ಋತುಚಕ್ರದ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ತುಂಬಾ ಮುಖ್ಯ. ಇಲ್ಲದಿದ್ದರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದ್ರೆ ಋತುಚಕ್ರದ ಸಮಯದಲ್ಲಿ ವೆಜಿನಲ್ ವಾಶ್ ಬಳಸ್ಬೋದಾ ? ಇದ್ರಿಂದ ಆರೋಗ್ಯಕ್ಕೆ ಏನಾದ್ರೂ ತೊಂದ್ರೆಯಿದ್ಯಾ ?
ಸ್ತ್ರೀರೋಗತಜ್ಞರ ಪ್ರಕಾರ, ಮಹಿಳೆಯರು ಜನನಾಂಗದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇತ್ತೀಚಿಗೆ ಟಿವಿ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾದ ಬಹಳಷ್ಟು ಮಹಿಳೆಯರು, ಇಂಟಿಮೇಟ್ ವಾಶ್ ಅನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದನ್ನು ಬಳಸುವುರಿಂದ ಯೋನಿಯ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಕೆಲವೊಮ್ಮೆ ಮಹಿಳೆಯರು ತಮ್ಮ ಅವಧಿಯ ಸಮಯದಲ್ಲೂ ವೇಜಿನಲ್ ವಾಶ್ ಬಳಸುತ್ತಾರೆ. ಆದರೆ ಇದು ಸರಿಯಾದ ಅಭ್ಯಾಸವೇ ? ತಜ್ಞರಿಂದ ಈ ಬಗ್ಗೆ ತಿಳಿದುಕೊಳ್ಳೋಣ.
ಪಿರಿಯಡ್ಸ್ (Menstruation) ಸಮಯದಲ್ಲಿ ಇಂಟಿಮೇಟ್ ವಾಶ್ ಅನ್ನು ಬಳಸುವುದರಿಂದ ಆಗುವ ಪ್ರಯೋಜನಗಳು (Use) ಮತ್ತು ಅಡ್ಡ ಪರಿಣಾಮಗಳ ಬಗ್ಗೆ ನವದೆಹಲಿಯ ಅಟ್ಲಾಂಟಿಸ್ ಹೆಲ್ತ್‌ಕೇರ್‌ನ ಸ್ತ್ರೀರೋಗತಜ್ಞ ಡಾ.ಮನನ್ ಗುಪ್ತಾ ಮಾಹಿತಿ ನೀಡಿದ್ದಾರೆ.
Urine Infectionಗೆ ಸೋಂಕೋಂದೇ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದ ಕಾಡಬಹುದು ಅನಾರೋಗ್ಯ
ಪ್ರತಿದಿನ ಯೋನಿ ತೊಳೆಯಲು ಇಂಟಿಮೇಟ್ ವಾಶ್ ಬಳಸುವುದು ಸುರಕ್ಷಿತವೇ ?
ಜನನಾಂಗದಲ್ಲಿ ಶುಷ್ಕತೆ, ತುರಿಕೆ ಮತ್ತು ಸುಡುವಿಕೆಯ ಸಮಸ್ಯೆ ಇದ್ದಾಗ ವೇಜಿನಲ್ ವಾಶ್ ಬಳಸಲಾಗುತ್ತದೆ. ಇಂಟಿಮೇಟ್ ವಾಶ್‌ಗಳು ಯೋನಿಯ (Vagina) pH ಅನ್ನು ಆರೋಗ್ಯಕರ ಮಟ್ಟದಲ್ಲಿಡಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಋತುಚಕ್ರದ ಸಮಯದಲ್ಲಿ ಜನನಾಂಗ ತೊಳೆಯಬಹುದಾ ?
ದಿನನಿತ್ಯ ಇಂಟಿಮೇಟ್ ಹೈಜೀನ್ ವಾಶ್‌ನ್ನು ಬಳಸುವುದು ಸಂಪೂರ್ಣವಾಗಿ ಸುರಕ್ಷಿತ (Safe) ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಯೋನಿ ಸೋಂಕು ಅಥವಾ ವಾಸನೆಯ ಸ್ರಾವದ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಅವಧಿಯ ಸಮಯದಲ್ಲಿ ಯೋನಿಯನ್ನು ಹೆಚ್ಚುವರಿಯಾಗಿ ಶುಚಿಗೊಳಿಸುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ ಜನನಾಂಗವು ಸ್ವಯಂ ಆಗಿ ಶುಚಿಗೊಳಿಸಲ್ಪಡುತ್ತದೆ. ಹೆಚ್ಚುವರಿ ವಾಸನೆಯ (Smell) ಅನುಭವವಾದರೆ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ ವೆಜಿನಲ್ ವಾಶ್‌ನ್ನು ಬಳಸಬೇಕು.
