ಎರಡು ಶಿಶು ಗರ್ಭದಲ್ಲಿದ್ದಾಗಲೇ ಮೂರನೇ ಭ್ರೂಣ! ಇದೇನೀ ವಿಚಿತ್ರ?

Suvarna News   | Asianet News
Published : Dec 31, 2020, 02:51 PM ISTUpdated : Dec 31, 2020, 04:05 PM IST
ಎರಡು ಶಿಶು ಗರ್ಭದಲ್ಲಿದ್ದಾಗಲೇ ಮೂರನೇ ಭ್ರೂಣ! ಇದೇನೀ ವಿಚಿತ್ರ?

ಸಾರಾಂಶ

ಬ್ರಿಟನ್‌ನಲ್ಲಿ ಒಂದು ವಿಚಿತ್ರ ಸಂಭವಿಸಿದೆ. ಮಹಿಳೆಯೊಬ್ಬಳು ಆಲ್‌ರೆಡೀ ಪ್ರೆಗ್ನೆಂಟ್ ಆಗಿದ್ದಾಳೆ. ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ. ಇದಾಗಿ ಹತ್ತೇ ದಿನದಲ್ಲಿ ಇನ್ನೊಂದು ಮಗುವಿನ ಗರ್ಭಿಣಿಯಾಗಿದ್ದಾಳೆ ಆಕೆ.

ಬ್ರಿಟನ್‌ನಲ್ಲಿ ಒಂದು ವಿಚಿತ್ರ ಸಂಭವಿಸಿದೆ. ಮಹಿಳೆಯೊಬ್ಬಳು ಆಲ್‌ರೆಡೀ ಪ್ರೆಗ್ನೆಂಟ್ ಆಗಿದ್ದಾಳೆ. ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ. ಇದಾಗಿ ಹತ್ತೇ ದಿನದಲ್ಲಿ ಇನ್ನೊಂದು ಮಗುವಿನ ಗರ್ಭಿಣಿಯಾಗಿದ್ದಾಳೆ ಆಕೆ. ಅಂದರೆ ಈಕೆಯ ಹೊಟ್ಟೆಯಲ್ಲಿ ಈಗ ಮೂರು ಮಗು. ಮಾನವರಲ್ಲಿ ಹೀಗಾಗುವುದು ವಿರಳ ಅಂದರೆ ಅತೀ ವಿರಳ. ಆಗಲೇ ಒಂದು ಮಗು ಗರ್ಭದಲ್ಲಿ ಇರುವಾಗ, ಇನ್ನೊಂದು ಮಗುವಿನ ಪ್ರಗ್ನೆಂಟ್ ಆಗೋದು ಸಾಧ್ಯವಾ? ಇದು ಹೇಗೆ? ಎಂಬ ಕುತೂಹಲ ನಿಮಗೆ ಇರಬಹುದಲ್ಲವೇ?

