ಲೈಫ್ ಸ್ಕಿಲ್ ಘಟಕ, ಏನೆಲ್ಲ ತರಬೇತಿ ಸಿಗಲಿದೆ?  ಮಹಿಳೆಯರಿಗೆ ಮಾತ್ರ

By Suvarna NewsFirst Published Dec 21, 2020, 8:16 PM IST
Highlights

ಮಹಿಳೆಯರಿಗೆ ಜೀವನ ಕೌಶಲ್ಯ  ತರಬೇತಿ ಬೇಕು/ ವುಮೆನ್ಸ್ ಇಂಡಿಯನ್ ಚೆಂಬರ್ ಆಫ್ ಕಾಮರ್ಸ್ (ಡಬ್ಲ್ಯುಐಸಿಸಿಐ)   ಕರ್ನಾಟಕ ಘಟಕ ಲೋಕಾರ್ಪಣೆ/ ವರ್ಕಿಂಗ್  ವುಮೆನ್ ಗಳಿಗೂ ಅಗತ್ಯ/  ಹೊಸ ಆಲೋಚನೆ ಹಂಚಿಕೊಳ್ಳಲು ಆದ್ಯತೆ

ನವದೆಹಲಿ(ಡಿ. 21) ವುಮೆನ್ಸ್ ಇಂಡಿಯನ್ ಚೆಂಬರ್ ಆಫ್ ಕಾಮರ್ಸ್ (ಡಬ್ಲ್ಯುಐಸಿಸಿಐ)  ಮಹಿಳೆಯರ ಲೈಫ್ ಸ್ಕಿಲ್ಸ್  ಕರ್ನಾಟಕ ವಿಭಾಗವನ್ನು ಡಿಸೆಂಬರ್  19 ರಂದು ಲೋಕಾರ್ಪಣೆ ಮಾಡಲಾಗಿದೆ.

ಮಹಿಳೆಯರ ಜೀವನ ಕೌಶಲ್ಯವನ್ನು  ಹೆಚ್ಚಿಸಲು, ಹೊಸ ಯೋಜನೆಗಳ ರೂಪುರೇಷೆ ನಿರ್ಮಾಣ ಮಾಡಲು ಈ ಘಟಕ ಅಸ್ತಿತ್ವಕ್ಕೆ ಬಂದಿದೆ. ಡಬ್ಲ್ಯುಐಸಿಸಿಐ ಸರ್ಕಾರ ಸೇರಿದಂತೆ  ಉದ್ದಿಮೆದಾರರಿಗೂ ಕೌಶಲ್ಯ  ತರಬೇತಿ ಸಲಹೆ ಮತ್ತು ರೂಪುರೇಷೆಗಳನ್ನು ನೀಡುತ್ತಾ ಬಂದಿದೆ.

ನೆತ್ತಿಯಲ್ಲಿ ವಿಪರೀತ ತುರಿಕೆ..ತಲೆ ಕೆಡಿಸಿಕೊಳ್ಳಬೇಡಿ!

ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಡಬ್ಲ್ಯುಐಸಿಸಿಐ  ಕಾರ್ಯಕ್ರಮಲ್ಲಿ ಈ ಯೋಜನೆಗೆ ಆರಂಭ  ಹಾಕಲಾಗಿತ್ತು. 

ಕಾರ್ಯಕ್ರಮದಲ್ಲಿ ಮಾತನಾಡಿದ ಡಬ್ಲ್ಯುಐಸಿಸಿಐ ರಾಷ್ಟ್ರೀಯ ಅಧ್ಯಕ್ಷೆ ಡಾ. ಕುಲ್‌ಜಿತ್ ಉಪ್ಪಾಳ್, ಅತ್ಯುತ್ತಮ ಎಕೋ ಸಿಸ್ಟಮ್ ಅಡಿಯಲ್ಲಿ ತರಬೇತಿ ನೀಡುವುದು ನಮ್ಮ ಗುರಿ. ಪ್ರತಿಯೊಬ್ಬರನ್ನು ಸಮರ್ಥ ಜೀವನ ನಿರ್ವಹಣೆ ಮಾಖಡುವಂತೆ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

ಇಲ್ಲಿ ಪ್ರತಿಯೊಬ್ಬರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು.  ಗುಂಪಿನಲ್ಲಿ ತಮ್ಮ ಆಲೋಚನೆ ಹಂಚಿಕೊಂಡು ಯಶಸ್ಸಿನ ಕಡೆಗೆ ಹೆಜ್ಜೆ ಇಡಬಹುದು ಎಂದು ಹೇಳಿದರು.

ಲೈಫ್ ಸ್ಕಿಲ್ ಪ್ರತಿಯೊಬ್ಬ ವರ್ಕಿಂಗ್ ವುಮೆನ್ ಜೀವನದಲ್ಲಿಯೂ ಬದಲಾವಣೆ ತರಬಹುದು ಎಂದು ಡಬ್ಲ್ಯುಐಸಿಸಿಐ ರಾಷ್ಟ್ರೀಯ ಉಪಾಧ್ಯಕ್ಷೆ ಶಿವಾಂಬಿಗ ಅಥಿಯಾನಾ  ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ, ಜೀವನ ಕೌಶಲ್ಯಗಳು ಹೊಸ ವಿಷಯವಾಗಿದೆ, ಮತ್ತು WICCI ಲೈಫ್ ಸ್ಕಿಲ್ಸ್ ಇದನ್ನು ಕೈಗೆತ್ತಿಕೊಂಡಿದ್ದಕ್ಕೆ ನನಗೆ ಖುಷಿಯಾಗಿದೆ. ಜೀವನ ಕೌಶಲ್ಯಗಳು ಜೀವನ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಒಬ್ಬ ವ್ಯಕ್ತಿಯು ಉತ್ತಮ ಮನುಷ್ಯನಾಗಲು ಅನುವು ಮಾಡಿಕೊಡುತ್ತದೆ ಎಂದರು. ಡಬ್ಲ್ಯುಐಸಿಸಿಐ ಸಂಸ್ಥಾಪಕ ಅಧ್ಯಕ್ಷೆ ಹರ್ಬೀನ್ ಅರೋರಾ,  ,  ರಾಜ್ಯ ಅಧ್ಯಕ್ಷೆ ಸಂಗೀತಾ ಮಾನ್ಸೂರ್  ಹಾಜರಿದ್ದರು.

 

click me!