ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿಯೇ ಅಚ್ಚರಿ ವಿಷಯ ಹಂಚಿಕೊಂಡ ಚೈತ್ರಾ ಕುಂದಾಪುರ!

By Mahmad Rafik  |  First Published Sep 29, 2024, 9:45 AM IST

ಚೈತ್ರಾ ಕುಂದಾಪುರ ಬಿಗ್‌ಬಾಸ್ ಗೆ ಹೋಗುತ್ತಿರುವ ವಿಷಯ ಖಚಿತವಾಗಿದ್ದು, ಅಧಿಕೃತ ಪ್ರೋಮೋ ಹೊರ ಬಂದಿದೆ. ಪ್ರೋಮೋದಲ್ಲಿ ಕೆಲವು ವಿಷಯಗಳನ್ನು ಚೈತ್ರಾ ಕುಂದಾಪುರ ಶೇರ್ ಮಾಡ್ಕೊಂಡಿದ್ದಾರೆ.


ಬೆಂಗಳೂರು: ಆಕ್ರಮಣಕಾರಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸಂಚಲನ ಸೃಷ್ಟಿಸುತ್ತಿದ್ದ ಹಿಂದೂ ಸಂಘಟನೆ ನಾಯಕಿ ಚೈತ್ರಾ ಕುಂದಾಪುರ ವಂಚನೆ ಕೇಸ್‌ನಲ್ಲಿ ಜೈಲು ಸೇರಿ ಹೊರ ಬಂದ ನಂತರ ಸೈಲೆಂಟ್ ಆಗಿದ್ದರು. ಇದೀಗ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಮನೆಯ ಸ್ಪರ್ಧಿಯಾಗುತ್ತಿರೋದನ್ನು ಖಾಸಗಿ ವಾಹಿನಿ ದೃಢಪಡಿಸಿದ್ದು, ಪ್ರೋಮೋ ಸಹ ಬಿಡುಗಡೆಗೊಳಿಸಿದೆ. ಉದ್ಯಮಿಯೊಬ್ಬರಿಗೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ವಂಚಿಸಿರುವ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ಇದೀಗ ಚೈತ್ರಾ ಕುಂದಾಪುರ ಬಿಗ್‌ಬಾಸ್ ಗೆ ಹೋಗುತ್ತಿರುವ ವಿಷಯ ಕೇಳಿ ಜನರು ಥ್ರಿಲ್ ಆಗಿದ್ದಾರೆ. ಈ ಹಿಂದೆ ಇದೇ ರೀತಿ ನೆಗೆಟಿವ್ ಇಮೇಜ್‌ ಜೊತೆಯಲ್ಲಿ ಬಿಗ್‌ಬಾಸ್‌ಗೆ ಹೋಗಿದ್ದ ಡ್ರೋಣ್ ಪ್ರತಾಪ್ ಫೈನಲ್‌ವರೆಗೂ ಬಂದು ಸಂಪೂರ್ಣವಾಗಿ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಂಡಿದ್ದರು. ಇದೇ ರೀತಿಯಲ್ಲಿ ಚೈತ್ರಾ ಕುಂದಾಪುರ ನಿಜವಾಗಲೂ ಯಾರು ಎಂಬುವುದು ಬಿಗ್‌ಬಾಸ್ ಮನೆಯಲ್ಲಿ ಗೊತ್ತಾಗುತ್ತೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. 

