ಡೆಲಿವರಿ ಆದ್ಮೇಲೆ ಹೆಚ್ಚಾಗಿತ್ತು ಮೊಡವೆ ಕಾಟ: ಗುಟ್ಟು ಬಿಚ್ಚಿಟ್ಟ ನಟಿ Alia Bhatt

By Suvarna News  |  First Published Feb 18, 2023, 3:17 PM IST

ಒಂದು  ಮಗುವಿನ ತಾಯಿಯಾದ ಮೇಲೂ ಆಲಿಯಾ ಭಟ್​ ಫಿಟ್​ನೆಸ್​ ಸೇರಿದಂತೆ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಇದರ ಕುರಿತು ಅವರು ಹೇಳಿದ್ದೇನು?
 


ಬಾಲಿವುಡ್ ನಟಿ, ಆಲಿಯಾ ಭಟ್ (Alia Bhatt) 18 ನೇ ವಯಸ್ಸಿನಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು ಮತ್ತು ಅಂದಿನಿಂದ ಅವರು ಸಾಕಷ್ಟು ಮನ್ನಣೆ ಗಳಿಸಿದ್ದಾರೆ. ಅವರು ಕಳೆದ ಏಪ್ರಿಲ್​ ತಿಂಗಳಿನಲ್ಲಿ ನಟ ರಣವೀರ್​ ಕಪೂರ್​ (Ranabeer Kapoor) ಅವರನ್ನು ಮದುವೆಯಾಗಿ ನವೆಂಬರ್​ನಲ್ಲಿಯೇ  ಹೆಣ್ಣುಮಗುವಿನ ತಾಯಿಯಾಗಿದ್ದಾರೆ. ಸಾಮಾನ್ಯವಾಗಿ ತಾಯಿಯಾದ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಜೊತೆಗೆ ಹಲವರಲ್ಲಿ ಚರ್ಮದ ಹೊಳಪೂ ಕಡಿಮೆಯಾಗುತ್ತದೆ. ಆದರೆ ಆಲಿಯಾ ಭಟ್​ ಇದಕ್ಕೆ ವಿರುದ್ಧವಾಗಿದ್ದಾರೆ. ಅವರ ಫಿಟ್​ನೆಸ್​ ಮತ್ತು ಹೊಳೆಯುವ ಸ್ಕಿನ್​ ಹಲವರಿಗೆ ಅಚ್ಚರಿ ತಂದಿದೆ. ಅದರ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೌಂದರ್ಯದ ಗುಟ್ಟನ್ನು ಅವರು ರಟ್ಟು ಮಾಡಿದ್ದಾರೆ. 
 
ಅಂದ ಮಾತ್ರಕ್ಕೆ ಸಾಮಾನ್ಯವಾಗಿ ಗರ್ಭಾವಸ್ಥೆ (Pregnancy) ಹಾಗೂ ಡೆಲಿವರಿ ನಂತರ ಕಾಡುವ ಸಮಸ್ಯೆಗಳು ನಟಿಯರಿಗೆ ಕಾಡುವುದಿಲ್ಲವೆಂದೇನಲ್ಲ. ಆಳು ಕಾಳುಗಳು ಎಷ್ಟೇ ಇದ್ದರೂ, ಗರ್ಭದ ಸಮಯದಲ್ಲಿ ದೇಹ ರಚನೆಯಲ್ಲಿ ಏನೇನು ಬದಲಾವಣೆ ಆಗಬೇಕೋ ಅವೆಲ್ಲವೂ ಆಗುತ್ತಲೇ ಇರುತ್ತವೆ. ಕೆಲವರಿಗೆ ಇದು ತೀವ್ರ ಸ್ವರೂಪದಲ್ಲಿ ಆದರೆ, ಕೆಲವರು ಅದನ್ನು ಸಮಚಿತ್ತದಿಂದ ಸ್ವೀಕರಿಸಿ ಹೆಚ್ಚಿನ ಸಮಸ್ಯೆ ಆಗುವುದನ್ನು ತಡೆದುಕೊಳ್ಳುತ್ತಾರೆ. ಅದೇ ರೀತಿ ಆಲಿಯಾ ಭಟ್​ ಕೂಡ ಗರ್ಭದ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು. ಪ್ರಸವಾನಂತರವೂ (Delivery) ಮೊಡವೆ ಸೇರಿದಂತೆ ಕೆಲ ಚರ್ಮದ ಸಮಸ್ಯೆಗಳನ್ನೂ ಎದುರಿಸಿದ್ದಾರೆ. ಅದರ ಬಗ್ಗೆ ಅವರು ಈಗ ಮನಬಿಚ್ಚಿ ಮಾತನಾಡಿದ್ದಾರೆ. 

