ಮಹಿಳೆಯರೇ ರಾಜ್ಯಭಾರ ಮಾಡೋ ಈ ಹಳ್ಳಿಯಲ್ಲಿ ಪುರುಷರಿಗೆ ಪ್ರವೇಶವೇ ಇರಲ್ಲ…
ನೀವು ವಿಶ್ವದ ಅನೇಕ ಅದ್ಭುತ ಹಳ್ಳಿಗಳ ಬಗ್ಗೆ ಕೇಳಿರಬಹುದು, ಆದರೆ ಅನೇಕ ವರ್ಷಗಳಿಂದ ಪುರುಷರು ಹೆಜ್ಜೆಯೂ ಇಡದ ಹಳ್ಳಿಯ ಬಗ್ಗೆ ನಿಮಗೆ ತಿಳಿದಿದೆಯೇ,. ಈ ಗ್ರಾಮದಲ್ಲಿ ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದರ ಬಗ್ಗೆ ತಿಳಿಯೋಣ.
ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನತೆ ಬಗ್ಗೆ ಎಷ್ಟೇ ಮಾತನಾಡಿದರೂ, ಎಲ್ಲೋ ಮಹಿಳೆಯರು ಇನ್ನೂ ಸಮಾನತೆಗಾಗಿ ಹೋರಾಡುತ್ತಿದ್ದಾರೆ. ಪಿತೃ ಪ್ರಧಾನ ಸಮಾಜದಿಂದ ತನ್ನನ್ನು ಮುಕ್ತಗೊಳಿಸಲು ಅವಳು ಹೆಣಗಾಡುತ್ತಿದ್ದಾಳೆ. ಕೆಲವು ದೇಶಗಳಲ್ಲಿ, ಮಹಿಳೆಯರಿಗೆ ಸಮಾನ ಹಕ್ಕುಗಳು ದೊರೆತಿವೆ, ಕೆಲವು ದೇಶಗಳಲ್ಲಿ ಅವರ ಸ್ಥಿತಿ ಇನ್ನೂ ಶೋಚನೀಯ. ಆದಾಗ್ಯೂ, ಮಹಿಳೆಯರು ಈಗ ತಮ್ಮ ಜೀವನವನ್ನು ಗೌರವಿಸಲು ಕಲಿಯುತ್ತಿದ್ದಾರೆ. ಆಫ್ರಿಕಾದ ದೇಶ ಕೀನ್ಯಾ (Umoja Village Kenya) ದಲ್ಲಿರುವ ಒಂದು ಹಳ್ಳಿಯೇ ಇದಕ್ಕೆ ಜೀವಂತ ಉದಾಹರಣೆ .
ಉಮೋಜಾ (Umoja Village) ಎಂಬ ಹೆಸರಿನ ಈ ಗ್ರಾಮ ಉತ್ತರ ಕೀನ್ಯಾದ ಸಂಬುರು ಕೌಂಟಿ ಕೀನ್ಯಾದಲ್ಲಿದೆ. ಉಮೋಜ ಎಂದರೆ ಸ್ವಾಹಿಲಿಯಲ್ಲಿ ಏಕತೆ ಎಂದರ್ಥ. ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ವಾಸಿಸುತ್ತಿದ್ದಾರೆ ಮತ್ತು ಪುರುಷರು ಇಲ್ಲಿಗೆ ಒಂದು ಹೆಜ್ಜೆ ಇಡೋದನ್ನು ಸಹ ನಿಷೇಧಿಸಲಾಗಿದೆ. ಅದನ್ನು ಭದ್ರಪಡಿಸಲು ಗ್ರಾಮದ ಸುತ್ತಲೂ ಮುಳ್ಳು ತಂತಿ ಬೇಲಿಗಳನ್ನು ನಿರ್ಮಿಸಲಾಗಿದೆ.
ಈ ಮಹಿಳೆಯರ ಗ್ರಾಮವನ್ನು ಕೇವಲ 15 ಮಹಿಳೆಯರು ಪ್ರಾರಂಭಿಸಿದರು. 1990ರಲ್ಲಿ ಬ್ರಿಟಿಷ್ ಸೈನಿಕರಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರು ಇದನ್ನು ಆರಂಭಿಸಿದರು. ಆದರೆ ಇಂದು ಈ ಗ್ರಾಮವು ಪೀಡಿತ ಮಹಿಳೆಯರಿಗೆ ಸುರಕ್ಷಿತ ಛಾವಣಿಯಾಗಿ ಮಾರ್ಪಟ್ಟಿದೆ. ಅಲ್ಲಿ ಅವರು ತಮ್ಮ ಜೀವನವನ್ನು ಸಂತೋಷದಿಂದ ನಡೆಸುತ್ತಾರೆ ಮತ್ತು ಅಡೆತಡೆಯಿಲ್ಲದೆ ಜೀವನ ನಡೆಸುತ್ತಾರೆ.
26 ವರ್ಷಗಳಿಂದ ಪುರುಷರೇ ಬಂದಿಲ್ಲ
ಪುರುಷರು ಬರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಹಳ್ಳಿಯೂ ಇದೆ. ಕಳೆದ 26 ವರ್ಷಗಳಿಂದ ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ವಾಸವಾಗಿದ್ದಾರೆ. ಯಾವೊಬ್ಬರೂ ಪುರುಷರೂ ಇಲ್ಲಿವರೆಗೆ ಇಲ್ಲಿ ಒಂದು ಹೆಜ್ಜೆ ಕೂಡ ಇಟ್ಟಿಲ್ಲ ಎಂದು ಹೇಳಲಾಗುತ್ತೆ.
