Mukesh Ambani Sister : ಬ್ಲಡ್ ನಲ್ಲೇ ಇದೆ ಬ್ಯುಸಿನೆಸ್ - ಮುಖೇಶ್ ಅಂಬಾನಿ ಸಹೋದರಿ ನೀನಾ ಕೊಠಾರಿ ಯಾರಿಗೂ ಕಮ್ಮಿ ಇಲ್ಲ

By Roopa Hegde  |  First Published Aug 20, 2024, 2:35 PM IST

ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಸಹೋದರಿ ನೀನಾ ಕೊಠಾರಿ ಯಾರಿಗಿಂತ ಕಮ್ಮಿ ಇಲ್ಲ. ಬ್ಯುಸಿನೆಸ್ ನಲ್ಲಿ ಅವರು ಸಾಕಷ್ಟು ಪಳಗಿದ್ದಾರೆ. ಮೂರ್ನಾಲ್ಕು ಕಂಪನಿ ಮುನ್ನಡೆಸುತ್ತಿರುವ ಅವರ ಸಾಧನೆ ಕಡಿಮೆ ಏನಿಲ್ಲ. 
 


ಎಂಟರ್ಟೈನ್ ಮೆಂಟ್ (Entertainment ) ಕ್ಷೇತ್ರ ಬಿಟ್ಟು ಬ್ಯುಸಿನೆಸ್ (Business) ಕ್ಷೇತ್ರದಲ್ಲೂ ಕೆಲವರು ಸದಾ ಸುದ್ದಿಯಲ್ಲಿರ್ತಾರೆ. ಅದ್ರಲ್ಲಿ ಮುಖೇಶ್ ಅಂಬಾನಿ (Mukesh Ambani) ಕುಟುಂಬ ಕೂಡ ಸೇರಿದೆ. ಮುಖೇಶ್ ಅಂಬಾನಿ, ನೀತಾ ಅಂಬಾನಿ ಸೇರಿದಂತೆ ಅವರ ಮಕ್ಕಳು, ಕುಟುಂಬಸ್ಥರು ಒಂದಲ್ಲ ಒಂದು ವಿಷ್ಯಕ್ಕೆ ಚರ್ಚೆಯಲ್ಲಿರ್ತಾರೆ. ಅವರ ವೃತ್ತಿಯೊಂದೇ ಅಲ್ಲ, ಸಂಸಾರ, ಫ್ಯಾಷನ್, ಲೈಫ್ಸ್ಟೈಲ್ ಸೇರಿದಂತೆ ಅವರು ಏನು ಮಾಡಿದ್ರೂ ಅದು ಜನರ ಗಮನ ಸೆಳೆಯುತ್ತದೆ. ಮುಕೇಶ್ ಅಂಬಾನಿ ಕುಟುಂಬ ದೊಡ್ಡ ಹೂಡಿಕೆ ಮಾಡಿರಲಿ ಇಲ್ಲ ಗಣೇಶ ಚೌತಿ ಮಾಡ್ಲಿ ಅದನ್ನು ಜನರು ತಿಳಿದಿಕೊಳ್ಳಲು ಬಯಸ್ತಾರೆ. ಮುಖೇಶ್ ಅಂಬಾನಿ ಕುಟುಂಬದ ಬಗ್ಗೆ ಎಷ್ಟೇ ಜ್ಞಾನವಿದ್ರೂ ಕೆಲವರಿಗೆ ಮುಖೇಶ್ ಅಂಬಾನಿ ಸಹೋದರಿಯರ ಬಗ್ಗೆ ಹೆಚ್ಚು ನಾಲೆಡ್ಜ್ ಇಲ್ಲ. 

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರಿಗೆ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಅವರ ಸಹೋದರಿಯರ ಹೆಸರು ನೀನಾ ಕೊಠಾರಿ ಮತ್ತು ದೀಪ್ತಿ ಸಲ್ಗಾಂವ್ಕರ್. ಇದ್ರಲ್ಲಿ ನೀನಾ ಕೊಠಾರಿ ಬ್ಯುಸಿನೆಸ್ ವುಮೆನ್. ಅವರು ಗಮನಾರ್ಹವಾದ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ವಿಶೇಷವಾಗಿ ಕೊಠಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ ಸುಮಾರು 333 ಕೋಟಿ ರೂಪಾಯಿ ಇದೆ. 

