ನಾರ್ಮಲ್ ಹೆರಿಗೆ ಆದ್ರೆ ಮುಂದೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಡಲ್ಲ ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಇದಕ್ಕೆ ಏನು ಮಾಡ್ಬೇಕು ಅನ್ನೋದು ಕೆಲವರಿ ತಿಳಿದಿಲ್ಲ. ನಟಿ ಅನುಷ್ಕಾ ಟಿಪ್ಸ್ ಫಾಲೋ ಮಾಡಿದ್ರೆ ನೀವೂ ಸಿ ಸೆಕ್ಷನ್ ನಿಂದ ತಪ್ಪಿಸಿಕೊಳ್ಬಹುದು.
ಗರ್ಭಧರಿಸಿದ ಪ್ರತಿಯೊಬ್ಬ ಮಹಿಳೆ ನಾರ್ಮಲ್ ಹೆರಿಗೆ ಆಗ್ಲಿ ಎಂದು ಬಯಸ್ತಾಳೆ. ಆಕೆಯ ಹೆರಿಗೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಿರಲಿ ಮತ್ತು ತಾಯಿ- ಮಗು ಆರೋಗ್ಯವಾಗಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಆದ್ರೆ ಎಲ್ಲರಿಗೂ ನಾರ್ಮಲ್ ಹೆರಿಗೆ ಸಾಧ್ಯವಾಗೋದಿಲ್ಲ. ಗರ್ಭಾವಸ್ಥೆ ಸಂದರ್ಭದಲ್ಲಿ ಕಾಡುವ ಕೆಲ ಅನಾರೋಗ್ಯ ಒಂದು ಕಾರಣವಾದ್ರೆ ಮತ್ತೆ ಕೆಲವೊಮ್ಮೆ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಾಡುವ ನಿರ್ಲಕ್ಷ್ಯ ಇನ್ನೊಂದು ಕಾರಣವಾಗಿರುತ್ತದೆ. ಗರ್ಭಿಣಿಯಾದವಳು ನಾರ್ಮಲ್ ಹೆರಿಗೆ ಆಗ್ಬೇಕೆಂದ್ರೆ ಆರಂಭದಿಂದಲೇ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು.
ಬಾಲಿವುಡ್ (Bollywood) ನಟಿ ಹಾಗೂ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಪತ್ನಿ ಅನುಷ್ಕಾ ಶರ್ಮಾ (Anushka Sharma) ತಾಯಿಯಾಗಿದ್ದಾರೆ. ಅವರು ಗರ್ಭಿಣಿಯಾದಾಗಿನಿಂದ ಹೆರಿಗೆ ಹಾಗೂ ಹೆರಿಗೆ ನಂತ್ರವೂ ಫಿಟ್ ಆಗಿದ್ದರು. ಅನುಷ್ಕಾರದ್ದು ನಾರ್ಮಲ್ ಡಿಲೆವರಿ. ನಾರ್ಮಲ್ ಹೆರಿಗೆಯಾದ ಮಹಿಳೆಯರಿಗೆ ಮುಂದೆ ಹೆಚ್ಚು ಅನಾರೋಗ್ಯ ಸಮಸ್ಯೆ ಕಾಡೋದಿಲ್ಲ. ಸಿ ಸೆಕ್ಷನ್ ಮಹಿಳೆಯರು ಮುಂದಿನ ದಿನಗಳಲ್ಲಿ ಸೊಂಟ ನೋವು, ತೂಕ ಏರಿಕೆ ಸೇರಿದಂತೆ ಕೆಲ ಸಮಸ್ಯೆ ಎದುರಿಸುತ್ತಾರೆ. ಅನುಷ್ಕಾ ಶರ್ಮಾರಂತೆ ನಾರ್ಮಲ್ ಹೆರಿಗೆ ಆಗಿ, ಆದಷ್ಟು ಬೇಗ ನಿಮ್ಮ ತೂಕ ಇಳಿಸಿಕೊಳ್ಳಬೇಕು ಅಂದ್ರೆ ನೀವು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
undefined
ಹೊಟ್ಟೆಯ ಕೊಬ್ಬು ಒಂದೇ ವಾರದಲ್ಲಿ ಇಳಿಯುತ್ತೆ, ಈ ಸಿಂಪಲ್ ಜಪಾನೀಸ್ ವರ್ಕೌಟ್ ಮಾಡಿ
ನಾರ್ಮಲ್ ಹೆರಿಗೆಗೆ ಅನುಷ್ಕಾ ಮಾಡಿದ್ದೇನು? :
ಸರಿಯಾದ ಸಮಯಕ್ಕೆ ಮಾತ್ರೆ ಸೇವನೆ : ಗರ್ಭಿಣಿಯಾದ ತಕ್ಷಣ ಅನುಷ್ಕಾ ಸಾಮಾನ್ಯ ಹೆರಿಗೆಗೆ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳಲು ಶುರು ಮಾಡಿದ್ದರು. ಅವರು ಪ್ರತಿ ದಿನ ತಪಾಸಣೆ ಹಾಗೂ ವೈದ್ಯರ ಜೊತೆ ಮಾತುಕತೆ ನಡೆಸುತ್ತಿದ್ದರು. ನೀವು ಪ್ರತಿ ದಿನ ತಪಾಸಣೆಗೆ ಒಳಗಾಗಬೇಕಾಗಿಲ್ಲ, ವೈದ್ಯರು ನೀಡಿದ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಮುಖ್ಯ. ಅನೇಕರು ಮಾತ್ರೆ ತೆಗೆದುಕೊಳ್ಳುವುದಿಲ್ಲ. ವೈದ್ಯರು ನೀಡಿದ ಔಷಧ ನಿಮಗೆ ಸಹಾಯ ಮಾಡುತ್ತದೆ. ನಾರ್ಮಲ್ ಹೆರಿಗೆ ಆಗ್ಬೇಕು ಅಂದ್ರೆ ನೀವು ಸೂಕ್ತ ಸಮಯಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅನುಷ್ಕಾ ಇದನ್ನು ತಪ್ಪದೆ ಮಾಡ್ತಿದ್ದರು.
