May 5, 2021, 12:30 PM IST
ನವದೆಹಲಿ (ಮೇ. 05): ಬ್ರಿಟನ್ನಲ್ಲಿ 3 ಸಾವಿರ ಜನ ಮಾಸ್ಕ್, ಅಂತರವಿಲ್ಲದೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸರ್ಕಾರವೇ ನಡೆಸಿದ ಪಾರ್ಟಿಯಿದು. ಇದಕ್ಕೆ ಕಾರಣ ಬೇರೆಯೇ ಇದೆ. ಕೊರೊನಾ ಕಠಿಣ ನಿಯಮಗಳನ್ನು ಈ ಕೂಡಲೇ ತೆಗೆದು ಹಾಕಿ. ಜನರಿಗೆ ಜೀವನ ಮಾಡಲು ಅನುಕೂಲ ಮಾಡಿಕೊಡಿ ಎಂದು ಬ್ರಿಟನ್ ಜನ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಕೂಡಲೇ ಸರ್ಕಾರ 3 ಸಾವಿರ ಜನರನ್ನು ಆಯ್ಕೆ ಮಾಡಿ ಪಾರ್ಟಿ ಆಯೋಜಿಸಿತು. ಇದರ ರಿಸಲ್ಟ್ಗೋಸ್ಕರ ಬ್ರಿಟನ್ ಮಾತ್ರವಲ್ಲ, ಇಡೀ ಜಗತ್ತೇ ಕಾಯುತ್ತಿದೆ.