Tap to resize

Latest Videos

undefined

ನಿಮ್ಮ ಅಮ್ಮ ಅಜ್ಜಿಗೆ ಗಿಫ್ಟ್ ಮಾಡಿ ಸುಧಾಮೂರ್ತಿ ಸ್ಟೈಲ್ ಸೀರೆ

ನೀನಾ ಕೊಠಾರಿ ಯಾರು ? : ನೀನಾ ಕೊಠರಿ, ಧೀರೂಭಾಯಿ ಮತ್ತು ಕೋಕಿಲಾಬೆನ್ ಅಂಬಾನಿಯವರ ಹಿರಿಯ ಮಗಳು. 1986 ರಲ್ಲಿ, ನೀನಾ, ಉದ್ಯಮಿ ಭದ್ರಶ್ಯಾಮ್ ಕೊಠಾರಿ ಅವರನ್ನು ವಿವಾಹವಾದರು. ಆದರೆ  2015ರಲ್ಲಿ ಕ್ಯಾನ್ಸರ್‌ನಿಂದಾಗಿ ಭದ್ರಶ್ಯಾಮ್ ಅಕಾಲಿಕ ಮರಣವನ್ನಪ್ಪಿದ ಕಾರಣ, ನೀನಾ ಕೊಠಾರಿ ಬ್ಯುಸಿನೆಸ್ ಗೆ ಧುಮುಕಿದ್ರು.  ಅವರು ಕೊಠಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ವ್ಯವಹಾರವನ್ನು ವಹಿಸಿಕೊಂಡರು. ಕಾರ್ಪೊರೇಟ್ ಜಗತ್ತಿನ ಎಲ್ಲಾ ಸವಾಲುಗಳನ್ನು ಅವರು ಎದುರಿಸಿದರು. ಕಂಪನಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ರು. ಕಂಪನಿಯನ್ನು ಚೆನ್ನಾಗಿ ಬೆಳೆಸಿ ಹೊಸ ಎತ್ತರಕ್ಕೆ ಕೊಂಡೊಯ್ದರು. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ ಸುಮಾರು 333 ಕೋಟಿ ರೂಪಾಯಿಗೆ ಬಂದು ನಿಲ್ಲಲು ಅವರು ಕಾರಣವಾಗಿದ್ದಾರೆ. 

ನೀನಾ ಕೊಠಾರಿ ಅವರು ತಮ್ಮ ಉದ್ಯಮಶೀಲ ಕೌಶಲ್ಯವನ್ನು ತೋರಿಸಿದ್ದು ಇದೇ ಮೊದಲಲ್ಲ. 2003 ರಲ್ಲಿ, ನೀನಾ ಕೊಠಾರಿ, ಜಾವಗ್ರೀನ್ ಕಂಪನಿ ಶುರು ಮಾಡಿದ್ದರು. ಇದು ಉಪಹಾರಗಳು, ಸ್ಯಾಂಡ್‌ವಿಚ್‌ ಜೊತೆ ಕಾಫಿ ಸರಣಿಯನ್ನು ಇದು ಹೊಂದಿತ್ತು. ಆದ್ರೆ ಇದನ್ನು ಮುಂದುವರೆಸಲು ನೀನಾಗೆ ಸಾಧ್ಯವಾಗ್ಲಿಲ್ಲ. ಈಗ ಕೆಲ ವರ್ಷಗಳಿಂದ ನೀನಾ ಹೆಗಲಿಗೆ ಕೊಠಾರಿ ಪೆಟ್ರೋಕೆಮಿಕಲ್ಸ್ ಮತ್ತು ಕೊಠಾರಿ ಸೇಫ್ ಡೆಪಾಸಿಟ್ಸ್ ಲಿಮಿಟೆಡ್ ಜವಾಬ್ದಾರಿ ಬಿದ್ದಿದೆ. ನೀನಾ ಕೊಠಾರಿ ಅವರ ನಿವ್ವಳ ಮೌಲ್ಯ ಸುಮಾರು 52.4 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ನೀನಾ ಕೊಠಾರಿ ಬ್ಯುಸಿನೆಸ್ ನಲ್ಲಿ ಮಗ ಅರ್ಜುನ್ ಕೊಠಾರಿ ಕೈಜೋಡಿಸಿದ್ದಾರೆ. ಅವರು ಕಂಪನಿ ಎಂಡಿಯಾಗಿದ್ದು, ಅಚ್ಚುಕಟ್ಟಾಗಿ ತಮ್ಮ ಕೆಲಸ ನಿಭಾಯಿಸುತ್ತಿದ್ದಾರೆ. 

ಮುಖೇಶ್ ಅಂಬಾನಿ ಸಹೋದರಿ ನೀನಾ ಕೊಠಾರಿ, ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ನೀತಾ ಕೊಠಾರಿ ತಮ್ಮ ವ್ಯವಹಾರದ ಜೊತೆ ಸಂಸಾರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ನೀನಾ ಕೊಠಾರಿ ಲೈಮ್‌ಲೈಟ್‌ನಲ್ಲಿರಲು ಇಷ್ಟಪಡುವುದಿಲ್ಲ. ಅವರು ಪ್ಯಾಪ್ಸ್ ಕ್ಯಾಮೆರಾಗಳಲ್ಲಿ ಬಹಳ ವಿರಳವಾಗಿ ಸೆರೆಹಿಡಿಯಲ್ಪಟ್ಟಿದ್ದಾರೆ. 

ಅನಂತ್ ಅಂಬಾನಿ ಮದ್ವೇಲಿ ಸಿಕ್ಕಿತ್ತು ಸೂಚನೆ, ರಕ್ಷಾಬಂಧನಕ್ಕೆ ಇಶಾ ಭರ್ಜರಿ ಡೀಲ್!

ನೀನಾ ಕೊಠಾರಿ ತನ್ನ ಸಹೋದರರಿಬ್ಬರಿಗೂ ತುಂಬಾ ಆತ್ಮೀಯರು. ನೀನಾ ಅವರ ಸಹೋದರ ಮುಖೇಶ್ ಅಂಬಾನಿ ಅವರು ತಮ್ಮ ಮನೆಯಲ್ಲಿ ನೀನಾ ಪುತ್ರಿ ನಯನತಾರಾ ಅವರ ವಿವಾಹ ಪೂರ್ವ ಪಾರ್ಟಿಯನ್ನು ಆಯೋಜಿಸಿದ್ದರು. ಸಮಾರಂಭದಲ್ಲಿ ಪಾಲ್ಗೊಳ್ಳಲು ತನ್ನ ಎಲ್ಲಾ ಬಾಲಿವುಡ್ ಸೆಲೆಬ್ರಿಟಿ ಸ್ನೇಹಿತರನ್ನು ಆಹ್ವಾನಿಸಿದ್ದರು. 

click me!