ಪೇ ಆಗಿದೆ ಎಂಬ ಮೆಸೇಜ್ ಬರುತ್ತೆ, ಆದ್ರೆ ಹಣ ಬಂದಿರೊಲ್ಲ. ಇದೊಂದು ಹೊಸ ಬಗೆಯ ಮೋಸ. ನೀವು ಫೋನ್ ಪೇ, ಗೂಗಲ್ ಪೇಯಂಥ ಡಿಜಿಟಲ್ ಪೇಮೆಂಟ್ ಆಪ್‌ಗಳನ್ನು ಬಳಸುವ ವ್ಯಾಪಾರಸ್ಥರಾದರೆ ಜಾಗ್ರತೆ ವಹಿಸಿ.
Tech Desk: ಇಂದು ಗೂಗಲ್ ಪೇ (Google pay), ಫೋನ್ ಪೇ (Phone pay), ಪೇಟಿಎಂ (Paytm) ಮುಂತಾದ ಆಪ್ (Apps) ಗಳನ್ನು ಬಳಸದೇ ಇರುವವರೇ ಇಲ್ಲ ಎನ್ನಬಹುದು. ವ್ಯಾಪಾರಸ್ಥರಾದರಂತೂ ಅವರಿಗೆ ಈ ಆಪ್‌ಗಳನ್ನು ಬಳಸುವುದು ಅನಿವಾರ್ಯ. ಆದರೆ ಇಲ್ಲಿ ಮೋಸಕ್ಕಂತೂ ತುಂಬಾ ಸ್ಕೋಪ್ ಇದೆ. ಗೂಗಲ್ ಪೇ ಅಥವಾ ಫೋನ್ ಪೇ ಐಡಿ ಮತ್ತು ಪಾಸ್‌ವರ್ಡ್ ಪಡೆದು ವಂಚಿಸುವುದು ಸಾಮಾನ್ಯ. ಇದು ಇನ್ನೊಂದು ಬಗೆಯ ಮೋಸ. ಇಂದು ಮೈಸೂರಿನಲ್ಲಿ ನಡೆದ ಘಟನೆ. ಮೈಸೂರಿನ ಸರಸ್ವತಿಪುರಂನ ಒಂದು ಜವಳಿ ಅಂಗಡಿಗೆ ಡಿ.೧೩ರಂದು ಐವರು ಯುವಕರು ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ. ಒಂದು ಗಂಟೆಯಲ್ಲಿ ಬರೋಬ್ಬರಿ ೧೬,೦೦೦ ರೂಪಾಯಿ ಮೌಲ್ಯದ ಜವಳಿಯನ್ನು ಖರೀದಿ ಮಾಡಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಎಂಬವರ ನಂಬರ್ ಪಡೆದುಕೊಂಡು ಯಾರಿಗೋ ಫಾರ್ವರ್ಡ್ ಮಾಡಿದ್ದಾರೆ. ನಾನು ಕೊಟ್ಟಿರುವ ಫೋನ್ ನಂಬರ್‌ಗೆ 16,000 ರೂ. ದುಡ್ಡು ಹಾಕು ಎಂದು ಹೇಳಿದ್ದಾರೆ. ಬಟ್ಟೆ ಅಂಗಡಿಯ ಸುನಿಲ್‌ಗೆ ಹಣ ಕ್ರೆಡಿಟ್ ಆಗಿದೆ ಎಂಬ ಮೆಸೇಜ್ ಬಂದಿದೆ. ಪೇಮೆಂಟ್ ಆಗುತ್ತಿದ್ದಂತೆಯೇ ಬಟ್ಟೆ ತೆಗೆದುಕೊಂಡು ಐವರೂ ಕಾರು ಹತ್ತಿ ಪರಾರಿಯಾಗಿದ್ದಾರೆ. ಆದರೆ ಡಿಜಿಟಲ್ ಟ್ರಾನ್ಸಾಕ್ಷನ್‌ಗೆ ಸಂಬಂಧಿಸಿ ಮೆಸೇಜ್ ಮಾತ್ರ ಬಂದಿದೆ; ಹಣ ಬಂದಿಲ್ಲ. ಬ್ಯಾಂಕ್ ಅಕೌಂಟ್ (Bank account) ಚೆಕ್ ಮಾಡಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಪೊಲೀಸ್ ದೂರು ನೀಡಲಾಗಿದ್ದು, ಸಿಸಿಟಿವಿ ಫೂಟೇಜ್‌ನಿಂದ ಆರೋಪಿಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಸೈಬರ್ ಕ್ರೈಂ (Cyber crime) ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
WhatsApp ಬಳಸಿ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?
ಈ ಮೋಸ ನಡೆದುದು ಹೇಗೆ? ಡಿಜಿಟಲ್ ಪೇಮೆಂಟ್ ಆಪ್‌ಗಳನ್ನೇ ಹೋಲುವ ಇತರ ಕೆಲವು ನಕಲಿ ಆಪ್‌ಗಳು ಇತ್ತೀಚೆಗೆ ಕಾಣಿಸಿಕೊಂಡಿವೆ. ಇವುಗಳ ಮೂಲಕ ಮೋಸ ಮಾಡಿರುವ ಸಾಧ್ಯತೆ ಇದೆ. ಇದು ನಿಮಗೆ ಹಣ ಕ್ರೆಡಿಟ್ ಆಗಿದೆ ಎಂಬ ನಕಲಿ ಮೆಸೇಜ್ ಸೃಷ್ಟಿಸಿ ಕಳಿಸುತ್ತದೆ. ಇದು ಮುಖ್ಯವಾಗಿ ಈ ಬಗ್ಗೆ ಹೆಚ್ಚೇನೂ ತಿಳಿಯದ ವ್ಯಾಪಾರಸ್ಥರು ತುಂಬಾ ಮೋಸ ಹೋಗಬಹುದಾದ ವಿಧಾನವಾಗಿದೆ. ಹೀಗಾಗಿ ಎಚ್ಚರವಿರಲು ಪೊಲೀಸರು ತಿಳಿಸಿದ್ದಾರೆ. ಅನುಮಾನ ಇದ್ದಾಗ ಮೆಸೇಜ್ ಜೊತೆಗೆ ಅಕೌಂಟ್ ಬ್ಯಾಲೆನ್ಸ್ ಕೂಡ ಚೆಕ್ ಮಾಡಿಕೊಂಡು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.
