BIG3 ನೀರು, ಮೇವಿಲ್ಲದೆ ಮೂಕಪ್ರಾಣಿಗಳ ಪರದಾಟ:ಅಧಿಕಾರಿಗಳಿಗೆ ಕಾಣುತ್ತಿಲ್ಲ ಕುದುರೆಗಳ ಕಷ್ಟ

Mar 15, 2023, 4:11 PM IST

ಗುಮ್ಮಟನಗರಿ ವಿಜಯಪುರದಲ್ಲಿ ನಿತ್ಯ ನೂರಾರು ಪ್ರವಾಸಿಗರನ್ನು ಬಸ್‌, ರೈಲು ನಿಲ್ದಾಣಗಳಿಂದ ಕರೆ ತಂದು ವಿಜಯಪುರ ನಗರದಲ್ಲೆಡೆ ಇರುವ ಐತಿಹಾಸಿಕ ಸ್ಥಳಗಳ ದರ್ಶನ ಮಾಡಿಸುವ ಅಶ್ವಗಳು. ಆದರೆ ಇವುಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯೆ ಇಲ್ಲ. ಬಸ್‌ ನಿಲ್ದಾಣದಿಂದ ಗೋಳಗುಮ್ಮಟಕ್ಕೆ ಒಂದು ಸಾರಿ ಬಂದ್ರೆ ಕುದುರೆಗಳಿಗೆ ಕುಡಿಯೋಕೆ ನೀರು ಬೇಕು. ಹೀಗಾಗಿ ಸಂಂಬಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುವಂತೆ  ಟಾಂಗಾವಾಲಗಳು ಬೆಡಿಕೊಳ್ಳುತ್ತಿದ್ದಾರೆ.ಕುದುರೆಗಳಿಗೆ ನೀರಿನ ಸಮಸ್ಯೆ ಮಾತ್ರವಲ್ಲದೆ, ಮೇವಿನ ಸಮಸ್ಯೆ ಕೂಡ ಇದೆ.  ನಿತ್ಯ ಒಂದು ಕುದುರೆಗೆ 100 ರೂಪಾಯಿಯಷ್ಟು ಹುಲ್ಲು, 3 ಕೇ.ಜಿ ಹೊಟ್ಟು ಬೇಕು. ಹೊಟ್ಟು ಕೆ.ಜಿ.ಗೆ 25 ರಿಂದ 30 ರೂಪಾಯಿ ಇದೆ. ನಿತ್ಯ ಒಂದು ಕುದುರೆಗೆ 200 ರೂಪಾಯಿವರೆಗು ಖರ್ಚಿದೆ. ಟಾಂಗಾವಾಲಾಗಳಿಗೆ ನಿತ್ಯ 500 ರೂಪಾಯಿ ಕಮಾಯಿ ಆಗಿದೆ ಎಂದರು ಹೆಚ್ಚೆ. ಇದ್ರಲ್ಲಿ 200 ರಿಂದ 300 ರೂಪಾಯಿ ಕುದುರೆಗಳಿಗೆ ಖರ್ಚಾದ್ರೆ, ಟಾಂಗಾವಾಲಾಗಳಿಗೆ ಉಳಿಯೋದೆ ಬಿಡಿಗಾಸು. ಹೀಗಾಗಿ ಪಾಲಿಕೆಯಿಂದಾಗಲಿ, ಅಥವಾ ಯಾರಾದ್ರು ಪ್ರಾಣಿಪ್ರೀಯರು ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಲಿ ಎಂದು ಬೇಡಿಕೊಳ್ತಿದ್ದಾರೆ.