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ  ಚೈತ್ರಾ ಕುಂದಾಪುರ, ತಾನು ಸಾಮಾನ್ಯ ಹಾಲು ಮಾರುವನ ಮಗಳು ಎಂದು ಹೇಳಿದ್ದಾರೆ. ಹಾಲು ಮಾರುವನ ಮಗಳು ಚೈತ್ರ, ಮುಂದೆ ಚೈತ್ರಾ ಕುಂದಾಪುರ ಆಗಿದ್ದೇಗೆ ಎಂಬ ವಿಷಯವನ್ನು  ಬಿಗ್‌ಬಾಸ್‌ನಲ್ಲಿ ಅನಾವರಣಗೊಳಿಸುವ ಸುಳಿವನ್ನು ಪ್ರೋಮೋದಲ್ಲಿ ನೀಡಲಾಗಿದೆ. ಅಷ್ಟೇ ಅಲ್ಲದೇ ತುಂಬಾ ಮೇಲಕ್ಕೂ ಹೋಗಿದ್ದೀನಿ. ಕೆಳಕ್ಕೂ ಬಿದ್ದಿದ್ದೀನಿ. ಕೇಸ್, ಕೋರ್ಟ್, ಕಾನೂನು ಎಲ್ಲವನ್ನೂ ಎದುರಿಸುತ್ತಿದ್ದೇನೆ. ಆದರೆ ಇವೆಲ್ಲವೂ ನನ್ನನ್ನು ಕುಗ್ಗಿಸುವುದಿಲ್ಲ ಎಂದು ಚೈತ್ರಾ ಕುಂದಾಪುರ ಹೇಳಿರೋದನ್ನು ಪ್ರೋಮೋದಲ್ಲಿ ನೋಡಬಹುದು. 

Tap to resize

Latest Videos

undefined

BBK 11: ಬಿಗ್‌ ಬಾಸ್‌ ಮನೆಗೆ ಗೋಲ್ಡ್‌ ಸುರೇಶ್‌, ಯಾರಿವರು ಗೊತ್ತಾ?

ಇದೀಗ ಬಿಗ್‌ಬಾಸ್ ಮನೆ ಮುಂದೆ ನಿಂತಿರುವ ಚೈತ್ರಾ ಕುಂದಾಪುರ, ಸ್ವರ್ಗ ಅಥವಾ ನರಕದ ಮನೆ ಸೇರ್ತಾರ ಅನ್ನೋದರ ಕುತೂಹಲ ಮನೆಮಾಡಿದೆ. ಈ ಬಾರಿ ಬಿಗ್‌ಬಾಸ್ ನಲ್ಲಿ ಎರಡು ಮನೆಗಳನ್ನು ರಚನೆ ಮಾಡಲಾಗಿದೆ. ಒಂದು ಮನೆಗೆ ಸ್ವರ್ಗ ಮತ್ತೊಂದಕ್ಕೆ ನರಕ ಎಂದು ಹೆಸರಿಡಲಾಗಿದೆ. ಇದೇ ಥೀಮ್‌ನಲ್ಲಿಯೇ ಬಿಗ್‌ಬಾಸ್ ಕಾರ್ಯಕ್ರಮ ನಡೆಯಲಿದ್ಯಾ? ಮುಂದಿನ ದಿನಗಳಲ್ಲಿ ಕಾನ್ಸೆಪ್ಟ್ ಬದಲಾಗುತ್ತಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.  

ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾಧವ್, ಜನಪ್ರಿಯ ವಕೀಲ ಜಗದೀಶ್, ಅಥಣಿಯ ಗೋಲ್ಡ್ ಸುರೇಶ್ ಮತ್ತು ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆ ಸೇರೋದು ಖಚಿತವಾಗಿದೆ. ಈ ನಾಲ್ವರನ್ನು ಯಾವ ಸ್ವರ್ಗಕ್ಕೆ ಹೋಗ್ತಾರಾ ಅಥವಾ ನರಕದ ಮನೆ ಸೇರುತ್ತಾರಾ ಅನ್ನೋದು ಇಂದು ಗೊತ್ತಾಗಲಿದೆ. ಸಂಜೆ 6 ಗಂಟೆ ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಪ್ರತಿದಿನ ರಾತ್ರಿ 9.30ಕ್ಕೆ ಬಿಗ್‌ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ.

ಸತ್ಯ ಸ್ಟೈಲ್‌ನಲ್ಲಿ ಬಿಗ್‌ಬಾಸ್ ಮನೆಗೆ ಬಂದ ಕೋಟೆ ಕುಟುಂಬದ ಸೊಸೆ; ಸ್ವರ್ಗ ಸೇರ್ತಾರಾ? ನರಕಕ್ಕೆ ಹೋಗ್ತಾರಾ?

click me!