ಏಶ್ಯಾ ಪೆಸಿಫಿಕ್ ಸಂಸ್ಥೆಗಳಿಗೆ ಸೈಬರ್ ಭದ್ರತೆ, ಐಬಿಎಂನಿಂದ ನೂತನ ಸೈಬರ್ ಸೆಕ್ಯುರಿಟಿ ಹಬ್

By Suvarna News  |  First Published Feb 23, 2022, 8:31 PM IST

* ಭಾರತದಲ್ಲಿರುವ ಐಬಿಎಂ ಸೆಕ್ಯುರಿಟಿ ಕಮಾಂಡ್ ಸೆಂಟರ್, ಎಪಿಎಸಿಗಳಾದ್ಯಂತ ಸಂಸ್ಥೆಗಳಿಗಾಗಿ ಭದ್ರತಾ ಘಟನೆ ಪ್ರತಿಕ್ರಿಯೆ ಮತ್ತು ತರಬೇತಿಯಲ್ಲಿ ಮಹತ್ತರವಾದ ಹೂಡಿಕೆಯನ್ನು ಪ್ರತಿನಿಧಿಸುತ್ತದೆ
• ಐಬಿಎಂ ಸೆಕ್ಯುರಿಟಿ ಎಕ್ಸ್-ಫೋರ್ಸ್(X-Force) ಥ್ರೆಟ್ ಇಂಟೆಲಿಜೆನ್ಸ್ ಸೂಚ್ಯಂಕದ ಪ್ರಕಾರ, 2021ರಲ್ಲಿ ಸೈಬರ್ ಧಾಳಿಗಳಿಗೆ ಏಶ್ಯ #1 ಅತ್ಯಂತ-ಗುರಿಯಿರಿಸಲಾದ ಪ್ರದೇಶವಾಗಿತ್ತು. 
• ಜಗತ್ತಿನಾದ್ಯಂತ ಇರುವ ಗ್ರಾಹಕರು ಸೈಬರ್ ಧಾಳಿಗಳಿಗೆ ಪ್ರತಿಕ್ರಿಯಿಸುವುದಕ್ಕೆ ನೆರವಾಗಲು, ಹೊಸ ಸೆಕ್ಯುರಿಟಿ ಆಪರೇಶನ್ಸ್ ಸೆಂಟರ್(ಸಿಒಸಿ) 
 


ಬೆಂಗಳೂರು(ಫೆ.23): ಐಬಿಎಂ (NYSE: IBM), ಏಶ್ಯಾ ಪೆಸಿಫಿಕ್ (ಎಪಿಎಸಿ)ಪ್ರದೇಶದಾದ್ಯಂತ ಸಂಸ್ಥೆಗಳಿಗೆ ಸೈಬರ್ ಧಾಳಿಗಳ ಬೆಳೆಯುತ್ತಿರುವ ಬೆದರಿಕೆಯನ್ನು ನಿರ್ವಹಿಸಲು ಮತ್ತು ವ್ಯಾಪಾರಸಂಸ್ಥೆಗಳು ಅದಕ್ಕೆ ಸಿದ್ಧವಾಗಿರುವುದಕ್ಕೆ ನೆರವಾಗಲು ತನ್ನ ಸಂಪನ್ಮೂಲಗಳಲ್ಲಿ ಬಹುಕೋಟಿ ಡಾಲರ್ ಹೂಡಿಕೆಯನ್ನು ಇಂದು ಘೋಷಿಸಿತು. ಐಬಿಎಂ ಸೆಕ್ಯುರಿಟಿ ಕಮಾಂಡ್ ಸೆಂಟರ್, ಈ ಹೂಡಿಕೆಯ ಕೇಂದ್ರಭಾಗವಾಗಿದ್ದು, ಇದು ಈ ಪ್ರದೇಶದಲ್ಲೇ ತನ್ನ ವಿಧದಲ್ಲಿ ಮೊಟ್ಟಮೊದಲನೆಯ ಹೂಡಿಕೆಯಾಗಿದೆ. ಅತ್ಯಂತ ವಾಸ್ತವಿಕವಾದ, ಪ್ರಚೋದಿತ ಸೈಬರ್ ಧಾಳಿಗಳ ಮೂಲಕ ಸೈಬರ್ ಭದ್ರತಾ ತಂತ್ರಗಳ ತರಬೇತಿ ನೀಡುವ ಇದು, ತಾಂತ್ರಿಕ  ಸಿಬ್ಬಂದಿಯ ಮೂಲಕ ಸಿ-ಸ್ವೀಟ್‍ನಲ್ಲಿ ಪ್ರತಿಯೊಬ್ಬರನ್ನೂ ತಯಾರುಗೊಳಿಸುವಂತಹ ವಿನ್ಯಾಸ ಹೊಂದಿದೆ. ಹೂಡಿಕೆಯು, ಪ್ರಸ್ತುತದ ಜಾಗತಿಕ ಎಸ್‍ಒಸಿಗಳ ಐಬಿಎಂನ ವಿಶಾಲ ಕಾರ್ಯಜಾಲದ ಭಾಗವಾಗಿರುವ ಹೊಸ ಭದ್ರತಾಕಾರ್ಯಾಚರಣೆಗಳ ಕೇಂದ್ರ(ಸೆಕ್ಯುರಿಟಿ ಆಪರೇಶನ್ಸ್ ಸೆಂಟರ್(ಎಸ್‍ಒಸಿ)ವನ್ನೂ ಒಳಗೊಂಡಿದ್ದು, ವಿಶ್ವದೆಲ್ಲೆಡೆ ಇರುವ ಗ್ರಾಹಕರಿಗೆ 24X7 ಭದ್ರತಾ  ಪ್ರತಿಕ್ರಿಯಾ ಸೇವೆಗಳನ್ನು ಒದಗಿಸಲಿದೆ. 

