ಗರ್ಭಾವಸ್ಥೆ ಹೆಣ್ಣುಮಕ್ಕಳ ಪಾಲಿಗೆ ಮರುಹುಟ್ಟು. ಗರ್ಭದೊಳಗಿಂತ ಜೀವವೊಂದು ಭೂಮಿಗೆ ಬರುವ ಸಂದರ್ಭ ಎಷ್ಟೋ ಹೆಣ್ಣುಮಕ್ಕಳು ಜೀವ ಕಳೆದುಕೊಳ್ಳುತ್ತಾರೆ..ಇನ್ನು ಕೆಲವರು ಜೀವ ಹಿಂಡುವ ನೋವಿದ್ದರೂ ಒದ್ದಾಡಿ ಮಗುವಿಗೆ ಜನ್ಮ ನೀಡುತ್ತಾರೆ. ಆಕೆ ಇಲ್ಲೊಬ್ಬ ಮಹಿಳೆ ಹೆರಿಗೆಯಾದ ಕೆಲವೇ ಗಂಟೆಯಲ್ಲಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾಳೆ.
ಪಾಟ್ನಾ: ಹೆಣ್ಣು ಅಂದ್ರೇನೆ ಅಚ್ಚರಿ..ಎಲ್ಲಾ ಕಷ್ಟದ ಸಂದರ್ಭಗಳಲ್ಲೂ ಮುನ್ನುಗ್ಗಿ ಸಾಧಿಸುವ ಛಲಗಾತಿ. ಗರ್ಭಾವಸ್ಥೆ ಹೆಣ್ಣುಮಕ್ಕಳ ಪಾಲಿಗೆ ಮರುಹುಟ್ಟು. ಗರ್ಭದೊಳಗಿಂತ ಜೀವವೊಂದು ಭೂಮಿಗೆ ಬರುವ ಸಂದರ್ಭ ಎಷ್ಟೋ ಹೆಣ್ಣುಮಕ್ಕಳು ಜೀವ ಕಳೆದುಕೊಳ್ಳುತ್ತಾರೆ..ಇನ್ನು ಕೆಲವರು ಜೀವ ಹಿಂಡುವ ನೋವಿದ್ದರೂ ಒದ್ದಾಡಿ ಮಗುವಿಗೆ ಜನ್ಮ ನೀಡುತ್ತಾರೆ. ಆಕೆ ಇಲ್ಲೊಬ್ಬ ಮಹಿಳೆ ಹೆರಿಗೆಯಾದ ಕೆಲವೇ ಗಂಟೆಯಲ್ಲಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಹೆರಿಗೆಯಾಗಿ ಕೆಲವೇ ಗಂಟೆಗಳಲ್ಲಿ 22 ವರ್ಷದ ಯುವತಿಯೊಬ್ಬಳು 10ನೇ ತರಗತಿ ಬೋರ್ಡ್ ಎಕ್ಸಾಂ ಬರೆದ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.
ಹೆರಿಗೆಯ ಬಳಿಕ ಆಂಬ್ಯುಲೆನ್ಸ್ ನಲ್ಲಿ ತೆರೆಳಿ ಪರೀಕ್ಷೆ ಬರೆದ ಯುವತಿ
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರುಕ್ಮಿಣಿ ಕುಮಾರಿ, ಗಣಿತ ಪರೀಕ್ಷೆ (Exam) ಬರೆದ ಬಳಿಕ, ತನ್ನ ಮೆಚ್ಚಿನ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಉತ್ಸಾಹವನ್ನಿಟ್ಟುಕೊಂಡಿದ್ದರು. ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಪರೀಕ್ಷೆಗೆ ಓದುತ್ತಿದ್ದ ಯುವತಿಗೆ, ಬುಧವಾರ ಮುಂಜಾನೆ ಹೆರಿಗೆ ನೋವು (Pregnancy pain) ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ರುಕ್ಮಿಣಿ ಅವರನ್ನು ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರುಕ್ಮಿಣೆ ಜನ್ಮ ನೀಡಿದ್ದಾರೆ. ಒಂದು ಕಡೆ ಮಗ ಬಂದ ಸಂತಸದಲ್ಲಿದ್ದ ರುಕ್ಮಿಣಿಗೆ ವಿಶ್ರಾಂತಿ ಮಾಡಿ ಎಂದು ವೈದ್ಯರು ಹೇಳಿದ್ದಾರೆ ಆದರೆ ರುಕ್ಮಿಣಿ ಇದನ್ನುನಿರಾಕರಿಸಿ, ತನಗೆ ವಿಜ್ಞಾನ ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ತೆರೆಳಿ ಪರೀಕ್ಷೆ ಬರೆದಿದ್ದಾರೆ.