ಡಾ ಗುಪ್ತಾ ಅವರ ಪ್ರಕಾರ, ಯೋನಿ ನೈರ್ಮಲ್ಯ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುವುದು ಪ್ರಯೋಜನಕಾರಿಯಾಗಿದೆ, ಆದರೆ ಅವಧಿಗಳಲ್ಲಿ ಅವುಗಳನ್ನು ಬಳಸುವುದು ಸ್ವಲ್ಪ ಹಾನಿಕಾರಕವಾಗಿದೆ. ಪಿರಿಯಡ್ಸ್ ಸಮಯದಲ್ಲಿ ಈ ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಬಳಸುವುದರಿಂದ ಯೋನಿಯ ನೈಸರ್ಗಿಕ ಶುಚಿಗೊಳಿಸುವ ಪ್ರಕ್ರಿಯೆಗೆ ತೊಂದರೆಯಾಗಬಹುದು. ಇದರಿಂದಾಗಿ ನೀವು ಸೋಂಕು ಮತ್ತು ಯೋನಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವನ್ನು ಎದುರಿಸಬಹುದು.
ಮಹಿಳೆಯರು ಒಳಉಡುಪು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು ?
ಜನನಾಂಗ ತೊಳೆಯಲು ಸೋಪ್ ಬಳಸುವುದು ಸುರಕ್ಷಿತವೇ ?
ಜನನಾಂಗವನ್ನು ಸ್ವಚ್ಛಗೊಳಿಸಲು ಸಾಬೂನು (Soap) ಬಳಸುವುದು ಸರಿಯಲ್ಲ. ಏಕೆಂದರೆ ಇದು ಯೋನಿಯ pH ಸಮತೋಲನವನ್ನು ತೊಂದರೆಗೊಳಿಸಬಹುದು. ಇದು ಸೋಂಕುಗಳು ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ.ಗುಪ್ತಾ ಹೇಳುತ್ತಾರೆ. ಚರ್ಮದ ಪಿಹೆಚ್ ಮಟ್ಟವನ್ನು ಸ್ಥಿರವಾಗಿರಿಸುವುದು ಸೋಪಿನ ಕೆಲಸ. ನಿಮ್ಮ ಚರ್ಮದ (Skin) pH 5.5 ಆಗಿದ್ದರೆ, ನಿಮ್ಮ ಯೋನಿಯ pH ಮಟ್ಟವು 3.8 ಮತ್ತು 4.5 ರ ನಡುವೆ ಇರುತ್ತದೆ. ಆದ್ದರಿಂದ, ಸೋಪ್ ಬಳಕೆಯು ಯೋನಿಯ pH ಅನ್ನು ಬದಲಾಯಿಸಬಹುದು, ಇದು ಯೋನಿಯ ಆರೋಗ್ಯಕ್ಕೆ (Health) ಬಹಳಷ್ಟು ಹಾನಿ ಮಾಡುತ್ತದೆ.
ಆದ್ದರಿಂದ, ದಯವಿಟ್ಟು ಸಾಬೂನುಗಳನ್ನು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ. ಇಂಟಿಮೇಟ್ ವಾಶ್‌ಗೆ ಸೋಪ್ ಬಳಸುತ್ತಿದ್ದರೆ, ಸೌಮ್ಯವಾದ, ಬಣ್ಣರಹಿತ ಮತ್ತು ಸುಗಂಧವಿಲ್ಲದ ಸೋಪ್ ಅನ್ನು ಬಳಸುವುದು ಸುರಕ್ಷಿತ ಎಂದು ತಜ್ಞರು ಸಲಹೆ ನೀಡಿದರು.
ಜನನಾಂಗ ತೊಳೆಯುವುದನ್ನು ತಪ್ಪಿಸುವುದು ಹಾನಿಕಾರಕವೇ?
ಜನನಾಂಗ ತೊಳೆಯುವುದನ್ನು ತಪ್ಪಿಸುವುದರಿಂದ ನಿಕಟ ನೈರ್ಮಲ್ಯವನ್ನು (Clean) ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ವಾಸನೆ, ಜಿಗುಟುತನ, ತುರಿಕೆ, ಉರಿ ಮುಂತಾದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಜನನಾಂಗವನ್ನು ನಿಯಮಿತವಾಗಿ ತೊಳೆಯದಿದ್ದಲ್ಲಿ ನೀವು ಸ್ವಚ್ಛ ಮತ್ತು ತಾಜಾತನವನ್ನು ಅನುಭವಿಸುವಲ್ಲಿ ತೊಂದರೆಯನ್ನು ಎದುರಿಸಬಹುದು. ಒಟ್ನಲ್ಲಿ ಯೋನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನನಾಂಗ ತೊಳೆಯುವುದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಆದರೆ ವೇಜಿನಲ್ ವಾಶ್ ಆಗಿರಲಿ ಸೋಪ್ ಆಗಿರಲಿ ಯಾವುದನ್ನೂ ಅತಿಯಾಗಿ ಬಳಸಬಾರದುu