2500 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸಾಮಾನ್ಯ ವ್ಯಕ್ತಿಯನ್ನು ಮದ್ವೆಯಾದ ಬಿಲಿಯನೇರ್ ಯುವತಿ!

By Vinutha Perla  |  First Published Jan 3, 2024, 10:02 AM IST

ನಿಜವಾದ ಪ್ರೀತಿಗಾಗಿ ವ್ಯಕ್ತಿ ಯಾವ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅದು ಅಕ್ಷರಹಃ ನಿಜ ಅನ್ನೋದನ್ನು ಹಲವು ಘಟನೆಗಳು ಸಾಬೀತುಪಡಿಸಿವೆ. ಹಾಗೆಯೇ ಮಲೇಷ್ಯಾದ ಶ್ರೀಮಂತ ಯುವತಿ ತಾನು ಪ್ರೀತಿಸಿದ ಹುಡುಗನನ್ನು ವರಿಸಲು ಕೋಟ್ಯಾಂತರ ಆಸ್ತಿಯನ್ನು ಬಿಟ್ಟು ಬಂದಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ನಿಜವಾದ ಪ್ರೀತಿಗಾಗಿ ವ್ಯಕ್ತಿ ಯಾವ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅದು ಅಕ್ಷರಹಃ ನಿಜ ಅನ್ನೋದನ್ನು ಹಲವು ಘಟನೆಗಳು ಸಾಬೀತುಪಡಿಸಿವೆ. ಹಾಗೆಯೇ ಮಲೇಷ್ಯಾದ ಶ್ರೀಮಂತ ಯುವತಿ ತಾನು ಪ್ರೀತಿಸಿದ ಹುಡುಗನನ್ನು ವರಿಸಲು ಕೋಟ್ಯಾಂತರ ಆಸ್ತಿಯನ್ನು ಬಿಟ್ಟು ಬಂದಿದ್ದಾಳೆ. ಮಾತ್ರವಲ್ಲ ಐಷಾರಾಮಿ ಜೀವನದ ಎಲ್ಲಾ ಗುರುತಿನ ಜೊತೆಗೆ ಬರೋಬ್ಬರಿ  2,499 ಕೋಟಿ ರೂ. ಆಸ್ತಿಯನ್ನು ತ್ಯಜಿಸಿ ಬಂದಿದ್ದಾಳೆ. ಮಲೇಷ್ಯಾದ ಏಂಜಲೀನ್ ಫ್ರಾನ್ಸಿಸ್,  ತನ್ನ ಗೆಳೆಯನನ್ನು ಮದುವೆಯಾಗಲು 300 ಮಿಲಿಯನ್ ಯುಎಸ್ ಡಾಲರ್ (2,499 ಕೋಟಿ ರೂ. ) ಆಸ್ತಿಯನ್ನು ನಿರಾಕರಿಸಿದಳು. ಈ ಮೂಲಕ ಎಲ್ಲಕ್ಕಿಂತಲೂ ಪ್ರೀತಿಯೇ ದೊಡ್ಡದು ಎಂಬುದನ್ನು ಸಾಬೀತುಪಡಿಸಿದ್ದಾಳೆ. 

ಏಂಜೆಲಿನ್ ಫ್ರಾನ್ಸಿಸ್ ಅವರು ಉದ್ಯಮಿ ಖೂ ಕೇ ಪೆಂಗ್ ಮತ್ತು ಮಾಜಿ ಮಿಸ್ ಮಲೇಷ್ಯಾ ಪಾಲಿನ್ ಚಾಯ್ ಅವರಿಗೆ ಜನಿಸಿದರು. ಆಕ್ಸ್‌ಫರ್ಡ್‌ನಲ್ಲಿ ತಮ್ಮ ವಿಶ್ವವಿದ್ಯಾನಿಲಯ ವರ್ಷಗಳಲ್ಲಿ ತನ್ನ ಗೆಳೆಯ ಜೆಡಿಯಾ ಫ್ರಾನ್ಸಿಸ್‌ನ್ನು ಭೇಟಿಯಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದರು. ಏಂಜಲೀನ್ ಅವರ ತಂದೆ ಕೋರಸ್ ಹೋಟೆಲ್‌ನ ನಿರ್ದೇಶಕರು. ಅವರು ಮಲೇಷ್ಯಾದ 44 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Tap to resize

