ವಯಸ್ಸಾಗ್ತಿದ್ದಂತೆ ತೂಕ ಏರೋದು ಮಾಮೂಲಿ. ಹಾಗಂತ ತೂಕ ನಿಯಂತ್ರಣ ಸಾಧ್ಯವಿಲ್ಲ ಎಂದಲ್ಲ. ಮನಸ್ಸು ಮಾಡಿದ್ರೆ ಯಾವುದೇ ಚಿಕಿತ್ಸೆ ಇಲ್ಲದೆ, ಅಪಾಯವಿಲ್ಲದೆ ನಿಮ್ಮ ಕೊಬ್ಬನ್ನು ಇಳಿಸಿಕೊಂಡು ಬ್ಯೂಟಿಫುಲ್ ಮಹಿಳೆಯಾಗ್ಬಹುದು.
ವಯಸ್ಸಾಗಿರೋ, ತೂಕ ಹೆಚ್ಚಾಗಿರುವ ಮಹಿಳೆಯರನ್ನು ಬೊಜ್ಜಿನ ಬಗ್ಗೆ ಕೇಳಿದ್ರೆ ಬರುವ ಒಂದೇ ಉತ್ತರ, ವಯಸ್ಸಾಯ್ತಲ್ಲ ಅನ್ನೋದು. ವರ್ಷ 40 ದಾಟುತ್ತಿದ್ದಂತೆ ಮಹಿಳೆಯರ ತೂಕ ಹೆಚ್ಚಾಗೋದು ಸಾಮಾನ್ಯ. ಪಿಸಿಒಡಿ, ಥೈರಾಯ್ಡ್ ಸೇರಿದಂತೆ ಅನೇಕ ಕಾರಣಕ್ಕೆ ಮಹಿಳೆಯರ ತೂಕದಲ್ಲಿ ಏರಿಕೆಯಾಗುತ್ತದೆ. ಬಹುತೇಕ ಮಹಿಳೆಯರ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆರೋಗ್ಯಕರ ಆಹಾರ ಸೇವನೆ ಮಾಡ್ತಿದ್ದರೂ ತೂಕ ಏರ್ತಾನೆ ಇದೆ ಎನ್ನುವವರಿದ್ದಾರೆ. ವಯಸ್ಸಾಗ್ತಿದೆ, ಹಾರ್ಮೋನ್ ಬದಲಾವಣೆಯಿಂದ ಹೀಗೆಲ್ಲ ಆಗ್ತಿದೆ ಅಂತಾ ನೀವು ಬೊಜ್ಜಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿಲ್ಲ. 40 ವರ್ಷ ವಯಸ್ಸಿನ ನಂತ್ರವೂ ನೀವು ಫಿಟ್ನೆಸ್ ಗೆ ಆದ್ಯತೆ ನೀಡ್ಬೇಕು. ಎಲ್ಲರಂತೆ ತೆಳ್ಳನೆಯ ದೇಹದೊಂದಿಗೆ ನಿಮಗಿಷ್ಟದ ಡ್ರೆಸ್ ಧರಿಸಬಹುದು. ತೂಕ ಇಳಿಕೆ, ಫಿಟ್ನೆಸ್, ಆರೋಗ್ಯಕರ ದೇಹ ನಿಮ್ಮ ಆರೋಗ್ಯವನ್ನು ಮಾತ್ರ ಸುಧಾರಿಸೋದಿಲ್ಲ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
44 ವರ್ಷದ ನಂತ್ರ ಪ್ರತಿ ಮಹಿಳೆಯರ ತೂಕ ಪ್ರತಿ ವರ್ಷ ಅರ್ಧ ಕೆಜಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಹಿಳೆ ತನ್ನ ಜೀವನಶೈಲಿಯಲ್ಲಿ ಬದಲಾವಣೆ ಮಾಡದೆ ಹೋದ್ರೆ ಸಮಸ್ಯೆ ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು. ಮಹಿಳೆಯರ ಋತುಬಂಧದ ಹಂತ 40ನೇ ವರ್ಷದ ಅವಧಿಯಲ್ಲಿ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗುತ್ತದೆ. ಸೊಂಟ ಮತ್ತು ತೊಡೆಯ ಕೊಬ್ಬು ಕಾಣಿಸಿಕೊಳ್ಳುತ್ತದೆ. ಕಡಿಮೆ ಈಸ್ಟ್ರೊಜೆನ್ ಚಯಾಪಚಯ ದರವನ್ನು ನಿಧಾನಗೊಳಿಸುತ್ತದೆ. ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಹೊಟ್ಟೆಯ ಕೊಬ್ಬು ಅವರ ಒಟ್ಟು ದೇಹದ ತೂಕದ ಶೇಕಡಾ 15-20ರಷ್ಟು ಇರುತ್ತದೆ.
