ಅನೇಕ ಕಾರಣಕ್ಕೆ ನಮಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಅದನ್ನು ನಿರ್ಲಕ್ಷ್ಯ ಮಾಡಿದ್ರೂ ಅತಿಯಾದಾಗ ಆಸ್ಪತ್ರೆ ಸೇರ್ತೇವೆ. ಈ ಮಹಿಳೆ ಕೂಡ ಹೊಟ್ಟೆನೋವು ವಿಪರೀತವಾದಾಗ ಆಸ್ಪತ್ರೆಗೆ ಹೋಗಿ ಶಾಕ್ ನೊಂದಿಗೆ ಮನೆಗೆ ಬಂದಿದ್ದಾಳೆ.
ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯ ಚೆನ್ನಾಗಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ಆರೋಗ್ಯದಲ್ಲಿ ಸಣ್ಣ ಏರುಪೇರಾದರೂ ಸಾಕು ಕೆಲಸ ಮಾಡುವ ಹುಮ್ಮಸ್ಸು ಇರೋದಿಲ್ಲ. ಕೆಲವರು ಶಾರೀರಿಕ ಆರೋಗ್ಯದ ಮೇಲೆ ನಿಷ್ಕಾಳಜಿ ತೋರಿಸುತ್ತಾರೆ. ಸಮಸ್ಯೆ ಚಿಕ್ಕದಿರುವಾಗಲೇ ಅದಕ್ಕೆ ಪರಿಹಾರ ಕಂಡುಕೊಳ್ಳದೇ ನಿರ್ಲಕ್ಷ ಮಾಡುತ್ತಾರೆ. ಅದರಿಂದಲೇ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತದೆ.
ಆರೋಗ್ಯ (Health) ದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಾಗ ಕೆಲವರು ಮನೆಯಲ್ಲೇ ಔಷಧ (Medicine) ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಇದರಿಂದ ಆರೋಗ್ಯದಲ್ಲಿ ಸುಧಾರಣೆಯೂ ಆಗುತ್ತದೆ. ಆದರೆ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಮನೆಮದ್ದೇ ಪರಿಹಾರವಾಗುವುದಿಲ್ಲ. ಹಾಗೆಯೇ ಅನೇಕ ಮಂದಿ ತಮ್ಮ ಆರೋಗ್ಯವನ್ನು ಅಥವಾ ಖಾಯಿಲೆಗಳನ್ನು ನಿರ್ಲಕ್ಷಿಸುತ್ತಾರೆ. ಇದೇನು ದೊಡ್ಡ ಸಮಸ್ಯೆಯಲ್ಲ, ಇದರಿಂದ ಏನೂ ಆಗೋದಿಲ್ಲ ಎಂದು ಅಸಡ್ಡೆ ಮಾಡುತ್ತಾರೆ.
undefined
ವರ್ಷಕ್ಕೆ ಕೋಟಿ ಸಂಪಾದಿಸೋ ಈಕೆ ಸೇಲ್ ಮಾಡೋದು ದೇಹದ ಮೇಲಿನ ಕೂದಲನ್ನು?
ದಕ್ಷಿಣ ಅಮೆರಿಕ (America ) ದ ಪೆರಾಗ್ವೆಯ ಒಬ್ಬ ಮಹಿಳೆ ಕೂಡ ತನ್ನ ಆರೋಗ್ಯ ಬಗ್ಗೆ ನಿಷ್ಕಾಳಜಿ ತೋರಿಸಿದ್ದಾಳೆ. ಈಕೆಗೆ ಬಹಳ ದಿನದಿಂದ ಹೊಟ್ಟೆ ನೋವಿನ ಸಮಸ್ಯೆ ಇತ್ತು. ಹೊಟ್ಟೆ ನೋವು ಆಗಾಗ ಕಾಣಿಸಿಕೊಳ್ಳುತ್ತಿದ್ದರೂ ಕೂಡ ಈಕೆ ಮೊದಲಿಗೆ ವೈದ್ಯರ ಬಳಿ ಹೋಗಲಿಲ್ಲ. ಹೊಟ್ಟೆನೋವು ವಿಪರೀತವಾಗಿ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗಿದ್ದಾಳೆ. ಈಕೆಯ ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವನ್ನು ತಿಳಿದ ವೈದ್ಯರು ಹೌಹಾರಿದ್ದಾರೆ.
