ಲೈಂಗಿಕ ತೃಪ್ತಿಗಾಗಿ ಮಹಿಳಾ ಸ್ಕ್ವಾಡ್ ಇಟ್ಟುಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ!

By Suvarna News  |  First Published Dec 14, 2020, 3:27 PM IST

ಉತ್ತರ ಕೊರಿಯದಲ್ಲಿ ಪ್ಲೆಶರ್ ಸ್ಕ್ವಾಡ್ ಎಂಬುದೊಂದಿದೆ. ಅದು ಸರ್ವಾಧಿಕಾರಿ ಕಿಮ್ ಜಾಂಗ್‌ನ ಸೆಕ್ಸ್ ಗುಲಾಮರ ಗುಂಪು. ಅಲ್ಲಿನ ಯಾವುದೇ ಹೆಣ್ಣು ಈ ಗುಂಪಿಗೆ ಸೇರಲು ಆಹ್ವಾನ ಬಂದರೆ ಸೇರಲೇಬೇಕು. ಕಿಮ್‌ನನ್ನು ಖುಷಿಪಡಿಸುವುದು ಆಕೆಯ ಕರ್ತವ್ಯ.


ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಉತ್ತರ ಕೊರಿಯಾ ದೇಶದಲ್ಲಿ ಎಲ್ಲರ ಮೇಲೂ ಒಂದಲ್ಲ ಒಂದು ನಿರ್ಬಂಧ ನಿಷೇಧ ಒತ್ತಡಗಳು ಇದ್ದೇ ಇವೆ. ಯಾರೂ ಸರಕಾರದ ವಿರುದ್ಧ ಮಾತಾಡುವಂತಿಲ್ಲ. ಕಿಮ್ ಬಗ್ಗೆ ವಿರೋದದ ಒಂದಕ್ಷರ ಮಾತನಾಡಿದರೂ ಆತನ ತಲೆ ದೇಹದ ಮೇಲೆ ಉಳಿದಿರುವುದಿಲ್ಲ. ಇಂಥ ದೇಶದಲ್ಲಿ ಸ್ತ್ರೀಯರ ಮೇಲೆ ಇನ್ನಷ್ಟು ನಿರ್ಬಂಧಗಳಿವೆ. ಅವು ಯಾವುವುದ ಅಂತ ತಿಳಿಯೋಣ ಬನ್ನಿ.

ಪ್ಯಾಂಟ್ ಧರಿಸುವಂತಿಲ್ಲ: ಮಹಿಳೆಯರು ಇಲ್ಲಿ ಪ್ಯಾಂಟ್‌ ಧರಿಸುವಂತೆಯೇ ಇಲ್ಲ. ಯಾಕೆ? ಯಾಕೆಂದರೆ ಸ್ತ್ರೀಯರು ಪುರುಷರ ಸರಿಸಮವಾಗಿ ಕೆಲಸ ಮಾಡುತ್ತಾರೆ ಎಂಬ ಭೀತಿ. ಮೊಣಕಾಲಿನವರೆಗಿನ ಅಥವಾ ಅದಕ್ಕಿಂತ ಸ್ವಲ್ಪ ಕೆಳಗಿನ ಸ್ಕರ್ಟ್, ಫ್ರಾಕ್ ಧರಿಸುವುದಕ್ಕೆ ಮಾತ್ರ ಅನುಮತಿ. ಪ್ಯಾಂಟ್ ಧರಿಸಿದರೆ ಮಹಿಳೆಯರೂ ಪುರುಷರಂತೆ ಬೈಕ್ ರೈಡ್ ಮಾಡಬಹುದು, ಬೀದಿಯಲ್ಲಿ ಕುಳಿತುಕೊಂಡು ತರಕಾರಿ ಮಾರಬಹುದು, ಮಾಲ್‌ಗಳಲ್ಲಿ ಕೆಲಸ ಮಾಡಬಹುದು ಎಂದೆಲ್ಲ ಇಲ್ಲಿನ ಪುರುಷ ಪ್ರಧಾನ ಆಡಳಿತದ ಭೀತಿ. ಈ ನಿಯಮ ಇಲ್ಲಿ ಇರಾನ್- ಪಾಕಿಸ್ತಾನಗಳಿಗಿಂತಲೂ ಭೀಕರ. ಇಲ್ಲಿ ಗಂಡಸರೂ ಬ್ಲೂ ಜೀನ್ಸ್ ತೊಡುವಂತಿಲ್ಲ. ಬ್ಲ್ಯಾಕ್ ಜೀನ್ಸ್ ಮಾತ್ರ ಧರಿಸಬಹುದು.

