ಅಬ್ಬಬ್ಬಾ..ಮಹಿಳೆ ನೆತ್ತಿಯ ಮೇಲಿತ್ತು ಜೀವಂತ ಲಾರ್ವಾ, ಸರ್ಜರಿ ಮಾಡಿ ಹೊರ ತೆಗೆದ ಬೆಂಗಳೂರಿನ ವೈದ್ಯರು

By Vinutha Perla  |  First Published Dec 12, 2023, 12:52 PM IST

ಮನುಷ್ಯನ ದೇಹವೇ ಒಂದು ಅಚ್ಚರಿ. ಆದರೆ ಕೆಲವೊಮ್ಮೆ ಆರೋಗ್ಯ ಹದಗೆಟ್ಟಾಗ ಮಾತ್ರ ವಿಚಿತ್ರವಾದ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಬೆಂಗಳೂರಿನಲ್ಲಿ ಮಹಿಳೆಯೊಬ್ಬಳ ನೆತ್ತಿಯಲ್ಲಿ ಬಾಟ್‌ಫ್ಲೈ ಲಾರ್ವಾವನ್ನು ಪತ್ತೆಹಚ್ಚಿದ್ದಾರೆ. ಸರ್ಜರಿ ಮಾಡಿ ಹೊರತೆಗೆದಿದ್ದಾರೆ.


ಮನುಷ್ಯನ ದೇಹವೇ ಒಂದು ಅಚ್ಚರಿ. ಆದರೆ ಕೆಲವೊಮ್ಮೆ ಮಾತ್ರ ವಿಚಿತ್ರವಾದ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಬೆಂಗಳೂರಿನಲ್ಲಿ ಮಹಿಳೆಯೊಬ್ಬಳ ನೆತ್ತಿಯಲ್ಲಿ ಬಾಟ್‌ಫ್ಲೈ ಲಾರ್ವಾವನ್ನು ಪತ್ತೆಹಚ್ಚಿದ್ದಾರೆ. ವನ್ಯಜೀವಿ ಸಂರಕ್ಷಣಾ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿರುವ 26 ವರ್ಷದ ಮಹಿಳೆ ತಲೆನೋವಿನಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರ ಬಳಿ ತೆರಳಿ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ವೈದ್ಯರು ನೆತ್ತಿಯ ಮೇಲೆ ಊತವಿರೋದನ್ನು ಕಂಡು ಹಿಡಿದಿದ್ದಾರೆ. ಟೆಸ್ಟ್‌ ನಡೆಸಿದ ವೈದ್ಯರು ಅವಳಿಗೆ ಮೈಯಾಸಿಸ್ ರೋಗ ನಿರ್ಣಯ ಮಾಡಿದರು. ತಕ್ಷಣದ ಶಸ್ತ್ರಚಿಕಿತ್ಸೆ ಮಾಡಲು ಸೂಚಿಸಿದರು. 

ಸ್ಥಳೀಯ ಅರಿವಳಿಕೆ ನೀಡಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದು ನೇರವಾದ ಲಾರ್ವಾವನ್ನು ಹೊರತೆಗೆಯಲು ನೆತ್ತಿಯ ಚರ್ಮದ ಸರ್ಜರಿಯನ್ನು ಒಳಗೊಂಡಿರುತ್ತದೆ. ರೋಗಿಯು ಯಾವುದೇ ತೊಂದರೆಗಳನ್ನು ಅನುಭವಿಸದ ಕಾರಣ, ಕಾರ್ಯವಿಧಾನವು ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದರು. ಬಾಟ್‌ಫ್ಲೈ ಲಾರ್ವಾವನ್ನು ನೆತ್ತಿಯಿಂದ ಜೀವಂತವಾಗಿ ತೆಗೆದು ಹಾಕಲಾಯಿತು. ಬಾಟ್‌ಫ್ಲೈ ಲಾರ್ವಾಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ತೆಗೆದು ಹಾಕದಿದ್ದರೆ, ಲಾರ್ವಾಗಳು ವಯಸ್ಕ ಬಾಟ್‌ಫ್ಲೈಗಳಾಗಿ ಅಭಿವೃದ್ಧಿ ಹೊಂದಿ ತೀವ್ರವಾದ ಅಂಗಾಂಶ ನಾಶಕ್ಕೆ ಕಾರಣವಾಗಬಹುದು ಎಂದು ಸರ್ಜರಿ ನಡೆಸಿದ ವೈದ್ಯರು ತಿಳಿಸಿದ್ದಾರೆ. 