ಆಲಿಯಾ ಭಟ್ ಹಾಡಿ ಹೊಗಳಿದ ಅನುಪಮ್​ ಖೇರ್​: ಕಂಗನಾ ಕಾಲೆಳೆದ ನೆಟ್ಟಿಗರು!

Tap to resize

Latest Videos

ಆಲಿಯಾ ಭಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ (Youtube Channel) ಹೊಸ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ  ಅವರು ತಮ್ಮ ಚರ್ಮದ ಆರೈಕೆಯ ದಿನಚರಿಯನ್ನು ಬಹಿರಂಗಪಡಿಸಿದ್ದಾರೆ. ಆಲಿಯಾ ಜೊತೆ ಆಕೆಯ ಸಹೋದರಿ ಶಾಹೀನ್ ಭಟ್ (Shaheen Bhat) ಕೂಡ ತಮ್ಮ ಹೊಳೆಯುವ ಚರ್ಮದ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತಾವು ಎದುರಿಸಿದ್ದ ಸಮಸ್ಯೆ ಹಾಗೂ ಅದರಿಂದ ಹೊರಗೆ ಬಂದ ರೀತಿಯನ್ನು ವಿರಿಸಿದ್ದಾರೆ. ಇದರಲ್ಲಿ ಅವರು ವಿಶೇಷವಾಗಿ ಮೊಡವೆಯ ಕುರಿತೂ ಮಾತನಾಡಿದ್ದಾರೆ ಜೊತೆಗೆ  ಕೆಲವು ತ್ವಚೆಯ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದಾರೆ. ಉತ್ತಮ ತ್ವಚೆಯ ಪ್ರಾಮುಖ್ಯತೆಯನ್ನು ತಮಗೆ ಪರಿಚಯಿಸಿದ ತಮ್ಮ ಸಹೋದರಿ  ಶಾಹೀನ್ ಅವರನ್ನು 'ತನ್ನ ತ್ವಚೆಯ ಗುರು' ಎಂದು ಕರೆದಿದ್ದಾರೆ ಆಲಿಯಾ. 

ವಿಶೇಷವಾಗಿ  ಗರ್ಭಾವಸ್ಥೆಯಲ್ಲಿ ಚರ್ಮವು ಹೇಗೆ ಸೂಕ್ಷ್ಮವಾಗಿತ್ತು ಎಂಬುದನ್ನು ಬಹಿರಂಗಪಡಿಸಿದ ನಟಿ,  ಸೂಕ್ಷ್ಮ ಚರ್ಮಕ್ಕಾಗಿ ಹಲವಾರು ಉತ್ಪನ್ನಗಳನ್ನು ಪ್ರಯತ್ನಿಸಿ ಸೋತ ಬಗ್ಗೆ ವಿವರಣೆ ನೀಡಿದ್ದಾರೆ. ಬಹುತೇಕ ಮಹಿಳೆಯರಂತೆ ಆಲಿಯಾ ಅವರಿಗೆ ಕಾಡಿದ್ದು ಮೊಡವೆ ಸಮಸ್ಯೆ. ಇತರ ಎಲ್ಲ ಹುಡುಗಿಯರಂತೆ, ನಾನು ಕೂಡ  ಚರ್ಮದ ವಿಷಯದಲ್ಲಿ ಕೆಲವು ಅಭದ್ರತೆಗಳನ್ನು ಹೊಂದಿದ್ದೆ. ಅದರಲ್ಲಿಯೂ ಹೆಚ್ಚು ಅಭದ್ರತೆ ಕಾಡಿದ್ದು ಮೊಡವೆಯಿಂದ  ಎಂದು ಬಹಿರಂಗಪಡಿಸಿದ್ದಾರೆ. ನಂತರ ಮೊಡವೆಯ ಸಮಸ್ಯೆಯನ್ನು ಹೇಗೆ ಪರಿಹರಿಸಿದೆ ಎಂಬ ಬಗ್ಗೆ ಅವರು ಹೇಳಿದ್ದಾರೆ. ಡೆಲವರಿ ಬಳಿಕ ಮೊಡವೆಗಳು ಹೇಗೆ ಕಾಡಿದವು ಎಂದೂ ಹೇಳಿಕೊಂಡಿರುವ ಆಲಿಯಾ,  ಪಿಂಪಲ್ ಪ್ಯಾಚ್ ತಮಗೆ ತುಂಬಾ ನೆರವಿಗೆ ಬಂದು ಎಂದು ಹೇಳಿಕೊಂಡಿದ್ದಾರೆ.  'ನನ್ನದು ಮಿಕ್ಸ್ಡ್​ ಸ್ಕಿನ್​ ಟೋನ್​. ಕೆಲವೊಮ್ಮೆ ತುಂಬಾ ಡ್ರೈ (dry) ಆದರೆ, ಕೆಲವೊಮ್ಮೆ ಜಿಡ್ಡುಜಿಡ್ಡಾಗುತ್ತದೆ. ಆದ್ದರಿಂದ ನನ್ನ ಚರ್ಮದ ಕುರಿತು ಹೇಳುವುದೇ ಕಷ್ಟ. ಇದರಿಂದಾಗಿಯೂ ಗರ್ಭಾವಸ್ಥೆಯಲ್ಲಿ ಹಾಗೂ ಪ್ರಸವದ ಬಳಿಕ ಕೆಲವೊಂದು ಸಮಸ್ಯೆಗಳಾದವು' ಎಂದಿದ್ದಾರೆ. 

ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್​ ಖಾನ್​ ಅಪ್ಪನ ಕಣ್ಣು ನಟಿ ಹೆಲೆನ್​ ಮೇಲೆ ಬಿದ್ದಾಗ...

ಡೆಲಿವರಿ ಬಳಿ, ಫಿಟ್​ನೆಸ್​ಗೆ (Fitness) ಮರಳಿದೆ.  ಪ್ರಸವಾನಂತರದ ದೇಹದ ರೂಪ ನೋಡಿ  ಎಲ್ಲರೂ ದಿಗ್ಭ್ರಮೆಗೊಂಡರು. ಆದರೆ  ನಿರ್ದಿಷ್ಟ ಸ್ವರೂಪದ ಪಡೆಯಲು ನಾನು ಆತುರ ಮಾಡಲಿಲ್ಲ. ನಿಧಾನವಾಗಿ ಶರೀರವನ್ನು ಮೊದಲಿನ ಹಾಗೆ ಮಾಡಲು ಪ್ರಯತ್ನಿಸಿದೆ.  ನನಗೆ ನಾನು ಕಠಿಣವಾಗಿರಿಸಿಕೊಳ್ಳಬಾರದು ಎಂದು ಚಿಂತಿಸಿದೆ. ಆದ್ದರಿಂದ ಎಲ್ಲವನ್ನೂ ಸಮಾಧಾನ ಚಿತ್ತದಿಂದ ಬಗೆಹರಿಸಿಕೊಂಡೆ ಎಂದಿದ್ದಾರೆ. ಅಂದಹಾಗೆ ಆಲಿಯಾ ಆಹಾರವನ್ನು ಪ್ರೀತಿಸುತ್ತಾರೆ, ಅವರು ತಿನ್ನಲು ಇಷ್ಟಪಡುತ್ತಾರೆ. ಆಹಾರ ಎಂದರೆ ನನಗೆ ತುಂಬಾ ಇಷ್ಟ. ಆದರೆ ಆರೋಗ್ಯವಾಗಿ ಮತ್ತು ಆಕರ್ಷಕವಾಗಿ ಕಾಣಲು ಚಲನಚಿತ್ರಗಳಲ್ಲಿ ನಟಿಸಲು ತೂಕವನ್ನು (Weight Loss) ಕಳೆದುಕೊಳ್ಳಬೇಕಿರುವುದು ಅನಿವಾರ್ಯ. ಅದರಿಂದಾಗಿ ದೇಹದ ತೂಕದ ಕಡೆಗೆ ಹೆಚ್ಚಿನ ಗಮನ ಕೊಟ್ಟೆ ಎಂದಿದ್ದಾರೆ.
  
 

click me!