ಮಹಿಳೆಯರು ಏಕಾಂಗಿಯಾಗಿ ವಾಸಿಸುತ್ತಾರೆ
ಫೋರ್ಕ್ ಫೆನ್ಸಿಂಗ್ ನಿಂದ ಸುತ್ತುವರೆದಿರುವ ಕೀನ್ಯಾದ ಸಂಬುರುವಿನ ಉಮೋಜಾ ಗ್ರಾಮವು ವಿಶ್ವದ ಅತ್ಯಂತ ವಿಶಿಷ್ಟ ಹಳ್ಳಿಯಾಗಿದೆ ಏಕೆಂದರೆ ಇಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಹಿಳೆಯರು ಇಲ್ಲಿ ಏಕಾಂಗಿಯಾಗಿ ವಾಸಿಸುತ್ತಾರೆ.
ಪುರುಷರು ಅಲ್ಲಿ ಏಕೆ ಬರೋದಿಲ್ಲ?
1990 ರಲ್ಲಿ, ಬ್ರಿಟಿಷ್ ಸೈನಿಕರಿಂದ ಅತ್ಯಾಚಾರಕ್ಕೊಳಗಾದ (rape victim women)15 ಮಹಿಳೆಯರಿಗೆ ಆಶ್ರಯ ನೀಡಲು ಈ ಗ್ರಾಮವನ್ನು ಆಯ್ಕೆ ಮಾಡಲಾಯಿತು. ಇದರ ನಂತರ, ಈ ಗ್ರಾಮವು ಪುರುಷರ ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರ ನೆಲೆಯಾಯಿತು. ಇಲ್ಲೀಗ ಅತ್ಯಾಚಾರ, ಬಾಲ್ಯ ವಿವಾಹ, ಕೌಟುಂಬಿಕ ಹಿಂಸೆ ಮತ್ತು ಸುನ್ನತಿಯಂತಹ ಎಲ್ಲಾ ಹಿಂಸಾಚಾರಗಳನ್ನು ಎದುರಿಸಿದ ಮಹಿಳೆಯರು ಈ ಗ್ರಾಮದಲ್ಲಿ ಆಶ್ರಯ ಪಡೆದಿದ್ದಾರೆ.
ಎಷ್ಟು ಮಹಿಳೆಯರು
ಈ ಗ್ರಾಮದಲ್ಲಿ ಸದ್ಯ ಸುಮಾರು 250 ಮಹಿಳೆಯರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ಇಲ್ಲಿ ಮಹಿಳೆಯರು ಎಲ್ಲಾ ಕೆಲಸಗಳನ್ನು ತಾವೇ ಮಾಡುತ್ತಾರೆ. ಯಾವ ಪುರುಷರ ಹಂಗು ಇಲ್ಲದೇನೆ ಇವರು ವಾಸಿಸುತ್ತಾರೆ. ತಮಗೆ ಬೇಕಾದುದನ್ನು ಮಾಡುತ್ತಾರೆ.
ಈ ಮಹಿಳೆಯರು ಯಾರನ್ನೂ ಅವಲಂಬಿಸದೇ ತಮ್ಮದೇ ಆದ ಜೀವನೋಪಾಯವನ್ನು ಗಳಿಸುತ್ತಾರೆ. ಅವರ ಮಕ್ಕಳು ಸಹ ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತಾರೆ. ಈ ಕಾರಣದಿಂದಾಗಿ ಈ ಜನರ ದೈನಂದಿನ ಅಗತ್ಯಗಳನ್ನು ಸುಲಭವಾಗಿ ಪೂರೈಸಲಾಗುತ್ತದೆ. ಮಕ್ಕಳಲ್ಲಿ, ಹುಡುಗರು 18 ವರ್ಷ ತುಂಬಿದ ಕೂಡಲೇ ಹಳ್ಳಿಯನ್ನು ತೊರೆಯಬೇಕು. ಈಗ ಈ ಗ್ರಾಮವು ಪ್ರಪಂಚದಾದ್ಯಂತ ಎಷ್ಟು ಪ್ರಸಿದ್ಧವಾಗಿದೆಯೆಂದರೆ ದೂರದ ಸ್ಥಳಗಳಿಂದ ಜನರು ಇದನ್ನು ನೋಡಲು ಬರುತ್ತಾರೆ. ಗ್ರಾಮವನ್ನು ತೋರಿಸಲು ಈ ಪ್ರವಾಸಿಗರಿಂದ ಪ್ರವೇಶ ಶುಲ್ಕವನ್ನು (entry fee) ಸಹ ವಿಧಿಸಲಾಗುತ್ತದೆ.
ಸಾಂಪ್ರದಾಯಿಕ ಆಭರಣ ವ್ಯವಹಾರ
ಇಲ್ಲಿ ವಾಸಿಸುವ ಮಹಿಳೆಯರು ಸಾಂಪ್ರದಾಯಿಕ ಆಭರಣ ವ್ಯವಹಾರ ಸಹ ನಡೆಸುತ್ತಿದ್ದಾರೆ. ಸಫಾರಿಗೆ ಭೇಟಿ ನೀಡಲು ಬರುವ ಪ್ರವಾಸಿಗರಿಗೆ ಈ ಮಹಿಳೆಯರು ತಮ್ಮ ಹಳ್ಳಿಯನ್ನು ತೋರಿಸುತ್ತಾರೆ. ಪ್ರವೇಶ ದ್ವಾರದಲ್ಲಿ ಗ್ರಾಮದ ಮಹಿಳೆಯರು ನಿಗದಿಪಡಿಸಿದ ಪ್ರವೇಶ ಶುಲ್ಕವನ್ನು ಅವರಿಗೆ ವಿಧಿಸಲಾಗುತ್ತದೆ, ಇದು ಈ ಗ್ರಾಮದ ವೆಚ್ಚಗಳನ್ನು ನಡೆಸುತ್ತದೆ.