ಕಳಂಕ ಹೊತ್ತು ಕಾರ್ಯಕ್ರಮದಲ್ಲಿ ಭಾಗವಹಿಸದೆ, ದಸರಾ ಪಾವಿತ್ರ್ಯತೆ ಕಾಪಾಡಿ: ಸಿದ್ದುಗೆ ಸ್ನೇಹಮಹಿ ಕೃಷ್ಣ ಮನವಿ

By Girish Goudar  |  First Published Sep 29, 2024, 9:20 AM IST

ರಾಜೀನಾಮೆ ವಿಚಾರದಲ್ಲಿ ಸಿದ್ದರಾಮಯ್ಯ ಡಬಲ್ ಸ್ಟ್ಯಾಂಡ್ ಇಟ್ಟುಕೊಂಡಿದ್ದಾರೆ. ಭಂಡತನ ಪ್ರದರ್ಶನ ಮಾಡಬಾರದು. ಸಿಎಂ ಸ್ಥಾನದ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ರಾಜೀನಾಮೆ ಕೊಟ್ಟು ತನಿಖೆಯನ್ನ ಎದುರಿಸಲಿ ಎಂದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ 


ಮೈಸೂರು(ಸೆ.29):  ಸಿದ್ದರಾಮಯ್ಯ ಕಳಂಕ ಹೊತ್ತು ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಆಗಿದ್ದಾರೆ. 400 ವರ್ಷಗಳ ಪಾವಿತ್ರ್ಯತೆ ಇರುವ ದಸರಾ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಬಾರದು. ಆ ಮೂಲಕ ಮುಖ್ಯಮಂತ್ರಿ ಸ್ಥಾನ ಹಾಗೂ ದಸರಾ ಪಾವಿತ್ರ್ಯತೆ ಕಾಪಾಡಬೇಕು ಎಂದು ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ. 

ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಿರುವ ಸ್ನೇಹಮಹಿ ಕೃಷ್ಣ, ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ತನಿಖೆ ಆಗಬೇಕು.. ಸಿದ್ದರಾಮಯ್ಯ ಅವರೇ 62 ಕೋಟಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಎಲ್ಲಾ ರೀತಿಯಿಂದಲೂ ತನಿಖೆ ಆಗಬೇಕು. ಸಿಎಂ ಪ್ರಕರಣ ಮಾತ್ರವಲ್ಲ 2015 ರಿಂದ ನಡೆದಿರುವ 50-50 ಅವ್ಯವಹಾರದ ಬಗ್ಗೆ ತನಿಖೆ ಆಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಎಫ್‌ಐಆರ್‌ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ

ರಾಜೀನಾಮೆ ವಿಚಾರದಲ್ಲಿ ಸಿದ್ದರಾಮಯ್ಯ ಡಬಲ್ ಸ್ಟ್ಯಾಂಡ್ ಇಟ್ಟುಕೊಂಡಿದ್ದಾರೆ. ಭಂಡತನ ಪ್ರದರ್ಶನ ಮಾಡಬಾರದು. ಸಿಎಂ ಸ್ಥಾನದ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ರಾಜೀನಾಮೆ ಕೊಟ್ಟು ತನಿಖೆಯನ್ನ ಎದುರಿಸಲಿ ಎಂದು ಸ್ನೇಹಮಹಿ ಕೃಷ್ಣ ತಿಳಿಸಿದ್ದಾರೆ. 

click me!