ಪೋಷಕಾಂಶವುಳ್ಳ ಆಹಾರ (Vitamin Rich Food): ಬರೀ ಮಾತ್ರೆ ಸೇವನೆ ಮಾಡಿದ್ರೆ ಹೊಟ್ಟೆ ತುಂಬೋದಿಲ್ಲ. ಶಿಶುವಿಗೆ ಬೇಕಾದ ಪೋಷಕಾಂಶ ಸಿಗೋದಿಲ್ಲ. ನೀವು ಮತ್ತು ಮಗು ಆರೋಗ್ಯವಾಗಿರಬೇಕೆಂದ್ರೆ ಪೋಷಕಾಂಶವುಳ್ಳ ಆಹಾರ ಸೇವನೆ ಮಾಡಬೇಕು.
ವ್ಯಾಯಾಮ ಅಗತ್ಯ : ಅನುಷ್ಕಾ ಶರ್ಮಾ ಗರ್ಭಿಣಿಯಾದಾಗ್ಲೂ ಸಕ್ರಿಯವಾಗಿದ್ದರು. ಎಲ್ಲ ಕೆಲಸವನ್ನು ಮಾಡ್ತಿದ್ದರು. ಇದಕ್ಕೆ ಕಾರಣ ಯೋಗ ಹಾಗೂ ವ್ಯಾಯಾಮ. ಶಿರ್ಶಾಸನ ಮಾಡಿದ್ದ ಫೋಟೋವನ್ನು ಅನುಷ್ಕಾ ಆ ಸಂದರ್ಭದಲ್ಲಿ ಹಂಚಿಕೊಂಡಿದ್ದರು. ನೀವು ಕೂಡ ವ್ಯಾಯಾಮ, ಯೋಗ ಮಾಡುವುದು ಮುಖ್ಯ. ವೈದ್ಯರ ಸಲಹೆ ಮೇರೆಗೆ ಯಾವುದು ಸೂಕ್ತ ಎಂಬುದನ್ನು ಗಮನಿಸಿ ಮಾಡಿ. ಹಾಗೆಯೇ ಮನೆ ಕೆಲಸಗಳನ್ನು ನೀವು ಮಾಡಬಹುದು. ಇದ್ರಿಂದ ದೇಹಕ್ಕೆ ವ್ಯಾಯಾಮ ಸಿಗುತ್ತದೆ.
Health Tips: ಅತ್ತು ಅತ್ತು ಮಗು ಉಸಿರಾಡೋದ ನಿಲ್ಸಿದ್ರೆ ಏನು ಮಾಡ್ಬೇಕು?
ನೀವು ದೈಹಿಕವಾಗಿ ಸಕ್ರಿಯವಾಗಿದ್ದರೆ ನಾರ್ಮಲ್ ಹೆರಿಗೆ ಸುಲಭ. ಅಲ್ಲದೆ ಸರಿಯಾದ ನಿದ್ರೆ, ವಿಶಾಂತಿ ಸಿಗುತ್ತದೆ. ಇದ್ರಿಂದ ನಿಮ್ಮಿಬ್ಬರ ಆರೋಗ್ಯ ಸುಧಾರಿಸುತ್ತದೆ. ಗರ್ಭಾವಸ್ಥೆಯಲ್ಲೇ ವ್ಯಾಯಾಮ ಮಾಡುವುದ್ರಿಂದ ನಿಮ್ಮ ತೂಕ ಮಿತಿಮೀರಿ ಏರಿಕೆ ಆಗೋದಿಲ್ಲ. ಹಾಗಾಗಿ ಹೆರಿಗೆ ನಂತ್ರ ತೂಕ ಇಳಿಸೋದು ಸುಲಭವಾಗುತ್ತದೆ. ಅನುಷ್ಕಾ ತೂಕ ಇಳಿಕೆಗೂ ಇದು ಕಾರಣವಾಗಿದೆ.
ಆರೋಗ್ಯಕರ ಆಹಾರ (Healthy Food): ಅನುಷ್ಕಾ ಯಾವಾಗಲೂ ಸಮತೋಲಿತ ಆಹಾರಕ್ರಮವನ್ನು ಅನುಸರಿಸಿದ್ದರು. ಆಹಾರದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದರು. ಗರ್ಭಾವಸ್ಥೆಯಲ್ಲಿ ಅವರು ತನ್ನ ಆಹಾರದ ಬಗ್ಗೆ ಹೆಚ್ಚು ಜಾಗೃತಋಗಿದ್ದರು. ಶೀತದಿಂದ ರಕ್ಷಿಸಲು ಅವರು ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ಮತ್ತು ಲವಂಗದ ಟೀ ಕುಡಿಯುತ್ತಿದ್ದರು. ಅಲ್ಲದೆ ಸಾಕಷ್ಟು ನೀರು ಸೇವನೆ ಮಾಡುತ್ತಿದ್ದರು.