ಬಾಲಿವುಡ್ ನಟಿ ನೀನಾ ಗುಪ್ತಾ ಬೋಲ್ಡ್ ಡ್ರೆಸ್ ಧರಿಸಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ ಅದೇ ರೀತಿ ನೀನಾ ಗುಪ್ತಾ ಇತ್ತೀಚೆಗೆ ನೀಲಿ ಡೆನಿಮ್ ಮಿನಿ ಚಡ್ಡಿ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಅನೇಕರು ತೀವ್ರ ಟೀಕೆ ವ್ಯಕ್ತಪಡಿಸಿ ಬಾಡಿ ಶೇಮಿಂಗ್ ಮಾಡಿದ್ದಾರೆ.
ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ಅವರು ತಮ್ಮ ನೇರವಂತಿಕೆಗೆ ಸುದ್ದಿಯಾದವರು. ಪ್ರೇಮ ಸಂಬಂಧ, ಮಹಿಳಾ ಸ್ವಾತಂತ್ರ್ಯ, ಮದುವೆಯ ಬಗ್ಗೆ ಯಾವುದೇ ಮುಚ್ಚು ಮರೆಯಿಲ್ಲದೇ ಮಾತನಾಡುವ ನೀನಾ ಗುಪ್ತಾ ಯುವ ಸಮೂಹಕ್ಕೆ ಸಂಬಂಧಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಲಹೆ ನೀಡುತ್ತಿರುತ್ತಾರೆ. ಇದರ ಜೊತೆಗೆ ನೀನಾ ಅವರು ತಮ್ಮ ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್‌ಗೂ ಫೇಮಸ್. ವಯಸ್ಸಾದ್ರೇನು ಸ್ಟೈಲ್ ಮಾಡ್ಬರ್ದು ಅಂತ ಯಾವ ರೂಲ್ಸ್ ಕೂಡ ಇಲ್ವಲ್ಲಾ, ಮೇಲಾಗಿ ನೀನಾ ಗುಪ್ತಾ ಒಬ್ಬರು ಹಿರಿಯ ನಟಿ ಸಿನಿಮಾ ಹೀಗಾಗಿ ನೀನಾ ಅವರು ತಮ್ಮಗಿಷ್ಟ ಬಂದಂತಹ ಡ್ರೆಸ್‌ಗಳನ್ನು ಧರಿಸಿ ಕಾಣಿಸಿಕೊಳ್ಳುವುದು ಸಾಮಾನ್ಯ.
ವಯಸ್ಸಿಗೆ ತಕ್ಕಂತೆ ಬಟ್ಟೆ ಧರಿಸಬೇಕು ಎಂಬ ನಿಯಮಗಳನ್ನು ಮೀರಿ ನೀನಾ ಗುಪ್ತಾ ಬೋಲ್ಡ್ ಡ್ರೆಸ್ ಧರಿಸಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ ಅದೇ ರೀತಿ ನೀನಾ ಗುಪ್ತಾ ಇತ್ತೀಚೆಗೆ ನೀಲಿ ಡೆನಿಮ್ ಮಿನಿ ಚಡ್ಡಿ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಪಪಾರಾಜಿಗಳು ಎಂದಿನಂತೆ ಈ ನಟಿಯ ವೀಡಿಯೋವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ನಟಿಯ ಈ ಡ್ರೆಸ್ಸಿಂಗ್ ಸ್ಟೈಲ್‌ನ್ನು ಅನೇಕರಿಗೆ ಸಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ನೀನಾ ಗುಪ್ತಾ ಅವರಿಗೆ ಕೆಟ್ಟ ಕಾಮೆಂಟ್ ಮೂಲಕ ಟ್ರೋಲ್ ಮಾಡಿದ್ದಲ್ಲದೇ ಬಾಡಿ ಶೇಮಿಂಗ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ನೆಟ್ಟಿಗರ ಕಾಮೆಂಟ್ ಏನು?
