Cleaning Hacks : ಅಡುಗೆಮನೆಯಲ್ಲಿರುವ ಬಟ್ಟೆ ಕೊಳಕಾಗಿದ್ಯಾ? ಹೀಗೆ ಕ್ಲೀನ್ ಮಾಡಿ

By Suvarna NewsFirst Published Feb 18, 2023, 1:56 PM IST
Highlights

ಅಡುಗೆ ಮನೆ ಸ್ವಚ್ಛವಾಗಿದ್ರೆ ನಾವು ಆರೋಗ್ಯವಾಗಿರುತ್ತೇವೆ. ಬಳಸುವ ತರಕಾರಿಯಿಂದ ಹಿಡಿದು, ಪಾತ್ರೆ, ಬಟ್ಟೆ ಕೂಡ ಮುಖ್ಯ. ನಾವು ಕೈ ಒರೆಸಲು ಬಳಸುವ ಬಟ್ಟೆ ಕೊಳಕಾಗಿದ್ರೆ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಿಡ್ಡಾಗಿರುವ ಬಟ್ಟೆಯನ್ನು ಸುಲಭವಾಗಿ ಕ್ಲೀನ್ ಮಾಡಬಹುದು.
 

ಅಡುಗೆ ಮನೆಯಲ್ಲಿ ಕೈಗಳನ್ನು ಒರೆಸಿಕೊಳ್ಳಲು ಬಟ್ಟೆ ಬೇಕೇ ಬೇಕು. ಕೊಳಕಾದ ಕೈಗಳಿಂದ, ಎಣ್ಣೆಯ ಕೈಗಳಿಂದ ಎಲ್ಲ ಪಾತ್ರೆಗಳನ್ನು ಮುಟ್ಟಿದರೆ ಅಡುಗೆಮನೆಯ ಎಲ್ಲ ವಸ್ತುಗಳೂ ಕೊಳೆಯಾಗುತ್ತವೆ. ಹಾಗಾಗಿ ಕೈಗಳನ್ನು ಒರೆಸಿಕೊಳ್ಳಲೇ ಬೇಕು. ಕೈ ಒರೆಸಿಕೊಳ್ಳಲು ಎಲ್ಲ ಬಟ್ಟೆಯೂ ಸೂಕ್ತವಾಗಿರುವುದಿಲ್ಲ. ನಾವು ಹಾಕಿಕೊಳ್ಳುವ ಬಟ್ಟೆಯಾಗಿರಲಿ ಅಥವಾ ಕೆಲಸಕ್ಕೆ ಬಳಸುವ ಬಟ್ಟೆಯಾಗಲಿ ನಮಗೆ ಕಂಫರ್ಟ್ ಎನಿಸುವ ಬಟ್ಟೆಯನ್ನೇ ನಾವು ಬಳಸುತ್ತೇವೆ. ಹಾಗೆ ಅಡುಗೆಮನೆಯಲ್ಲಿ ಕೂಡ ನಾವು ಎಲ್ಲ ರೀತಿಯ ಬಟ್ಟೆಗಳನ್ನು ಬಳಸಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ಹೆಚ್ಚಿನ ಮಹಿಳೆಯರು ನೀರನ್ನು ಚೆನ್ನಾಗಿ ಹೀರಿಕೊಳ್ಳುವಂತ ಕಾಟನ್ ಬಟ್ಟೆಯನ್ನೇ ಬಳಸುತ್ತಾರೆ.

ಅಡುಗೆ ಮನೆ (Kitchen ) ಯಲ್ಲಿ ಕೈ ಒರೆಸಿಕೊಳ್ಳಲು ಬಟ್ಟೆ (Clothes) ಯೇನೋ ಬೇಕು ಸರಿ. ಆದರೆ ಅದನ್ನು ತೊಳೆಯುವ ಗೋಜು ಯಾರಿಗೂ ಬೇಡ. ಅಡುಗೆ ಮನೆಯ ಬಟ್ಟೆಯಲ್ಲಿ ಸಾಕಷ್ಟು ಕೊಳೆಗಳಿರುತ್ತವೆ. ಅದನ್ನು ಕ್ಲೀನ್ ಆಗಿ ತೊಳೆಯದೇ ಇದ್ದರೆ ಅದರಿಂದಲೇ ಕೀಟಾಣು (Germs) ಗಳು ಹರಡುವ ಸಾಧ್ಯತೆಯೂ ಹೆಚ್ಚಿಗೆ ಇದೆ. ಹಾಗಾಗಿ ಅಡುಗೆಮನೆಯಲ್ಲಿ ಬಳಸುವ ಬಟ್ಟೆಯನ್ನು ದಿನೇ ದಿನೇ ಬದಲಿಸಿ ತೊಳೆಯುತ್ತಿರಬೇಕು. ಅಡುಗೆ ಮನೆಗೆ ಯಾವ ರೀತಿ ಬಟ್ಟೆ ಸೂಕ್ತವಾಗಿದೆ, ಕೊಳಕಾದ ಅಡುಗೆಮನೆಯ ಬಟ್ಟೆಯನ್ನು ಹೇಗೆ ಒಗೆಯಬೇಕು ಎನ್ನುವ ಮಾಹಿತಿ ಇಲ್ಲಿದೆ.