Tap to resize

Latest Videos

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

ಮಹಿಳೆ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳು ಹೊರ ತೆಗೆದ ವೈದ್ಯರು!
ಚೀನಾದಲ್ಲಿ ಇತ್ತೀಚಿಗೆ ಮಹಿಳೆಯೊಬ್ಬಳ ಕಣ್ಣುಗಳೊಳಗೆ ಹುಳುಗಳಿರೋದು ಪತ್ತೆಯಾಗಿತು. ವೈದ್ಯರೊಬ್ಬರು ಆಪರೇಷನ್‌ ನಡೆಸಿ ಮಹಿಳೆಯೊಬ್ಬರ ಕಣ್ಣುಗಳಿಂದ 60ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ. ವರದಿಯ ಪ್ರಕಾರ, ಮಹಿಳೆ ಕಣ್ಣುಗಳಲ್ಲಿ ತುರಿಕೆ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಕಣ್ಣನ್ನು ಉಜ್ಜಿದಾಗ ನೋವಾಗಿದ್ದು, ಆ ನಂತರ ಹುಳುಗಳು ಉದುರಿ ಬೀಳಲು ಆರಂಭವಾಗಿದೆ. ಭಯಭೀತಳಾದ ಮಹಿಳೆಯನ್ನು ತಕ್ಷಣವೇ ಚೀನಾದ ಕುನ್ಮಿಂಗ್‌ನಲ್ಲಿರುವ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷೆಯ ನಂತರ, ವೈದ್ಯರು ಅವಳ ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳ ನಡುವೆ ಜೀವಂತ ಹುಳುಗಳಿಂದ ಮುತ್ತಿಕೊಂಡಿರುವ ಜಾಗವನ್ನು ಕಂಡು ಆಘಾತಕ್ಕೊಳಗಾದರು. 

ಮಹಿಳೆಯ ಬಲಗಣ್ಣಿನಿಂದ 40ಕ್ಕೂ ಹೆಚ್ಚು ಮತ್ತು ಎಡಗಣ್ಣಿನಿಂದ 10ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ವೈದ್ಯರು ಹೊರತೆಗೆದರು. ವರದಿಯ ಪ್ರಕಾರ,  ವೈದ್ಯರು ಮಹಿಳೆಯ ಕಣ್ಣಿನಿಂದ 60ಕ್ಕೂ ಹೆಚ್ಚು ಹುಳುಗಳನ್ನು ತೆಗೆದುಹಾಕಿದ್ದಾರೆ ಎಂದು ತಿಳಿದುಬಂದಿದೆ.

ಡಿಪ್ರೆಶನ್‌ನಿಂದ ಬಳಲುತ್ತಿದ್ದ ಮಹಿಳೆ ಮೆದುಳಿನಲ್ಲಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ

ಈ ರೀತಿ ಕಣ್ಣುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಳುಗಳು (Worm) ಕಂಡು ಬರೋದು ಅಪರೂಪದ ಪ್ರಕರಣವಾಗಿದೆ ಎಂದು ಸರ್ಜರಿ ನಡೆಸಿದ ವೈದ್ಯರಾ ಡಾ.ಗುವಾನ್ ಹೇಳಿದ್ದಾರೆ. ಮಹಿಳೆಯು (Woman) ಫಿಲಾರಿಯೋಡಿಯಾ ಎಂಬ ಹೆಸರಿನ ಹುಳುಗಳಿಂದ ಸೋಂಕಿಗೆ ಒಳಗಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಸಾಮಾನ್ಯವಾಗಿ ನೊಣ ಕಡಿತದ ಮೂಲಕ ಹರಡುತ್ತದೆ.

click me!