ಇಂದು ಬಿಡುಗಡೆಯಾದ ಐಬಿಎಂ ಜಾಗತಿಕ ವಿಶ್ಲೇಷಣೆಯ ಪ್ರಕಾರ, ಸೈಬರ್ ಧಾಳಿಗಳಿಗೆ ಏಶ್ಯಾ ಈಗ #1 ಅತ್ಯಂತ-ಗುರಿಯಿರಿಸಲಾದ ಪ್ರದೇಶವಾಗಿದ್ದು, 2021ರಲ್ಲಿ ವಿಶ್ಲೇಷಿಸಲಾದ ಧಾಳಿಗಳ ಪೈಕಿ 26%ಅನ್ನು ಪ್ರತಿನಿಧಿಸುತ್ತದೆ. ವರದಿಯ ಹಿಂದಿನ ದಶಕಕ್ಕೆ ಹೋಲಿಸಿದರೆ, ಮಾಹಿತಿಯು, ಮಹತ್ತರವಾದ ಪ್ರಾದೇಶಿಕ ಮಾರ್ಪಾಡನ್ನು ತೋರಿಸುತ್ತದೆ. ಆಗ, ಉತ್ತರ ಅಮೆರಿಕಾ ಮತ್ತು ಯೂರೋಪ್‍ಗಳು ಐತಿಹಾಸಿಕವಾಗಿ ಅತ್ಯಂತ-ಗುರಿಯಿರಿಸಲಾದ ಪ್ರದೇಶಗಳಾಗಿ ಶ್ರೇಯಾಂಕ ಪಡೆದಿದ್ದವು. ಈ ಪ್ರವೃತ್ತಿಯು, ಏಶ್ಯಾದ ಸಂಸ್ಥೆಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ, ಈ ಪ್ರದೇಶದಲ್ಲಿ ಅತ್ಯಂತವಾಗಿ ಗುರಿಯಿರಿಸಲಾದ ಉದ್ದಿಮೆಗಳಾಗಿರುವ ಹಣಕಾಸು ಸೇವೆಗಳು ಮತ್ತು ಉತ್ಪಾದನೆಯಲ್ಲಿ ಭದ್ರತಾ ಹೂಡಿಕೆಗಳ ಬೆಳೆಯುತ್ತಿರುವ ಅಗತ್ಯವನ್ನು ಸೂಚಿಸುತ್ತದೆ. ಹೊಸ ಐಬಿಎಂ ಸೆಕ್ಯುರಿಟಿ ಕೇಂದ್ರವು ಎಲ್ಲಾ ರೀತಿಯ ಸಂಸ್ಥೆಗಳಿಗೆ ಈ ಕ್ಷಣ ಅಗತ್ಯವಿರುವ ಅತ್ಯಂತ ಅವಶ್ಯಕ ಅಗತ್ಯಗಳನ್ನು ಪೂರೈಸಲು, ಅವುಗಳ ಭದ್ರತಾ ತಂತ್ರಗಳನ್ನು(ಯೋಜನೆಗಳನ್ನು) ವರ್ಧಿಸಲು, ಮತ್ತು ಭದ್ರತೆ-ಮೊದಲು ದೃಷ್ಟಿಕೋನದೊಂದಿಗೆ ವ್ಯಾಪಾರ ಆದ್ಯತೆಗಳನ್ನು ಹೊಂದಿಸಿಕೊಳ್ಳಲು ನೆರವಾಗುತ್ತದೆ.

