ಲೈಂಗಿಕ ಆರೋಗ್ಯದ ಬಗ್ಗೆ ಅನೇಕರಿಗೆ ಜ್ಞಾನವಿಲ್ಲ. ಅದನ್ನು ಮರೆಯಲ್ಲಿಟ್ಟಿರುವ ಜನರು ಅದ್ರ ಬಗ್ಗೆ ತಿಳಿಯುವ ಪ್ರಯತ್ನ ನಡೆಸೋದಿಲ್ಲ. ಅದ್ರಲ್ಲೂ ಹಸ್ತಮೈಥುನವನ್ನು ಪಾಪದ ಕೆಲಸವೆಂದೇ ಭಾವಿಸುವ ಜನರು ಅದ್ರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ.
ಹಸ್ತಮೈಥುನ ಹೆಸರು ಕೇಳ್ತಿದ್ದಂತೆ ಜನರು ಹುಬ್ಬೇರಿಸುತ್ತಾರೆ. ಅದ್ರ ಬಗ್ಗೆ ಮಾತನಾಡಲು ಹೆದರುತ್ತಾರೆ. ಅದನ್ನು ಅಪರಾಧವೆಂದೇ ಬಹುತೇಕ ಮಂದಿ ಭಾವಿಸಿದ್ದಾರೆ. ಲೈಂಗಿಕ ಆಸೆಯನ್ನು ಈಡೇರಿಸಿಕೊಂಡು, ಸಂತೋಷ ಹೊಂದುವ ಒಂದು ವಿಧಾನ ಹಸ್ತಮೈಥುನ. ಇದಕ್ಕೆ ಯಾವುದೇ ಸರಿಯಾದ ವಿಧಾನವಿಲ್ಲ. ಹಾಗೆ ಎಲ್ಲರೂ ಹಸ್ತಮೈಥುನಕ್ಕೆ ಒಳಗಾಗಬೇಕು ಎನ್ನುವ ನಿಯಮವಿಲ್ಲ. ಹಸ್ತಮೈಥುನದ ಬಗ್ಗೆ ಜನರಲ್ಲಿ ಅನೇಕ ಪ್ರಶ್ನೆಗಳಿವೆ. ಅದ್ರಲ್ಲಿ ಮೊಡವೆ ಕೂಡ ಸೇರಿದೆ. ಹಸ್ತಮೈಥುನಕ್ಕೆ ಒಳಗಾದ್ರೆ ಮೊಡವೆಯಾಗುತ್ತೆ ಎನ್ನುವ ಮಾತಿದ್ದು, ಅದು ಎಷ್ಟು ಸರಿ, ಎಷ್ಟು ತಪ್ಪು ಎಂಬುದನ್ನು ನಾವಿಂದು ಹೇಳ್ತೇವೆ.
ಮೊದಲು ಹಸ್ತಮೈಥುನ (Masturbation) ಅಂದ್ರೇನು ಎಂಬುದನ್ನು ತಿಳಿಯೋಣ : ಇದನ್ನು ನೀವು ಸ್ವಯಂ ಆನಂದದ ಪ್ರಕ್ರಿಯೆ ಎನ್ನಬಹುದು. ಲೈಂಗಿಕ (Sexual) ಅಂಗಗಳನ್ನು ಸ್ಪರ್ಶಿಸುವ ಮೂಲಕ ಆನಂದ ಪಡೆಯುವ ವಿಧಾನ. ಹಸ್ತಮೈಥುನ ಅಪರಾಧ ಎಂದು ನಂಬಲಾಗಿದೆ. ತಜ್ಞರು, ನಿಯಂತ್ರಿತ ರೀತಿಯ ಹಸ್ತಮೈಥುನ ನಿಮ್ಮ ಆರೋಗ್ಯ (Health) ಕ್ಕೆ ಪ್ರಯೋಜನಕಾರಿ ಎನ್ನುತ್ತಾರೆ. ಹಸ್ತಮೈಥುನದ ಸಮಯದಲ್ಲಿ ಡೋಪಮೈನ್ ಮತ್ತು ಎಂಡಾರ್ಫಿನ್ ಹಾರ್ಮೋನು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಡೋಪಮೈನ್ ದೇಹದಲ್ಲಿ ಹೆಚ್ಚುತ್ತಿರುವ ಒತ್ತಡ ಕಡಿಮೆ ಮಾಡುತ್ತದೆ. ಮೂಡ್ ಸ್ವಿಂಗ್ ಸಮಸ್ಯೆಗೆ ಪರಿಹಾರ ನೀಡುತ್ತದೆ.
undefined
ಇಂಥ ಮಹಿಳೆಯರನ್ನು ಎಂದೂ ಮರೆಯಲ್ಲ ಗಂಡಸ್ರು!
ಹಸ್ತಮೈಥುನದಿಂದ ಮೊಡವೆ? : ಹದಿಹರೆಯದಲ್ಲಿ ತಪ್ಪು ಆಹಾರ ಪದ್ಧತಿ ಹಾಗೂ ಹಾರ್ಮೋನ್ ಬದಲಾವಣೆಯಿಂದ ಮೊಡವೆಗಳಾಗುತ್ತವೆ. ಅದಕ್ಕೂ ಹಸ್ತಮೈಥುನಕ್ಕೂ ಸಂಬಂಧವಿಲ್ಲ ಎಂದು ತಜ್ಞರು ಹೇಳ್ತಾರೆ. ಹಸ್ತಮೈಥುನ ನಿದ್ರೆಯನ್ನು ಸುಧಾರಿಸುತ್ತದೆ. ಒತ್ತಡದಿಂದ ನಿಮ್ಮನ್ನು ದೂರವಿಡುತ್ತದೆ. ನೀವು ಸರಿಯಾದ ಕ್ರಮದಲ್ಲಿ ಹಸ್ತಮೈಥುನಕ್ಕೆ ಒಳಗಾದ್ರೆ ನಿಮಗೆ ಯಾವುದೇ ಸಮಸ್ಯೆ ಕಾಡೋದಿಲ್ಲ, ಯಾವುದೇ ಹಾನಿಯಿಲ್ಲ ಎನ್ನುತ್ತಾರೆ ತಜ್ಞರು.