ಫೈನ್ ವೈನ್ ರೀತಿ ನೀನಾ ಗುಪ್ತಾ ಕಾಣಿಸುತ್ತಿದ್ದಾರೆ ಎಂದು ಪಾಪಾರಾಜಿ ಪೇಜ್ ಅವರ ವೀಡಿಯೋ ಹಂಚಿಕೊಂಡಿದ್ದರೆ ಇತ್ತ ಟ್ರೋಲರ್ಸ್, ಕೆಟ್ಟದಾಗಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಸಣ್ಣ ಬಟ್ಟೆಯನ್ನು ಧರಿಸಿದ ಕೂಡಲೇ ಯಾರು ಯಂಗ್ ಆಗಿ ಕಾಣಲು ಸಾಧ್ಯವಿಲ್ಲ, ಅವರು 65 ವಯಸ್ಸಿನವರಂತೆಯೇ ಕಾಣುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ವೃದ್ಧಾಪ್ಯದಲ್ಲಿ ಬಾಲ್ಯ ಎಂದು ಕರೆಯುತ್ತಾರೆ ಎಂದು ಮತ್ತೊಬ್ಬರು ಟ್ರೋಲ್ ಮಾಡಿದ್ದಾರೆ. ಈಗ ಆಕೆ 80ರ ವಯಸ್ಸಿನವರಂತೆ ಕಾಣ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರಿಗೆ ಆಕೆ ಯಂಗ್ ಆಗಿ ಕಾಣಿಸುತ್ತಾಳೋ ಅವರು ಕನ್ನಡಕ ಧರಿಸಬೇಕಾಗಿ ವಿನಂತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಿಮ್ಮ ವಯಸ್ಸಿಗೆ ತಕ್ಕಂತೆ ನೀವು ಸಲ್ವಾರ್ ಅಥವಾ ಸಾರಿ ಧರಿಸಿದ್ದರೆ ನಿಮಗೇನಾಗ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ನೀನಾ ಗುಪ್ತಾ ಅವರ ಬೆಂಬಲಕ್ಕೆ ನಿಂತಿದ್ದು, ಆಕೆಗೂ ಒಂದು ಬದುಕಿದೆ ಆಕೆಯನ್ನು ಬದುಕಲು ಬಿಡಿ ನೀವು ಬದುಕಿ ಎಂದು ಕಾಮೆಂಟ್ ಮಾಡಿದ್ದಾರೆ. ಅವರು ಗೌರವಯುತವಾಗಿ ಅವರ ಹಣದಲ್ಲಿ ಬದುಕುತ್ತಿದ್ದರೆ ಯಾರನ್ನೋ ಕೊಳ್ಳೆ ಹೊಡೆದು ಬದುಕುತ್ತಿಲ್ಲ, ಅವರ ಜೀವನ ಅವರಿಷ್ಟ ನಿಮಗೇನು ಚಿಂತೆ ಎಂದು ಮತ್ತೊಬ್ಬರು ಟ್ರೋಲಿಗರನ್ನು ಪ್ರಶ್ನೆ ಮಾಡಿದ್ದಾರೆ.
ದುಡ್ಡಿಗಾಗಿ ಎಲ್ಲವನ್ನೂ ಮಾಡಿಬಿಟ್ಟೆ, ದೇವ್ರೇ ಈ ಚಿತ್ರ ರಿಲೀಸ್ ಆಗದೇ ಇರ್ಲಿಯಂತ ಬೇಡಿಕೊಳ್ತಿದ್ದೆ- ನೀನಾ ಗುಪ್ತಾ
ನೀನಾ ಗುಪ್ತಾ ಅವರು ಬಾಲಿವುಡ್‌ನಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಂತಹ ನಟಿ, ಮಡಿವಂತಿಕೆ ಮೈಗಂಟ್ಟಿದ್ದ ಕಾಲದಲ್ಲೇ ಆನ್‌ಸ್ಕೀನ್ ಮೇಲೆ ಫಸ್ಟ್ ಟೈಂ ಕಿಸ್ ಮಾಡುವ ಮೂಲಕ ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದವರು. 1990ರ ದಶಕದ ಆರಂಭದಲ್ಲಿ 'ದಿಲ್ಲಗಿ' ಎಂಬ ಶೋಗೆ ತಾನು ಮೊದಲ ಬಾರಿ ಆನ್‌ಸ್ಕ್ರೀನ್ ಕಿಸ್ಸಿಂಗ್ ದೃಶ್ಯದಲ್ಲಿ ಭಾಗವಹಿಸಬೇಕಾಗಿ ಬಂತು ಎಂದು ನೀನಾ ಅವರು ಹೇಳಿಕೊಂಡಿದ್ದಾರೆ. ನೀನಾ ಗುಪ್ತಾ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ನೀನಾ ಅವರು ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಅವರನ್ನು ಮೊದಲಿಗೆ ಮದುವೆಯಾದವರು. ಇದಾದ ನಂತರ ಪುತ್ರಿ ಮಸಾಬಾ ಗುಪ್ತಾ ಜನಿಸಿದರು. ಆದರೆ ಬಹಳ ದಿನಗಳ ಕಾಲ ಅವರು ಒಟ್ಟಿಗೆ ಇರಲಿಲ್ಲ. ಇದಾದ ನಂತರ 2008ರಲ್ಲಿ ನೀನಾ ಗುಪ್ತಾ ಅವರ ಜೀವನದಲ್ಲಿ ಮತ್ತೊಮ್ಮೆ ಪ್ರೀತಿ ಆರಳಿತು. ಅವರು ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಜೊತೆ ವೈವಾಹಿಕ ಜೀವನವನ್ನು ಪ್ರಾರಂಭಿಸಿದರು.
ಫಸ್ಟ್ ಕಿಸ್ ಶೂಟ್ ಬಳಿಕ ಡೆಟಲ್ ಹಾಕಿ ಬಾಯ್ ತೊಳೆದೆ: ನಟಿ ನೀನಾ ಗುಪ್ತಾ