Latest Videos

undefined

ಭಾರತದ  ಬೆಂಗಳೂರಿನ ಎಂಬೆಸಿ  ಗಾಲ್ಫ್ ಲಿಂಕ್ಸ್‍ನಲ್ಲಿ ಸ್ಥಾಪಿತವಾಗಿರುವ ಹೊಸ ಘಟಕಗಳು, ಈ ಪ್ರದೇಶದಲ್ಲಿ ಐಬಿಎಂ ಸೈಬರ್ ಭದ್ರತಾ ಚಟುವಟಿಕೆಗಳ ಪ್ರಧಾನ ಕೇಂದ್ರವನ್ನು ಪ್ರತಿನಿಧಿಸುತ್ತವೆ ಮತ್ತು ಇವು, ಆವಿಷ್ಕಾರವನ್ನು ತ್ವರೆಗೊಳಿಸಲು ಮತ್ತು  ಗ್ರಾಹಕರಿಗಾಗಿ ಅರ್ಥಪೂರ್ಣ, ದೀರ್ಘಕಾಲ ಇರುವಂತಹ ಪರಿವರ್ತನೆಯನ್ನು ಮುನ್ನಡೆಸುವುದಕ್ಕಾಗಿ ವಿನ್ಯಾಸಗೊಂಡ ಸಂಘಟಿತ  ದೃಷ್ಟಿಕೋನವಾದ ಐಬಿಎಮ್ ಮ್ಯಾನೇಜ್ಡ್ ಸೆಕ್ಯುರಿಟಿ ಸರ್ವಿಸಸ್ (ಐಬಿಎಂ ನಿರ್ವಹಿತ ಭದ್ರತಾ ಸೇವೆಗಳು), ಘಟನೆ ಪ್ರತಿಕ್ರಿಯೆತಜ್ಞರ ಐಬಿಎಮ್ ತಂಡಕ್ಕೆ ಪ್ರವೇಶಾವಕಾಶ, ಹಾಗೂ ಐಬಿಎಂ ಸಮಾಲೋಚನೆ, ಐಬಿಎಂ ಸಂಶೋಧನೆ, ಐಬಿಎಂ ಇಂಡಿಯಾ ಸಾಫ್ಟ್‍ವೇರ್ ಲ್ಯಾಬ್ಸ್, ಮತ್ತು ಐಬಿಎಂ ಗ್ಯಾರೇಜ್ ಮುಂತಾದವನ್ನು ಒಳಗೊಂಡಿದೆ. 

ಹೊಸ  ಘಟಕಗಳನ್ನು, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನದ ಸನ್ಮಾನ್ಯ ರಾಜ್ಯದ ಕೇಂದ್ರ ಸಚಿವ, ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಕೇಂದ್ರ ಸಚಿವರಾದ ಶ್ರಿ ರಾಜೀವ್  ಚಂದ್ರಶೇಖರ್ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.  

Job Scam Bengaluru: IBM ನೌಕರಿ ಹೆಸರಲ್ಲಿ 45 ಮಂದಿಗೆ ಧೋಖಾ!

ವರ್ಚುವಲ್ ಆರಂಭದ ಸಂದರ್ಭದಲ್ಲಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸನ್ಮಾನ್ಯ ರಾಜ್ಯ ಸಚಿವರು ಹಾಗೂ ಕೌಶಲ್ಯಾಭಿವೃದ್ಧಿ ಹಾಗೂ ಔದ್ಯಮಿಕತೆ ಇಲಾಖೆಯ ಕೇಂದ್ರ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್, ವಿಶ್ವದಲ್ಲಿ ಅತ್ಯಂತ ನಿಕಟ ಪ್ರಜಾಪ್ರಭುತ್ವವಿರುವ ಅತಿ ದೊಡ್ಡ ದೇಶವಾಗಿ ಭಾರತ ಹೊರಹೊಮ್ಮುತ್ತಿರುವ ಸಮಯದಲ್ಲಿ, ಸೈಬರ್ ಸ್ಪೇಸ್ ಎನ್ನುವುದು ಕೇವಲ ವಿನೂತನತೆ, ಬೆಳವಣಿಗೆ ಮತ್ತು ಅವಕಾಶಗಳಿರುವ ಸ್ಥಳವಾಗಿ ಮಾತ್ರ ಇರುವುದಲ್ಲದೆ, ಸೈಬರ್ ಸ್ಪೇಸ್ ಉಗಮಗೊಳ್ಳಲು ಪ್ರಬುದ್ಧವಾಗಲು ಮತ್ತು ವಿಫುಲವಾಗಿ ಹರಡುವುದನ್ನು ಸುಭದ್ರಗೊಳಿಸಲು ಭಾವಿಷ್ಯದ ಮಾನಕಗಳು ಹಾಗೂ ಭವಿಷ್ಯದ ತಂತ್ರಜ್ಞಾನಗಳ ಸ್ಥಳವಾಗಬೇಕೆನ್ನುವುದು ನಮ್ಮ ಪ್ರಧಾನಿಗಳ ಕನಸಾಗಿದೆ. ಇಂದು ಐಬಿಎಂ ಸೆಕ್ಯುರಿಟಿ ಆರಂಭಿಸಿರುವ ಸೈಬರ್ ಸೆಕ್ಯುರಿಟಿ ಹಬ್, ಕೇವಲ ಜಾಗೃತಿ ಮೂಡಿಸುವ ಪರಿಸರ ವ್ಯವಸ್ಥೆ ಸೃಷ್ಟಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುವುದರ ಜೊತೆಗೆ, ಸುರಕ್ಷಿತ ಸೈಬರ್ ಸ್ಪೇಸ್ ಸೃಷ್ಟಿಸಲು ಸಾಮಥ್ರ್ಯಗಳನ್ನು ಹಾಗೂ ಪ್ರತಿಭೆಗಳನ್ನು ಹೊರತರುವಲ್ಲಿಯೂ ಮುಖ್ಯ ಪಾತ್ರ ನಿರ್ವಹಿಸಲಿದೆ ಎಂದು ನಂಬುತ್ತೇನೆ. ಐಬಿಎಂ ತಂಡಕ್ಕೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತ, ಭಾರತ ಸರ್ಕಾರ, ನಮ್ಮ ಏಜೆನ್ಸಿಗಳ ನಡುವೆ ಇನ್ನೂ ಹೆಚ್ಚಿನ ಗಟ್ಟಿಯಾದ ಪಾಲುದಾರಿಕೆಯನ್ನು ಎದುರುನೋಡುತ್ತ,  ಡಿಜಿಟಲ್ ಇಂಡಿಯಾ ಮಿಷನ್ ನನಸಾಗುವ ಸಮಾನ ಧ್ಯೇಯದೊಂದಿಗೆ ಐಬಿಎಂ ಜೊತೆಗೂಡಿ ಮುಂದೆ ಸಾಗಲು ಹಾಗೂ ಭಾರತೀಯ ಸೈಬರ್ ಸ್ಪೇಸ್, ಸುರಕ್ಷಿತವಾದ ಮತ್ತು ಅತ್ಯಂತ ವಿಶ್ವಸನೀಯ ಸ್ಥಳವಾಗುವುದನ್ನು ಖಚಿತಪಡಿತ್ತೇವೆ” ಎಂದರು. 

