ಲಾಕ್‌ಡೌನ್ ಆತಂಕದ ಬೆನ್ನಲ್ಲೇ ಅಮೆರಿಕದಲ್ಲಿ ಮಾಸ್ಕ್ ಕಡ್ಡಾಯವಾಗುವ ಸಾಧ್ಯತೆ!

Nov 17, 2020, 1:44 PM IST

ವಾಷಿಂಗ್ಟನ್(ನ.17): ಕೊರೋನಾ ನಿಗ್ರಹಕ್ಕೆ ಒಂದಾದ ಬಳಿಕ ಮತ್ತೊಂದರಂತೆ ಲಸಿಕೆ ಬರುತ್ತಿವೆ. ಫೈಸರ್, ಸ್ಪುಟ್ನಿಕ್ ಬಳಿಕ ಈಗ ಮಾಡೆರ್ನ ಲಸಿಕೆ ಬಂದಿದ್ದು ಇದು ಈವರೆಗೆ ಬಂದ ವ್ಯಾಕ್ಸಿನ್‌ಗಿಂತ ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ. ಹೀಗಿರುವಾಗಲೇ ಅತ್ತ ವಿಶ್ವಸಂಸ್ಥೆ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಕೊರೋನಾ ಕಡಿಮೆಯಾದ ಬೆನ್ನಲ್ಲೇ ಮತ್ತೆ ಎರಡನೇ ಅಲೆ ಆರಂಭವಾಗುವ ಸಾಧ್ಯತೆಗಳಿವೆ. ಹೀಗಾಗಿ ಇದನ್ನು ನಿವಾರಿಸಲು ಲಸಿಕೆ ಕಂಡುಹಿಡಿದರೂ ಹೆಚ್ಚೇನೂ ಪ್ರಭಾವ ಬೀರುವುದಿಲ್ಲ. ಲಸಿಕೆಯೊಂದೇ ಕೊರೋನಾ ನಿಗ್ರಹಿಸಲು ಪರಿಣಾಮಕಾರಿಯಲ್ಲ ಎಂದಿದೆ.

ಅಮೆರಿಕಗೆ ನೂತನ ಅಧ್ಯಕ್ಷ ಸಿಕ್ಕ ಬೆನ್ನಲ್ಲೇ ಮುನ್ನೆಲೆಗೆ ಬಂದಿದೆ ಈ ಸಮಸ್ಯೆ!

ಅತ್ತ ಅಮೆರಿಕದಲ್ಲಿ ಚುನಾವಣೆ ಭರಾಟೆ ಮುಗಿದ ಬೆನ್ನಲ್ಲೇ ಮತ್ತೆ ಕೊರೋನಾ ಸದ್ದು ಮಾಡಿದೆ. ಒಂದೆಡೆ ಲಾಕ್‌ಡೌನ್ ಹೇರುವ ಮಾತುಗಳು ಕೇಳಿ ಬಂದಿದ್ದರೆ. ಇತ್ತ ಅನೇಕ ಮಂದಿ ಮಾಸ್ಕ್ ಧರಿಸಲೂ ಹಿಂದೇಟು ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೇ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ.