ನೇ ಮನೆಯಾಗಿಸಿಕೊಂಡಿದ್ದಾರೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಪ್ರಿಯಾ ಕಾರಿನಲ್ಲಿ ಜೀವನ ಸಾಗಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ತನ್ನ ಹೋಂಡಾ ಸಿಟಿ ಸೆಡಾನ್‌ನಲ್ಲಿ ಎರಡು ನಾಯಿಗಳೊಂದಿಗೆ ವಾಸಿಸುತ್ತಿದ್ದರು. ಸದ್ಯ ಅವರಿಗೆ ನೆರವು ಲಭಿಸಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರಿಯಾ, ಆರಂಭದಲ್ಲಿ ಶ್ರೀಮಂತರಾಗಿದ್ದವರು ಆರ್ಥಿಕ ನಷ್ಟವನ್ನು ಅನುಭವಿಸಿದರು ಮತ್ತು ಜೀವನವು ಕಷ್ಟಕರವಾಗಿ ಪರಿಣಮಿಸಿತು.
ಪ್ರಿಯಾ ಖುಷಿಯಿಂದ ಜೀವನ (Life) ನಡೆಸುತ್ತಿದ್ದರು. ಆದರೆ ಪ್ರಿಯಾಳ ತಂದೆ ತೀರಿಕೊಂಡರು. ಮಾತ್ರವಲ್ಲ ತಾಯಿ ಹಾಸಿಗೆ ಹಿಡಿದರು. ಅವರ ಚಿಕಿತ್ಸೆಗೆ (Treatment) ಸಾಕಷ್ಟು ಹಣ ಖರ್ಚಾಯಿತು. ಕೆಲ ದಿನಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಾಯಿಯೂ ಮೃತಪಟ್ಟಿದ್ದರು. ತನ್ನ ತಾಯಿಯ ಮರಣದ ನಂತರ, ಪ್ರಿಯಾ ವ್ಯಾಪಾರದಲ್ಲಿ ಸಂಪೂರ್ಣ ನಷ್ಟವನ್ನು ಅನುಭವಿಸಿದಳು. ಕೊನೆಗೆ ಮನೆ ಬಾಡಿಗೆ (Rent) ಕಟ್ಟಲು ಹಣವಿಲ್ಲದೆ ಪ್ರಿಯಾ ಮನೆ ಬಿಟ್ಟು ಹೋಗಬೇಕಾಯಿತು. ನಂತರ ಅವರು ತಮ್ಮ ಕಾರು ಮತ್ತು ಎರಡು ನಾಯಿಗಳೊಂದಿಗೆ ಕಾರಿನಲ್ಲೇ ವಾಸಿಸಲು ಆರಂಭಿಸಿದದರು. ಯೂಟ್ಯೂಬ್ ಚಾನೆಲ್‌ವೊಂದು ಪ್ರಿಯಾಳ ಜೀವನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಆ ನಂತರ, ಅನೇಕ ಜನರಿಗೆ ಪ್ರಿಯಾ ಅವರ ಪರಿಸ್ಥಿತಿಯ ಬಗ್ಗೆ ಅರಿವಾಯಿತು. ದುಬೈ ಮೂಲದ ಭಾರತೀಯ ಉದ್ಯಮಿ ಜಸ್ಬೀರ್ ಬಸ್ಸಿ ಪ್ರಿಯಾಗೆ ನೆರವಾದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.