Kitchen Tips : ಡಿಶ್ ವಾಶ್ ಖಾಲಿಯಾಗಿದ್ರೆ ಟೆನ್ಷನ್ ಬೇಡ, ಮನೆಯಲ್ಲಿರೋ ಈ ವಸ್ತು ಬಳಸ್ಕೊಳ್ಳಿ

ಈ ರೀತಿಯ ಬಟ್ಟೆಯನ್ನೇ ಬಳಸಿ : ಅಡುಗೆ ಮನೆಯಲ್ಲಿ ಮತ್ತೆ ಮತ್ತೆ ಕೈಗಳು ಒದ್ದೆಯಾಗುವ ಕಾರಣ ಮೆತ್ತನೆಯ, ನೀರು ಹೀರಿಕೊಳ್ಳುವಂತಹ ಬಟ್ಟೆಗಳೆ ಪ್ರಶಸ್ತವಾಗಿದೆ. ಹಾಗಾಗಿ ಹತ್ತಿಯ ಬಟ್ಟೆಗಳು ಅಡುಗೆ ಮನೆಗೆ ಹೆಚ್ಚು ಸೂಕ್ತವಾಗಿದೆ. ಹತ್ತಿಯ ಬಟ್ಟೆಗಳನ್ನು ನೀವು ಮೈಕ್ರೊವೇವ್ ಅವನ್ ನಲ್ಲಿ ಇಟ್ಟು ಬ್ಯಾಕ್ಟೀರಿಯಾವನ್ನು ಕೂಡ ನಾಶಮಾಡಬಹುದು. ಸಿಂಥೆಟಿಕ್ ಬಟ್ಟೆಗಳ ಬದಲು ನೀವು ಹತ್ತಿಯ ಬಟ್ಟೆಗಳನ್ನೇ ಬಳಸುವುದು ಒಳ್ಳೆಯದು. ಅಡುಗೆ ಮನೆ ಬಟ್ಟೆಗಳನ್ನು ತೊಳೆಯಲು ಬಿಸಿ ನೀರು ಬಳಸಿ : ಬಿಸಿ ನೀರಿನಿಂದ ನೀವು ಸುಲಭವಾಗಿ ಬಟ್ಟೆಗಳಿಗೆ ಅಂಟಿದ ಕಲೆಯನ್ನು ತೆಗೆಯಬಹುದು. ಒಂದು ಪಾತ್ರೆಯಲ್ಲಿ ಬಿಸಿಯಾದ ನೀರನ್ನು ತೆಗೆದುಕೊಂಡು ಡಿಟರ್ಜೆಂಟ್ ಅನ್ನು ನೀರಿಗೆ ಹಾಕಿ. ಕೊಳಕಾದ ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ. ಸ್ವಲ್ಪ ಸಮಯದ ನಂತರ ತಣ್ಣನೆಯ ನೀರಿನಲ್ಲಿ ಬಟ್ಟೆಯನ್ನು ತೊಳೆದರೆ ಬಟ್ಟೆ ಹೊಸದರಂತಾಗುತ್ತದೆ. ಬಿಸಿ ನೀರಿನಲ್ಲಿ ಬಟ್ಟೆಯನ್ನು ನೆನೆಸುವುದರಿಂದ ಕೀಟಾಣುಗಳು ಕೂಡ ನಾಶವಾಗುತ್ತವೆ.

