ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ಗಾಂಧಿಯ ಚುನಾವಣಾ ರಾಜಕಾರಣಕ್ಕೆ ಜನ್ಮ ನೀಡಿದ್ದ ಅಮೇಠಿ ಕ್ಷೇತ್ರದಲ್ಲಿ ಅವರ ಮನೆಯನ್ನು ನವೀಕರಣ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಲಖನೌ (ಏ.24): ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ಗಾಂಧಿಯ ಚುನಾವಣಾ ರಾಜಕಾರಣಕ್ಕೆ ಜನ್ಮ ನೀಡಿದ್ದ ಅಮೇಠಿ ಕ್ಷೇತ್ರದಲ್ಲಿ ಅವರ ಮನೆಯನ್ನು ನವೀಕರಣ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಅಮೇಠಿ ನಗರದ ಗೌರಿಗಂಜ್ ನಗರದಲ್ಲಿರುವ ರಾಹುಲ್ ಗಾಂಧಿಯವರ ಬಂಗಲೆಯನ್ನು ಸುಣ್ಣಬಣ್ಣ ಬಳಿದು ಸ್ವಚ್ಛಗೊಳಿಸಿ ಉದ್ಯಾನವನ್ನು ಅಂದಗೊಳಿಸುವ ಕಾರ್ಯ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಈ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಆ ಮನೆಯಲ್ಲಿ ಚುನಾವಣಾ ಪ್ರಚಾರದ ಭಿತ್ತಿಪತ್ರಗಳನ್ನೂ ತಂದಿರಿಸಿರುವುದು ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ. ಕಳೆದ ಬಾರಿ ಇಲ್ಲಿ ರಾಹುಲ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಹೀಗಾಗಿ ಈ ಬಾರಿ ಇಲ್ಲಿ ಮರಳಿ ಸ್ಪರ್ಧಿಸುವ ಬಗ್ಗೆ ಅನುಮಾನ ಇತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
News Hour: ಕಾಂಗ್ರೆಸ್ಗೆ ನರೇಂದ್ರ ಮೋದಿ ಸಂಪತ್ತಿನ ಸವಾಲ್!
ರಾಹುಲ್ ಈಗಾಗಲೇ ಕೇರಳದ ವಯನಾಡಿನಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಮೇಠಿ ಸ್ಪರ್ಧೆ ಬಗ್ಗೆ ಕೇಳಿದರೆ ಅದನ್ನು ಪಕ್ಷದ ಕೇಂದ್ರೀಯ ಸಮಿತಿ ನಿರ್ಧರಿಸಲಿದೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ. ಇನ್ನೊಂದೆಡೆ ಅವಕಾಶ ಸಿಕ್ಕಿದರೆ ತಾವು ಕಣಕ್ಕೆ ಇಳಿಯುವುದಾಗಿ ಪ್ರಿಯಾಂಕಾರ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.