
ತಿರುಪತಿ: ‘ಹಿಂದಿನ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ಪಾವಿತ್ರ್ಯತೆಗೆ ಧಕ್ಕೆಯಾಗಿತ್ತು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪ ಸುಳ್ಳು’ ಎಂದಿರುವ ಜಗನ್‌ರ ವೈಎಸ್ಸಾರ್ ಕಾಂಗ್ರೆಸ್ ನಾಯಕರು ‘ನಾಯ್ಡು ಮಾಡಿರುವ ಸುಳ್ಳು ಆಪಾದನೆಗಳ ಪಾಪ ನಾಶಕ್ಕಾಗಿ’ ರಾಜ್ಯಾದ್ಯಂತ ಶನಿವಾರ ಪ್ರಾಯಶ್ಚಿತ್ತ ಪೂಜೆ ನೆರವೇರಿಸಿದರು.
ತಿರುಪತಿಯ ತಾತಯ್ಯಗುಂಟದ ಗಂಗಮ್ಮ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ವೈಎಸ್‌ಆರ್ ಹಿರಿಯ ನಾಯಕ ಹಾಗೂ ಟಿಟಿಡಿಯ ಮಾಜಿ ಅಧ್ಯಕ್ಷ ಬಿ. ಕರುಣಾಕರ ರೆಡ್ಡಿ ಭಾಗವಹಿಸಿದರು. ಅಂತೆಯೇ ಮಾಜಿ ಸಚಿವ ಅಂಬಟಿ ರಾಮಬಾಬು ಗುಂಟೂರಿನ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Tirupati Laddu Recipe: ಮನೆಯಲ್ಲಿಯೇ ಮಾಡಿ ಶುದ್ಧ ತುಪ್ಪ ಬಳಸಿ ತಿರುಪತಿ ಲಡ್ಡು
ಈ ಬಗ್ಗೆ ಮಾತನಾಡಿದ ವೈಎಸ್‌ಆರ್‌ಸಿಪಿ ನಾಯಕಿ ಶರ್ಮಿಳಾ ರೆಡ್ಡಿ, ‘ನಾಯ್ಡು ದೇವರನ್ನು ರಾಜಕೀಯಕ್ಕೆ ಎಳೆತಂದು, ಆಗದೇ ಇರುವ ಘಟನೆಯಿಂದ ದೊಡ್ಡ ಗದ್ದಲ ಸೃಷ್ಟಿಸಿದರು’ ಎಂದು ಆರೋಪಿಸಿದರು.
ಹಿಂದಿನ ಸರ್ಕಾರ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದ ತಯಾರಿಸಲು ಕಳಪೆ ಪದಾರ್ಥ ಹಾಗೂ ಪ್ರಾಣಿ ಕೊಬ್ಬನ್ನು ಬಳಸಿತ್ತು ಎಂಬ ನಾಯ್ಡು ಆರೋಪವನ್ನು ತಳ್ಳಿಹಾಕಿದ್ದ ಜಗನ್‌ಮೋಹನ ರೆಡ್ಡಿ, ಪರೀಕ್ಷೆಗೆ ಕಳಿಸಲಾಗಿದ್ದ ತುಪ್ಪದ ಮಾದರಿಯನ್ನು ಎನ್‌ಡಿಎ ಅವಧಿಯಲ್ಲಿ ತರಿಸಲಾಗಿತ್ತು ಎಂದು ಪ್ರತ್ಯಾರೋಪಿಸಿದ್ದರು. ಜೊತೆಗೆ ನಾಯ್ಡು ಪಾಪ ಪರಿಹಾರಕ್ಕೆ ಪೂಜೆ ಕೈಗೊಳ್ಳುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.
Tirupati Laddu Controversy: ರಜನಿಕಾಂತ್ ಇದನ್ನೇ ಹೇಳುತ್ತಾರೆಂದು ಮೊದಲೇ ಊಹಿಸಿದ್ದ ನಿರ್ದೇಶಕ ಮಾರನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