ತನಗೆ ಯಾಕೆ ಹೀಗಾಗಿದೆ ಎಂಬುದನ್ನು ಈ ಮಹಿಳೆ ಈಗ ವೈರಲ್ ಆಗಿರುವ ತನ್ನ ವಿಡಿಯೋ ಪೋಸ್ಟ್‌ನಲ್ಲಿ ವಿವರಿಸಿದ್ದಾಳೆ. ಆಕೆ ಹೇಳುವ ಪ್ರಕಾರ, ಆಕೆಗೆ ಎರಡು ಋತುಚಕ್ರಗಳು ಇವೆ. ಎರಡರಲ್ಲೂ ಎರಡು ಅಥವಾ ಹೆಚ್ಚು ಅಂಡಗಳು ಬಿಡುಗಡೆಯಾಗುತ್ತವೆ. ಸಾಮಾನ್ಯವಾಗಿ ಒಂದು ಋತುಚಕ್ರದಲ್ಲಿ ಒಂದೇ ಬಿಡುಗಡೆ ಆಗುವುದು ರೂಢಿ. ಆದರೆ ಈಕೆಗೆ ಎರಡು ಹತ್ತು ಅಥವಾ ಹನ್ನೆರಡು ದಿನದ ಅಂತರದಲ್ಲಿ ಎರಡು ಋತುಚಕ್ರಗಳು. ಮೊದಲ ಸಂದರ್ಭದಲ್ಲಿ ಗಂಡನ ಜೊತೆ ಮಿಲನಕ್ರಿಯೆ ನಡೆದಾಗ, ಎರಡು ಅಂಡಗಳು ವೀರ್ಯಾಣುಗಳ ಜೊತೆ ಸೇರಿ ಗರ್ಭಧಾರಣೆಯಾಗಿದೆ. ಅದೇ ಕೆಲವು ದಿನಗಳ ನಂತರ, ಎರಡನೇ ಋತುಚಕ್ರದ ಅಂಡಾಣು ಬಿಡುಗಡೆಯಾಗಿದೆ ಹಾಗೂ ಇದೇ ಸಂದರ್ಭದಲ್ಲಿ ಆಕೆ ಇನ್ನೊಮ್ಮೆ ಮಿಲನಕ್ರಿಯೆ ನಡೆಸಿರುವುದರಿಂದ, ಇನ್ನೊಮ್ಮೆ ಗರ್ಭ ಕಟ್ಟಿದೆ. ಮೊದಲ ಮಿಲನದಲ್ಲಿ ಎರಡು, ಹಾಗೂ ಎರಡನೇ ಮಿಲನದಲ್ಲಿ ಮೂರು ಶಿಶುಗಳು, ಒಟ್ಟಾರೆಯಾಗಿ ಮೂರು. ತಾನು ಎರಡು ಬಾರಿ ಗರ್ಭವತಿಯಾಗಿದ್ದರೂ, ಶಿಶುಗಳ ಹೆರಿಗೆ ಮಾತ್ರ ಒಂದೇ ದಿನ ಮಾಡಿಸಿಕೊಳ್ಳುತ್ತೇನೆ ಎಂದಿದ್ದಾಳೆ ಈ ಮಹಿಳೆ. ಅಂದರೆ ಈ ಮಕ್ಕಳು ತ್ರಿವಳಿಗಳು ಎನಿಸಿಕೊಳ್ಳಲಿವೆ.

ಇದೊಂದು ಅಪರೂಪದ ಪ್ರಕರಣ, ಇದನ್ನು ವೈದ್ಯಕೀಯದ ಭಾಷೆಯಲ್ಲಿ ಸೂಪರ್‌ಫೆಟೇಷನ್ ಅಥವಾ ಸೂಪರ್‌ಫೊಯೆಟೇಶನ್ ಎನ್ನುತ್ತಾರೆ.

ಗರ್ಭದಲ್ಲಿರುವ ಶಿಶು ತನ್ನ ಪುಟ್ಟ ಕಾಲುಗಳಿಂದ ಒದೆಯುವುದೇಕೆ? ...

