ಸ್ಕಿನ್‌ಕೇರ್ ಉತ್ಪನ್ನಗಳನ್ನು ಖರೀದಿಸುವ ಮೊದಲು ಇವಿಷ್ಟನ್ನು ತಿಳ್ಕೊಳ್ಳಿ

By Suvarna News  |  First Published May 14, 2022, 2:14 PM IST

ಹೆಣ್ಣುಮಕ್ಕಳು ತಮ್ಮ ಸೌಂದರ್ಯ (Beauty)ದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ವಹಿಸುತ್ತಾರೆ. ತ್ವಚೆಯ ನುಣುಪು ಹಾಳಾಗದಂತೆ, ಮುಖದಲ್ಲಿ ಮೊಡವೆ (Pimple)ಗಳು ಆಗಬಾರದು ಎಂದು ಹಲವು ಬಗೆಯ ಸ್ಕಿನ್ ಕೇರ್ ಉತ್ಪನ್ನ (Skincare Product) ಗಳನ್ನು ಖರೀದಿಸುತ್ತಾರೆ. ಈ ರೀತಿ ಚರ್ಮದ ಕಾಳಜಿಗಾಗಿ ಪ್ರಾಡಕ್ಟ್‌ಗಳನ್ನು ಖರೀದಿಸುವುದೇನೋ ಸರಿ. ಆದರೆ ಅದಕ್ಕೂ ಮೊದಲು ಇವಿಷ್ಟು ವಿಚಾರಗಳನ್ನು ತಿಳ್ಕೊಳ್ಳಿ


ಹೆಣ್ಣುಮಕ್ಕಳು ತಮ್ಮ ಸೌಂದರ್ಯದ (Beauty) ಬಗ್ಗೆ ಯಾವಾಗಲೂ ಹೆಚ್ಚಿನ ಕಾಳಜಿ (Care) ವಹಿಸುತ್ತಾರೆ. ಚರ್ಮ (Skin) ಆರೋಗ್ಯಕರವಾಗಿರಬೇಕೆಂದು, ತ್ವಚೆ ನುಣುಪಾಗಿರಬೇಕೆಂದು, ಕೂದಲು ಹೆಲ್ದೀಯಾಗಿರಬೇಕೆಂದು ಬಯಸುತ್ತಾರೆ. ಮೊಡವೆಗಳಿಲ್ಲದ ಕ್ಲಿಯರ್ ಆಗಿರುವ ಸ್ಕಿನ್ ಇರಬೇಕೆಂಬುದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಕನಸು. ಆದರೆ, ಇವತ್ತಿನ ಜೀವನಶೈಲಿ (Lifestyle), ಆಹಾರ, ವಾತಾವರಣ ಎಲ್ಲವೂ ಸೇರಿ ಆರೋಗ್ಯಕರ ಚರ್ಮವನ್ನು ಹೊಂದಿರುವುದು ಕಷ್ಟ. ಹಲವರ ಮುಖದಲ್ಲಿ ಮೊಡವೆಗಳು, ಕಲೆಗಳು ಕಂಡು ಬರುತ್ತವೆ. ಕೂದಲುದುರುವ ಸಮಸ್ಯೆಯೂ ಸಾಮಾನ್ಯವಾಗಿದೆ. ಇಂಥಾ ಸಮಸ್ಯೆಗಳಿಂದ ಹೊರಬರಲು ಕೆಲಮೊಮ್ಮೆ ಆರ್ಯುವೇದಿಕ್ ಪದ್ಧತಿಯ ಮೊರೆ ಹೋಗ್ತಾರೆ. ಇನ್ನು ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಸಿಗುವ ಹೆಸರಾಂತ ಸ್ಕಿನ್ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ.

ಬೇಸಿಗೆಯಲ್ಲಿ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸುಡುವ ಶಾಖ, ಬಿಸಿಲು ಮತ್ತು ಮಾಲಿನ್ಯದಿಂದ, ಚರ್ಮವು ಡಲ್ ಮತ್ತು ದಣಿದಂತೆ ಕಾಣುತ್ತದೆ. ಬೆವರುವಿಕೆ ಮತ್ತು ಜಿಡ್ಡಿನಾಂಶವನ್ನು ತೆಗೆದು ಹಾಕಲು ಬೇಸಿಗೆಯಲ್ಲಿ ಚರ್ಮವನ್ನು ಸ್ವಚ್ಛಗೊಳಿಸುವುದು ಮುಖ್ಯ. ಅಂಥ ಪರಿಸ್ಥಿತಿಯಲ್ಲಿ, ನಮ್ಮ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಬೇಸಿಗೆಯಲ್ಲಿ ಮುಖದ ಮೇಲೆ ಮೊಡವೆಗಳು, ಬ್ಲ್ಯಾಕೆಡ್ಸ್ ಮತ್ತು ಟ್ಯಾನ್ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನವರು ಸ್ಕಿನ್ ಕೇರ್ ಪ್ರಾಡಕ್ಟ್ಸ್ ಖರೀದಿಗೆ ಮುಂದಾಗುತ್ತಾರೆ. 