ಸ್ಟಾನ್ ಕ್ಲೀನರ್ (Span Cleaner) ನಿಂದ ಕ್ಲೀನ್ ಮಾಡಿ : ಕಿಚನ್ ಟವೆಲ್ ಅನ್ನು ಕ್ಲೀನ್ ಮಾಡಲು ಸ್ಟಾನ್ ಕ್ಲೀನರ್ ಗಳನ್ನು ಕೂಡ ಬಳಸಬಹುದು. ಟವೆಲ್ ಅನ್ನು ಸ್ವಲ್ಪ ಹೊತ್ತು ಕ್ಲೀನರ್ ನಲ್ಲಿ ನೆನೆಸಿಟ್ಟು 15 ನಿಮಿಷದ ನಂತರ ನೀರಿನಿಂದ ತೊಳೆದು ಒಣಗಿಸಬಹುದು.

ಡಿಟರ್ಜಂಟ್ ಗಳಿಂದಲೂ ಬಟ್ಟೆ ಶುಭ್ರವಾಗುತ್ತೆ : ಕೊಳಕಾದ ಅಡುಗೆಮನೆಯ ಬಟ್ಟೆ ತೊಳೆಯಲು ಡಿಟರ್ಜಂಟ್ ಗಳನ್ನು ಕೂಡ ಬಳಸಬಹುದು. ಬಟ್ಟೆಯನ್ನು ಅರ್ಧಗಂಟೆ ಡಿಟರ್ಜಂಟ್ ನಲ್ಲಿ ನೆನೆಸಿಟ್ಟು ತೊಳೆಯಿರಿ. ತೊಳೆದ ನಂತರ ಬಟ್ಟೆಗೆ ಸೂರ್ಯನ ಬಿಸಿಲು ನೇರವಾಗಿ ತಾಗುವಂತೆ ಒಣಗಿಸಿ. ಇದರಿಂದ ಬಟ್ಟೆಯಲ್ಲಿನ ಜರ್ಮ್ಸ್ ಎಲ್ಲವೂ ನಾಶವಾಗುತ್ತೆ.

ಕಾಸ್ಟಿಕ್ ಸೋಡಾ : ಅಡುಗೆಮನೆಯ ಬಟ್ಟೆಯನ್ನು ತೊಳೆಯಲು ಕಾಸ್ಟಿಕ್ ಸೋಡಾ ಬಳಕೆ ಮಾಡಬಹುದು. ಸ್ವಲ್ಪ ನೀರಿಗೆ ಸೋಡಾವನ್ನು ಹಾಕಿ ಬಟ್ಟೆಯನ್ನು ಅದರಲ್ಲಿ ನೆನೆಯಲು ಬಿಡಿ. ಬಟ್ಟೆಯನ್ನು ನೆನೆಸಿಟ್ಟ  ಅರ್ಧ ಗಂಟೆಯ ಬಳಿಕ ಅದನ್ನು ತೊಳೆದರೆ ಬಟ್ಟೆಗೆ ಒಳ್ಳೆಯ ಹೊಳಪು ಬರುತ್ತೆ ಮತ್ತು ಬಟ್ಟೆಯಿಂದ ಬರುವ ವಾಸನೆಯೂ ದೂರವಾಗುತ್ತೆ. 

Business Ideas : ಮಹಿಳೆಯ ಸೌಂದರ್ಯ ಹೆಚ್ಚಿಸಿ ಗಳಿಕೆ ಶುರು ಮಾಡಿ

ಲಿಕ್ವಿಡ್ ಬ್ಲೀಚ್ (Liquid Bleach) ಬಳಕೆ ಕೂಡ ಒಳ್ಳೆಯದು : ಬ್ಲೀಚಿಂಗ್ ಪೌಡರ್ ಗಳು ಅನೇಕ ರೀತಿಯ ಕೊಳೆಗಳನ್ನು ನಿವಾರಿಸುತ್ತವೆ. ಹಾಗೆಯೇ ಲಿಕ್ವಿಡ್ ಬ್ಲೀಚ್ ಕೂಡ ಕಠಿಣ ಕಲೆಗಳ ವಿರುದ್ಧ ಕೆಲಸಮಾಡುತ್ತದೆ. ಲಿಕ್ವಿಡ್ ಬ್ಲೀಚ್ ನಲ್ಲಿ ಅಡುಗೆಮನೆಯ ಬಟ್ಟೆಯನ್ನು ನೆನೆಸಿಟ್ಟು ತೊಳೆದರೆ ಎಲ್ಲ ಕಲೆಗಳೂ ಹೋಗಿ ಬಟ್ಟೆ ಹೊಸದರಂತೆ ಕಾಣುತ್ತದೆ.
 

click me!