ಚೀನಾಗೆ ತಕ್ಕ ಉತ್ತರ ಕೊಡಲು ಭಾರತ ಮಾತ್ರವಲ್ಲ, ಜಪಾನ್ ಕೂಡಾ ರೆಡಿ..!

Jun 30, 2020, 9:25 PM IST

ನವದೆಹಲಿ (ಜೂ. 30): ಚೀನಾ ಕ್ಯಾತೆ, ಕಿರಿಕಿರಿ ಭಾರತದ ಜೊತೆ ಮಾತ್ರವಲ್ಲ ಬೇರೆ ದೇಶಗಳ ಜೊತೆಯೂ ಮಾಡುತ್ತಿದೆ. ನೇಪಾಳ, ಜಪಾನ್ ಜೊತೆ ಕ್ಯಾತೆ ತೆಗೆದಿದೆ. ಅದಕ್ಕೆ ಜಪಾನ್ ಸರಿಯಾಗಿ ತಿರುಗೇಟು ಕೊಟ್ಟಿದೆ. ಕೆಲ ದಿನಗಳಿಂದ ಚೀನಾ, ಜಪಾನ್ ಜೊತೆ ಗಡಿಯಲ್ಲಿ ತಗಾದೆ ತೆಗೆದಿದೆ. ಇದಿನ್ನು ಆರಂಭಿಕವಾಗಿರುವಾಗಲೇ ತಕ್ಕ ಪಾಠ ಕಲಿಸಲು ಮುಂದಾಗಿದೆ. ಚೀನಾ ಗಡಿಯನ್ನು ಬಂದ್ ಮಾಡಲು ಜಪಾನ್ ಮುಂದಾಗಿದೆ. ಸೇನಾ ಬಲವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ನಾಲ್ಕು ವಾಯುನೆಲೆಗಳನ್ನು ಕ್ಷಿಪಣಿಗಳನ್ನು ನಿಲ್ಲಿಸಿದೆ. ಚೀನಾದ ಸೊಕ್ಕನ್ನು ಶತಾಯ ಗತಾಯ ಮುರಿಯಲು ಚೀನಾ ಹೊರಟಿದೆ. 

ಜಪಾನ್ ಓಕಿನೋವಾ ನಗರ ಆಡಳಿತ  ಮಸೂದೆಯೊಂದನ್ನು ಪಾಸ್ ಮಾಡಿದೆ. ಇಶಿಗಾಕಿ ಆಡಳಿತ ತನ್ನ ವೈಖರಿಯನ್ನು ಬದಲಾಯಿಸಿಕೊಳ್ಳಬೇಕಿದೆ.  ದ್ವೀಪಗಳ ಸಮೂಹ ಸೆಂಕಾಕುಸ್ ಆಡಳಿತ ಬದಲಾಗಬೇಕಿದೆ ಎಂದು ಮಸೂದೆ ಹೇಳಿದೆ. ಚೀನಾ ಈ ಪ್ರದೇಶವನ್ನು ಡೈಯೋಯುಸ್ ಎಂದು ಕರೆಯುತ್ತದೆ.

ದ್ವೀಪ ನಮ್ಮದೆಂದು ಶಿಪ್ ಕಳಿಸಿದ ಚೀನಾಕ್ಕೆ ಜಪಾನ್ ಕೊಟ್ಟ 'ಬಹುಮಾನ'!

ಈ ದ್ವೀಪ ಪ್ರದೇಶದಲ್ಲಿ ಜನವಸತಿ ಇಲ್ಲ. ಜಪಾನ್ ಈ ತೀರ್ಮಾನ ತೆಗೆದುಕೊಂಡಿರುವುದಕ್ಕೆ ಬೀಜಿಂಗ್ ವಿರೋಧ ವ್ಯಕ್ತಪಡಿಸಿದ್ದು ಕೋಸ್ಟ್ ಗಾರ್ಡ್ ಹಡಗುಗಳನ್ನು ಕಳಿಸಿಕೊಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!