Healthy Food : ತೂಕ ಇಳಿಸ್ಬೇಕೆಂದ್ರೆ ಇದನ್ನು ತಪ್ಪದೆ ತಿನ್ನಿ
undefined
ತೂಕ (Weight) ನಿಯಂತ್ರಣಕ್ಕೆ ಮಾಡಿ ಈ ಎಲ್ಲ ಕೆಲಸ :
ಸದಾ ಸಕ್ರಿಯವಾಗಿರಿ : ವಯಸ್ಸಾಯ್ತು ಅಂತಾ ಸದಾ ಕುಳಿತುಕೊಳ್ಳೋದು ಒಳ್ಳೆಯದಲ್ಲ. ಸದಾ ಸಕ್ರಿಯವಾಗಿರಬೇಕು. ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರಬೇಕು. ಕಾರ್ಡಿಯೋ ಡ್ಯಾನ್ಸ್ ಮತ್ತು ಬಾಕ್ಸಿಂಗ್ ತರಗತಿಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ. ಇವು ತೂಕ ಕಡಿಮೆ ಮಾಡಲು ನೆರವಾಗುತ್ತವೆ, ಹಾಗೆಯೇ ಆಹಾರದಲ್ಲಿ 25 -35 ಗ್ರಾಂ ಫೈಬರ್ ಇರುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ನೀರನ್ನು ಕುಡಿಯಬೇಕು. ವಯಸ್ಸಾದಂತೆ ಕ್ಯಾಲೋರಿ (Calories) ಬರ್ನ್ ಸುಲಭವಾಗಿ ಆಗೋದಿಲ್ಲ. ನೀವು ವಾರಕ್ಕೆ ಎರಡು ಬಾರಿ ಭಾರವನ್ನು ಎತ್ತುವ ವ್ಯಾಯಾಮ ಮಾಡಬೇಕು. ಇದ್ರಿಂದ ಸ್ನಾಯುಗಳು ಬಲಗೊಳ್ಳುವ ಜೊತೆಗೆ ಕೊಬ್ಬನ್ನು ಸುಲಭವಾಗಿ ಸುಡುತ್ತವೆ. ಚಯಾಪಚಯಕ್ರಿಯೆ ಸರಿಯಾಗಿ ಆಗುತ್ತದೆ. ದೇಹ ಮತ್ತು ಮೂಳೆಗಳಿಗೆ ಬಲ ನೀಡುವ ಕೆಲಸ ಇದ್ರಿಂದ ಆಗುತ್ತದೆ.
ಬೆಳಿಗ್ಗೆ ಉಪಹಾರ ಬಿಡುವ ತಪ್ಪು ಮಾಡ್ಬೇಡಿ : ಕೆಲಸದ ಒತ್ತಡ ಹಾಗೂ ತೂಕ ಇಳಿಕೆ ಗುಂಗಿನಲ್ಲಿ ಮಹಿಳೆಯರು ಬೆಳಿಗ್ಗೆ ಉಪಹಾರ ತಿನ್ನೋದಿಲ್ಲ. ಬೆಳಿಗ್ಗೆ ಉಪಹಾರ ಸೇವನೆ ಮಾಡ್ಲೇಬೇಕು. ಹಣ್ಣಿನೊಂದಿಗೆ ಓಟ್ ಮೀಲ್ ಅಥವಾ ಧಾನ್ಯಗಳನ್ನು ತಿನ್ನಿ. ಕೆಲವು ನಿಗದಿತ ಗಂಟೆಗೆ ಸಣ್ಣ ಊಟ ಅಥವಾ ತಿಂಡಿ ತಿನ್ನಿ. ಇದು ಹಸಿವನ್ನು ನಿಯಂತ್ರಿಸುತ್ತದೆ. ಅತಿಯಾಗಿ ತಿನ್ನೋದನ್ನು ತಪ್ಪಿಸುತ್ತದೆ.
ಹೃದಯ ಆರೋಗ್ಯಕ್ಕೆ ಮೀನು ತಿನ್ನಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ!
ರಾತ್ರಿ ಆಹಾರ ಸೇವನೆ ಹೀಗಿರಲಿ : ಬೆಳಿಗ್ಗೆಯಿಂದ ಸಂಜೆಯವರೆಗೆ ನೀವು ಪೌಷ್ಟಿಕ ಆಹಾರ ಸೇವನೆ ಮಾಡಿದ್ದರೆ ರಾತ್ರಿ ನೀವು ಕಡಿಮೆ ಆಹಾರ ತೆಗೆದುಕೊಳ್ಳಿ. ದ್ರವ ಆಹಾರ ಹಾಗೂ ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ.
ಈ ಆಹಾರ ತ್ಯಜಿಸಿ : 40ನೇ ವಯಸ್ಸಿನ ನಂತ್ರವೂ ಬೊಜ್ಜು ನಿಮ್ಮನ್ನು ಕಾಡಬಾರದು ಎಂದಾದ್ರೆ ಅತಿಯಾದ ಕಾಫಿ, ಚಹಾ, ತಂಪು ಪಾನೀಯಗಳು, ಎನರ್ಜಿ ಡ್ರಿಂಕ್ಸ್ ಸುದ್ದಿಗೆ ಹೋಗ್ಬೇಡಿ. ಇದ್ರ ಬದಲು ಆರೋಗ್ಯಕರ ಆಹಾರ, ಶೂನ್ಯ ಕ್ಯಾಲೋರಿಯಿರುವ ಪಾನೀಯ ಸೇವನೆ ಮಾಡಿ. ಅತಿಯಾದ ಸಕ್ಕರೆ ಸೇವನೆ ನಿಮ್ಮ ತೂಕ ಹೆಚ್ಚಿಸುವ ಜೊತೆಗೆ ಮಧುಮೇಹದ ಅಪಾಯಕ್ಕೆ ಕಾರಣವಾಗುತ್ತದೆ.