ವರದಕ್ಷಿಣೆಗಾಗಿ ಗಂಡನಿಂದ ಹೊರ ಹಾಕಲ್ಪಟ್ಟ ಮಹಿಳೆ UPSC ಪಾಸ್ ಮಾಡಿದ ಕಥೆ!

By Suvarna News  |  First Published Oct 27, 2023, 12:03 PM IST

ಹೆಣ್ಣು ಮಕ್ಕಳು ಯಾವಾಗ್ಲೂ ಸ್ಟ್ರಾಂಗ್ ಆಗಿರಬೇಕು. ತಮ್ಮ ಕಾಲ ಮೇಲೆ ನಿಲ್ಲುವ ದಿಟ್ಟತನ ಹೊಂದಿರಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಬಂದ್ರೂ ಅದನ್ನು ಜಯಿಸಲು ಸಿದ್ಧರಾಗಿರಬೇಕು. ಹಳೆ ಘಟನೆಗಳು ಮುಂದಿನ ಸಾಧನೆಗೆ ಶಕ್ತಿಯಾಗ್ಬೇಕೆ ವಿನಃ ದುರ್ಬಲಗೊಳಿಸಬಾರದು. 
 


ಮಹಿಳೆ ವಿದ್ಯಾವಂತೆ ಹಾಗೂ ಸ್ವಾವಲಂಬಿಯಾಗುವುದು ಬಹಳ ಮುಖ್ಯ. ಈಗಿದ್ದ ಜೀವನ ಮುಂದೂ ಇರುತ್ತೆ ಎನ್ನಲು ಸಾಧ್ಯವಿಲ್ಲ. ಅನೇಕ ಸವಾಲುಗಳು ಜೀವನದಲ್ಲಿ ಎದುರಾಗಬಹುದು. ಆ ಸಂದರ್ಭದಲ್ಲಿ ಎಲ್ಲವನ್ನು ಎದುರಿಸಿ ಹೋರಾಡುವ, ಜೀವನ ನಿರ್ವಹಣೆ ಮಾಡುವ ಶಕ್ತಿ ಬೇಕು. ಅದಕ್ಕೆ ವಿದ್ಯೆ ನೆರವಾಗುತ್ತದೆ. ಶಿಕ್ಷಣ ನಿಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತದೆ. ಹಿಂದೆ ನಡೆದ ಘಟನೆಗಳನ್ನು ನೆನೆದು ಮರುಗುತ್ತ ಕುಳಿತುಕೊಳ್ಳುವ ಬದಲು ಛಲದೊಂದಿಗೆ ಹೋರಾಡಿದಾಗ ಯಶಸ್ಸು ಸಾಧ್ಯ. ಇದಕ್ಕೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಈಗ ರಕ್ಷಣಾ ಸಚಿವಾಲಯದಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಕೋಮಲ್ ಗಣತ್ರ ಉತ್ತಮ ನಿದರ್ಶನ.

ಕೋಮಲ್ ಗಣತ್ರ (Komal Ganatra) ಗುಜರಾತಿನ ನಿವಾಸಿ. ಅವರ ತಂದೆಯೇ ಮಾತುಗಳೇ ಅವರು ಇಂದು ಇಷ್ಟು ದೊಡ್ಡ ಸಾಧನೆ ಮಾಡಲು ಸ್ಫೂರ್ತಿ. ಸ್ವತಂತ್ರವಾಗಿ ಯೋಚಿಸಲು ಮತ್ತು ನನ್ನದೇ ಆದ ಗುರುತನ್ನು ರೂಪಿಸಲು ತಂದೆ ಕಲಿಸಿದ್ದರು. ಪಾಲಕರ ನೆರವಿನಿಂದ ಕೋಮಲ್ ಗಣತ್ರ, ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ  ಪದವಿ (Degree) ಯನ್ನು ಪಡೆದರು. ಕಲೆಯಲ್ಲಿ ತಮ್ಮ ಉತ್ಸಾಹ ಮುಂದುವರಿಸಿದ್ದರು. ಅಲ್ಲದೆ ಕೋಮಲ್, ವಿಶಾರದ್ (Visharad ) ಪದವಿಯನ್ನು ಗಳಿಸಿದ್ದರು.

Latest Videos

undefined

ಇಂಥ ಮಹಿಳೆಯರನ್ನು ಎಂದೂ ಮರೆಯಲ್ಲ ಗಂಡಸ್ರು!

 ಮೊದಲೇ ಹೇಳಿದಂತೆ ಎಲ್ಲವೂ ನೀವು ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಯುಪಿಎಸ್ಸಿ (UPSC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೋಮಲ್ ಹಸೆಮಣೆ ಏರಬೇಕಾಯ್ತು. ಆಗ ಅವರಿಗೆ ಇಪ್ಪತ್ತಾರು ವರ್ಷ. ಪತಿ ನ್ಯೂಜಿಲ್ಯಾಂಡ್ ನಲ್ಲಿ ಕೆಲಸ ಮಾಡ್ತಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆ ಮನೆಯ ಕಾಟ ಶುರುವಾಗಿತ್ತು. ವರದಕ್ಷಿಣೆ ನೀಡುವಂತೆ ಕೇಳಿದ್ರು. ಇಲ್ಲವೆಂದ್ರೆ ಮನೆಯಿಂದ ಹೊರಹಾಕುವಂತೆ ಮಗನಿಗೆ ಸಲಹೆ ನೀಡಿದ್ರು. ಮದುವೆಯಾದ ಬರೀ ಹದಿನೈದು ದಿನದಲ್ಲಿ ಗಂಡ ನ್ಯೂಜಿಲ್ಯಾಂಡ್‌ಗೆ ಹೊರಟಿದ್ದ. ಕೋಮಲ್ ರನ್ನು ಶಾಶ್ವತವಾಗಿ ದೂರಮಾಡಿ ಹೊರಟಿದ್ದ.