ಇನ್ನೂ ಒಂದು ವೈಚಿತ್ರ್ಯವಿದೆ. ಅದರ ಹೆಸರು ಸೂಪರ್‌ಫೆಕಂಡೇಶನ್. ಇದು ಒಂದೇ ಹೆಣ್ಣಿನಲ್ಲಿ, ಇಬ್ಬರು ಗಂಡುಗಳಿಂದ ಏಕಕಾಲಕ್ಕೆ ಉಂಟಾಗುವ ಎರಡು ಗರ್ಭ. ಇದೂ ಸಾಧ್ಯ. ಇದು ಕೂಡ ಆಗಬೇಕಿದ್ದರೆ ಎರಡು ಸಾಧ್ಯತೆಗಳಿವೆ. ಒಂದು, ಮಹಿಳೆಯಲ್ಲಿ ಏಕಕಾಲಕ್ಕೆ ಎರಡು ಅಂಡಗಳು ಇರಬೇಕು ಹಾಗೂ ಏಕಕಾಲಕ್ಕೆ ಇಬ್ಬರು ಗಂಡಸರ ಜೊತೆ ಮಿಲನ ಕ್ರಿಯೆ ನಡೆಸಿರಬೇಕು. ಆಗ ಒಬ್ಬೊಬ್ಬರ ವೀರ್ಯವೂ ಒಂದೊಂದು ಅಂಡವನ್ನು ಸೇರಿ ಎರಡು ಗರ್ಭ ಕಟ್ಟುವುದು ಸಾಧ್ಯ. ಆದರೆ ಇದರ ಸಂಭವನೀಯತೆ ತೀರಾ ವಿರಳ. ಇನ್ನೂ ಒಂದು ಸಾಧ್ಯತೆಯಿದೆ, ಅದೇನೆಂದರೆ, ಸೂಪರ್‌ಫೆಟೇಶನ್‌ನಲ್ಲಿ ಆಗುವಂತೆ ಮಹಿಳೆಯಲ್ಲಿ ಎರಡು ಋತುಚಕ್ರಗಳಿರುವುದು. ಒಂದು ಋತುಚಕ್ರದಲ್ಲಿ ಈಗಾಗಲೇ ಒಬ್ಬ ಗಂಡಸಿನ ವೀರ್ಯದಿಂದಾಗಿ ಗರ್ಭಿಣಿಯಾಗಿರುವವಳು, ಅತ್ಯಲ್ಪ ಕಾಲದಲ್ಲಿ ಇನ್ನೊಬ್ಬ ಗಂಡಸಿನ ಜೊತೆ ಸೇರಿ, ಇನ್ನೊಂದು ಋತುಚಕ್ರದ ಅಂಡವು ಇನ್ನೊಬ್ಬ ಗಂಡಸಿನ ವೀರ್ಯದ ಜೊತೆ ಸೇರಿ ಮತ್ತೊಂದು ಗರ್ಭ ಕಟ್ಟುವುದು ಸಾಧ್ಯ.

ಗರ್ಭದಲ್ಲಿರುವ ಶಿಶು ತನ್ನ ಪುಟ್ಟ ಕಾಲುಗಳಿಂದ ಒದೆಯುವುದೇಕೆ? ...

ಇದು ಮನುಷ್ಯರಲ್ಲಿ ವಿರಳ, ಆದರೆ ನಾಯಿ- ಬೆಕ್ಕುಗಳಲ್ಲಿ ಸಾಮಾನ್ಯ. ಯಾಕೆಂದರೆ ಒಂದು ಹೆಣ್ಣು ಹಲವು ಗಂಡುಗಳ ಜೊತೆ ಸಂಭೋಗ ನಡೆಸುವುದು ಇಲ್ಲಿ ಸಾಮಾನ್ಯ. ಇದು ಪ್ರಕೃತಿಯಲ್ಲಿ ನಡೆಯುವುದು ವಿರಳ. ಯಾಕೆಂದರೆ ಪ್ರತಿಯೊಂದು ಗಂಡುಜೀವಿಯೂ ತನ್ನ ಸಂತಾನ ಬೆಳೆಯಲಿ ಎಂದು ಅಪೇಕ್ಷೆಪಡುತ್ತದೆ ಹಾಗೂ ಪ್ರಕೃತಿಯೂ ಹಾಗೇ ಹೆಣ್ಣಿನ ದೇಹವನ್ನು ವಿನ್ಯಾಸಗೊಳಿಸಿದೆ. ಅದಕ್ಕಾಗಿಯೇ, ಶಿಶ್ನವು ಯೋನಿಯ ಒಳತೂರಿ ಘರ್ಷಿಸುವುದೇ, ಅದರಲ್ಲಿ ಈ ಮೊದಲೇ ಇರಬಹುದಾದ ಅನ್ಯ ಗಂಡಸಿನ ವೀರ್ಯಾಣುಗಳನ್ನು ಹೊರಹಾಕಲು. ಇದು ಪ್ರಕೃತಿಯ ವಿನ್ಯಾಸ. ಆದರೂ ಕೆಲವೊಮ್ಮೆ ಪ್ರಕೃತಿಯನ್ನೂ ವಂಚಿಸಿ ವಿಶಿಷ್ಟ ಘಟನೆಗಳು ನಡೆಯುತ್ತವೆ.

ಪಿರಿಯಡ್ಸ್ ಕುರಿತಾದ ಈ ವಿಷಯಗಳು ನಿಮಗೆ ಗೊತ್ತಿದೆ ಅಲ್ವಾ? ...

 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