Latest Videos

ಸಿಗರೇಟ್ ಇಲ್ಲ ಅಂದ್ರೆ ವಧು ಇಲ್ಲ… ಚೀನಾದಲ್ಲಿ ಹಳೆ ಸಂಪ್ರದಾಯಕ್ಕೆ ಹೊಸ ಟಚ್

ಪ್ರೀತಿಗಾಗಿ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಬಂದ ಯುವತಿ
ಏಂಜೆಲಿನ್ ಫ್ರಾನ್ಸಿಸ್ ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ತಿಳಿಸಿದರು. ಆದರೆ ಹುಡುಗನ ಕುಟುಂಬ ಬಡ ಆರ್ಥಿಕ ಹಿನ್ನಲೆಯನ್ನು ಹೊಂದಿರುವ ಕಾರಣ ಏಂಜಲೀನ್ ಅವರ ತಂದೆ ಈ ಮದುವೆಗೆ ನಿರಾಕರಿಸಿದರು. ಏಂಜಲೀನ್ ತಂದೆ ಗೆಳೆಯ ಅಥವಾ ಅವಳ ಪಿತ್ರಾರ್ಜಿತ ನಡುವೆ ಆಯ್ಕೆ ಮಾಡಲು ಕೇಳಿಕೊಂಡರು. ಪ್ರೀತಿ ಮತ್ತು ಸಂಪತ್ತು ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಾಗ ಏಂಜೆಲಿನ್ ಖುಷಿಯಿಂದ ತನ್ನ ಪ್ರೀತಿಯನ್ನು ಆಯ್ಕೆ ಮಾಡಿಕೊಂಡಳು. 

ಮಲೇಷಿಯಾದ ಉತ್ತರಾಧಿಕಾರಿ ಏಂಜೆಲಿನ್ ಫ್ರಾನ್ಸಿಸ್ 2008ರಲ್ಲಿ ಜೆಡಿಯಾ ಫ್ರಾನ್ಸಿಸ್ ಅವರನ್ನು ವಿವಾಹವಾದರು. ಈ ಮೂಲಕ ಪ್ರೀತಿಯು ಎಲ್ಲವನ್ನೂ ಗೆಲ್ಲುತ್ತದೆ ಎಂದು ಸಾಬೀತುಪಡಿಸಿದರು. ಏಂಜಲೀನ್ ಐಷಾರಾಮಿ ಜೀವನವನ್ನು ನಿರಾಕರಿಸಿದರು. ಪ್ರೀತಿಗಾಗಿ ಹೀಗೆ ಜನರು ತಮ್ಮ ಆಸ್ತಿ, ಸಂಪತ್ತನ್ನು ತ್ಯಾಗ ಮಾಡಿರುವುದು ಇದೇ ಮೊದಲ ಬಾರಿಯಲ್ಲ. 2021ರಲ್ಲಿ, ಜಪಾನ್‌ನ ರಾಜಕುಮಾರಿ ಮಾಕೊ ಕೀ ಕೊಮುರೊವಾ ಸಾಮಾನ್ಯ ವ್ತಕ್ತಿಯನ್ನು ವಿವಾಹವಾದರು. ಈ ಸಂದರ್ಭದಲ್ಲಿ ಅವರು ರಾಜಕುಮಾರಿ ಪಟ್ಟವನ್ನು ತ್ಯಜಿಸುವುದರ ಜೊತೆಗೆ ಸಂಪೂರ್ಣ ಅರಮನೆಯನ್ನೇ ಬಿಟ್ಟು ಬಂದರು. 

ಪ್ರೀತಿಸಿದ ಗೆಳತಿಯನ್ನು ಮದುವೆಯಾಗಲು ಗಂಡಾಗಿ ಬದಲಾದ ಮಹಿಳೆ, ಅದ್ಧೂರಿ ವಿವಾಹಕ್ಕೆ ಸಿದ್ಧತೆ

click me!