Tap to resize

Latest Videos

Skin Care: ಮೊಡವೆ ಕಲೆಯನ್ನು ಹೋಗಲಾಡಿಸಲು ಸುಲಭ ವಿಧಾನವಿದು

ಆರೋಗ್ಯಕರ ಹೊಳಪಿನೊಂದಿಗೆ ನಯವಾದ ಚರ್ಮವನ್ನು ನಾವೆಲ್ಲರೂ ಬಯಸುತ್ತೇವೆ ನಿಜ. ನಾವು ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೇ ಆಗಿದ್ದರೆ, ಖರೀದಿಸುವ ಸ್ಕಿನ್ ಕೇರ್ ಪ್ರಾಡಕ್ಟ್‌ಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಬೇಕು.  ನಿಮ್ಮ ಚರ್ಮಕ್ಕೆ ಸೂಕ್ತವೆನಿಸುವ ಸರಿಯಾದ ಉತ್ಪನ್ನಗಳನ್ನು ಕಂಡುಹಿಡಿಯುವುದು ಬಹಳ ಮುಖ್ಯ. ಸಂತೋಷದ, ಆರೋಗ್ಯಕರ ಚರ್ಮವನ್ನು ಹೊಂದಲು ಸರಿಯಾದ ತ್ವಚೆ ಉತ್ಪನ್ನಗಳು ಮತ್ತು ಆರೋಗ್ಯಕರ ತ್ವಚೆಯ ದಿನಚರಿ ಅಗತ್ಯವಿರುತ್ತದೆ.

ಇವತ್ತಿನ ದಿನಗಳಲ್ಲಿ ಹೆಚ್ಚಿನವರು ಏನು ಮಾಡುತ್ತಾರೆಂದರೆ ಯಾವುದು ಟ್ರೆಂಡಿಂಗ್‌ನಲ್ಲಿದೆಯೋ ಅಂಥಾ ಬ್ಯೂಟಿ ಪ್ರಾಡಕ್ಟ್‌ ಅಥವಾ ಬ್ರಾಂಡೆಡ್ ಎನಿಸಿದ ಸೌಂದರ್ಯ ಉತ್ಪನ್ನಗಳನ್ನು ಖರೀದಿಸಿ ಬಿಡುತ್ತಾರೆ. ಆದರೆ ಇದು ಸರಿಯಲ್ಲ. ಎಲ್ಲರ ಸ್ಕಿನ್ ಟೈಪ್ ಒಂದೇ ರೀತಿಯಾಗಿರುವುದಿಲ್ಲ. ಹೀಗಾಗಿ ನಾವು ಯಾವತ್ತೂ ನಮ್ಮ ಚರ್ಮಕ್ಕೆ ಸೂಕ್ತವಾಗುವ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಈ ಪ್ರಾಡಕ್ಟ್‌ಗಳು ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡುವ ಬದಲು, ಹೊಸ ಸಮಸ್ಯೆಯನ್ನು ಹುಟ್ಟು ಹಾಕಬಹುದು. ಹಾಗಿದ್ರೆ ಸ್ಕಿನ್ ಪ್ರಾಡಕ್ಟ್ ಖರೀದಿಸುವ ಮೊದ್ಲು ನೀವು ಏನೇನೆಲ್ಲಾ ತಿಳ್ಕೊಂಡಿರಬೇಕು. ನಾವ್ ಹೇಳ್ತಿವಿ.

ಉತ್ತಮ ಬ್ಯೂಟಿ ಪ್ರಾಡಕ್ಟ್‌ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವ ಐದು ಮಾರ್ಗಸೂಚಿಗಳು ಇಲ್ಲಿವೆ:

1. ಚರ್ಮದ ಪ್ರಕಾರವನ್ನು ತಿಳಿದುಕೊಳ್ಳಿ: ನಿಮ್ಮ ತ್ವಚೆಯ ಬಗ್ಗೆ ನೀವು ನಿಜವಾಗಲೂ ಕಾಳಜಿ ವಹಿಸುತ್ತಿದ್ದರೆ ಮೊದಲು ನಿಮ್ಮ ತ್ವಚೆಯ ಪ್ರಕಾರ ಯಾವುದು ಎಂಬುದನ್ನು ತಿಳಿದುಕೊಳ್ಳಿ. ನೀವು ಎಣ್ಣೆಯುಕ್ತ, ಶುಷ್ಕ, ಸೂಕ್ಷ್ಮ ಅಥವಾ ಮಿಶ್ರ ಚರ್ಮವನ್ನು ಹೊಂದಿದ್ದೀರಾ ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ತ್ವಚೆಯ ಪ್ರಕಾರಕ್ಕೆ ಸೂಕ್ತವಾದ ಉತ್ಪನ್ನಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

Winter Care: ನಿಮ್ಮ ಮೇಕಪ್‌ನಿಂದಲೇ ಚರ್ಮ ಒಣಗುತ್ತಿರಬಹುದು, ಎಚ್ಚರ!

2. ಪ್ರಚೋದನೆಯಿಂದ ಉತ್ಪನ್ನಗಳನ್ನು ಖರೀದಿಸಬೇಡಿ: ಪ್ರಭಾವಿಗಳ ಸಲಹೆಯ ಆಧಾರದ ಮೇಲೆ ನೀವು ಉತ್ಪನ್ನವನ್ನು ಖರೀದಿಸಲು ಹೋದರೆ, ಉತ್ಪನ್ನವನ್ನು ಪ್ರಯತ್ನಿಸುವ ಮೊದಲು ಅವರು ಯಾವ ರೀತಿಯ ಚರ್ಮವನ್ನು ಹೊಂದಿದ್ದರು ಎಂಬುದರ ಮೇಲೆ ನೀವು ಗಮನಹರಿಸಬೇಕು. ಹೀಗಾಗಿ ಜಾಹೀರಾತು, ಆಫರ್ ನೋಡಿ ಬ್ಯೂಟಿ ಪ್ರಾಡಕ್ಟ್‌ ಖರೀದಿಸುವುದನ್ನು ಬಿಟ್ಟು ಬಿಡಿ. ಆನ್‌ಲೈನ್‌ನಲ್ಲಿ ಬ್ಯೂಟಿ ಪ್ರಾಡಕ್ಟ್‌ ಖರೀದಿಸುವ ಮೊದಲು ಬಳಕೆದಾರರ ವಿಮರ್ಶೆಗಳು, ಸ್ಟಾರ್‌ಗಳನ್ನು ಗಮನಿಸಿ. 

3. ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಿ: ಸ್ಕಿನ್ ಕೇರ್ ಪ್ರಾಡಕ್ಟ್‌ಗಳನ್ನು ಖರೀದಿಸುವ ಮೊದಲು ಕ್ಲೀನ್, ಹೈಡ್ರೇಟ್, ಸನ್-ಪ್ರೊಟೆಕ್ಟ್, ಟ್ರೀಟ್ ಯಾವ ರೀತಿಯ ಉತ್ಪನ್ನ ಖರೀದಿಸಬೇಕೋ ನಿರ್ಧರಿಸಿ.

4. ಪ್ಯಾಚ್ ಪರೀಕ್ಷೆಯನ್ನು ಮಾಡಿ: ಯಾವುದೇ ಹೊಸ ಉತ್ಪನ್ನವನ್ನು ಬಳಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಿ. ಉದಾಹರಣೆಗೆ, ನಿಮ್ಮ ಮುಂಗೈ ಮೇಲೆ ಉತ್ಪನ್ನವನ್ನು ಪರೀಕ್ಷಿಸಿ. ಉತ್ಪನ್ನಕ್ಕೆ ನಿಮ್ಮ ದೇಹ ಅಲರ್ಜಿ ವ್ಯಕ್ತಪಡಿಸಿದರೆ ಇದರಿಂದ ಗೊತ್ತಾಗುತ್ತದೆ. ಚರ್ಮದಲ್ಲಿ ದದ್ದು, ತುರಿಕೆ ಕಂಡು ಬರುತ್ತದೆ. ಹೀಗಾದಾಗ ನೀವು ಬೇರೆ ಉತ್ಪನ್ನಗಳನ್ನು ಟ್ರೈ ಮಾಡಬಹುದು.

5. ಚರ್ಮಶಾಸ್ತ್ರಜ್ಞರನ್ನು ಭೇಟಿ ಮಾಡಿ: ನೀವು ಉತ್ತಮ ಚರ್ಮವನ್ನು ಪಡೆಯುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರೆ, ನೀವು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು. ಅವರು ನಿಮ್ಮ ಚರ್ಮವನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಗಮನಾರ್ಹ ಉತ್ಪನ್ನ ಜ್ಞಾನವನ್ನು ಹೊಂದಿದ್ದಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ಸ್ಕಿನ್ ಕೇರ್ ಪ್ರಾಡಕ್ಟ್ ಬಳಸಲು ಅವರು ಶಿಫಾರಸುಗಳನ್ನು ನೀಡಬಹುದು.

click me!