ಹಣ ಕೊಡ್ತೀವಿ ಅಂತಾರೆ!
ವ್ಯಾಪಾರಸ್ಥರೂ ಸೇರಿ ಎಲ್ಲರಿಗು ಇನ್ನೊಂದು ರೀತಿಯಲ್ಲಿ ಮೋಸ ಆಗಲು ಸಾಧ್ಯವಿದೆ. ಈ ವಿಧಾನ ತುಸು ಹಳೆಯದೇ ಆದರೂ, ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಯಾವುದೋ ನಂಬರಿನಿಂದ ನಿಮಗೆ ಕರೆ ಬರುತ್ತದೆ. ನೀವು ಹಿಂದೆ ಎಲ್ಲೋ ಯಾವುದೋ ಡಿಜಿಟಲ್ ಪೇಮೆಂಟ್ (Digital Payment) ಮಾಡಿದ್ದೀರಿ. ಅದಕ್ಕೆ ನಿಮಗೆ ಐನೂರೋ ಸಾವಿರವೋ ಕ್ಯಾಶ್ ರಿವಾರ್ಡ್ (Cash reward) ಬಂದಿದೆ. ನಾನು ನಿಮ್ಗೆ ಈಗ ಕ್ಯಾಶ್ ಗೂಗಲ್ ಪೇನಲ್ಲಿ ಕಳಿಸ್ತೀನಿ. ನೀವು ಆ ರಿಕ್ವೆಸ್ಟ್ ಆಕ್ಸೆಪ್ಟ್ (Accept) ಮಾಡಿ ಸಾಕು- ಎನ್ನುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಮೆಸೇಜ್ ಬರುತ್ತದೆ. ಆಕ್ಸೆಪ್ಟ್ ಅಥವಾ ಡಿಕ್ಲೇನ್ (Decline) ಅಂತ ಇರುತ್ತದೆ. ನೀವು ಕ್ಯಾಶ್ ರಿವಾರ್ಡ್ ಆಸೆಯಿಂದ ಆಕ್ಸೆಪ್ಟ್ ಕೊಡುತ್ತೀರಿ. ಕ್ಷಣಾರ್ಧದಲ್ಲಿ ನಿಮ್ಮ ಅಕೌಂಟ್‌ನಿಂದ ಇದ್ದ ಹಣ ಮಂಗಮಾಯವಾಗಿರುತ್ತದೆ.
Online Job ಹೆಸರಿನಲ್ಲಿ ಯುವತಿಗೆ 1 ಲಕ್ಷ ಮೋಸ : ಇಂತಹ ಜಾಲಗಳಿಂದ ಬಚಾವ್ ಆಗೋದು ಹೇಗೆ? ಇಲ್ಲಿದೆ ಟಿಪ್ಸ್
ಇಲ್ಲಿ ಫ್ರಾಡ್ (Fraud) ಮಾಡುತ್ತಿರುವುದು ಸಿಂಪಲ್. ಅವನೇನೂ ನಿಮಗೆ ಹಣ ಕಳಿಸುತ್ತಿರುವುದಿಲ್ಲ. ಬದಲಾಗಿ ನಿಮ್ಮ ಗೂಗಲ್ ಪೇ ಐಡಿಗೆ ಪೇಮೆಂಟ್ ರಿಕ್ವೆಸ್ಟ್ ಕಳಿಸಿರುತ್ತಾನೆ. ನೀವು ಅರಿಯದೇ ಅದನ್ನು ಓಕೆ ಮಾಡಿರುತ್ತೀರಿ. ಇಲ್ಲಿ ನೀವು ಅರ್ಥ ಮಾಡಿಕೊಳ್ಳಬೇಕಾದ್ದು ಎಂದರೆ, ನಿಮಗೆ ಯಾರಾದರೂ ಪೇಮೆಂಟ್ ಮಾಡಬೇಕಿದ್ದರೆ ಯಾರೂ ನಿಮ್ಮ ಐಡಿ ಅಥವಾ ಪಾಸ್‌ವರ್ಡ್ ಪಡೆಯುವುದಾಗಲೀ, ರಿಕ್ವೆಸ್ಟ್ ಆಕ್ಸೆಪ್ಟ್ ಮಾಡುವುದಾಗಲೀ, ಅಗತ್ಯವಿಲ್ಲ. ನಿಮ್ಮ ನಂಬರ್ ಅವರ ಬಳಿ ಇದ್ದರೆ ಸಾಕು, ಖಾತೆಗೆ ಹಾಗೇ ಹಣ ತುಂಬಬಹುದು. ನೀವು ನಿಮ್ಮ ಪೇಮೆಂಟ್ ಐಡಿ ತೆರೆಯುವುದು ಕೂಡ ಅಗತ್ಯವಿಲ್ಲ. ಇಂಥ ಫೋನ್ ಅಥವಾ ಮೆಸೇಜ್‌ಗಳನ್ನು ಎಂಟರ್‌ಟೇನ್ ಮಾಡಬೇಡಿ. ಇದು ಸದಾ ನಿಮ್ಮ ಗಮನದಲ್ಲಿರಲಿ.