Tap to resize

Latest Videos

ಕಿಮ್ ಕೊಲ್ಲಲು ಚೀನಾ ಧೂಳು: ಭಾರತ, ಜಪಾನ್‌ಗೂ ಅಪಾಯ! ...

ಕಾಂಡೋಮ್ ಸಿಗಲ್ಲ: ಇಲ್ಲಿ ಕಾಂಡೋಮ್ ಮಾರಾಟ ನಿಷೇಧ. ಹೀಗಾಗಿ ಯಾವುದೇ ಕಾಂಡೋಮ್ ಕಂಪನಿ ಇಲ್ಲಿ ತನ್ನ ಪ್ರಾಡಕ್ಟ್‌ಗಳನ್ನು ಮಾರುವುದಿಲ್ಲ. ಇತರ ಗರ್ಭನಿರೋಧಕ ಸಾಧನಗಳೂ ಇಲ್ಲಿ ಲಭ್ಯವಿಲ್ಲ. ಒಳ್ಳೆಯ ಆರೋಗ್ಯ ಸೇವೆಯೂ ಇಲ್ಲಿ ಇಲ್ಲ. ಹೀಗಾಗಿ ಗರ್ಭ ಧಾರಣೆಯ ಸಂಭವ ಇರುವವರು ಇಲ್ಲಿ ಸೆಕ್ಸ್‌ಗೆ ತೊಡಗುವುದೇ ಇಲ್ಲ. ಇಲ್ಲಿ ಗರ್ಭ ಧರಿಸಿದವರಿಗೆ ಗರ್ಭಪಾತ ಮಾಡಿಕೊಳ್ಳುವ ಆಯ್ಕೆಯೂ ಇಲ್ಲ. ಇಲ್ಲಾ ಹೆರಬೇಕು, ಇಲ್ಲವೇ ಸಾಯಬೇಕು- ಇವೆರಡೇ ಆಯ್ಕೆಗಳು. ಆದ್ದರಿಂದಲೇ ಇಲ್ಲಿ ಗರ್ಭಿಣಿಯರ ಸಾವು ಹೆಚ್ಚು. ಗರ್ಭಪಾತ ಜೀರೋ.

ಸ್ಯಾನಿಟರಿ ಪ್ಯಾಡ್ ಸಿಗಲ್ಲ: ಉತ್ತರ ಕೊರಿಯಾದಲ್ಲಿ ಸ್ಯಾನಿಟರಿ ಪ್ಯಾಡ್ ನಿಷೇಧ. ಅದೊಂದು ಅಸಹ್ಯಕರ ವಸ್ತು ಎಂಬ ಕಲ್ಪನೆ ಕೊರಿಯಾವನ್ನು ಆಳುತ್ತಿರುವವರಿಗೆ ಇದೆ. ಹೀಗಾಗಿ ಇಂದಿಗೂ ಋತುಸ್ರಾವದ ಸಂದರ್ಭದಲ್ಲಿ ಇಲ್ಲಿನ ಮಹಿಳೆಯರು ಬಟ್ಟೆಯನ್ನೇ ಧರಿಸಿಕೊಳ್ಳುತ್ತಾರೆ. ಅದನ್ನು ತೊಳೆದು ಮತ್ತೆ ಬಳಸುತ್ತಾರೆ.

ಚೀನಾದಿಂದ ಉ.ಕೊರಿಯಾಕ್ಕೆ ಹೋದರೆ ಗುಂಡಿಟ್ಟು ಹತ್ಯೆ! ...

ಲೇಡೀಸ್ ಫಸ್ಟ್ ಇಲ್ಲ: ಉತ್ತರ ಕೊರಿಯಾದಲ್ಲಿ ಲೇಡೀಸ್ ಫಸ್ಟ್ ಎಂಬ ಕಲ್ಪನೆಯೇ ಇಲ್ಲ. ಎಲ್ಲವೂ ಮ್ಯಾನ್ ಫಸ್ಟ್. ಆಸ್ತಿಯೆಲ್ಲ ಗಂಡಸಿನ ಹೆಸರಿನಲ್ಲಿರುತ್ತದೆ. ಯಾರಾದರೂ ಸತ್ತರೆ ಅವನ ಹೆಂಡತಿಗೆ ಅಸ್ತಿ ಹೋಗುವುದಿಲ್ಲ. ಬದಲಾಗಿ ಮಕ್ಕಳಿಗೋ ಸತ್ತವನ ಸಹೋದರನಿಗೋ ಹೋಗುತ್ತದೆ. ಮಹಿಳಿ ಇಲ್ಲಿ ಯಾವಾಗಲೂ ಎರಡನೇ ದರ್ಜೆಯ ಪ್ರಜೆ.

ಸೈಕಲ್ ತುಳಿಯುವಂತಿಲ್ಲ: ಮಹಿಳೆಯರು ಸೈಕಲ್ ತುಳಿಯುವುದು ಇಲ್ಲಿ ನಿಷೇಧ. ಸೈಕಲ್ ತುಳಿಯುವ ಮಹಿಳೆಗೆ ಇಲ್ಲಿನ ಸರಕಾರ ಜೈಲು ವಿಧಿಸುವುದರಿಂದ ಹಿಡಿದು ತಲೆ ಕತ್ತರಿಸುವವರೆಗೆ ಯಾವ ಶಿಕ್ಷೆಯನ್ನೂ ವಿಧಿಸಬಹುದು. ಆಕೆ ಸೈಕಲ್ ತುಳಿಯುವ ಬಗ್ಗೆಇಲ್ಲಿನ ಪುರುಷರಗೇ ಸಹಮತ ಇಲ್ಲ. ಇದು ತಮಗೆ ಸ್ಪರ್ಧೆ ಹೂಡಿದಂತೆ ಎಂದು ಪುರುಷರು ಭಾವಿಸುತ್ತಾರೆ.

ದುಡಿಯಬೇಕು: ಇಲ್ಲಿನ ಎಲ್ಲ ಮಹಿಳೆಯರೂ ಕುಟುಂಬದ ತುತ್ತಿಗಾಗಿ ದುಡಿಯಲೇಬೇಕು. ದುಡಿಯದಿದ್ದರೆ ದುಡ್ಡು ಇರುವುದಿಲ್ಲ. ಹಾಗೇ ಮನೆಯಲ್ಲಿ ಎಲ್ಲ ಕೆಲಸವನ್ನೂ ಆಕೆಯೇ ಮಾಡಬೇಕು. ಇದು ಇಲ್ಲಿನ ನಿಯಮ. ಅಡುಗೆ, ಕ್ಲೀನಿಂಗ್ ಎಲ್ಲವನ್ನೂ ಆಕೆಯೇ ಮಾಡಬೇಕು. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಸಪ್ಲೈ ಇಲ್ಲ. ಹೀಗಾಗಿ ಕಟ್ಟಿಗೆ ಒಡೆದು ತಂದು ಹಾಕುವುದನ್ನೂ ಆಕೆಯೇ ಮಾಡಿಕೊಳ್ಳಬೇಕು.

ಅಂಕಲ್ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದನಂತೆ ಉತ್ತರ ಕೊರಿಯಾದ ಕಿಮ್! ...

ಪ್ಲೆಶರ್ ಸ್ಕ್ವಾಡ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪ್ಲೆಶರ್ ಸ್ಕ್ವಾಡ್ ಎಂಬ ತರುಣಿಯರ ತಂಡವೊಂದನ್ನು ಸಾಕಿಕೊಂಡಿದ್ದಾನೆ. ಇದರಲ್ಲಿ ನೂರಾರು ಮಹಿಳೆಯರು ಇರುತ್ತಾರೆ. ಇವರಿಗೆ ಪ್ರತ್ಯೇಕ ವಾಸ ವ್ಯವಸ್ಥೆ ಇರುತ್ತೆ. ಇವರ ಡ್ಯೂಟಿ ಏನೆಂದರೆ ಕಿಮ್ ಅಥವಾ ಅವನ ಸರಕಾರದ ಯಾರಾದರೂ ಉನ್ನತ ಮಟ್ಟದ ಅಧಿಕಾರಿಗಳು ಕರೆದಾಗ ಹೋಗಿ ಅವರನ್ನು ಲೈಂಗಿಕವಾಗಿ ತೃಪ್ತಿಪಡಿಸಿ ಬರುವುದು! ಇದು ಕಡ್ಡಾಯ. ದೇಶದಲ್ಲಿ ಯಾವುದೇ ತರುಣಿ ಈ ಸ್ಕ್ವಾಡ್‌ಗೆ ಸೆಲೆಕ್ಟ್ ಆದರೂ ಹೋಗಿ ಸೇರಲೇಬೇಕು. ಇಲ್ಲವಾದರೆ ಮರಣದಂಡನೆ ಗ್ಯಾರಂಟಿ!

 

 

click me!