ಚೀನಾ ಮೋಸವನ್ನು ಬಯಲು ಮಾಡಲು ಹೊರಟ ಅಮೆರಿಕಾ; ಟ್ರಂಪ್‌ಗೆ ನಮೋ ಸಾಥ್

Apr 20, 2020, 1:55 PM IST

ಶತ್ರುಗಳನ್ನು ಮಟ್ಟ ಹಾಕಲು ವಿಷ ವ್ಯೂಹ ಹೆಣೆದಿದ್ದ ಚೀನಾ ಇದೀಗ ಆ ಬಲೆಯಲ್ಲಿ ತಾನೇ ಸಿಲುಕಿಕೊಂಡಿದೆ. ಕೊರೋನಾದಿಂದ ಜಗತ್ತಿನ ಎಲ್ಲಾ ದೇಶಗಳು ಅಕ್ಷರಶಃ ನಲುಗಿ ಹೋಗಿದೆ. ದೊಡ್ಡಣ್ಣ ಅಮೆರಿಕಾ ಕೊರೋನಾ ಮೂಲವನ್ನು ಬೆನ್ನತ್ತಿದೆ.

ಪಾದರಾಯನಪುರ ಗಲಭೆ ಪೂರ್ವ ನಿಯೋಜಿತವಾ?: ನಾಲ್ಕು ಗುಂಪು ರಹಸ್ಯ!

ಈ ವೈರಸ್ ಬಾವಲಿಗಳಿಂದ ಹರಡಿದ ವೈರಸ್ ಅಲ್ಲ, ಚೀನಾದ ಹೂವನ್ ನಗರದ ಪ್ರಯೋಗಾಲಯದಿಂದ ಹೊರ ಹೊಮ್ಮಿದ ವೈರಸ್ ಎಂಬುದು ಅಮೆರಿಕಾದ ಅನುಮಾನ. ಗುಪ್ತಚರ ಸಂಸ್ಥೆಯಿಂದ ತನಿಖೆ ಶುರುವಾಗಿದೆ. ಇದು ಆಕಸ್ಮಿಕವಾಗಿ ಪ್ರಯೋಗಾಲಯದಿಂದ ಹೊರಬಿದ್ದ ವೈರಸ್ಸಾ? ಉದ್ದೇಶ ಪೂರ್ವಕವಾಗಿ ಮಾಡಿದ ಕೆಲಸನಾ? ಎಂದು ಅಮೆರಿಕಾ ತನಿಖೆ ನಡೆಸುತ್ತಿದೆ. ಚೀನಾದ ಮೋಸವನ್ನು ಬಯಲಿಗೆಳೆಯಲು ಹೊರಟ ದೊಡ್ಡಣ್ಣನಿಗೆ ಪ್ರಧಾನಿ ಮೋದಿ ಸಾಥ್ ನೀಡಿದ್ದಾರೆ.