ಮಹಿಳೆಯರನ್ನು ಹಿಂಬಾಲಿಸುವುದು, ದೂಷಣೆ ಮಾಡೋದು ಮಾನಭಂಗವಲ್ಲ: ಹೈಕೋರ್ಟ್‌

Published : Jan 03, 2024, 09:02 AM IST
ಮಹಿಳೆಯರನ್ನು ಹಿಂಬಾಲಿಸುವುದು, ದೂಷಣೆ ಮಾಡೋದು ಮಾನಭಂಗವಲ್ಲ: ಹೈಕೋರ್ಟ್‌

ಸಾರಾಂಶ

ಮಹಿಳೆಯರನ್ನು ಹಿಂಬಾಲಿಸುವುದನ್ನು ದೂಷಣೆ ಮಾಡೋದು ಮಾನಭಂಗವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮಾತ್ರವಲ್ಲ, ಕಿರಿಕಿರಿಗೂ, ಮಾನಭಂಗಕ್ಕೂ ವ್ಯತ್ಯಾಸವಿದೆ ಎಂದು ತಿಳಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ನಾಗಪುರ: ಮಹಿಳೆಯರನ್ನು ಹಿಂಬಾಲಿಸುವುದು, ನಿಂದಿಸುವುದು ಮತ್ತು ದಬ್ಬುವುದನ್ನು ಕಿರಿಕಿರಿ ಉಂಟು ಮಾಡುವ ಕೃತ್ಯಗಳು ಎಂದು ಪರಿಗಣಿಸಬಹುದೇ ಹೊರತು, ಇವು ಐಪಿಸಿ ಸೆಕ್ಷನ್‌ 354 ಅಡಿಯಲ್ಲಿ ಮಾನಭಂಗ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಹೇಳಿದೆ.

ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾ,ಅನಿಲ್‌ ಪನ್ಸಾರೆ ಅವರು ಈ ಆದೇಶ ಹೊರಡಿಸಿ, ಆರೋಪಿಯ ವಿರುದ್ಧದ ಪ್ರಕರಣ ರದ್ದುಗೊಳಿಸಿದರು. ಅರ್ಜಿದಾರ, ಮಹಿಳೆಯನ್ನು ಅನುಚಿತವಾಗಿ ಮುಟ್ಟಿಲ್ಲ. ಹಾಗೆಯೇ ಮಹಿಳೆಯ ಗೌರವಕ್ಕೆ ಧಕ್ಕೆಯಾಗುವ ರೀತಿ ಆರೋಪಿ ನಡೆದುಕೊಂಡಿದ್ದಾನೆ ಎಂಬುದನ್ನು ಸಾಬೀತು ಮಾಡಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಹೇಳಿದರು.

ಕೋರ್ಟ್‌ ಹಾಲ್‌ನಲ್ಲಿ ಕುಳಿತು ಮಹಿಳಾ ಜಡ್ಜ್‌ಗೆ ಗುರಾಯಿಸುತ್ತಿದ್ದ ವಕೀಲನಿಗೆ ನೋಟಿಸ್‌!

ಏನಿದು ಪ್ರಕರಣ?:
36 ವರ್ಷದ ಕಾರ್ಮಿಕನೊಬ್ಬ ತನ್ನನ್ನು ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ನಿಂದಿಸಿರುವುದಲ್ಲದೇ ಸೈಕಲ್ಲಿನಲ್ಲಿ ಬಂದು ನನ್ನನ್ನು ದೂಡಿ ಬೀಳಿಸಿದ್ದಾನೆ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳು 2016ರಲ್ಲಿ ದೂರಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ವರ್ಧಾ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆರೋಪಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು 2023ರ ಜುಲೈನಲ್ಲಿ ಸೆಷನ್ಸ್‌ ಕೊರ್ಟ್‌ ಎತ್ತಿಹಿಡಿದಿತ್ತು. ಬಳಿಕ ಕಾರ್ಮಿಕ ಹೈಕೋರ್ಟ್‌ ಮೆಟ್ಟಿಲೇರಿದ್ದ. ಅದು ಆತನನ್ನು ಆರೋಪದಿಂದ ಖುಲಾಸೆಗೊಳಿಸಿದೆ.

ಏಳು ವರ್ಷಗಳಿಂದ ಕ್ಲಾಸ್‌ಮೇಟ್‌ನ ನಿರಂತರ ಫಾಲೋ ಮಾಡಿ ಕಿರುಕುಳ : ಯುವಕನ ಬಂಧನ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?