ಮಹಿಳೆಯ ಹೊಟ್ಟೆಯಲ್ಲಿತ್ತು ಪುಟ್ಟ ಮಗು: ಪೆರಾಗ್ವೆಯ ಕ್ಯಾಪಿಯಟ್ ನಗರದ ನಿವಾಸಿಯಾಗಿರುವ 33 ವರ್ಷದ ಈ ಮಹಿಳೆ ವಿಪರೀತ ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾದಳು. ತಡೆಯಲಾರದ ಹೊಟ್ಟೆನೋವಿನಿಂದಾಗಿ ಈಕೆ ಪ್ರಜ್ಞೆಯನ್ನೂ ಕಳೆದುಕೊಂಡಳು. ತಕ್ಷಣ ವೈದ್ಯರು ಈಕೆಯ ತಪಾಸಣೆ ನಡೆಸಿದಾಗ ಈ ಮಹಿಳೆ ಗರ್ಭವತಿಯಾಗಿರುವುದು ತಿಳಿದು ಬಂತು.
ಗರ್ಭವತಿಯಾದ ಮಹಿಳೆಗೆ ಆಗಲೇ ಹೆರಿಗೆ ನೋವು (Labour Pain) ಆರಂಭವಾಗಿತ್ತು. ಹೆರಿಗೆನೋವಿನ ಜೊತೆಗೆ ಆಕೆಗೆ ವಿಪರೀತ ರಕ್ತಸ್ರಾವವೂ ಆಗುತ್ತಿತ್ತು. ಮೊದಲು ಆಕೆಯನ್ನು ನಗರದ ಹೆರಿಗೆ ಆಸ್ಪತ್ರೆಗೆ ಕಳುಹಿಸಲು ತೀರ್ಮಾನಿಸಿದ್ದ ವೈದ್ಯರು ಆಕೆಯ ಗಂಭೀರ ಸ್ಥಿತಿಯನ್ನು ನೋಡಿ, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದು ಎಚ್ಚೆತ್ತು ತಕ್ಷಣವೇ ಆಕೆಯ ಹೆರಿಗೆ ಮಾಡಿಸಿದರು. 33 ವರ್ಷದ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದಳು. ಹುಟ್ಟಿದ ಮಗುವಿನ ತೂಕ 3 ಕೆಜಿ ಇತ್ತು. ಈಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
No Bra! ಬ್ರಾ ಧರಿಸೋಕೆ ಇಷ್ಟವಿಲ್ಲದವರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು!
ಹೆಣ್ಣು ಮಗುವನ್ನು ಹೊಂದಿದ ಈ ಮಹಿಳೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಆಕೆಗೆ ತಾನು ಗರ್ಭವತಿಯೆನ್ನುವುದೇ ತಿಳಿದಿರಲಿಲ್ಲ. ಆಕೆ ಯಾವುದೇ ರೀತಿಯ ವೈದ್ಯಕೀಯ ತಪಾಸಣೆಯನ್ನು ಕೂಡ ಮಾಡಿಸಿಕೊಂಡಿರಲಿಲ್ಲ. ಆಕೆಯಲ್ಲಿ ಯಾವುದೇ ರೀತಿಯ ದೈಹಿಕ ಬದಲಾವಣೆಗಳು ಆಗಿರಲಿಲ್ಲವಾ ಅಥವಾ ಆಕೆ ಅದನ್ನು ಗಮನಿಸಲಿಲ್ಲವಾ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸ್ವತಃ ವೈದ್ಯರೇ ಈ ಸಂಗತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟು ತಿಂಗಳ ಕಾಲ ಹೊಟ್ಟೆಯಲ್ಲಿ ಮಗುವಿದ್ದರೂ ಈ ಮಹಿಳೆಗೆ ತಾನು ಗರ್ಭಧರಿಸಿರುವ ಸಂಗತಿ ಹೇಗೆ ತಿಳಿಯಲಿಲ್ಲ. ಆಕೆಗೆ ಮುಟ್ಟಿನ ಸಮಸ್ಯೆಯೂ ಎದುರಾಗಲಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಮಹಿಳೆ ತನ್ನ ಆರೋಗ್ಯದ ಮೇಲೆ ಕಾಳಜಿ ವಹಿಸದೇ ಇರುವುದೇ ಇದಕ್ಕೆಲ್ಲ ಕಾರಣ ಎಂದು ಕೆಲವು ವೈದ್ಯರು ಹೇಳಿದ್ದಾರೆ. ಹೀಗೆ ಆರೋಗ್ಯದ ಸಮಸ್ಯೆ ವಿಪರೀತವಾದ ಮೇಲೆ ಆಸ್ಪತ್ರೆಗೆ ದಾಖಲಾಗುವ ಬದಲು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದರಿಂದ ಹತ್ತು ಹಲವು ಸಮಸ್ಯೆಗಳಿಂದ ದೂರವಿರಬಹುದು. ಮಗು ಮನೆಗೆ ಬಂದಿದ್ದು ಮಹಿಳೆಗೆ ಖುಷಿ ವಿಷ್ಯಯವೇ ಸರಿ. ಆದರೆ ಸುಖಾಂತ್ಯದ ಬದಲು ದುಃಖಾಂತ್ಯವಾಗಿದ್ದರೆ ನೋವು ತಿನ್ನಬೇಕಾಗಿತ್ತು.