ಆರಂಭದ ಬಗ್ಗೆ ಮಾತನಾಡುತ್ತಾ ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, “ಸೈಬರ್ ಭದ್ರತೆಯು, ವಿಶ್ವಾದ್ಯಂತ   ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿರುವ ಆರ್ಥಿಕತೆಗಳು ಮತ್ತು ದೇಶಗಳ ಯಶಸ್ಸಿನ ಮೇಲೆ ಪ್ರಭಾವ ಬೀರುವ ಅತಿದೊಡ್ಡ ಸವಾಲುಗಳ ಪೈಕಿ ಒಂದಾಗಿದೆ.  ಸೈಬರ್ ಭದ್ರತೆಯು ಜಾಗತಿಕ  ಸವಾಲಾಗಿದ್ದು, ಹಿಂದೆಂದಿಗಿಂತಲೂ ಉದ್ದಿಮೆಗಳನ್ನು ಹೆಚ್ಚು ತೀವ್ರವಾಗಿ ಬೆದರಿಸುತ್ತಿವೆ. ನಾವು ಪ್ರತಿಕ್ರಿಯೆ ನೀಡಿ  ಕಾರ್ಯಾಚರಣೆ ಮಾಡುವಂತಹ ಸಮಯ ಈಗ ಬಂದೊದಗಿದೆ. ಈ ಬೆದರಿಕೆಯನ್ನು ನಿವಾರಿಸಲು ನಮಗೆ ಅತ್ಯಾಧುನಿಕವಾದ ತಂತ್ರಜ್ಞಾನದ ಅವಶ್ಯಕತೆ ಇದೆ ಹಾಗೂ ಇಡೀ ಪರಿಸರವ್ಯವಸ್ಥೆಯೇ ಇದಕ್ಕಾಗಿ ಒಗ್ಗೂಡಬೇಕಾಗಿದೆ. ವಾಸ್ತವದಲ್ಲಿ, ಐಬಿಎಂ ಸೈಬರ್ ಸೆಕ್ಯುರಿಟಿಕೇಂದ್ರದ ಪ್ರಾರಂಭವು ಈ ಸವಾಲಿಗೆ ಪ್ರತಿಕ್ರಿಯೆಯಾಗಿದೆ. ಇದು, ಗ್ರಾಹಕರಿಗೆ ಬೆದರಿಕೆ ಸಂದರ್ಭಗಳನ್ನು ಹೆಚ್ಚು  ವೇಗವಾಗಿ, ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ ಎದುರಿಸುವ ಬಲ  ನೀಡುತ್ತದೆ.” ಎಂದರು.

