Feb 17, 2023, 2:08 PM IST
ಬೆಂಗಳೂರಿನ ಯಲಹಂಕದಲ್ಲಿ ನಡೀತಿರೋ ಏರ್ ಶೋನಲ್ಲಿ ಕನ್ನಡದ ಕಲರವ ಎಲ್ಲರನ್ನೂ ಖುಷಿಗೊಳಿಸಿದೆ. ಈ ಬಾರಿ ಏರ್ ಷೋ ನಲ್ಲಿ ಅತಿ ಹೆಚ್ಚು ಕನ್ನಡದಲ್ಲಿ ಘೋಷಣೆ ಮಾಡಲಾಗಿದೆ. ಯುದ್ಧ ವಿಮಾನ, ಹೆಲಿಕಾಪ್ಟರ್ ಬಗ್ಗೆ ಇಂಗ್ಲಿಷ್, ಹಿಂದಿ ಜೊತೆ ಕನ್ನಡದಲ್ಲಿಯೂ ಘೋಷಣೆ ಮಾಡಲಾಯಿತು. ಕನ್ನಡತಿ ಐಶ್ವರ್ಯ ಅವರು ಏರ್ ಶೋನಲ್ಲಿ ಘೋಷಣೆ ಮಾಡಿದ್ರು. ಸದ್ಯ ದೆಹಲಿಯಲ್ಲಿ ಸ್ಕ್ಯಾಡ್ರನ್ ಲೀಡರ್ ಆಗಿರುವ ಕನ್ನಡತಿ ಐಶ್ವರ್ಯಾ, ಮೂಲತಃ ಬೆಂಗಳೂರಿನವರಾಗಿದ್ದು ಇಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. 'ಕನ್ನಡದಲ್ಲಿ ಮಾತಾಡೋದು ತುಂಬ ಖುಷಿ ಕೊಡುತ್ತೆ. ಈ ಬಾರಿ ಏರ್ ಶೋನಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟಿದ್ದಾರೆ. ಅದು ಬೆಂಗಳೂರಿನಲ್ಲಿ ಕನ್ನಡ ಮಾತಾಡಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಜೈ ಕನ್ನಡ, ಜೈ ಕರ್ನಾಟಕ, ಜೈ ಹಿಂದ್' ಎಂದು ಕನ್ನಡತಿ ಐಶ್ವರ್ಯ ಹೇಳಿದ್ದಾರೆ.
ಏರ್‌ಶೋ ನೋಡಲು ಹರಿದು ಬಂತು ಜನಸಾಗರ... ಸ್ವದೇಶಿ ಚಮತ್ಕಾರದ ಚಿತ್ತಾರ..!