Sep 23, 2023, 3:45 PM IST
ತಾಯ್ತನ ಅನ್ನೋದು ಪ್ರತಿ ಹೆಣ್ಣಿನ ಜೀವನದಲ್ಲೂ ಅತ್ಯಂತ ಮಹತ್ವವಾದ ಸಮಯವಾಗಿದೆ. ಮಗುವಿಗೆ ಜನ್ಮ ನೀಡುವುದು ಆಕೆಯ ಪಾಲಿಗೆ ಪುರ್ನಜನ್ಮವಿದ್ದಂತೆ ಎಂದೇ ಎಲ್ಲರೂ ಹೇಳುತ್ತಾರೆ. ಯಾಕೆಂದರೆ ಕೆಲವೊಮ್ಮೆ ಹೆರಿಗೆಯ ಸಂದರ್ಭದಲ್ಲಿ ಮಗುವಿಗೆ ಅಥವಾ ತಾಯಿಯ ಜೀವಕ್ಕೆ ಅಪಾಯವಾಗುವುದೂ ಇದೆ. ಹೀಗಾಗಿ ಗರ್ಭಧಾರಣೆಯ ಸಂದರ್ಭ ಮಹಿಳೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಸುರಕ್ಷಿತ ತಾಯ್ತನವನ್ನು ಪ್ರತಿಯೊಬ್ಬ ಮಹಿಳೆಯರೂ ಬಯಸ್ತಾರೆ. ಆದರೆ ಅದಕ್ಕಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದೂ ಮುಖ್ಯ. ಬಾಣಂತಿ ಆರೋಗ್ಯವಾಗಿರಲು ಎಷ್ಟು ತಿಂಗಳ ಆರೈಕೆ ಬೇಕು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.