ಉದ್ಯಮಿ ಮುಕೇಶ್ ಅಂಬಾನಿ ಮಡದಿ ನೀತಾ ಅಂಬಾನಿ ಧರಿಸುವ ಆಭರಣಗಳು ಕೋಟಿ ಕೋಟಿ ಬೆಲೆಯನ್ನು ಹೊಂದಿರುತ್ತವೆ. ಆದ್ರೆ ಇದೇ ಮೊದಲ ಬಾರಿ ನೀತಾ ಅಂಬಾನಿ ಹಳೆ ನೆಕ್ಲೇಸ್ ಧರಿಸಿದ್ದಾರೆ.
ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಮುಗಿದು ತಿಂಗಳು ಕಳೆದರೂ ವಿವಾಹದ ವಿಶೇಷತೆಗಳು ಸುದ್ದಿಯಲ್ಲಿವೆ. ಮಾರ್ಚ್‌ನಿಂದಲೇ ಮದುವೆ ಸಮಾರಂಭಗಳು ಅಂಬಾನಿ ಕುಟುಂಬದಲ್ಲಿ ಶುರುವಾಗಿದ್ದವು. ಮೂರು ತಿಂಗಳು ನಡೆದ ಮದುವೆಯಲ್ಲಿ ನೀತಾ ಅಂಬಾನಿಯವರ ಲುಕ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ವಯಸ್ಸು 60 ಆದರೂ ನೀತಾ ಅಂಬಾನಿ 30ರ ಯುವತಿಯಂತೆ ಕಂಗೊಳಿಸುತ್ತಿದ್ದರು. ನೀತಾ ಅಂಬಾನಿ ಒಮ್ಮೆ ಧರಿಸಿದ್ದ ಬಟ್ಟೆ, ಆಭರಣಗಳನ್ನು ರಿಪೀಟ್ ಮಾಡಲ್ಲ ಎಂಬ ಮಾತಿದೆ. ಆದರೆ ಮಗನ ಮದುವೆಯಲ್ಲಿ ಧರಿಸಿದ್ದ ಕುಂದನ್ ನೆಕ್ಲೇಸ್ ಅದು ಎರಡನೇ ಬಾರಿ ಧರಿಸಿದ್ದು ಎಂದು ವರದಿಯಗಿದೆ. ಜುಲೈ 10ರಂದು ನಡೆದ ಶಿವಶಕ್ತಿ ಪೂಜೆಯಂದು ನೀತಾ ಅಂಬಾನಿ ಧರಿಸಿದ್ದ ಆ ಕುಂದನ್ ನೆಕ್ಲಸ್ ರಿಪೀಟ್ ಮಾಡಿದ್ದರು.
ಸಮಾರಂಭ ಬಂದ್ರೆ ನೀತಾ ಅಂಬಾನಿ ಧರಿಸುವ ಆಭರಣಗಳು ಮೇಲೆಯೇ ಎಲ್ಲರ ಕಣ್ಣು ಇರುತ್ತದೆ. ನೀತಾ ಅಂಬಾನಿ ಧರಿಸಿದ್ದ ಆ ನೆಕ್ಲೇಸ್ ಯಾವುದು? ಅದರಲ್ಲಿರುವ ವಿಶೇಷತೆ ಏನು? ಬೆಲೆ ಎಷ್ಟು ಎಂಬುದರ ಬಗ್ಗೆ ಗೂಗಲ್‌ನಲ್ಲಿ ಹುಡುಕುತ್ತಿರುತ್ತಾರೆ. ಶಿವಶಕ್ತಿ ಪೂಜೆಯಂದು ಅಬು ಜಾನಿ ಸಂದೀಪ್ ಕೊಸ್ಲಾ ವಿನ್ಯಾಸದ ಕಸೂತಿಯುಳ್ಳ ಸೀರೆಯನ್ನು ಧರಿಸಿದ್ದರು. ನೀಲಿ ಬಣ್ಣದ ಸೀರೆ ಮೇಲೆ ನವಿಲು ಚಿತ್ರವನ್ನು ಕಸೂತಿ ಮಾಡಲಾಗಿತ್ತು. ಹಾಗೆಯೇ ಗೋಲ್ಡನ್ ಬಣ್ಣದ ವಿಶೇಷ ಮುತ್ತುಗಳಿಂದ ತಯಾರಿಸಿದ ಬ್ಲೌಸ್ ಧರಿಸಿದ್ದರು. ನಾಲ್ಕು ಬಳೆ, ಉದ್ದದ ಕುಂದನ್ ಸರ ಮತ್ತು ಅದಕ್ಕೆ ಮ್ಯಾಚ್ ಆಗುವಂತಹ ಕಿವಿಯೊಲೆ ಧರಿಸಿದ್ದ ಸಿಂಪಲ್ ಲುಕ್‌ನಲ್ಲಿ ತುಂಬಾ ರಿಚ್ ಆಗಿ ಕಾಣಿಸುತ್ತಿದ್ದರು.