“ಸೈಬರ್ ಧಾಳಿಗೆ ಸಿದ್ಧವಾಗಿರುವುದು ಎಂದರೆ, ಅಗ್ನಿಶಾಮಕ ತರಬೇತಿ ಇದ್ದಂತೆ. ಅಧಿಕಾರಿಗಳಿಂದ ಹಿಡಿದು ಗುತ್ತಿಗೆದಾರರವರೆಗೆ ಪ್ರತಿಯೊಬ್ಬರೂ ತುರ್ತುಸ್ಥಿತಿಯಲ್ಲಿ ತಮ್ಮ ಪಾತ್ರವನ್ನು ಅರಿತುಕೊಂಡು ಆಚರಣೆಯ ಮೂಲಕ ಗಂಭೀರವಾದ  ಪ್ರತಿಕ್ರಿಯಾ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗುತ್ತದೆ.” ಎಂದು ಹೇಳಿದರು, ಏಶ್ಯಾ ಪೆಸಿಫಿಕ್‍ನ ಐಬಿಎಂ ಸೆಕ್ಯುರಿಟಿ ಸಿಟಿಒ ಕ್ರಿಸ್ ಹಾಕಿಂಗ್ಸ್, “ಈ ಹೊಸ ಐಬಿಎಂ ಸೆಕ್ಯುರಿಟಿ ಕಮಾಂಡ್ ಕೇಂದ್ರವು ಏಶ್ಯಾ ಪೆಸಿಫಿಕ್ ಪ್ರದೇಶದಲ್ಲೇ ಮೊಟ್ಟಮೊದಲನೆಯದಾಗಿದ್ದು, ಸೈಬರ್ ಧಾಳಿ ಏರ್ಪಟ್ಟ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಕಲೆಯಲ್ಲಿ ಇಡೀ ವ್ಯಾಪಾರಕ್ಕೇತರಬೇತಿ ಒದಗಿಸಲು ನೆರವಾಗುತ್ತದೆ, ಜೊತೆಗೆ, ಅಕ್ಕಪಕ್ಕದಲ್ಲಿರುವ ಜಾಗತಿಕ ಸೆಕ್ಯುರಿಟಿ ಕಾರ್ಯಾಚರಣೆಗಳ ಕೇಂದ್ರದಲ್ಲಿರುವ ನಮ್ಮ ಭದ್ರತಾ ತಜ್ಞರ ವಾಸ್ತವ ಸಮಯದ ಅನುಭವದಿಂದ ಇದು ಇನ್ನಷ್ಟು ವರ್ಧನೆಗೊಳ್ಳುತ್ತದೆ. ಏಶ್ಯಾ ಪೆಸಿಫಿಕ್‍ನ ಅಪಾರ ಬೆಳವಣಿಗೆ, ವೈವಿಧ್ಯತೆ ಮತ್ತು ಜಾಗತಿಕ ಸರಬರಾಜುಸರಪಳಿಯಲ್ಲಿ ಅದರ ಪಾತ್ರವನ್ನು ಪರಿಗಣಿಸಿದರೆ, ಈ ಸಾಮರ್ಥ್ಯಗಳು ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಬೆದರಿಕೆಗಳನ್ನು ಎದುರಿಸಲು ಗ್ರಾಹಕರಿಗೆ ನೆರವಾಗುವುದಕ್ಕಾಗಿ ನಿಜವಾದ ಪರಿವರ್ತಕಗಳಾಗುವ ಸಾಧ್ಯತೆಗಳಿವೆ.”

Fraud Case: ಸರ್ಕಾರಿ ಸಂಬಳ ಕೊಡಿಸುವುದಾಗಿ ನೌಕರರಿಗೆ 78 ಲಕ್ಷ ವಂಚನೆ

ಐಬಿಎಂ ಸೆಕ್ಯುರಿಟಿ ಕಮಾಂಡ್ ಸೆಂಟರ್ ನ ಸಾಮರ್ಥ್ಯಗಳು

ಬೆಂಗಳೂರಿನ ಐಬಿಎಮ್ ಸೆಕ್ಯುರಿಟಿ ಕಮಾಂಡ್ ಸೆಂಟರ್ ನಲ್ಲಿ ಒದಗಿಸಲಾಗುವ ಅತ್ಯಂತ ವಾಸ್ತವಿಕ, ತೊಡಗಿಕೊಳ್ಳುವಂತಹ ತರಬೇತಿ ಕಾರ್ಯಾಚರಣೆಗಳು, ಉದ್ಯಮ ಮುಂಚೂಣಿಯಲ್ಲಿರುವ ಶ್ರವಣ ಮತ್ತು ದೃಶ್ಯ ಪ್ರಭಾವಗಳು ಹಾಗೂ ನೇರ ಮಾಲ್‍ವೇರ್, ರಾನ್ಸಮ್ ವೇರ್, ಮತ್ತು ಇತರ ವಾಸ್ತವ-ಜಗತ್ತಿನ ಹ್ಯಾಕರ್  ಸಾಧನಗಳನ್ನು ವರ್ಧಿಸಲಿವೆ. ತುರ್ತುಸ್ಥಿತಿ ವೈದ್ಯಕೀಯ ಪ್ರತಿಕ್ರಿಯಾದಾರರು, ಸಕ್ರಿಯವಾದ ಕರ್ತವ್ಯನಿರತ ಮಿಲಿಟರಿ ಅಧಿಕಾರಿಗಳು, ಹಾಗೂ ಅದರ ಸಂದರ್ಭ ಪ್ರತಿಕ್ರಿಯೆ ತಜ್ಞರು ಒಳಗೊಂಡಂತೆ ವಿವಿಧ ಉದ್ದಿಮೆಗಳ ಹಲವಾರು ತಜ್ಞರೊಡನೆ ಸಮಾಲೋಚನೆ ನಡೆಸಿ, ತುರ್ತುಸ್ಥಿತಿ  ಹಾಗೂ ವಿಪತ್ತುಪ್ರತಿಕ್ರಿಯೆ  ತರಬೇತಿ ಮಾಡಲ್‍ಗಳ ಬಳಿಕ, ಐಬಿಎಂ ಈ ಸಿಮ್ಯುಲೇಶನ್‍ಗಳನ್ನು ವಿನ್ಯಾಸಗೊಳಿಸಿದೆ.  ಬೆಂಗಳೂರಿನಲ್ಲಿರುವ ಐಬಿಎಂ ಸೆಕ್ಯುರಿಟಿ ಕಮಾಂಡ್ ಕೇಂದ್ರವು, ವರ್ಚುವಲ್ ರೂಪವೂ ಒಳಗೊಂಡಂತೆ, ಸಂಸ್ಥೆಗಳ ವಿಶಿಷ್ಟ ಭದ್ರತಾ ಅಗತ್ಯಗಳು ಹಾಗೂ ಉದ್ದೇಶಗಳಿಗೆ ಅನುಗುಣವಾಗಿ ವೈಯಕ್ತೀಕೃತ ಅನುಭವಗಳು ಹಾಗೂ ಕಾರ್ಯಾಗಾರಗಳನ್ನು ಒದಗಿಸಬಲ್ಲುದಾಗಿದ್ದು ಐಬಿಎಂ ಸೈಬರ್ ರೇಂಜ್ ಡಿಸೈನ್ ಸಮಾಲೋಚನಾ ತಂಡವನ್ನು ವರ್ಧಿಸುತ್ತದೆ.