No Bra! ಬ್ರಾ ಧರಿಸೋಕೆ ಇಷ್ಟವಿಲ್ಲದವರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು!

ಈ ಘಟನೆಯಿಂದ ಕೋಮಲ್ ಸಂಪೂರ್ಣ ಕುಸಿದು ಹೋಗಿದ್ದರು. ಜೀವನ ಮುಗಿತು ಎಂದುಕೊಂಡವರಿಗೆ ಅವರ ಪಾಲಕರಿಂದ ಪಡೆದ ಮಾರ್ಗದರ್ಶನ ಹಾಗೂ ಅವರು ಪಡೆದ ಶಿಕ್ಷಣ ಬೆಂಬಲಕ್ಕೆ ಬಂತು. ಜೀವನದಲ್ಲಿ ಮುಂದೆ ಸಾಗುವ ಶಕ್ತಿಯನ್ನು ಅವರು ಇವೆರಡರಿಂದ ಪಡೆದರು. ಅವರು ಭಾವನಗರದ ಒಂದು ಹಳ್ಳಿಯಲ್ಲಿ ವಾಸ ಶುರು ಮಾಡಿದ್ದರು. ಆದ್ರೆ ಅಲ್ಲಿ ಇಂಟರ್ನೆಟ್ ಸೌಲಭ್ಯವಿರಲಿಲ್ಲ.  ಪೇಪರ್ ಬರ್ತಾ ಇರಲಿಲ್ಲ. ಲ್ಯಾಪ್ ಟಾಪ್ (Laptop), ಸ್ಮಾರ್ಟ್ಫೋನ್ (Smartphone) ಇರಲಿಲ್ಲ. ಗುಜರಾತಿ ಭಾಷೆಯಲ್ಲಿ ಇವರು ಓದಿದ್ದರಿಂದ ಇಂಗ್ಲೀಷ್ ಕೂಡ ಸ್ವಲ್ಪ ಕಷ್ಟವಾಗಿತ್ತು. ಕೋಚಿಂಗ್ ಗೆ ಬಹಳ ದೂರ ಹೋಗ್ಬೇಕಿತ್ತು. ಅದಕ್ಕೆ ಇವರ ಬಳಿ ಹಣವಿರಲಿಲ್ಲ. ಆದ್ರೆ ಕೋಮಲ್ ಧೈರ್ಯ ಕಳೆದುಕೊಳ್ಳಲಿಲ್ಲ. ಹಳ್ಳಿಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡ ಅವರಿಗೆ ಐದು ಸಾವಿರ ರೂಪಾಯಿ ಸಂಬಳ ಬರ್ತಾ ಇತ್ತು. ಸೋಮವಾರದಿಂದ ಶುಕ್ರವಾರದವರೆಗೆ ಮಕ್ಕಳಿಗೆ ಕಲಿಸಿ ಶನಿವಾರ ಅಹಮದಾಬಾದ್ ಗೆ ಹೋಗಿ ಎರಡು ದಿನ ಕೋಚಿಂಗ್ ಪಡೆದು ಬರ್ತಿದ್ದರು. ಸಂಬಂಧಿಕರ ಅಪಹಾಸ್ಯದ ಮಧ್ಯೆ ಅವರ ಗಟ್ಟಿ ಮನಸ್ಸು ಮಾಡಿಕೊಂಡು ಓದು ಮುಂದುವರೆಸಿದ್ದರು. 

2012 ರಲ್ಲಿ ಕೋಮಲ್ ಯುಪಿಎಸ್ಸಿ (UPSC) ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ್ರು. ಐಆರ್ ಎಸ್ ( IRS) ಗೆ ಸೇರಿಕೊಂಡರು. ರಕ್ಷಣಾ ಸಚಿವಾಲಯದಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. ಕೋಮಲ್ ಮರುಮದುವೆಯಾಗಿದ್ದು, ತಾಕ್ಷವಿ ಎಂಬ ಮಗನಿದ್ದಾನೆ. ನನ್ನ ಹಿಂದಿನ ಹೋರಾಟ ನನ್ನನ್ನು ಬಲಗೊಳಿಸಿದೆ. ನನಗೆ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಸದ್ಗುಣಗಳನ್ನು ಕಲಿಸಿದೆ ಎಂದು ಕೋಮಲ್ ಹೇಳಿದ್ದಾರೆ. ಯಾವಾಗಲೂ ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯವಾಗಬೇಕು. ಶಿಕ್ಷಣ ಅವರಿಗೆ ಮಹತ್ವದ್ದಾಗಿದೆ. ಮಹಿಳೆಯರು ಯಾರನ್ನೂ ಅವಲಂಬಿಸಬಾರದು, ಪ್ರೀತಿಪಾತ್ರರಿಗೆ ಆಧಾರಸ್ತಂಭವಾಗರಬೇಕು ಎನ್ನುತ್ತಾರೆ ಕೋಮಲ್.

click me!