ಪದೇ ಪದೇ ಗರ್ಭಪಾತವಾಗೋದರಿಂದ ಮಹಿಳೆ ಮೇಲೆ ಏನು ಪರಿಣಾಮ ಬೀರುತ್ತೆ?
ಉತ್ತಮ ಅಂಕ ಗಳಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದ ರುಕ್ಮಿಣಿ
ಮೂರು ಗಂಟೆ ಪರೀಕ್ಷೆ ಬರೆದು ಆಸ್ಪತ್ರೆಗೆ (Hospital) ಬಂದಿದ್ದಾರೆ. ನನ್ನ ಮಗ ದೊಡ್ಡವನಾದ ಮೇಲೆ ಆತ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಬೇಕು. ನಾನು ನನ್ನ ಮಗನಿಗೆ ಒಳ್ಳೆಯ ಉದಾಹರಣೆಯಾಗಬೇಕು. ನನ್ನ ಪರೀಕ್ಷೆ ಒಳ್ಳೆಯ ರೀತಿ ಸಾಗಿದೆ. ನಾನು ಉತ್ತಮ ಅಂಕ ಗಳಿಸಬಹುದು ಎಂದು ರುಕ್ಮಿಣಿ ಭರವಸೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಹಿಳೆಯನ್ನು ಭೇಟಿ ಮಾಡಿದ ಡಾ.ಭೋಲಾ ನಾಥ್, 'ಹೆರಿಗೆಯ ತೀವ್ರತೆಯು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರಿಂದ ನಾವು ರುಕ್ಮಿಣಿ ಎಕ್ಸಾಂನ್ನು ಬಿಟ್ಟುಬಿಡುವಂತೆ ಮನವೊಲಿಸಲು ಪ್ರಯತ್ನಿಸಿದೆವು, ಆದರೆ ಅವರು ಹಠಮಾರಿ, ಆದ್ದರಿಂದ ನಾವು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಮತ್ತು ತುರ್ತು ಸಂದರ್ಭದಲ್ಲಿ ಅವಳಿಗೆ ಸಹಾಯ ಮಾಡಲು ಕೆಲವು ಅರೆವೈದ್ಯರನ್ನು ನಿಯೋಜಿಸಿದೆವು' ಎಂದು ತಿಳಿಸಿದ್ದಾರೆ.
ಬರ್ತಾ ಇದೆ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ! ಯಾವಾಗ ತಗೋಬೇಕು, ಹೇಗೆ ಕೆಲಸ ಮಾಡುತ್ತೆ?
ರುಕ್ಮಿಣಿ ತನ್ನ ಪೇಪರ್ ಚೆನ್ನಾಗಿದೆ ಮತ್ತು ಉತ್ತಮ ಅಂಕ ಗಳಿಸುವ ಭರವಸೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರುಕ್ಮಿಣಿ, 'ಮಂಗಳವಾರದಿಂದ ಗಣಿತ ಪತ್ರಿಕೆ ಬರೆದಾಗ ಸ್ವಲ್ಪ ಅಸ್ವಸ್ಥತೆ ಇತ್ತು, ಮರುದಿನ ನಿಗದಿಯಾಗಿದ್ದ ವಿಜ್ಞಾನ ಪತ್ರಿಕೆಯ ಬಗ್ಗೆ ಉತ್ಸುಕನಾಗಿದ್ದೆ, ಆದರೆ ತಡವಾಗಿ ಆಸ್ಪತ್ರೆಗೆ ಸಾಗಿಸಬೇಕಾಯಿತು. ರಾತ್ರಿ 6 ಗಂಟೆಗೆ ನನ್ನ ಮಗ ಜನಿಸಿದನು' ಎಂದರು. 'ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಿರುವುದು ಭಾರೀ ಸದ್ದು ಮಾಡಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ರುಕ್ಮಿಣಿ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ' ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪವನ್‌ಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದರು.
ಗರ್ಭಿಣಿಯರು ಈ ಅಭ್ಯಾಸ ಬಿಟ್ಬಿಡಿ, ಇಲ್ಲಾಂದ್ರೆ ಮಗುವಿಗೆ ಬೆಳವಣಿಗೆ ಕುಂಠಿತವಾಗುತ್ತೆ