ಲಭ್ಯವಿರುವ ಕೆಲವು  ತರಬೇತಿ ವಿಧಗಳ ಉದಾಹರಣೆಗಳು:

•    ಆಕ್ಸ್ ರೆಸ್ಪಾನ್ಸ್ ಚಾಲೆಂಜ್: ವಾಸ್ತವವಾದ “ಫ್ಯೂಶನ್ ತಂಡ” ಪರಿಸರದಲ್ಲಿ ವೈವಿಧ್ಯಮಯವಾದ ಭಾಗೀದಾರರನ್ನು ತೊಡಗಿಸಿಕೊಳ್ಳುವುದಕ್ಕೆ ಎಕ್ಸಿಕ್ಯೂಟಿವ್ ತಂಡಕ್ಕಾಗಿ ಇರುವ ವಿನ್ಯಾಸ. ಇದರಲ್ಲಿ, ತಂಡದವರು, ತಾಂತ್ರಿಕ, ಕಾನೂನಾತ್ಮಕ, ಹಾಗೂ ಸಾರ್ವಜನಿಕ ಸಂಬಂಧ ಮುಂತಾದ ವಿವಿಧ ಆಯಾಮಗಳಾದ್ಯಂತ ಒಂದು ತಂಡವಾಗಿ ಸೈಬರ್ ಧಾಳಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ.
•    ಆಪರೇಶನ್ ರೆಡ್ ಎಸ್ಕೇಪ್: ಭಾಗೀದಾರರಿಗೆ ಪಾತ್ರಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಒದಗಿಸಿ, ಬೆಳೆಯುತ್ತಿರುವ ಎದುರಾಳಿ ತಂಡದ ಸಭ್ಯ ಸದಸ್ಯರಾಗಿ ಅವರನ್ನು ವಾಸ್ತವ ಜಗತ್ತಿನ ಧಾಳಿಕೋರ ಸ್ಥಾನದಲ್ಲಿ ಕೂರಿಸಿ ಪ್ರಧಾನ ಕಾಪೆರ್Çರೇಶನ್ ಮೇಲೆ ಕ್ಲೌಡ್-ಆಧಾರಿತ ಧಾಳಿ ಅಭಿವೃದ್ಧಿಪಡಿಸುವಂತೆ ಮಾಡುತ್ತದೆ. ಈ ತಾಂತ್ರಿಕೇತರ ಪರಸ್ಪರ ಸಂವಾದದ ಸಂದರ್ಭವು ವ್ಯಾಪಾರ ಮುಂದಾಳುಗಳಿಗೆ ಪ್ರಾಥಮಿಕವಾಗಿ(ವಾಸ್ತವವಾಗಿ),ನಿಜವಾದ ಎದುರಾಳಿ(ವಿರೋಧಕ) ಸಾಧನಗಳು ಮತ್ತು ತಂತ್ರಗಳೊಂದಿಗೆ ಸಂಸ್ಥೆಗಳ ಮೇಲೆ ಸಾಮಾನ್ಯ ಸೈಬರ್ ಧಾಳಿಗಳು ಹೇಗೆ ನಡೆಯುತ್ತವೆ ಎಂಬುದನ್ನು ನೋಡಲು ಅವಕಾಶ ಮಾಡಿಕೊಡುತ್ತದೆ.
•    ಸೈಬರ್ ವಾರ್ ಗೇಮ್: ಈ ವಾಸ್ತವ-ಕೆಲಸ ಸಂದರ್ಭದಲ್ಲಿ, ಭಾಗೀದಾರರು ಒಂದು ಕಲ್ಪಿತ ಕಾಪೆರ್Çರೇಶನ್‍ಅನ್ನು ಗುರಿಯಿರಿಸಿಕೊಂಡ ಸೈಬರ್ ಅಪರಾಧ ಗ್ಯಾಂಗ್ ಮಾಡುವ ಸೈಬರ್ ಧಾಳಿಯನ್ನು ಅನಾವರಣಗೊಳಿಸುತ್ತಾರೆ. ಸೈಬರ್ ವಾರ್ ಗೇಮ್, ಸಂಸ್ಥೆಯ ಸಂದರ್ಭ ಪ್ರತಿಕ್ರಿಯಾ ಪ್ರಕ್ರಿಯೆ, ಸಂವಹನ ಹಾಗು ಅವರು ಸೈಬರ್ ಧಾಳಿಯನ್ನು ಯಾವ ರೀತಿ ಪರಿಹರಿಸುತ್ತಾರೆ ಎಂಬುದನ್ನು ಗಮನಿಸಲು ಸೈಬರ್ ಭದ್ರತೆಯ  ಸಂದರ್ಭದ ಮಧ್ಯದಲ್ಲಿ ತಾಂತ್ರಿಕ ಹಾಗೂ ವ್ಯಾಪಾರ ತಂಡಗಳನ್ನು ಇರಿಸುವ ಮೂಲಕ ಸಮಸ್ಯೆ ಪರಿಹಾರ ಮಾಡುವ ಕ್ರಿಯೆಯನ್ನು ಪರೀಕ್ಷಿಸುತ್ತದೆ. 

ಐಬಿಎಂ ನ ಜಾಗತಿಕ ಭದ್ರತಾ ಕಾರ್ಯಾಚರಣೆಗಳ ಕೇಂದ್ರದ(ಎಸ್‍ಒಸಿ) ಕಾರ್ಯಜಾಲ

ಹೊಸ ಸೈಬರ್ ರೇಂಜ್ ಘಟಕದ ಪಕ್ಕದಲ್ಲೇ ಇರುವ ಐಬಿಎಂನ ಹೊಸ ಭದ್ರತಾ ಕಾರ್ಯಾಚರಣೆಗಳ ಕೇಂದ್ರವು (ಎಸ್‍ಒಸಿ), ಜಗತ್ತಿನಾದ್ಯಂತ ಇರುವ ಗ್ರಾಹಕರಿಗೆ ಮ್ಯಾನೇಜ್ಡ್ ಸೆಕ್ಯುರಿಟಿ ಸರ್ವಿಸಸ್(ಎಮ್‍ಎಸ್‍ಎಸ್) ಒದಗಿಸುತ್ತದೆ. 600 ಭದ್ರತಾ ಪ್ರತಿಕ್ರಿಯಾ ಆಪರೇಟರುಗಳನ್ನು ಹೊಂದಿರುವ ಅದು ಬೆಂಗಳೂರಿನಲ್ಲಿ  ಎರಡನೆಯ ಐಬಿಎಂ ಎಸ್‍ಒಸಿ ಆಗಿದೆ. ಮತ್ತೊಂದು ಎಸ್‍ಒಸಿ, ಪ್ರಾದೇಶಿಕ ಭಾರತೀಯ ಗ್ರಾಹಕರಿಗೆ ನಿರ್ದಿಷ್ಟವಾಗಿ ಸೇವೆ ಒದಗಿಸುವುದನ್ನು ಮುಂದುವರಿಸುತ್ತಿದೆ. ಹೊಸ ಎಸ್‍ಒಸಿ, ಐಬಿಎಂನ ವಿಶಾಲ ಎಸ್‍ಒಸಿಗಳ ಜಾಗತಿಕ  ಕಾರ್ಯಜಾಲದ ಭಾಗವಾಗಿದ್ದು, ವಿಶ್ವದೆಲ್ಲೆಡೆ 2000ಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ-ಪ್ರತಿದಿನ ಅದು, 2 ದಶಲಕ್ಷಕ್ಕಿಂತ ಹೆಚ್ಚಿನ ಎಂಡ್‍ಪಾಯಿಂಟ್‍ಗಳು ಮತ್ತು 150 ಬಿಲಿಯನ್‍ಗಿಂತ  ಹೆಚ್ಚಿನ ಸಂಭಾವ್ಯ ಗ್ರಾಹಕರನ್ನು ನಿರ್ವಹಿಸುತ್ತಿದೆ. ಐಬಿಎಂನ ಜಾಗತಿಕ ಎಸ್‍ಒಸಿ ಕಾರ್ಯಜಾಲವು ಈಗ ಅಟ್ಲಾಂಟ(ಯು.ಎಸ್.), ಆಸ್ಟ್ರೇಲಿಯಾ, ಕೋಸ್ಟಾರಿಕ, ಜಪಾನ್, ಪೋಲೆಂಡ್, ಸೌದಿ ಅರೇಬಿಯ ಮುಂತಾದ 9 ಪ್ರದೇಶಗಳನ್ನು ಒಳಗೊಂಡಿದೆ. ಸುಭದ್ರವಾದ ಹೈಬ್ರಿಡ್ ಕ್ಲೌಡ್ ಪರಿಸರಕ್ಕೆ ಸಮಗ್ರವಾದ ದೃಷ್ಟಿಕೋನದ ಜೊತೆಗೆ, ಅದು, ವಾಸ್ತವ-ಪ್ರದೇಶ ಪ್ರತಿಕ್ರಿಯೆಗೆ ನೆರವು ನೀಡಲು ಎಮ್‍ಎಸ್‍ಎಸ್ ಪರಿಶೋಧನಾ ತಜ್ಞರು, ಪ್ರಬಲವಾದ  ವರ್ಟಿಕಲ್ ನೈಪುಣ್ಯತೆ ಇರುವ ನಿಬದ್ಧವಾದ  ಭದ್ರತಾ ತಜ್ಞರು, ವೈಯಕ್ತೀಕೃತ ಸಲಹಾ ಸೇವೆಗಳನ್ನು ಒದಗಿಸುತ್ತದೆ. ವೇಗ, ಸಾಮರ್ಥ್ಯ ಮತ್ತು ಪಾರದರ್ಶಕತೆಯೊಂದಿಗೆ ಪ್ರತಿಕ್ರಿಯಿಸಲು ನೆರವಾಗುವ ಸಲುವಾಗಿ ಐಬಿಎಂನ ಎಸ್‍ಒಸಿ   ಮಾದರಿಗಳು ಎಐ, ಯಂತ್ರ ಕಲಿಕೆ ಮತ್ತು ಯಾಂತ್ರೀಕರಣವನ್ನು ವರ್ಧಿಸಿ, ಮಾನವ ನೈಪುಣ್ಯತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಗ್ಗೂಡಿಸಿ ತರುತ್ತದೆ.

Digital Pay Fraud: ಗೂಗಲ್ ಪೇ, ಫೋನ್‌ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ, ಈ ರೀತಿ ಮೋಸ ಮಾಡ್ತಾರೆ!

2022 ಐಬಿಎಂ ಸೆಕ್ಯುರಿಟಿ ಎಕ್ಸ್-ಫೆÇೀರ್ಸ್(ಘಿ-ಈoಡಿಛಿe) ಥ್ರೆಟ್ ಇಂಟೆಲಿಜಿನ್ಸ್ ಸೂಚ್ಯಂಕದ ಪ್ರಮುಖಾಂಶಗಳು

2022 ಐಬಿಎಂ ಸೆಕ್ಯುರಿಟಿ ಎಕ್ಸ್-ಫೋರ್ಸ್(X-Force) ಥ್ರೆಟ್ ಇಂಟೆಲಿಜಿನ್ಸ್ ಸೂಚ್ಯಂಕವು ಇಂದು ಏಶ್ಯಾದ ಬೆದರಿಕೆಯ ಭೂಪ್ರದೇಶಗಳಿಗೆ ಸಂಬಂಧಿಸಿದಂತೆ, ಕೆಳಕಂಡ ಮಾಹಿತಿಗಳನ್ನು ಅನಾವರಣಗೊಳಿಸಿತು:
•    ಹಣಕಾಸು ಸೇವೆಗಳು ಮತ್ತು ಉತ್ಪಾದನೆ, ಏಶ್ಯಾದ ಅಗ್ರ ಧಾಳಿಗೊಳಗಾದ ಉದ್ದಿಮೆಗಳಾಗಿದ್ದು ಇದು  ಅಧ್ಯಯನ ಮಾಡಿದ ಧಾಳಿಗಳ 60%ಅನ್ನು ಪ್ರತಿನಿಧಿಸುತ್ತದೆ.
•    ಈ ಪ್ರದೇಶದಲ್ಲಿ, ಜಪಾನ್, ಆಸ್ಟ್ರೇಲಿಯಾ  ಮತ್ತು ಭಾರತ ಅತಿಹೆಚ್ಚು ಧಾಳಿಗೊಳಗಾದ ದೇಶಗಳಾಗಿದ್ದವು.
•    ಅಗ್ರ ಧಾಳಿ  ವಿಧಗಳು: ಸರ್ವರ್ ಧಾಳಿಗಳು(20%) ಮತ್ತು ರ್ಯಾನ್ಸಮ್‍ವೇರ್(11%), ಡಾಟಾ ಕಳವು(10%), ಏಶ್ಯಾದಲ್ಲಿ ಗಮನಿಸಲಾದ ಅಗ್ರಧಾಳಿ ವಿಧಗಳಾಗಿದ್ದವು.
•    ಆರಂಭಿಕ  ಸೋಂಕು ವಿಧಾನಗಳು: ದೌರ್ಬಲ್ಯತೆ ದುರುಪಯೋಗ ಮತ್ತು ಫಿಶಿಂಗ್, 2021ರಲ್ಲಿ ಏಶ್ಯಾದ ಸಂಸ್ಥೆಗಳ ಮೇಲೆ ನಡೆದ ಅಗ್ರ ಸೋಂಕುಕಾರಕಗಳಾಗಿದ್ದು, ಇವುಗಳ ಪೈಕಿ ಪ್ರತಿಯೊಂದೂ ಈ ಪ್ರದೇಶದಲ್ಲಿ ಗಮನಿಸಲಾದ ಧಾಳಿಗಳ  43% ಪ್ರತಿನಿಧಿಸಿದ್ದವು.
•    ರ್ಯಾನ್ಸಮ್‍ವೇರ್ ಗ್ರೂಪ್ಸ್: ವಿಶ್ಲೇಷಣೆ ಮಾಡಿದ ರ್ಯಾನ್ಸಮ್‍ವೇರ್ ಧಾಳಿಗಳ ಪೈಕಿ  REvil 33% ಆಗಿದ್ದವು ಮತ್ತು ಬಿಟ್‍ಲಾಕರ್, ನಿಫಿಲಿಮ್, ಮೆಡುಸಾಲಾಕರ್, ಮತ್ತು ರಾಗ್ನಾರ್ ಲಾಕರ್ ಕೂಡ ಮಹತ್ತರವಾಗಿದ್ದವು.

ಸಂಪೂರ್ಣ  ಫಲಿತಾಂಶಗಳನ್ನು ನೋಡಲು http://ibm.biz/xforcethreatindex ಗೆ  ಭೇಟಿ ನೀಡಿ.

click me!