165 ಕುಶಲಕರ್ಮಿಗಳು, 1965 ಗಂಟೆಗಳು.. ಮೆಟ್ ಗಾಲಾಕ್ಕಾಗಿ ಆಲಿಯಾ ಭಟ್ ಸೀರೆ ತಯಾರಾಗಿದ್ದು ಹೀಗೆ..

First Published | May 7, 2024, 11:16 AM IST

ಫ್ಯಾಶನ್ ಎಂದರೆ ಸಬ್ಯಸಾಚಿ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಇದೀಗ ಮೆಟ್ ಗಾಲಾ 2024ಕ್ಕೆ ಆಲಿಯಾ ಭಟ್ ಧರಿಸಿದ್ದ ಸಬ್ಯಸಾಚಿ ಸೀರೆ ಟಾಕ್ ಆಫ್ ದ ಟೌನ್ ಆಗಿದೆ. ಇದನ್ನು ತಯಾರಿಸಲು  1965 ಗಂಟೆಗಳು ಬೇಕಾದವಂತೆ.

ಮೆಟ್ ಗಾಲಾ 2024ರಲ್ಲಿ ಭಾರತದಿಂದ ಇಶಾ ಅಂಬಾನಿ ಮತ್ತು ಬಾಲಿವುಡ್ ನಟಿ ಆಲಿಯಾ ಭಟ್ ಭಾಗವಹಿಸಿದ್ದರು. ಇಶಾ ಗೌನ್‌ನಲ್ಲಿ ಮಿಂಚಿದರೆ, ಆಲಿಯಾ ಸೀರೆಯಲ್ಲಿ ಎಲ್ಲರ ಗಮನ ಸೆಳೆದರು. 

ಪಿಸ್ತಾ ಹಸಿರು ಮತ್ತು ಬೂದು ಬಣ್ಣದ ಸೀರೆಯ ತುಂಬಾ ಹೂವುಗಳು ಕಂಗೊಳಿಸುತ್ತಿದ್ದವು. ತೆಳುವಾದ ನೆಟ್ಟೆಡ್ ಸ್ಯಾರಿಗೆ ಸ್ಲೀವ್‌ಲೆಸ್ ಬ್ಲೌಸ್ ಜೊತೆ ಮ್ಯಾಚ್ ಮಾಡಲಾಗಿತ್ತು..

Latest Videos


ಸಬ್ಯಸಾಚಿ ಮುಖರ್ಜಿಯವರ ವಿನ್ಯಾಸ ಹೊಂದಿರುವ ಈ ಸೀರೆಯನ್ನು ತಯಾರಿಸಲು 163 ಕುಶಲಕರ್ಮಿಗಳು, ಕಸೂತಿ ಕೆಲಸಗಾರರು  1965 ಗಂಟೆಗಳನ್ನು ತೆಗೆದುಕೊಂಡರಂತೆ. 

ಈ ಬಾರಿ ಮೆಟ್ ಗಾಲಾದ ಥೀಮ್ 'ದಿ ಗಾರ್ಡನ್ ಆಫ್ ಟೈಮ್'. ಇದಕ್ಕೆ ಕಾಲಾತೀತವಾದದ್ದು ಬೇಕೆನಿಸಿತು. ಅದಕ್ಕೆ ಸೀರೆಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ. ಹಾಗಾಗಿ, ಸೀರೆಯನ್ನೇ ಈ ಫ್ಯಾಶನ್ ಈವೆಂಟ್‌ಗಾಗಿ ಆಲಿಯಾ ಆಯ್ಕೆ ಮಾಡಿದರಂತೆ. 

ಅವರ ಸೆರಗು ರೈಲಿನಂತೆ ಉದ್ದಕ್ಕೆ ಹರಡಿತ್ತು ಹಾಗೂ ರೆಡ್ ಕಾರ್ಪೆಟ್‌ನ ಮೆಟ್ಟಿಲುಗಳನ್ನೇರುವಾಗ ಪೂರ್ತಿ ಮೆಟ್ಟಿಲುಗಳನ್ನು ಮುಚ್ಚಿಕೊಂಡು ಸಾಗುತ್ತಿತ್ತು. 

ಆಲಿಯಾ ಲುಕ್ ಮೆಟ್ ಗಾಲಾದಲ್ಲಿ ಬಹಳಷ್ಟು ಫ್ಯಾಶನಿಸ್ಟಾ ಹಾಗೂ ಫೋಟೋಗ್ರಾಫರ್‌ಗಳ ಕಣ್ಮನ ಸೆಳೆಯಿತು. ಯಾವುದೇ ಈವೆಂಟ್ ಇರಲಿ, ಸೀರೆ ಯಾವ ರೀತಿಯ ಫ್ಯಾಶನ್‌ಗೆ ಕೂಡಾ ಸೈ ಎಂಬುದು ಮತ್ತೊಮ್ಮೆ ಸಾಬೀತಾಯಿತು. 

ಸಮಯ ಮತ್ತು ಕಾಳಜಿಯೊಂದಿಗೆ ರಚಿಸಲಾದ ವಿಷಯಗಳು ಶಾಶ್ವತವಾಗಿ ಉಳಿಯುತ್ತವೆ. ಅಂತೆಯೇ ಈ ಸೀರೆಯನ್ನೂ ಕುಶಲಕರ್ಮಿಗಳು 1905 ಗಂಟೆಗಳಲ್ಲಿ ಬಹಳ ಗಮನ, ಪ್ರೀತಿ, ಕಾಳಜಿಯಿಂದ ತಯಾರಿಸಿದ್ದಾರೆ ಎನ್ನುತ್ತಾರೆ ಆಲಿಯಾ. 

ಕಾರ್ಯಕ್ರಮದಲ್ಲಿ ಬೆಸ್ಟ್ ಡ್ರೆಸ್ಡ್ ಮಹಿಳೆಯರಲ್ಲಿ ಖಂಡಿತಾ ಆಲಿಯಾ ಇದ್ದಾರೆ ಮತ್ತು ಆಕೆ ದೇವತೆಯಂತೆ ಕಂಗೊಳಿಸುತ್ತಿದ್ದಾಳೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಮ್ಯಾನ್‌ಹಟನ್‌ನಲ್ಲಿರುವ ಗಾಲಾ ಇನ್ಸ್ಟಿಟ್ಯೂಟ್ ಈ ಮೆಟ್ ಗಾಲಾ ನಡೆಸುತ್ತಿದ್ದು, ಇದೊಂದು ಜಾಗತಿಕವಾಗಿ ಜನಪ್ರಿಯವಾದ ಫ್ಯಾಶನ್ ಕಾರ್ಯಕ್ರಮವಾಗಿದೆ. ಅಂದ ಹಾಗೆ ಆಲಿಯಾಳ ಈ ಲುಕ್ ನಿಮಗೆ ಹೇಗನಿಸಿತು? 

click me!