undefined
ಜುಲೈ 10ರಂದು ಅಂಬಾನಿ ನಿವಾಸದಲ್ಲಿ ನಡೆದ ಶಿವಶಕ್ತಿ ಪೂಜೆಯಲ್ಲಿ ನೀತಾ ಅಂಬಾನಿ ಧರಿಸಿದ್ದ ಆಭರಣಗಳು ರಿಪೀಟ್ ಆಗಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮಗಳು ಇಶಾ ಅಂಬಾನಿ ಮದುವೆಯಲ್ಲಿ ನೀತಾ ಅಂಬಾನಿ ಇದೇ ಕುಂದನ್ ಹಾರ್ ಧರಿಸಿದ್ದರು. ಅದೇ ಆಭರಣವನ್ನು ಮಗನ ಮದುವೆಯಲ್ಲಿ ಧರಿಸಿದ್ದರು. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೈಸೂರು ಕೆಫೆ ಓನರ್ ಗುರುತಿಸಿ ರಾಧಿಕಾಳನ್ನು ಕರೆದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ ಅಂಬಾನಿ!
ಗುಜರಾತಿನ ಜಾಮ್ ನಗರದಲ್ಲಿ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆಯ ಕಾರ್ಯಕ್ರಮಗಳು ನಡೆದಿದ್ದವು. ಪಾಪ್ ಸಿಂಗರ್, ಫೇಸ್‌ಬುಕ್ ಸ್ಫಾಪಕ ಸೇರಿದಂತೆ ದೇಶ ವಿದೇಶದ ಗಣ್ಯರು ಭಾಗಿಯಾಗಿದ್ದರು. ನಂತರ ಮುಂಬೈನ ನಿವಾಸದಲ್ಲಿ ಮದುವೆ ಶಾಸ್ತ್ರಗಳು ನಡೆದಿದ್ದವು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಸ್ವರ್ಗವೇ ಧರೆಗಿಳಿದ ರೀತಿಯಲ್ಲಿ ನಡೆದಿದ್ದ ವಿವಾಹದಲ್ಲಿ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್‌ಗಳ ಮರುಸೃಷ್ಟಿಸಲಾಗಿತ್ತು .
ಹಿಂದೂ ಧರ್ಮ, ಸನಾತನ ಪದ್ಧತಿ ಮೇಲೆ ಅಪಾರ ಶ್ರದ್ಧೆಯುಳ್ಳ ಅಂಬಾನಿ ಕುಟುಂಬ ಇದೇ ಕಾರಣಕ್ಕೆ ಕಾಶಿ ಪರಿಕಲ್ಪನೆಯಲ್ಲಿ ಮಂಟಪವನ್ನು ಸಿದ್ಧಪಡಿಸಿತ್ತು. ರಿಲಯನ್ಸ್ ದಿಗ್ಗಜನ ಮದುವೆ ಕಾರ್ಯಕ್ರಮಕ್ಕೆ ಭಾಗವಹಿಸುವ ಜಾಗತಿಕ ಗಣ್ಯರಿಗೆ ಭಾರತೀಯ ಸಂಸ್ಕೃತಿಯ ಪರಿಚಯಿಸುವ ಉದ್ದೇಶದಿಂದ ಪಕ್ಕಾ ಭಾರತೀಯ ಸಂಪ್ರದಾಯದಂತೆ ಮದುವೆ ನಡೆದಿತ್ತು. ಅತಿಥಿಗಳ ಡ್ರೆಸ್ ಕೋಡ್‌ನಿಂದ ಹಿಡಿದು, ಮಂಟಪದ ವಿನ್ಯಾಸ, ಅಲಂಕಾರಕ್ಕೆ ಬಳಸಿರುವ ಹೂವುಗಳು ಕೂಡ ದೇಶದ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿತ್ತುಅಲ್ಲದೇ ದೇಶದ ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನು ಗಣ್ಯರಿಗೆ ಉಣಬಡಿಸಲಾಗಿತ್ತು. ಭಜನೆಯಿಂದ ಹಿಡಿದು ಬಾಲಿವುಡ್ ಹಾಡಿನವರೆಗೆ ಗಾಯಕರಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಗಣ್ಯರಿಗೆ ಮನರಂಜನೆ ನೀಡಲಾಯಿತು.
ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!