News Hour: ಪವಿತ್ರ ಭೂಮಿ ಜೆರುಸಲೆಂ, ಮೂರು ಧರ್ಮಗಳ ಸಂಘರ್ಷದ ನೆಲ!

Oct 21, 2023, 11:42 PM IST

ಬೆಂಗಳೂರು (ಅ.21): ಇಸ್ರೇಲ್ ಯುದ್ಧಭೂಮಿಯಲ್ಲಿರುವ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಇಂದು ಜೆರುಸಲೇಂನಲ್ಲಿ ವರದಿಗಾರಿಕೆ ನಡೆಸಿದ್ರು.. ಜೆರುಸಲೇಂ ನಗರ ಮೂರು ಧರ್ಮಗಳ ಸಂಘರ್ಷದ ನೆಲ. ಈ ನೆಲಕ್ಕಾಗಿ ಹರಿದ ನೆತ್ತರು ಅಷ್ಟಿಷ್ಟಲ್ಲ.. ಪ್ರತಿ ಶುಕ್ರವಾರವೂ ಇಲ್ಲಿ ನಡೆಯೋದು ತಿಕ್ಕಾಟವೇ.

15 ದಿನಕ್ಕೆ ಕಾಲಿಟ್ಟ ಹಮಾಸ್, ಇಸ್ರೇಲ್ ರಕ್ತಪಾತಕ್ಕೆ ಮೂಲ ಕಾರಣ ಇದೇ ಜಾಗ. ಇಸ್ರೇಲ್‌ನಲ್ಲಿರುವ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್, ಇದೇ ಜಾಗದಿಂದಲೇ ಧರ್ಮಗಳ ಸಂಘರ್ಷದ ಇತಿಹಾಸ ಬಿಚ್ಚಿಟ್ಟರು. ಜೆರುಸಲೇಂನಲ್ಲಿಯೇ ಅಕ್ಸಾ ಮಸೀದಿ ಇದೆ. ಮೆಕ್ಕಾ, ಮದೀನಾ ಬಳಿ ಮುಸ್ಲಿಮರಿಗೆ ಮೂರನೇ ಪ್ರವಿತ್ರ ಸ್ಥಳ.. ಮಸೀದಿ ಮಾತ್ರವಲ್ಲ ಇಲ್ಲಿ ಅನೇಕ ಸಮಾಧಿಗಳೂ ಇವೆ.. ಅಲ್ ಅಕ್ಸಾ ಮಸೀದಿಯಲ್ಲಿ ಮುಸ್ಲಿಂ ಯುವಕರಿಗೆ ಪ್ರವೇಶವಿಲ್ಲ.. ಮಸೀದಿ ಸುತ್ತಮುತ್ತ 24 ಗಂಟೆಯೂ ಇಸ್ರೇಲ್ ಸೈನಿಕರ ಕಣ್ಗಾವಲು ಇರುತ್ತೆ.. ಮುಸ್ಲಿಮರಿಗೆ ಹೇಗೆ ಈ ಜಾಗ ಪವಿತ್ರವೂ ಹಾಗೆಯೇ, ಯಹೂದಿಗಳಿಗೂ ಪವಿತ್ರ.. ಯಹೂದಿಯರ ಎರಡು ದೇವಾಲಯಗಳಿದ್ದು, ಒಂದನ್ನ ಕೆಡವಿದ್ದು, ಇನ್ನೊಂದರ ಗೋಡೆ ಮಾತ್ರ ಉಳಿದಿದೆ.. ಆ ಗೋಡೆಗೆ ಯಹೂದಿಗಳು ಪ್ರಾರ್ಥನೆ ಸಲ್ಲಿಸುತ್ತಾರೆ.

News Hour: ಇಂಡಿ ಒಕ್ಕೂಟವನ್ನು ಹಿಂಡಿ ಹಿಪ್ಪೆ ಮಾಡ್ತಾರಾ ಅಖಿಲೇಶ್‌ ಯಾದವ್‌?

 

ಅಲ್ ಅಕ್ಸಾ ಮಸೀದಿ.. ಮೌಂಟ್ ಟೆಂಪಲ್ಗೆ ಹೊಂದಿಕೊಂಡೇ ಹೋಲಿ ಸಿಪಲ್ ಚಲ್ ಚರ್ಚ್ ಇದೆ.. ಕ್ರಿಶ್ಚಿಯನ್ನರ ಶ್ರದ್ಧಾಕೇಂದ್ರಗಳ ಪೈಕಿ ಇದೂ ಒಂದು. ಸುಮಾರು 35 ಎಕರೆ ಪ್ರದೇಶದ ಈ ಜಾಗದಲ್ಲೇ ಏಸುಕ್ರಿಸ್ತರನ್ನ ಶಿಲುಬೆಗೆ ಏರಿಸಿದ್ದರು. ಈಗಿನ ಇಸ್ರೇಲ್ ರಾಜಧಾನಿ ಆಗಿರುವ ಜೆರುಸಲೆಂ, ಹಿಂದೆ ಜೋರ್ಡಾನ್‌ ದೇಶದ ಹಿಡಿತದಲ್ಲೇ ಇತ್ತು.. 1967ನಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಇಸ್ರೇಲ್ ಇದನ್ನು ವಶಪಡಿಸಿಕೊಂಡಿತ್ತು. ಅಂದಿನಿಂದ ಇಲ್ಲಿ ಇಸ್ರೇಲ್ನದ್ದೇ ಕಾರುಬಾರು.