ಸೆಕ್ಸ್ ನಂತರ ಹೊಟ್ಟೆ ಸೆಳೆತ ಕಾಣಿಸಿಕೊಂಡರೇನು ಕಾರಣ?
ಹಸ್ತಮೈಥುನದ ಮೊದಲು ಈ ವಿಷ್ಯ ಗಮನದಲ್ಲಿರಲಿ :
• ಹಸ್ತಮೈಥುನದ ಮೊದಲು ಉಗುರುಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಉದ್ದವಾದ ಉಗುರುಗಳು ಗಾಯಕ್ಕೆ ಕಾರಣವಾಗಬಹುದು. ಉಗುರು ಕತ್ತರಿಸುವ ಜೊತೆಗೆ ಉಗುರಿನ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿ.
• ಕೈ ಸ್ವಚ್ಛತೆ ಮಾಡಿಕೊಳ್ಳುವುದು ಮುಖ್ಯ. ಹಸ್ತಮೈಥುನದ ವೇಳೆ ಕೈನಲ್ಲಿರುವ ಕೊಳಕು ಯೋನಿ ಸೇರಿದ್ರೆ ಸೋಂಕು ಹರಡುವ ಅಪಾಯವಿರುತ್ತದೆ. ಹಾಗಾಗಿ ಯೋನಿ ಸೋಂಕಿನ ಅಪಾಯ ಕಾಡಬಾರದು ಎಂದಾದ್ರೆ ನೀವು ಕೈಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.
• ಹಸ್ತಮೈಥುನಕ್ಕಿಂತ ಮೊದಲು ಮೂತ್ರ ವಿಸರ್ಜನೆ ಬಗ್ಗೆ ಗಮನವಿರಲಿ. ಹಾಗೆಯೇ ಹಸ್ತಮೈಥುನದ ನಂತ್ರವೂ ನೀವು ಮೂತ್ರ ವಿಸರ್ಜನೆ ಮಾಡ್ಬೇಕು. ಆಗ ಕೈ ಅಥವಾ ಆಟಿಕೆಯಲ್ಲಿರುವ ಸೋಂಕು ಹೊರಗೆ ಹೋಗುತ್ತದೆ. ನೀವು ನೀರನ್ನು ಬಳಸಿ ಯೋನಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
• ಹಸ್ತಮೈಥುನದ ವೇಳೆ ನೀವು ಲೈಂಗಿಕ ಆಟಿಕೆಯನ್ನು ಬಳಸುತ್ತಿದ್ದರೆ ಅದರ ಸ್ವಚ್ಛತೆಗೂ ಗಮನ ಹರಿಸಬೇಕು. ಪ್ರತಿ ಬಾರಿ ಬಳಸುವ ಮೊದಲು ಹಾಗೂ ನಂತ್ರ ಅವನ್ನು ಸ್ವಚ್ಛಗೊಳಿಸಬೇಕು. ಯಾವ ಆಟಿಕೆ ಬಳಸಬೇಕು ಎಂಬುವುದು ನಿಮ್ಮ ಆಯ್ಕೆ. ಆದ್ರೆ ಸಮಸ್ಯೆ ಕಾಣಿಸಿದಲ್ಲಿ ನೀವು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
ಮುಟ್ಟಿನ ಸಮಯದಲ್ಲಿ ಹಸ್ತಮೈಥುನ: ಹಸ್ತಮೈಥುನಕ್ಕೂ ಮೊಡವೇಗೂ ಸಂಬಂಧವಿಲ್ಲ ಎಂಬುದು ಗೊತ್ತಾಯ್ತು. ಹಾಗೆ ಹಸ್ತಮೈಥುನ ಮಾಡುವಾಗ ಏನೆಲ್ಲ ಸ್ವಚ್ಛತೆ ಮುಖ್ಯ ಎಂಬುದನ್ನು ತಿಳಿದ್ರಿ. ಮುಟ್ಟಿನ ಸಮಯದಲ್ಲಿ ಹಸ್ತಮೈಥುನ ಸುರಕ್ಷಿತವೇ ಎನ್ನುವ ಪ್ರಶ್ನೆಗೂ ಉತ್ತರ ಇಲ್ಲಿದೆ. ತಜ್ಞರ ಪ್ರಕಾರ, ಮುಟ್ಟಿ ಸಮಯದಲ್ಲಿ ಹಸ್ತಮೈಥುನಕ್ಕೆ ಒಳಗಾಗಬಹುದು. ಆದ್ರೆ ಸ್ವಚ್ಛತೆ ಮುಖ್ಯ. ಮುಟ್ಟಿನ ಕಪ್ ನೀವು ಬಳಸುತ್ತಿದ್ದರೆ ತೆಗೆಯಲು ಮರೆಯಬಾರದು. ಹಸ್ತಮೈಥುನ ಮಾಡಿಕೊಳ್ಳುವಾಗ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ.