ಭಾರತೀಯರ ನೆಚ್ಚಿನ ದ್ವಿಚಕ್ರ ವಾಹನ ಯಾವುದು? ಅಕ್ಟೋಬರ್‌ನಲ್ಲಿ ಹೊಸ ದಾಖಲೆ!

First Published | Nov 5, 2024, 9:24 PM IST

ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ. ಇತ್ತೀಚೆಗ ಬೆಲೆ ಏರಿಕೆ ಬಿಸಿ ತಟ್ಟಿದರೂ ಬೈಕ್, ಸ್ಕೂಟರ್ ಮಾರಾಟದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಇದೀಗ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.

ನವರಾತ್ರಿ, ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳಿಂದ ಸೊರಗಿದ್ದ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ವಾಹನಗಳು ಗರಿಷ್ಠ ಮಾರಾಟ ದಾಖಲೆ ಕಂಡಿದೆ. ಈ ಪೈಕಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ಮೋಟಾರ್‌ ಸೈಕಲ್ ದಾಖಲೆ ಬರೆದಿದೆ. ಕಳೆದ 32 ದಿನಗಳಲ್ಲಿ ಹೀರೋ ಬರೋಬ್ಬರಿ 15.98 ಲಕ್ಷ ದ್ವಿಚಕ್ರ ವಾಹನ ಮಾರಾಟ ಮಾಡಿದೆ. 

2023ರ ಹಬ್ಬದ ತಿಂಗಳಿಗೆ ಹೋಲಿಸಿದರೆ ಹೀರೋ ಶೇಕಡಾ 13ರಷ್ಟು ಪ್ರಗತಿ ಸಾಧಿಸಿದೆ. ಈ ಮೂಲಕ ಹೀರೋ ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಬರೆದಿದೆ. ನಗರ ಹಾಗೂ ಗ್ರಾಮೀಣ ಎರಡೂ ವಲಯದಲ್ಲಿ ಹೀರೋ ವಾಹನಗಳ ಬೇಡಿಕೆ ಏರಿಕೆಯಾಗತ್ತಲೇ ಸಾಗಿದೆ. ಈ ಪೈಕಿ ಎಕ್ಸ್ಟ್ರೀಮ್ 125R ನೊಂದಿಗೆ 125cc ಮೋಟಾರ್‌ಸೈಕಲ್  ಅತೀ ಹೆಚ್ಚು ಮಾರಾಟವಾದ ಹೀರೋ ವಾಹನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

Latest Videos


ಹಬ್ಬದ ಅವಧಿಯಲ್ಲಿ ಹೀರೋ ಮೋಟೋಕಾರ್ಪ್ ತೋರಿರುವ ಅಸಾಧಾರಣ ಪ್ರದರ್ಶನ, ಅದರ ಅಗ್ರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ನಾವೀನ್ಯತೆ, ಗ್ರಾಹಕರ ತೃಪ್ತಿ ಮತ್ತು ಬಲವಾದ ಮಾರಾಟ ಜಾಲದ ಮೇಲೆ ಕಂಪನಿಯು ನಿರಂತರವಾಗಿ ಗಮನವನ್ನು ಹರಿಯಿಸುತ್ತಿರುವುದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ, ಮತ್ತು ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಅದರ ಬದ್ಧತೆಗೆ ಸಾಕ್ಷಿಯಾಗಿದೆ.

ಹೀರೋ ಮೋಟೋಕಾರ್ಪ್ ನ ಇಲೆಕ್ಟ್ರಿಕ್ ವೆಹಿಕಲ್ ಬ್ರ್ಯಾಂಡ್ VIDA, 11,600  ಮಾರಾಟ ಕಂಡಿದೆ.  ಹಾರ್ಲೇ-ಡೇವಿಡ್ಸನ್ X440, 2800 ಯುನಿಟ್‌ಗಳ ಮಾರಾಟವನ್ನು ಸಾಧಿಸಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕಂಪನಿಯು ಪ್ರೀಮಿಯಾ ನೆಟ್‌ವರ್ಕ್ ಅನ್ನು 100+ ಸ್ಥಳಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. 

ಸತತ ಎರಡನೇ ವರ್ಷ ನಾವು ಹಬ್ಬದ ಸೀಸನ್ ನಲ್ಲಿ ಅತ್ಯಧಿಕ ಚಿಲ್ಲರೆ ಮಾರಾಟ ಗುರಿ ತಲುಪಿದ್ದೇವೆ.  ಇದು ಭಾರತದಲ್ಲಿ ಹೀರೋ ಮೋಟೋಕಾರ್ಪ್‌, ಆದ್ಯತೆಯ ಬ್ರಾಂಡ್‌ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೀರೋ ಕಾರ್ಯನಿರ್ವಾಹಕ ಅಧಿಕಾರಿ ನಿರಂಜನ್ ಗುಪ್ತ ಹೇಳಿದ್ದಾರೆ.  ನಮ್ಮ ಲಕ್ಷಾಂತರ ಗ್ರಾಹಕರ ಅಚಲವಾದ ನಂಬಿಕೆಗೆ ನಾವು ಸದಾ ಕೃತಜ್ಞರಾಗಿರುತ್ತೇವೆ. ದೇಶದ ಬಹುತೇಕ ಭಾಗಗಳಲ್ಲಿ ಉತ್ತಮ ಉತ್ಸಾಹ ಮತ್ತು ಬೆಳವಣಿಗೆ ಕಂಡುಬಂದಿದೆ ಎಂದಿದ್ದಾರೆ.

click me!