ಇದು ಎಂದೂ ನೋಡಿರದ ಚೀನಾ ಕೋಟೆಯೊಳಗಿನ ಕಪ್ಪು ಸಾಮ್ರಾಜ್ಯ.!

Jul 21, 2020, 4:41 PM IST

ಬೆಂಗಳೂರು (ಜು. 21): ಚೀನಾ ಜಾಗತಿಕವಾಗಿ ಫೇಸ್‌ ಮಾಸ್ಕ್‌ಗಳ ರಫ್ತಿಗಾಗಿ ಉಯಿಗರ್‌ ಅಲ್ಪಸಂಖ್ಯಾತ ಮುಸ್ಲಿಂ ಕಾರ್ಮಿಕರನ್ನು ಮನಸೋ ಇಚ್ಛೆ ದುಡಿಸಿಕೊಳ್ಳುತ್ತಿದೆ ಎಂಬ ಸಂಗತಿ ಬಯಲಾಗಿದೆ. 

ವಾಯವ್ಯ ಚೀನಾದ ಕ್ಸಿನ್‌ಜಿಯಾಂಗ್‌ ಹಾಗೂ ಹುಬೆ ಪ್ರಾಂತ್ಯದಲ್ಲಿ ಉಯಿಗರ್‌ ಮತ್ತು ಇತರ ಅಲ್ಪಸಂಖ್ಯಾತ ಜನಾಂಗವನ್ನು ಚೀನಾ ಸರ್ಕಾರ ಮಾಸ್ಕ್‌ಗಳ ತಯಾರಿಕೆಗೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಅಧಿಕಾರಿಗಳಿಗೆ ವಿಧೇಯತೆ ತೋರಬೇಕು. ಇಲ್ಲವಾದಲ್ಲಿ, ಕಾರ್ಮಿಕರಿಗೆ ದಂಡ ವಿಧಿಸಲಾಗುತ್ತಿದೆ. ಲಸಿಕೆ ಪ್ರಯೋಗಕ್ಕೂ ಇವರನ್ನೇ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತದೆ ಎಂಬ ವಿಚಾರ ಬಯಲಾಗಿದೆ. ಹಾಗಾದರೆ ಏನು ನಡೆಯುತ್ತಿದೆ ಚೀನಾದಲ್ಲಿ? ಇಲ್ಲಿದೆ ಚೀನಾ ಕರಾಳ ಮುಖದ ಅನಾವರಣ. 

ಚೀನಾ ನಾಡಲ್ಲಿ ಸತ್ಯ ಸಮಾಧಿ..!